'ಲಕ್ಷ್ಮಿ ಬಾರಮ್ಮ' ಧಾರಾವಾಹಿ ನನಗೆ ಹೊಸ ಜೀವನ ಕೊಟ್ಟಿದೆ ಎಂದ ನಟಿ ರಶ್ಮಿ ಪ್ರಭಾಕರ್

By ಅನಿತಾ ಬನಾರಿ

ರಶ್ಮಿ ಪ್ರಭಾಕರ್.. ಮನೋಜ್ಞ ನಟನೆಯ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಈ ನಟಿ ಲಚ್ಚಿ ಎಂದೇ ಫೇಮಸ್ಸು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಲಚ್ಚಿಯಾಗಿ ನಟಿಸುವ ಮೂಲಕ ಕಿರುತೆರೆಗೆ ನಟಿ ರಶ್ಮಿ ಪ್ರಭಾಕರ್ ಪಾದಾರ್ಪಣೆ ಮಾಡಿದ್ದರು. ಇದೀಗ ಈ ಧಾರಾವಾಹಿ ಯಶಸ್ವಿಯಾಗಿ ಹನ್ನೊಂದು ವರ್ಷಗಳನ್ನು ಪೂರೈಸಿದೆ.

ಈ ಧಾರಾವಾಹಿಯಲ್ಲಿ ಲಚ್ಚಿ ಪಾತ್ರವನ್ನು ಮಾಡಿ ಕರುನಾಡಿನ ಮನೆ ಮಗಳಾಗಿ ಮಿಂಚಿದ್ದ ರಶ್ಮಿ ಪ್ರಭಾಕರ್ ತಮ್ಮ ಪಾತ್ರ ಹಾಗೂ ಅಭಿನಯದ ಬಗ್ಗೆ ನೆನೆದಿದ್ದಾರೆ. "ಲಕ್ಷ್ಮೀ ಬಾರಮ್ಮ ನನಗೆ ಹೊಸದೊಂದು ಜೀವನ ಕೊಟ್ಟ ಧಾರಾವಾಹಿ. ಈ ಧಾರಾವಾಹಿ ಮೂಲಕ ನಾನು ಹಲವಾರು ವಿಚಾರಗಳನ್ನು ಕಲಿತೆ. ನಾನು ಬರೀ ಮೂರುವರೆ ವರ್ಷ ಅಷ್ಟೇ ಈ ಪಾತ್ರವನ್ನು ಮಾಡಿದ್ದರೂ, ಇದು ನನಗೆ ನಟನೆ ಅಷ್ಟೇ ಅಲ್ಲದೆ ಸಹಕಲಾವಿದರೊಂದಿಗೆ ಬೆರೆಯುವುದು ಹೇಗೆ ಎಂಬುದನ್ನು ಹೇಳಿಕೊಟ್ಟಿದೆ" ಎಂದು ಹೇಳಿದ್ದಾರೆ‌.

Rashmi Prabhakar said that Lakshmi Baramma serial gave me a new life

ಇನ್ನು ಇದರ ಜೊತೆಗೆ "ಕ್ಯಾಮರಾ ಫೇಸ್ ಮಾಡುವುದು ಹೇಗೆ ಎಂಬುದನ್ನು ನಾನು ಈ ಧಾರಾವಾಹಿಯಿಂದ ಕಲಿತೆ. ಜೊತೆಗೆ ಧೈರ್ಯದಿಂದ ಮುನ್ನುಗುವುದು ಹೇಗೆ ಎಂದು ತಿಳಿದುಕೊಂಡೆ. ಮುಖ್ಯವಾಗಿ ಜೀವನಕ್ಕೆ ಬೇಕಾದ ಹಲವಾರು ಮೌಲ್ಯ ಅಂಶಗಳನ್ನು ಈ ಧಾರಾವಾಹಿ ತಿಳಿಸಿಕೊಟ್ಟಿದೆ. ಈ ಬಗ್ಗೆ ನಾನು ಸದಾ ಋಣಿ" ಎಂದಿದ್ದಾರೆ.

"ಲಕ್ಷ್ಮಿ ಬಾರಮ್ಮ" ಧಾರಾವಾಹಿ ಶುರುವಾದಾಗ ಮೊದಲಿಗೆ ಕವಿತಾ ಗೌಡ ಅವರು ಲಚ್ಚಿ ಪಾತ್ರವನ್ನು ನಿಭಾಯಿಸಿದ್ದರು. ಆದರೆ ಕಾರಣಾಂತರಗಳಿಂದ ಅವರು ಧಾರಾವಾಹಿಯಿಂದ ಹೊರಗೆ ನಡೆದಾಗ ರಶ್ಮಿ ಪ್ರಭಾಕರ್ ಅವರು ಈ ಪಾತ್ರವನ್ನು ವಹಿಸಿಕೊಂಡರು. ಆರಂಭದಲ್ಲಿ ಲಚ್ಚಿಯಾಗಿ ನಟಿಸಲು ತನಗೆ ಸಾಧ್ಯವೇ ಎಂಬ ಭಯ ರಶ್ಮಿ ಅವರಿಗೆ ಕಾಡಿತ್ತು. ಆದರೆ, ತಮ್ಮ ಅದ್ಭುತ ನಟನೆಯಿಂದ ಬೇಗ ಪ್ರೇಕ್ಷಕರ ಪ್ರೀತಿಯನ್ನು ಪಡೆಯುವಲ್ಲಿ ನಟಿ ರಶ್ಮಿ ಪ್ರಭಾಕರ್ ಯಶಸ್ವಿಯಾದರು.

Rashmi Prabhakar said that Lakshmi Baramma serial gave me a new life

'ಶುಭವಿವಾಹ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಈಕೆ ಮುಂದೆ 'ಮಹಾಭಾರತ', 'ಜೀವನ ಚೈತ್ರ', ತಮಿಳಿನ 'ಅರುಂಧತಿ'ಯಲ್ಲಿ ನಟಿಸಿದರು. ಮುಂದೆ 'ಲಕ್ಷ್ಮಿ ಬಾರಮ್ಮ' ದ ಲಚ್ಚಿಯಾಗಿ ಮೋಡಿ ಮಾಡಿದ ಈಕೆ ನಂತರ ತೆಲುಗಿನ 'ಪೌರ್ಣಮಿ', ಕನ್ನಡದ 'ಮನಸ್ಸೆಲ್ಲಾ ನೀನೆ', ತೆಲುಗಿನ 'ಕಾವ್ಯಾಂಜಲಿ' ಹಾಗೂ ತಮಿಳಿನ 'ಕಣ್ಣೆ ಕಲೈಮಾನೆ' ಧಾರಾವಾಹಿಗಳಲ್ಲಿ ಅಭಿ‌ನಯಿಸಿದ್ದಾರೆ‌. ಇದರ ಜೊತೆಗೆ 'ಬಿಬಿ5' ಹಾಗೂ 'ಮಹಾಕಾವ್ಯ' ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

More from Filmibeat

English summary
Description: Do you know what Rashmi Prabhakar said about 11 years of Lakshmi Baramma serial:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X