"ಸೌತ್ ಫಿಲ್ಮ್ ಮೇಕರ್ಸ್ ಸಾಚಾ ಅಲ್ಲ.. ಛಾಯಾಗ್ರಾಹಕನ ಜೊತೆಗೂ ಕಾಂಪ್ರಮೈಸ್ ಮಾಡಿಕೊಳ್ಬೇಕು": ಬಾಂಬ್ ಸಿಡಿಸಿದ ನಟಿ
ಚಿತ್ರರಂಗದಲ್ಲಿ ಅವಕಾಶ ಸಿಗುವುದು ಅಷ್ಟು ಸುಲಭ ಅಲ್ಲ. ಪ್ರತಿಭೆ ಇದ್ದರೂ ಕೆಲವೊಮ್ಮೆ ಕಾಂಪ್ರಮೈಸ್ ಮಾಡಿಕೊಳ್ಳುವಂತೆ ಕೇಳುತ್ತಾರೆ ಎನ್ನುವ ಆರೋಪವನ್ನು ಸಾಕಷ್ಟು ನಟ, ನಟಿಯರು ಮಾಡುತ್ತಾ ಬರ್ತಿದ್ದಾರೆ. ಬಾಲಿವುಡ್ ಮಾತ್ರವಲ್ಲ ಸೌತ್ ಸಿನಿದುನಿಯಾದಲ್ಲೂ ಕಾಸ್ಟಿಂಗ್ ಕೌಚ್ ಸಂಸ್ಕೃತಿ ಇದೆ ಎಂದು ಕೆಲ ನಟಿಯರು ಹೇಳಿದ್ದಾರೆ. ಇದೀಗ ಮತ್ತೊಬ್ಬ ನಟಿ ಚಿತ್ರರಂಗದ ಕರಾಳ ಮುಖ ತೆರೆದಿಟ್ಟಿದ್ದಾರೆ.
ಹಿಂದಿ ಕಿರುತೆರೆ ನಟಿ ರತನ್ ರತನ್ ರಾಜ್‌ಪೂತ್ ಪಿಂಕ್‌ವಿಲ್ಲಾ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಕಾಸ್ಟಿಂಗ್ ಕೌಚ್ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದರು. ಮುಂಬೈನಲ್ಲಿ ಆಡಿಷನ್‌ಗೆ ಹೋದಾಗ ಕೂಲ್ ಡ್ರಿಂಕ್ಸ್‌ನಲ್ಲಿ ಮತ್ತು ಬರುವ ಪದಾರ್ಥ ಬೆರೆಸಿ ಕೊಟ್ಟಿದ್ದರು. ಅದನ್ನು ಕುಣಿದಾಗ ವಿಚಿತ್ರ ಅನುಭವ ಆಗಿತ್ತು. ನಂತರ ಅವರು ಒಂದು ಅಡ್ರೆಸ್‌ಗೆ ಹೋಗುವಂತೆ ಹೇಳಿದ್ದರು. ಆ ಜಾಗ ಬಹಳ ವಿಚಿತ್ರವಾಗಿತ್ತು. ಒಬ್ಬ ಯುವತಿ ಪ್ರಜ್ಞೆ ಇಲ್ಲದೇ ಬಿದ್ದಿದ್ದಳು. ಪರಿಸ್ಥಿತಿ ಏನು ಅನ್ನೋದು ಅರ್ಥವಾಗಿ ಅಲ್ಲಿಂದ ಹೇಗೋ ಬಚಾವ್ ಆಗಿದ್ದೆ ಎಂದು ರತನ್ ಹೇಳಿದ್ದಾರೆ.

ಸೌತ್‌ನಲ್ಲಿ ಅವಕಾಶ ಸಿಗಬೇಕು ಅಂದರೆ ಹೀರೊ, ನಿರ್ದೇಶಕ, ನಿರ್ಮಾಪಕ ಮೂವರ ಜೊತೆ ಕಾಂಪ್ರಮೈಸ್ ಆಗಬೇಕು ಎಂದು ರತನ್ ರಾಜ್‌ಪೂತ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಸೌತ್‌ನಲ್ಲಿ ನನಗೆ ತುಂಬಾ ಆಫರ್‌ಗಳು ಬಂದವು. ಕೆಲವರು ಒಳ್ಳೆ ನಿರ್ದೇಶಕರು ಅಲ್ಲಿದ್ದಾರೆ. ಆದರೆ ಮತ್ತೆ ಕೆಲವರ ವರ್ತನ್ ಬಹಳ ಕೆಟ್ಟದಾಗಿ ಇರುತ್ತದೆ. ನಾನು ಹಿಂದಿಯಲ್ಲಿ 'ಅಗ್ಲೇ ಜನಂ ಮೋಹೆ ಬಿಟಿಯ ಹಿ ಕಿಜೋ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗ ದಕ್ಷಿಣದಿಂದ ಅವಕಾಶಗಳು ಬಂದಿದ್ದವು.
"ಒಮ್ಮೆ ಒಬ್ಬರು ನನಗೆ ಫೋನ್ ಮಾಡಿ ಒಂದು ಅವಕಾಶವಿದೆ ಬನ್ನಿ ಎಂದು ಹೇಳಿದರು. ನಂತರ ನೀವು ಸ್ವಲ್ಪ ಸಣ್ಣ ಇದ್ದೀರಾ, ನೀವು ಪಾತ್ರಕ್ಕಾಗಿ ಕೊಂಚ ತೂಕ ಹೆಚ್ಚಿಸಿಕೊಳ್ಳುಬೇಕು ಎಂದರು. ಅವರ ಷರತ್ತಿಗೆ ನಾನು ಒಪ್ಪಿಕೊಂಡೆ. ಇಲ್ಲಿನ ರೀತಿ ರಿವಾಜು, ಷರತ್ತು ನಿಮಗೂ ಗೊತ್ತು ಅಲ್ಲವೇ ಎಂದು ಆತ ಕೇಳಿದ. ನಾನು ಗೊತ್ತಿಲ್ಲ, ಏನು ಆ ಷರತ್ತುಗಳು ಎಂದು ಕೇಳಿದೆ. ಹೀರೊ, ನಿರ್ದೇಶಕ, ನಿರ್ಮಾಪಕ ಹಾಗೂ ಸಿನಿಮಾಟೋಗ್ರಾಫರ್ ಯಾರು ಕೇಳಿದರೂ ಇಲ್ಲ ಎನ್ನಬಾರದು ಎಂದು ಪರೋಕ್ಷವಾಗಿ ಹೇಳಿದ".

"ನೀವು ಏನು ಹೇಳುತ್ತಿದ್ದೀರಾ? ನನಗೆ ಗೊತ್ತಾಗಲಿಲ್ಲ. ಸರಿಯಾಗಿ ಹೇಳಿ ಎಂದು ಕೇಳಿದೆ. ಅದಕ್ಕೆ ಆತ ಎಲ್ಲಾ ನಿಮಗೆ ಗೊತ್ತಿರುವುದೇ ಅಲ್ಲವೇ, ಅವರೆಲ್ಲರ ಜೊತೆ ಕಾಂಪ್ರಮೈಸ್ ಆಗಬೇಕಾಗುತ್ತದೆ ಎಂದು ನೇರವಾಗಿಯೇ ಹೇಳಿದ. ಅಷ್ಟೇ ನಾನು ಕೂಡಲೇ ಆ ಆಫರ್ ರಿಜೆಕ್ಟ್ ಮಾಡಿದೆ. ಆ ನಂತರ ಸೌತ್‌ನಲ್ಲಿ ನನಗೆ ಯಾವುದೇ ಆಫರ್ಸ್ ಬರಲಿಲ್ಲ" ಎಂದು ರತನ್ ರಜ್‌ಪೂತ್ ಹೇಳಿದ್ದಾರೆ.
ರಾವಣ್ ಹಿಂದಿ ಧಾರಾವಾಹಿಯಲ್ಲಿ ಮೊದಲ ಬಾರಿಗೆ ರತನ್ ರಜ್‌ಪೂತ್ ಬಣ್ಣ ಹಚ್ಚಿದ್ದರು. ಮುಂದೆ 'ಅಗ್ಲೇ ಜನಂ ಮೋಹೆ ಬಿಟಿಯ ಹಿ ಕಿಜೋ', 'ಸಂತೋಷಿ ಮಾ' 'ಮಹಾಭಾರತ್' ಸೇರಿದಂತೆ ಒಂದಷ್ಟು ಕಿರುತೆರೆ ಧಾರಾವಾಹಿಗಳಲ್ಲಿ ಟಿವಿ ಶೋಗಳಲ್ಲಿ ಭಾಗವಹಿಸಿದ್ದರು. ಹಿಂದಿ ಬಿಗ್‌ಬಾಸ್- 7ರ ಸ್ಪರ್ಧಿ ಕೂಡ ಆಗಿದ್ದರು. ಬಿಹಾರದಲ್ಲಿ ಹುಟ್ಟಿಬೆಳೆದ ಚೆಲುವೆ ಬಳಿಕ ಮುಂಬೈಗೆ ಶಿಫ್ಟ್ ಆಗಿದ್ದರು.


Click it and Unblock the Notifications











