ಬಿಂದಾಸ್ ಲುಕ್‌ನಲ್ಲಿ ಮಿಂಚಿದ ನ್ಯಾಷನಲ್ ಕ್ರಶ್: ಹೊಸ ಫೋಟೋ‌ ವೈರಲ್

By ಶೃತಿ ಹರೀಶ್ ಗೌಡ

ಕೊಡಗಿನ ಚೆಲುವೆಗಾಗಿ ಈಗ ಸಾಲು ಸಾಲು ಸಿನಿಮಾಗಳು ಕಾಯ್ತಿವೆ. ಈಗ 'ಪುಷ್ಪ- 2' ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಬಾಲಿವುಡ್‌ನಲ್ಲಿ ರಶ್ಮಿಕಾ 2ನೇ ಸಿನಿಮಾ 'ಮಿಷನ್ ಮಜ್ನು' ಕೂಡ ಓಟಿಟಿಗೆ ಬಂದು ಸಕ್ಸಸ್ ಕಂಡಿದೆ. 'ಪುಷ್ಪ'-2 ಜೊತೆ ಈ ವರ್ಷ ರಶ್ಮಿಕಾ ಅಭಿನಯದ 2 ಸಿನಿಮಾಗಳು ತೆರೆಗೆ ಬರಲಿದೆ.

'ಪುಷ್ಪ' ಸಿನಿಮಾ ಬಳಿಕ ನಟಿ ರಶ್ಮಿಕಾ ಮಂದಣ್ಣಗೆ ಆಫರ್‌ಗಳ ಸುರಿಮಳೆಯಾಗ್ತಿದೆ. ಇನ್ನು ಚಿತ್ರವೊಂದಕ್ಕೆ ರಶ್ಮಿಕಾ 4 ಕೋಟಿ ರೂ. ಸಂಭಾವನೆ ತೆಗೆದುಕೊಳ್ಳುತ್ತಾರೆ ಎನ್ನಲಾಗುತ್ತದೆ. ಆದರೂ ಕೂಡ ಅಭಿಮಾನಿಗಳ ನೆಚ್ಚಿನ ರಶ್ಮಿಕಾ ಮಂದಣ್ಣಗೆ ಸಖತ್ ಡಿಮ್ಯಾಂಡ್ ಕೂಡ ಕ್ರಿಯೇಟ್ ಆಗಿದೆ.

Rashmika mandanna hot Photoshoot Goes Viral

ನಟಿ ರಶ್ಮಿಕಾ ಮಂದಣ್ಣ ಫೋಟೋ ವೈರಲ್

ಸದಾ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುವ ರಶ್ಮಿಕಾ ಮಂದಣ್ಣ ಹೊಸ ಫೋಟಗಳನ್ನು ಶೇರ್ ಮಾಡಿದ್ದಾರೆ. ಆಕೆ ಶೇರ್ ಮಾಡಿರುವ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಶಾರ್ಟ್ ಡ್ರೆಸ್‌ನಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು ಪಡ್ಡೆ ಹುಡುಗರ ಹೃದಯವನ್ನ ಕದ್ದಿದ್ದಾರೆ. ಎರಡು ಫೋಟೋವನ್ನು ಶೇರ್ ಮಾಡಿದ್ದು ಅದಕ್ಕೆ ಲಕ್ಷಾಂತರ ಲೈಕ್ಸ್‌, ಸಾವಿರಾರು ಕಾಮೆಂಟ್ಸ್ ಸಿಕ್ಕಿದೆ. ಇದನ್ನು ತುಂಬಾ ಇಷ್ಟಪಟ್ಟಿದ್ದು ಅಭಿಮಾನಿಗಳು ಫೋಟೋವನ್ನ ಶೇರ್ ಮಾಡಿದ್ದಾರೆ.

ಹಾಟ್, ಸೆಕ್ಸಿ ಎಂದು ಕಾಮೆಂಟ್

ರಶ್ಮಿಕಾ ಮಂದಣ್ಣ ಯಾವಾಗಲೂ ಸಹ ಹಾಟ್ ಹಾಗೂ ಸೆಕ್ಸಿ ಲುಕ್‌ನಲ್ಲಿ ಕಾಣಿಸಿಕೊಂಡು ಫೋಟೋ ಆಗುತ್ತದೆ. ಇದಲ್ಲದೆ ಹೊಸ ಹೊಸ ಫೋಟೋ ಶೂಟ್ ಮಾಡಿಸಿ ಅಭಿಮಾನಿಗಳು ಖುಷಿಪಡುವಂತೆ ಮಾಡುತ್ತಾರೆ. ರಶ್ಮಿಕಾ ಹಾಕಿರುವ ಫೋಟೋಗೆ ಹಾಟ್ ಆಗಿದೆ , ಸೆಕ್ಸಿಯಾಗಿದೆ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಗೋಲ್ಡನ್ ಗರ್ಲ್ ಎಂದೆಲ್ಲಾ ಕಾಮೆಂಟ್ ಮಾಡಿ ರಶ್ಮಿಕಾ ಮಂದಣ್ಣರನ್ನು ಹಾಡಿ ಹೊಗಳಿದ್ದಾರೆ.

ಸಾಲು ಸಾಲು ಚಿತ್ರಗಳಲ್ಲಿ ರಶ್ಮಿಕಾ

ಸದ್ಯ ಕೊಡಗಿನ ಕುವರಿ ಕೈಯಲ್ಲಿ 4 ಸಿನಿಮಾಗಳಿವೆ. ರಣ್‌ಬೀರ್ ಕಪೂರ್ ಜೋಡಿಯಾಗಿ 'ಅನಿಮಲ್' ಚಿತ್ರದಲ್ಲಿ ನಟಿಸ್ತಿದ್ದಾರೆ. 'ಪುಷ್ಪ- 2' ಚಿತ್ರದಲ್ಲಿ ಶ್ರೀವಲ್ಲಿಯಾಗಿ ಮತ್ತೆ ಬಣ್ಣ ಹಚ್ಚಿದ್ದಾರೆ. ಇನ್ನು 'ಭೀಷ್ಮ' ನಂತರ ಮತ್ತೊಮ್ಮೆ ನಿತಿನ್ ಜೋಡಿಯಾಗಿ ಚಿತ್ರಕ್ಕೆ ಸೈ ಎಂದಿದ್ದಾರೆ. 'ರೈನ್‌ಬೋ' ಎನ್ನುವ ಮಹಿಳಾ ಪ್ರಧಾನ ಚಿತ್ರ ಕೂಡ ಆಕೆಯ ಕೈಯಲ್ಲಿದೆ. ಈ ಸಿನಿಮಾ ತೆಲುಗು, ತಮಿಳು ಭಾಷೆಗಳಲ್ಲಿ ತೆರೆಗೆ ಬರಲಿದೆ. ಮತ್ತಷ್ಟು ಸಿನಿಮಾಗಳು ಮಾತುಕತೆ ಹಂತದಲ್ಲಿದೆ.

Rashmika mandanna hot Photoshoot Goes Viral

'ಚಾವ' ಚಿತ್ರದಲ್ಲಿ ರಾಣಿಯಾಗಿ ರಶ್ಮಿಕಾ?

ಇನ್ನು ಬಾಲಿವುಡ್‌ನಲ್ಲಿ ಛತ್ರಪತಿ ಶಿವಾಜಿ ಮಗ ಸಾಂಭಾಜಿ ಜೀವನವನ್ನಾಧರಿಸಿ 'ಚಾವ' ಎನ್ನುವ ಸಿನಿಮಾ ನಿರ್ಮಾಣವಾಗಲಿದೆ. ಚಿತ್ರದಲ್ಲಿ ವಿಕ್ಕಿ ಕೌಶಲ್ ಸಾಂಭಾಜಿ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಆತನ ಪತ್ನಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುವ ಸಾಧ್ಯತೆಯಿದೆ. ಈ ಬಗ್ಗೆ ಚರ್ಚೆ ನಡೀತಿದ್ದು ಶೀಘ್ರದಲ್ಲೇ ಅಧಿಕೃತವಾಗಿ ಸಿನಿಮಾ ಘೋಷಣೆ ಆಗುವ ನಿರೀಕ್ಷೆಯಿದೆ. ಯೇಸುಬಾಯಿ ಬಹಳ ಪವರ್‌ಫುಲ್ ಪಾತ್ರ ಆಗಿದ್ದು ರಶ್ಮಿಕಾ ನಟಿಸಿದರೆ ಅಭಿಮಾನಿಗಳಿಗೆ ಹಬ್ಬವೇ ಸರಿ. ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಈ ಹಿಂದೆ ಒಳ ಉಡುಪಿನ ಜಾಹೀರಾತು ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

More from Filmibeat

English summary
Rashmika mandanna hot Photoshoot Goes Viral. She looks hot in a pink colour thin strap top. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X