ಟಿವಿ ಕಲಾವಿದನಿಗೆ ಕೊರೊನಾ: ರಶ್ಮಿ ನಟಿಸುತ್ತಿದ್ದ ತೆಲುಗು ಧಾರಾವಾಹಿ ಚಿತ್ರೀಕರಣ ರದ್ದು
ಕನ್ನಡ ಕಿರುತೆರೆಯ ಖ್ಯಾತ ನಟಿ ರಶ್ಮಿ ಪ್ರಭಾಕರ್ ಸದ್ಯ ತೆಲುಗು ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದರು. ರಶ್ಮಿ ಎನ್ನುವುದಕ್ಕಿಂತ ಲಕ್ಷ್ಮೀ ಬಾರಮ್ಮ ಲಚ್ಚಿ ಎಂದರೆ ಥಟ್ ಗೊತ್ತಾಗುತ್ತೆ. ಲಚ್ಚಿ ಪಾತ್ರದ ಮೂಲಕವೇ ರಶ್ಮಿ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದರು.
Recommended Video
ರಶ್ಮಿ ಸದ್ಯ ತೆಲುಗಿನ ಪೌರ್ಣಮಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಲಾಕ್ ಡೌನ್ ಸಡಿಲಿಕೆ ಆಗುತ್ತಿದ್ದಂತೆ ರಶ್ಮಿ, ಧಾರಾವಾಹಿ ಚಿತ್ರೀಕರಣಕ್ಕೆಂದು ಹೈದರಾಬಾದ್ ಗೆ ತೆರಳಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಆದರೀಗ ಚಿತ್ರೀಕರಣ ಅರ್ಧಕ್ಕೆ ನಿಲ್ಲಿಸಲಾಗಿದೆ. ಕಾರಣ ನಟನೊಬ್ಬನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನಲೆ ಧಾರಾವಾಹಿಯನ್ನು ಸ್ಥಗಿತಗೊಳಿಸಲಾಗಿದೆ. ಮುಂದೆ ಓದಿ..

ಚಿತ್ರೀಕರಣ ರದ್ದುಮಾಡಲಾಗಿದೆ
ತೆಲುಗು ಧಾರಾವಾಹಿ ಅಸೋಸಿಯೇಷನ್ ಚಿತ್ರೀಕರಣ ರದ್ದುಗೊಳಿಸಿದೆ. ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದ ಒಬ್ಬ ಕಲಾವಿದನಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ತಂತ್ರಜ್ಞರು ಎಲ್ಲಾ ಧಾರಾವಾಹಿಗಳಲ್ಲಿಯೂ ಕೆಲಸ ಮಾಡುತ್ತಿರುತ್ತಾರೆ. ಹಾಗಾಗಿ ಎಲ್ಲರ ಸಂಪರ್ಕದಲ್ಲಿಯೂ ಇರುತ್ತಾರೆ. ಸುದ್ದಿ ಗೊತ್ತಾಗುತ್ತಿದ್ದಂತೆ ಚಿತ್ರೀಕರಣ ನಿಲ್ಲಿಸಿರುವುದಾಗಿ ರಶ್ಮಿ ಹೇಳಿದ್ದಾರೆ.

ರಶ್ಮಿ ಹೇಳಿದ್ದೇನು?
ಇಂಗ್ಲಿಷ್ ಪೋರ್ಟಲ್ ಒಂದಕ್ಕೆ ಮಾತನಾಡಿದ ನಟಿ ರಶ್ಮಿ, "ತಂತ್ರಜ್ಞರು ಕೇವಲ ಎರಡು ದಿನಗಳ ಹಿಂದೆ ನಮ್ಮ ಸೆಟ್ ಗೆ ಸೇರಿಕೊಂಡಿದ್ದರು. ನಾನು ಅವರನ್ನು ಭೇಟಿಯಾಗಿದ್ದೆ. ಈಗ ನಾನು ಕ್ವಾರಂಟೈನ್ ನಲ್ಲಿ ಇದ್ದೀನಿ. ಸಹ ಕಲಾವಿದನ ಜೊತೆಯೂ ಮಾತನಾಡಿದ್ದೇನೆ, ಅವರು ಚೆನ್ನಾಗಿದ್ದಾರೆ" ಎಂದು ಹೇಳಿದ್ದಾರೆ.

ಸುರಕ್ಷತೆಕ್ರಮಗಳನ್ನು ಅನುಸರಿಸಿದ್ದೇವೆ
ಚಿತ್ರೀಕರಣ ಸಮಯದಲ್ಲಿ ಎಲ್ಲಾ ಸುರಕ್ಷತಾ ಪ್ರೋಟೋಕಾಲ್ ಅನುಸರಿಸಲಾಗಿದೆ ಎಂದು ನಟಿ ರಶ್ಮಿ ಹೇಳಿದ್ದಾರೆ. ಈಗ ಸಂಪೂರ್ಣ ಕಟ್ಟಡ, ಕಾಸ್ಟ್ಯೂಮ್ ಸೇರಿದ್ದಂತೆ ಎಲ್ಲಾ ವಸ್ತುಗಳಿಗೆ ಸ್ಯಾನಿಟೈಸ್ ಮಾಡಲಾಗಿದೆಯಂತೆ. ಜೊತೆಗೆ ಕಲಾವಿದರು ಸೇರಿದ್ದಂತೆ ಎಲ್ಲರೂ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಲಾಗಿದೆ. ಜೊತೆಗೆ ಮೇಕಮ್ ಕಲಾವಿದರು ಮತ್ತು ಕಾಸ್ಟ್ಯೂಮ್ ಡಿಸೈನರ್ಸ್ ಪಿಪಿಇ ಕಿಟ್ ಗಳನ್ನು ಧರಿಸಿರುವುದಾಗಿ ಹೇಳಿದ್ದಾರೆ.

ಸಂಪರ್ಕದಲ್ಲಿದ್ದವರು ಕ್ವಾರಂಟೈನ್ ನಲ್ಲಿ
ಕೊರೊನಾ ಪಾಸಿಟಿವ್ ಬಂದ ಕಲಾವಿದನ ಜೊತೆ ಸಂಪರ್ಕದಲ್ಲಿದ್ದ ಎಲ್ಲರನ್ನು ಕ್ವಾರಂಟೈನ್ ಮಾಡಲಾಗಿದೆಯಂತೆ. ಇತರರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಎಲ್ಲಾ ಸುರಕ್ಷತೆ ಕ್ರಮಗಳನ್ನು ಕೈಗೊಂಡಿರುವುದಾಗಿ ನಟಿ ರಶ್ಮಿ ಹೇಳಿದ್ದಾರೆ.


Click it and Unblock the Notifications











