ಗುರಿ ತಪ್ಪಿದ ಡ್ರೋನ್ ; ಸ್ವಯಂ ಘೋಷಿತ ಡ್ರೋನ್ ವಿಜ್ಞಾನಿ ಪ್ರತಾಪ್ ಈಗ ರಿಯಾಲಿಟಿ ಶೋ ಸ್ಟಾರ್

ತಮ್ಮ ತಂದೆಯ ತೋಟದಲ್ಲಿ ಡ್ರೋನ್ ಹಾರಿಸುವ ಕನಸನ್ನ ಕಂಡಿದ್ದರು ಡ್ರೋನ್ ಪ್ರತಾಪ್. ಇಷ್ಟೇ ಅಲ್ಲ ನನ್ನ ಕಡೆಯಿಂದ ಏನಾದರೂ ಮಷಿನ್‌ ಮಾಡಿ ಕೊಡುವ ಪ್ಲ್ಯಾನ್‌ ಇದೆ. ಅವರ ಕೈಗೆ ಡ್ರೋನ್‌ ಕೊಟ್ಟು ಹಾರಿಸ್ತಿನಿ. ಅದು ಹೇಗೆ ವರ್ಕ್‌ ಆಗುತ್ತೆ ಎಂದು ಅವರಿಂದಲೇ ತೋರಿಸ್ತಿನಿ ಎಂದು ಕೂಡ ಬಿಗ್ ಬಾಸ್ ಮನೆಯಲ್ಲಿದ್ದಾಗ ಡ್ರೋನ್ ಪ್ರತಾಪ್ ಹೇಳಿದ್ದರು. ಆದರೆ ತಮ್ಮ ಈ ಗುರಿಯಿಂದ ಡ್ರೋನ್ ಪ್ರತಾಪ್ ಸದ್ಯಕ್ಕೆ ವಿಚಲಿತರಾದಂತೆ ಇದೆ. ಇದಕ್ಕೆ ಪೂರಕವಾಗಿ ನಾವು ನಿಮಗೆ ಹಿಂದೆಯೇ ಹೇಳಿದಂತೆ ಗಿಚ್ಚಿ ಗಿಲಿ ಗಿಲಿ ಸೀಸನ್ 3ರಲ್ಲಿ ಸ್ಫರ್ಧಿಯಾಗಿ ಡ್ರೋನ್ ಪ್ರತಾಪ್ ಎಂಟ್ರಿ ಕೊಟ್ಟಿದ್ದಾರೆ.

ಬಿಗ್ ಬಾಸ್, ಗಿಚ್ಚಿ ಗಿಲಿ ಗಿಲಿ.. ಮುಂದೇನು..?

ಬಿಗ್ ಬಾಸ್ ಮನೆಯ ಅಂಗಳದಲ್ಲಿ ಡ್ರೋನ್ ಪ್ರತಾಪ್ ಪ್ರತ್ಯಕ್ಷವಾದಾಗಲೇ ಅನೇಕರು ಹುಬ್ಬೇರಿಸಿದ್ದರು. ಇನ್ನೂ ಪ್ರತಾಪ್ ಮನೆಯೊಳಗೆ ಕಾಲಿಟ್ಟಿದ್ದು ಅಸಮರ್ಥರು ಎಂಬ ಹಣೆ ಪಟ್ಟಿಯನ್ನೊತ್ತು. ಆದರೂ ಕೂಡ ಶಕ್ತಿಗಿಂತ ಯುಕ್ತಿ ಮೇಲು ಅನ್ನುವುದನ್ನ ಬಿಗ್ ಬಾಸ್ ಮನೆಯಲ್ಲಿ ಸಾಬೀತು ಮಾಡಿದ್ದ ಡ್ರೋನ್ ಪ್ರತಾಪ್ ಕಾಲ ಕಾಲಕ್ಕೆ ತಮ್ಮ ಆಟ ಬದಲಿಸಿದರು. ಫಿನಾಲೆವರೆಗೆ ಬಂದು ರನ್ನರ್ ಅಪ್ ಕೂಡ ಆದರು. ಈಗ ನಕ್ಕು ನಗಿಸುವ ಕಲೆ ನನಗೂ ಗೊತ್ತು ಎಂದು ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮಕ್ಕೂ ಕಾಲಿಟ್ಟಿದ್ದಾರೆ. ಈ ಕಾರಣಕ್ಕೆ ಗಿಚ್ಚಿ ಗಿಲಿ ಗಿಲಿ ನಂತರ ಇನ್ನೊಂದು ರಿಯಾಲಿಟಿ ಶೋದಲ್ಲಿ ಪ್ರತಾಪ್ ಪ್ರತ್ಯಕ್ಷವಾದರೆ ಅಚ್ಚರಿ ಪಡಬೇಡಿ.

Rather than drone, prathap is now more intrested in reality shows

ಹಾಸ್ಯ-ಲಾಸ್ಯ ಪ್ರತಾಪ್ ಅವರಿಂದ ಸಾಧ್ಯನಾ..?

ಬಿಗ್ ಬಾಸ್ ಮನೆಯಲ್ಲಿದ್ದಾಗ ನಂದು ಎಂಟರ್‌ಟೇನ್ಮೆಂಟ್ ಇಂಡಸ್ಟ್ರೀ ಅಲ್ಲ ಅನ್ನುತ್ತಿದ್ದ ಪ್ರತಾಪ್, ಈಗ ಡ್ರೋನ್ ಮಾಡುವುದನ್ನ ಬಿಟ್ಟು, ಎಂಟರ್‌ಟೇನ್ಮೆಂಟ್ ಇಂಡಸ್ಟ್ರೀಯಲ್ಲಿಯೇ ಅದೃಷ್ಟ ಪರೀಕ್ಷೆಯನ್ನ ಮಾಡಿಕೊಳ್ಳಲು ಮುಂದಾಗ್ತಿದ್ದಾರೆ. ಇದಕ್ಕೆ ಉದಾಹರಣೆಯೆಂಬಂತೆ ಡ್ರೋನ್ ಪ್ರತಾಪ್ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮಕ್ಕೂ ಕಾಲಿಟ್ಟಿದ್ದಾರೆ. ಇನ್ನೂ ಗಿಚ್ಚಿ ಗಿಲಿ ಗಿಲಿ ನಿಮಗೆ ಗೊತ್ತಿದ್ದಂತೆ ನಗುವಿನ ಕಚಗುಳಿ ಇಡುವ ಕಾರ್ಯಕ್ರಮ. ಈ ಕಾರಣಕ್ಕೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅನೇಕರ ಕಣ್ಣಿಗೆ ಸಿಂಪತಿ ಸ್ಟಾರ್ ನಂತೆ ಕಂಡಿದ್ದ ಡ್ರೋನ್ ಪ್ರತಾಪ್, ಗಿಚ್ಚಿ ಗಿಲಿ ಗಿಲಿ ಮೂಲಕ ಕಾಮಿಡಿ ಸ್ಟಾರ್ ಆಗ್ತಾರಾ ಎಂಬ ಪ್ರಶ್ನೆ ಅನೇಕರಿಗೆ ಈಗ ಕಾಡ್ತಿದೆ. ನಗುವುದು.. ನಗಿಸುವುದು.. ಪ್ರತಾಪ್ ಅವರಿಂದ ಸಾಧ್ಯನಾ ಎಂಬ ಅನುಮಾನ ಕೂಡ ಬಹುತೇಕರಲ್ಲಿದೆ.

ಕಾಮಿಡಿ ಕಿಂಗ್ ಆಗ್ತಾರೆ ಡ್ರೋನ್ ಪ್ರತಾಪ್..

ಅನುಮಾನ.. ಅವಮಾನ.. ಸನ್ಮಾನ.. ಈ ಮೂರು ಹಂತವನ್ನ ದಾಟಿ ಸದ್ಯಕ್ಕೆ ಕರುನಾಡಿನೆಲ್ಲೆಡೆ ಮನೆ ಮಾತಾಗಿರುವ ಡ್ರೋನ್ ಪ್ರತಾಪ್, ಗಿಚ್ಚಿ ಗಿಲಿ ಗಿಲಿಯ ಪ್ರಮುಖ ಆಕರ್ಷಣೆ. ಈ ಮಾತನ್ನ ಗಿಚ್ಚಿ ಗಿಲಿ ಗಿಲಿಯ ನಿರೂಪಕ ನಿರಂಜನ್ ದೇಶಪಾಂಡೆ ಕೂಡ ಒಪ್ಪುತ್ತಾರೆ. ನಟನೆ ಮಾಡದವರನ್ನು ಕರೆದುಕೊಂಡು ಬಂದು, ಅವರಿಂದ ನಟನೆ ಮಾಡಿಸುವುದೇ ಇದರ ಉದ್ದೇಶ. ಆ ಥರ ತುಂಬ ಜನ ನಟನೆ ಗೊತ್ತಿಲ್ಲದವರು ಈ ಶೋನಲ್ಲಿ ಬಂದು, ಆಮೇಲೆ ತಮ್ಮ ನಟನೆ ಮೂಲಕ ಎಲ್ಲರನ್ನೂ ನಗಿಸಿರುವ ಉದಾಹರಣೆಗಳಿವೆ ಅನ್ನುವುದು ನಿರಂಜನ್ ಅವರ ಅಂಬೋಣ

ಗಿಚ್ಚಿ ಗಿಲಿ ಗಿಲಿಯ ಮೆಂಟರ್ ಆದರೂ ಆಗಬಹುದು

ಇನ್ನೂ ಭವಿಷ್ಯದಲ್ಲಿ ಹಾಸ್ಯ ಕಲಾವಿದರು ವರ್ಸಸ್ ಹಾಸ್ಯ ಕಲಾವಿದರಲ್ಲದವರು ಎಂಬ ಥೀಮ್ ನ್ನೊಂದಿರುವ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ಮೆಂಟರ್ ಕೂಡ ಡ್ರೋನ್ ಪ್ರತಾಪ್ ಆಗಬಹುದು. ಮುಂದಿನ ಸೀಸನ್ ಗೆ ಡೈರೆಕ್ಟರ್ ಆದರೂ ಆಗಬಹುದು. ಇಂಥಹದ್ದೊಂದು ಭವಿಷ್ಯವನ್ನ ಕೂಡ ನಿರಂಜನ್ ದೇಶಪಾಂಡೆ ನುಡಿದಿದ್ದಾರೆ. ನಿರಂಜನ್ ಕಂಡಂತೆ ಪ್ರತಾಪ್ ಅವರಲ್ಲಿ ಆ ಎಲ್ಲ ಅರ್ಹತೆ ಇದೆ ಕೂಡ.

Rather than drone, prathap is now more intrested in reality shows

ಒಟ್ಟಿನಲ್ಲಿ ಸದ್ಯಕ್ಕೆ ಹಾಳಾದ ಮಿಕ್ಸರ್ ಹಾಗೂ ಟಿ.ವಿ. ಸೆಟ್ ಗಳಿಂದ ದೊರೆತ ಇ-ತ್ಯಾಜ್ಯಗಳಿಂದ 600ಕ್ಕೂ ಹೆಚ್ಚು ಡ್ರೋನ್ ಸಿದ್ದಪಡಿಸಿದ್ದಾಗಿ ಹಿಂದೆ ಹೇಳಿದ್ದ ಡ್ರೋನ್ ಪ್ರತಾಪ್ ಅವರಿಗೆ ಈಗ ಡ್ರೋನ್ ನಲ್ಲಿ ಆಸಕ್ತಿ ಕಡಿಮೆಯಾಗಿದೆಯಾ ಗೊತ್ತ್ ಇಲ್ಲ. ಆದರೆ ಡ್ರೋನ್ ಪ್ರತಾಪ್, ಗಿಚ್ಚಿ ಗಿಲಿ ಗಿಲಿ ಮೂಲಕ ಎರಡನೇ ಬಾರಿ ರಿಯಾಲಿಟಿ ಚೆಕ್ ಮಾಡಲು ಹೊರಟಿದ್ದಾರೆ. ಯಾರಿಗೆ ಗೊತ್ತು ಡ್ರೋನ್ ಪ್ರತಾಪ್ ಮುಂದೊಂದು ದಿನ ರಿಯಾಲಿಟಿ ಶೋನ ಅನಿಭಿಷಿಕ್ತ ದೊರೆಯಾದರೂ ಆಗಬಹುದು. ನೀವೇನ್ ಅಂತೀರಾ

More from Filmibeat

English summary
After bigg boss kannada season 10, Drone Prathap to appear in another reality show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X