ಅಮ್ಮ-ಮಗ ಒಟ್ಟಿಗೆ ಪರೀಕ್ಷೆ ಬರೆದ ಗುಟ್ಟು ಬಿಚ್ಚಿಟ್ಟ ರವಿ ಬೆಳಗೆರೆ
ಹಿರಿಯ ಪತ್ರಕರ್ತ ರವಿ ಬೆಳಗೆರೆ ಅಂದ್ರೆ ಅನೇಕರು ಭಯ ಪಡುತ್ತಾರೆ. ಅದರಲ್ಲೂ ಸೆಲೆಬ್ರಿಟಿಗಳು ಅವರ ಬಗ್ಗೆ ಮಾತನಾಡುವುದಕ್ಕೆ ಹಿಂದು-ಮುಂದು ಯೋಚಿಸುತ್ತಾರೆ. ರವಿ ಬೆಳಗೆರೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರೆ ಎನ್ನುವ ಸುದ್ದಿ ಗೊತ್ತಾಗುತ್ತಿದ್ದಂತೆ ಈ ಬಾರಿ ಬಿಗ್ ಮನೆ ಹೇಗಿರಲಿದೆ ಎನ್ನುವ ಕುತೂಹಲ ಹೆಚ್ಚಾಗಿತ್ತು. ಆದ್ರೀಗ ಬಿಗ್ ಮನೆಯಲ್ಲಿ ರವಿ ಬೆಳಗೆರೆ ನೋಡಿ ಎಲ್ಲರು ಅಚ್ಚರಿ ಪಟ್ಟಿದ್ದಾರೆ. ರವಿ ಬೆಳಗೆರೆ ಮೇಲಿದ್ದ ಭಯದ ಇಮೇಜ್ ದೂರ ಸರಿಯುತ್ತಿದೆ.
ಅಮ್ಮನ ಬಗ್ಗೆ ಹೇಳುತ್ತ ಕಣ್ಣೀರಿಟ್ಟ ರವಿ ಬೆಳಗೆರೆ ಜೀವನದ ಕಹಾನಿಗೆ ಅನೇಕರು ಭಾವುಕರಾಗಿದ್ದಾರೆ. ವಾರದ ಕಥೆ ಕಿಚ್ಚನ ಜೊತೆ ಶನಿವಾರದ ಎಪಿಸೋಡ್ ನಲ್ಲಿ ರವಿ ಬೆಳಗೆರೆ ಜೀವನದ ಇಂಟ್ರಸ್ಟಿಂಗ್ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವಾಗ ಪ್ರತಿಯೊಬ್ಬ ಸ್ಪರ್ಧಿಗೂ ಗುಟ್ಟು ಕಂಡು ಹಿಡಿಯುವ ಟಾಸ್ಕ್ ನೀಡಲಾಗಿತ್ತು. ಅಮ್ಮ-ಮಗ ಇಬ್ಬರು ಒಟ್ಟಿಗೆ ಹತ್ತನೆ ತರಗತಿ ಪರೀಕ್ಷೆ ಬರೆದವರು ಯಾರು ಎನ್ನುವುದನ್ನು ಕಂಡುಹಿಡಿಯ ಬೇಕಿತ್ತು.

ಇದು ರವಿ ಬೆಳಗೆರೆ ಗುಟ್ಟಾಗಿತ್ತು. ಹೌದು, ರವಿ ಬೆಳಗೆರೆ ಮತ್ತು ಅವರ ಅಮ್ಮ ಇಬ್ಬರು ಒಟ್ಟಿಗೆ ಹತ್ತನೆ ತರಗತಿ ಪರೀಕ್ಷೆ ಬರೆದ ವಿಚಾರವನ್ನು ಬಹಿರಂಗ ಪಡಿಸಿದ್ರು. ಬೆಳಗೆರೆ ಅಮ್ಮ ಟೀಚರ್ ಅಗಿದ್ದರಂತೆ. ಅಂದು 8ನೇ ತರಗತಿ ಓದಿದರೆ ಸಾಕಿತ್ತು ಟೀಚರ್ ಕೆಲಸ ಸಿಗುತ್ತಿತ್ತು. 10ನೇ ತರಗತಿ ಪಾಸ್ ಆದರೆ 15 ರೂಪಾಯಿ ಹೆಚ್ಚು ಸಂಬಳ ಸಿಗುತ್ತೆ ಎನ್ನುವ ಕಾರಣಕ್ಕೆ, ರವಿ ಬೆಳಗೆರೆ ಅಮ್ಮ 10ನೇ ತರಗತಿ ಪರೀಕ್ಷೆ ಬರೆಯುತ್ತಾರೆ.
ವಿಶೇಷ ಅಂದ್ರೆ ಅದೆ ವರ್ಷ ರವಿ ಬೆಳಗೆರೆ ಕೂಡ 10ನೇ ತರಗತಿ ಓದುತ್ತಿದ್ದರಂತೆ. ಹಾಗಾಗಿ ಅಮ್ಮ ಮತ್ತು ಮಗ ಇಬ್ಬರು ಒಟ್ಟಿಗೆ ಪರೀಕ್ಷೆ ಬರೆದಿದ್ದಾರೆ. ಆದ್ರೆ ಅಚ್ಚರಿ ಅಂದ್ರೆ ಪರೀಕ್ಷೆಯಲ್ಲಿ ಅಮ್ಮ ಪಾಸ್ ಆದ್ರೆ ಮಗ ಫೇಲ್.
ಪರೀಕ್ಷೆ ರಿಸಲ್ಟ್ ನೋಡಿ ಅಮ್ಮನಿಗೆ ತಿಳಿಸಿದ ಬೆಳಗೆರೆಗೆ ಅಮ್ಮನ ಕಡೆಯಿಂದ 2 ರೂಪಾಯಿ ಸಿಕ್ಕಿತ್ತಂತೆ. ಅದೆ ಹಣದಲ್ಲಿ ರವಿ ಬೆಳೆಗೆರೆ ಸಿನಿಮಾ ನೋಡಿ ಸಂತಸ ಪಟ್ಟಿದ್ದರಂತೆ. ಅಮ್ಮ ಮತ್ತು ಮಗ ಇಬ್ಬರು ಒಟ್ಟಿಗೆ ಪರೀಕ್ಷೆ ಬರೆದಿದ್ದು ಇತಿಹಾಸದಲ್ಲಿ ಅದೇ ಮೊದಲೇನೊ ಎಂದು ರವಿ ಬೆಳಗೆರೆ ಹೇಳಿದ್ದಾರೆ.


Click it and Unblock the Notifications











