'ಬಿಗ್ ಬಾಸ್' ಮನೆಗೆ ಬಂದ ರವಿ ಬೆಳಗೆರೆ: ಸಿಗರೇಟ್ ಗಾಗಿ ಬೇಡಿಕೆ

Recommended Video

Ravi Belagere enter to BBK 7 house | FILMIBEAT KANNADA

ಹಿರಿಯ ಪತ್ರಕರ್ತ ರವಿ ಬೆಳಗೆರೆ 'ಬಿಗ್ ಬಾಸ್ ಕನ್ನಡ ಸೀಸನ್ 7'ರ ಸ್ಪರ್ಧಿ ಎನ್ನುವುದು ಅಧಿಕೃತವಾಗಿದೆ. ಸ್ವತಃ ಕಲರ್ಸ್ ಕನ್ನಡ ವಾಹಿನಿ ವಿಡಿಯೋ ಮೂಲಕ ಈ ವಿಷಯ ಹಂಚಿಕೊಂಡಿದೆ.

ರವಿ ಬೆಳಗೆರೆ ಕಾರ್ಯಕ್ರಮಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಹೋಗುತ್ತಾರೆ, ಒಂದೇ ಒಂದು ವಾರ ಮಾತ್ರ ಇರುತ್ತಾರೆ ಎನ್ನುವ ಸುದ್ದಿಗಳು ಇದ್ದವು. ಆದರೆ, ಮೊದಲ ದಿನವೇ ರವಿ ಬೆಳಗೆರೆ ದೊಡ್ಡ ಮನೆಗೆ ಹೋಗಿದ್ದಾರೆ. ಹಾಸ್ಯ ನಟ ಕುರಿ ಪ್ರತಾಪ್ ಹಾಗೂ ರವಿ ಬೆಳಗೆರೆ ನಡುವಿನ ವಿಡಿಯೋ ಇದೀಗ ವೀಕ್ಷಕರ ಮುಂದೆ ಬಂದಿದೆ.

ಇಂದು ಸಂಜೆ 6 ಗಂಟೆಗೆ ಕಾರ್ಯಕ್ರಮ ಗ್ರಾಂಡ್ ಓಪನಿಂಗ್ ಆಗುತ್ತಿದೆ. ಇದೇ ಮೊದಲ ಬಾರಿಗೆ ಗ್ರಾಂಡ್ ಓಪನಿಂಗ್ ಗೂ ಮುಂಚೆಯೇ ಕಾರ್ಯಕ್ರಮದ ಸ್ಪರ್ಧಿಗಳ ಹೆಸರನ್ನು ವಾಹಿನಿ ತಿಳಿಸುತ್ತಿದೆ. ಕುರಿ ಪ್ರತಾಪ್ ನಂತರ ರವಿ ಬೆಳಗೆರೆ ವಿಡಿಯೋವನ್ನು ವಾಹಿನಿ ಬಹಿರಂಗಪಡಿಸಿದೆ.

ಬಿಗ್ ಮನೆಯಲ್ಲಿ ಬೆಳಗೆರೆ ಪ್ರತಾಪ

ಬಿಗ್ ಮನೆಯಲ್ಲಿ ಬೆಳಗೆರೆ ಪ್ರತಾಪ

'ಬಿಗ್ ಬಾಸ್' ಮನೆಗೆ ಪತ್ರಕರ್ತ ರವಿ ಬೆಳಗೆರೆ ಎಂಟ್ರಿಯಾಗಿದೆ. ರವಿ ಬೆಳಗೆರೆ ಗೆ ಮತ್ತೊಬ್ಬ ಸ್ಪರ್ಧಿ ಕುರಿ ಪ್ರತಾಪ್ ಬಿಗ್ ಬಾಸ್ ಮನೆಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ. 'ಬಿಗ್ ಬಾಸ್' ಮನೆಯ ಬಗ್ಗೆ ತಮಗೆ ಇರುವ ಪ್ರಶ್ನೆಗಳನ್ನು ಕುರಿ ಪ್ರತಾಪ್ ಮೂಲಕ ಉತ್ತರ ಪಡೆದುಕೊಂಡಿದ್ದಾರೆ. ಮೊದಲ ದಿನವೇ ಕುರಿ ಹಾಗೂ ಬೆಳಗೆರೆ ನಡುವೆ ಸ್ನೇಹ ಶುರುವಾಗಿದೆ.

ಸಿಗರೇಟ್ ಗಾಗಿ ಬೇಡಿಕೆ

ಸಿಗರೇಟ್ ಗಾಗಿ ಬೇಡಿಕೆ

ಮನೆಗೆ ಬಂದ ಮೊದಲ ದಿನವೇ ಬಿಗ್ ಬಾಸ್ ಗೆ ರವಿ ಬೆಳಗೆರೆ ಬೇಡಿಕೆ ಇಟಿದ್ದಾರೆ. 'ನನ್ನ ಸಿಗರೇಟ್ ಅನ್ನು ಎಲ್ಲಿ ಕೇಳುವುದು' ಎಂದು ಕುರಿ ಪ್ರತಾಪ್ ಗೆ ಪ್ರಶ್ನೆ ಮಾಡುತ್ತಾರೆ. ಕ್ಯಾಮರಾ ಮುಂದೆ ಹೇಳಿದರೆ, ಅವರಿಗೆ ಕೇಳುತ್ತದೆ ಎಂದು ಕುರಿ ಸಲಹೆ ನೀಡುತ್ತಾರೆ. ''ಬಿಗ್ ಬಾಸ್ ನನ್ನ ಸಿಗರೇಟ್ ಎಲ್ಲಿ.. ತುಂಬ ಹೊತ್ತು ಸಿಗರೇಟ್ ಸೇದದೆ ಇರಬಾರದು ಎಂದು ಡಾಕ್ಟರ್ ಹೇಳಿದ್ದಾರೆ. Smoking Zone ಎಲ್ಲಿ?'' ಎಂದು ರವಿ ಬೆಳಗೆರೆ ಕೇಳಿದ್ದಾರೆ.

ಎರಡನೇ ಸ್ಪರ್ಧಿನಾ?

ಎರಡನೇ ಸ್ಪರ್ಧಿನಾ?

'ಬಿಗ್ ಬಾಸ್' ಮನೆಗೆ ಕುರಿ ಪ್ರತಾಪ್ ಮೊದಲ ಎಂಟ್ರಿಯಾಗಿದ್ದು, ಹಿರಿಯ ನಟ ಜೈ ಜಗದೀಶ್ ಎರಡನೇ ಸ್ಪರ್ಧಿ ಎನ್ನುವ ಸುದ್ದಿ ಇತ್ತು. ಆದರೆ, ಈಗ ಬಂದಿರುವ ವಿಡಿಯೋ ನೋಡಿದರೆ, ರವಿ ಬೆಳಗೆರೆ ಕಾರ್ಯಕ್ರಮದ ಎರಡನೇ ಸ್ಪರ್ಧಿಯಾದ ಹಾಗಿದೆ. ಏಕೆಂದರೆ, ಕಲರ್ಸ್ ವಾಹಿನಿ ಹಂಚಿಕೊಂಡ ಈ ವಿಡಿಯೋದಲ್ಲಿ ಬರೀ ಕುರಿ ಪ್ರತಾಪ್ ಹಾಗೂ ರವಿ ಬೆಳೆಗೆರೆ ಮಾತ್ರ ಇದ್ದಾರೆ.

ಮಗಳ ನಂತರ ತಂದೆ ಆಗಮನ

ಮಗಳ ನಂತರ ತಂದೆ ಆಗಮನ

'ಬಿಗ್ ಬಾಸ್ ಕಾರ್ಯಕ್ರಮದ ಸೀಸನ್ 3' ನಲ್ಲಿ ರವಿ ಬೆಳೆಗೆರೆ ಪುತ್ರಿ ಭಾವನ ಬೆಳಗೆರೆ ಭಾಗಿಯಾಗಿದ್ದರು. ಮಾಸ್ಟರ್ ಆನಂದ್, ರೆಹಮಾನ್, ಪೂಜಾ ಗಾಂಧಿ, ಚಂದನ್ ಜೊತೆಗೆ ಸ್ಪರ್ಧಿಗೆ ಇಳಿದಿದ್ದರು. ಕಾರ್ಯಕ್ರಮದ 10ನೇ ವಾರ ಭಾವನೆ ಬೆಳೆಗೆರೆ ಹೊರ ಬಂದಿದ್ದರು. ಇದೀಗ ಮಗಳ ನಂತರ ತಂದೆ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ.

More from Filmibeat

English summary
Bigg Boss Kannada Season 7 : Senior journalist Ravi Belagere entered Bigg Boss Kannada Season 7 house. Bigg Boss kannada season 7 show will grand opening from today 6PM.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X