ಡ್ರಾಮಾ ಜೂನಿಯರ್ ವೇದಿಕೆಯಲ್ಲಿ ಅಂಬರೀಶ್- ರವಿಚಂದ್ರನ್ ಸ್ನೇಹದ ಅನಾವರಣ

By ಎಸ್ ಸುಮಂತ್

ಇಂಡಸ್ಟ್ರಿಯಲ್ಲಿ ಅಂಬರೀಶ್ ಅವರು ಇದ್ದಾಗ ಎಷ್ಟು ಅದ್ಭುತವಾಗಿತ್ತು ಎಂಬುದನ್ನು ಮರೆಯುವ ಹಾಗಿಲ್ಲ. ಸಣ್ಣದೊಂದು ಸಮಸ್ಯೆಯಾದರೂ ಯಜಮಾನನಂತೆ ಅಂಬಿ ಮುಂದೆ ನಿಂತು ಎಲ್ಲಾ ಸಮಸ್ಯೆಯನ್ನು ಬಗೆಹರಿಸುತ್ತಿದ್ದರು. ಅಷ್ಟೇ ಯಾಕೆ ನಟ-ನಟಿಯರೆಲ್ಲರೂ ಅಂಬರೀಶ್ ಮಾತನ್ನು ಮೀರುತ್ತಾ ಇರಲಿಲ್ಲ. ಅವರೇಳಿದ್ದನ್ನು ಚಾಚು ತಪ್ಪದೆ ಪಾಲಿಸುತ್ತಿದ್ದರು. ಅಷ್ಟು ಗೌರವ ಅಂಬರೀಶ್ ಅವರ ಮೇಲಿತ್ತು.

ಇದೀಗ ಡ್ರಾಮಾ ಜೂನಿಯರ್ ವೇದಿಕೆಯಲ್ಲಿ ಅಂಬರೀಶ್ ಅವರ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಮಕ್ಕಳ ಮುಗ್ದತೆಯಲ್ಲಿ ಸ್ನೇಹದ ಮಾತುಗಳು ಮತ್ತೆ ನೆನಪಿಗೆ ಬಂದಿದೆ. ವೇದಿಕೆ ಮೇಲೆಯೇ ರವಿಚಂದ್ರನ್ ತನ್ನ ಗೆಳೆಯ ಅಂಬರೀಶ್ ಅವರನ್ನು ನೆನೆಯುವಂತೆ ಮಾಡಿದೆ. ಮಕ್ಕಳ ಆ ನಟನೆಗೆ ಕ್ರೇಜಿಸ್ಟಾರ್ ದಿಲ್ ಖುಷ್ ಆಗಿದೆ.

ಅಂಬರೀಶ್ ನೆನಪು ಮಾಡಿದ ಡ್ರಾಮಾ ಜೂನಿಯರ್

ಅಂಬರೀಶ್ ನೆನಪು ಮಾಡಿದ ಡ್ರಾಮಾ ಜೂನಿಯರ್

ಡ್ರಾಮಾ ಜೂನಿಯರ್ ವೇದಿಕೆ ಅಂದ್ರೆನೇ ಒಂದಷ್ಟು ಮನರಂಜನೆ, ಒಂದಷ್ಟು ಪ್ರತಿಭೆಯ ಅನಾವರಣದ ಜೊತೆಗೆ ಒಂದಷ್ಟು ನಗು ಕಾಡದೆ ಇರಲಾರದು. ಮಕ್ಕಳ ನಟನೆ ನೋಡುವುದೇ ಒಂದು ಹಿತ. ಅಂಥದ್ರಲ್ಲಿ ಮತ್ತೊಬ್ಬರನ್ನು ಮಕ್ಕಳು ಇಮಿಟೇಟ್ ಮಾಡಿದಾಗ ಮನರಂಜನೆ ಸಿಗದೆ ಇರಲು ಹೇಗೆ ಸಾಧ್ಯ. ಡ್ರಾಮಾ ಜೂನಿಯರ್‌ನಲ್ಲಿ ಈ ವಾರ ಸೀನಿಯರ್ ಸೆಲೆಬ್ರೆಟಿಗಳ ಡ್ರಾಮಾ ಮಾಡಿ ಎಲ್ಲರನ್ನು ನಕ್ಕು ನಗಿಸಿದ್ದಾರೆ.

ರವಿಚಂದ್ರನ್ ಮತ್ತು ಅಂಬಿ ಸ್ನೇಹ ಎಂಥದ್ದು?

ರವಿಚಂದ್ರನ್ ಮತ್ತು ಅಂಬಿ ಸ್ನೇಹ ಎಂಥದ್ದು?

ಇಂಡಸ್ಟ್ರಿಯಲ್ಲಿ ಒಂದಷ್ಟು ಮಂದಿ ತುಂಬಾ ಆತ್ಮೀಯರಾಗಿರುತ್ತಾರೆ. ಅದರಲ್ಲಿ ಅಂಬರೀಶ್ ಮತ್ತು ರವಿಚಂದ್ರನ್ ಸಂಬಂಧ ಕೂಡ ತುಂಬಾ ಅದ್ಭುತವಾಗಿತ್ತು. ಆ ಮಧುರ ಸ್ನೇಹವನ್ನು ವೇದಿಕೆ ಮೇಲೆ ತರಲಾಗಿದೆ. ಡ್ರಾಮಾ ಜೂನಿಯರ್ ಮಕ್ಕಳು ಡ್ರಾಮಾದಲ್ಲಿ ಒಬ್ಬರು ಅಂಬರೀಶ್ ಪಾತ್ರ ಮಾಡಿದ್ದರೆ. ಇನ್ನೊಬ್ಬರು ರವಿಚಂದ್ರನ್ ಪಾತ್ರ ಮಾಡಿದ್ದಾರೆ. ಪುಟಾಣಿ ಮಕ್ಜಳಾದರೂ ಮಾಡಿದ ಮೇಕಪ್ ಮೇಲೆ ಜೂನಿಯರ್ ಅಂಬರೀಶ್ ಅಂತೆ ಹಾಗೂ ಜೂನಿಯರ್ ರವಿಚಂದ್ರನ್ ಅಂತೆಯೇ ಕಾಣಿಸುತ್ತಿದ್ದಾರೆ. ಮಕ್ಕಳ ಮುಗ್ಧತೆಯ ಡ್ರಾಮಾದಲ್ಲಿ ಅಂಬರೀಶ್ ಅವರ ಸಹಾಯದ ಗುಣವೂ ಎದ್ದು ಕಾಣುತ್ತಿದೆ.

ನಗುವಿನ ಅಲೆಯಲ್ಲಿ ತೇಲಿಸಿದ ಅಂಬಿ

ನಗುವಿನ ಅಲೆಯಲ್ಲಿ ತೇಲಿಸಿದ ಅಂಬಿ

ಅಂಬಿಗೆ ಸಹಾಯಕ್ಕಾಗಿ ನಾಗರಾಜು ಎಂಬಾತ ಇರುತ್ತಾನೆ. ಅಂಬಿಗೆ ಆತನ ಮೇಲೆ ಅಪಾರ ನಂಬಿಕೆ. ಹಾಗೇ ತಮ್ಮ ಮನೆಯವರಂತೆಯೇ ನೋಡಿಕೊಳ್ಳುತ್ತಾರೆ. ಅಂಬಿ ಅವರದ್ದು ಅದು ರಿಯಲ್ ಗುಣ ಕೂಡ. ಯಾರನ್ನೇ ಆಗಲಿ ಅಂಬರೀಶ್ ನೋಡುತ್ತಿದ್ದ ರೀತಿಯೇ ಹಾಗೆ. ಹತ್ತಿರದಿಂದ ನೋಡಿದವರು ಅದನ್ನೇ ಹೇಳುತ್ತಾರೆ‌. ನಮ್ಮನ್ನು ಯಾವತ್ತಿಗೂ ಅಂಬಿ ಅಣ್ಣ ದೂರದವರಂತೆ ನೋಡಿಯೇ ಇಲ್ಲ. ಕೆಲಸದವರನ್ನು ಆತ್ಮೀಯವಾಗಿ ನೋಡುತ್ತಿದ್ದ ಗುಣ ಅಂಬರೀಶ್ ಅವರದ್ದು. ಇದೀಗ ಈ ನಾಟಕದಲ್ಲೂ ಅದು ಅನಾವರಣವಾಗಿದೆ.

ಅಂಬಿಯ ಒಳ್ಳೆತನದ ಬಗ್ಗೆ ಮೆಸೇಜ್

ಅಂಬಿ ಕುಳಿತಿದ್ದಾಗ ರವಿಚಂದ್ರನ್ ಮಾತನಾಡಿಸಲು ಬರುತ್ತಾರೆ. ಆಗ ಅಂಬಿ ಮನೆಯಲ್ಲಿ ನಾಗರಾಜ ಎಂಬ ಅಂಬಿ ಜೊತೆಗಿನ ಕೆಲಸದವನು ಇರುತ್ತಾರೆ. ಅಂಬಿ ನಾಗರಾಜನನ್ನು ಸುಮ್ಮನೆ ಕೇಳುತ್ತಾರೆ ನೀನು ರವಿ ಮನೆಗೆ ಹೋಗಿ ಬಿಡು ನನಗಿಂತ ಅದ್ಭುತವಾಗಿ ನೋಡಿಕೊಳ್ಳುತ್ತಾನೆ. ನಾನು ಅದಕ್ಕೆ ಗ್ಯಾರಂಟಿ ಅಂತಾರೆ. ಅಬ್ಬಬ್ಬಾ ಅಂಬಿ ನಿರೀಕ್ಷೆ ಮಾಡಿರಲೇ ಇಲ್ಲ. ತಕ್ಷಣ ನಾಗರಾಜ ಬಣ್ಣ ಚೇಂಜ್ ಮಾಡಿಬಿಡುತ್ತಾನೆ. ಅಂಬಿಗೆ ಶಾಕ್. ಇನ್ನು ರವಿಚಂದ್ರನ್ ಮನೆಗೆ ಹೋದಾಗ ಗಿಟಾರ್ ನುಡಿಸದೆ ಇದ್ದರೆ ಹೇಗೆ. ಜೂನಿಯರ್ ರವಿಚಂದ್ರನ್ ಹೊರಗೆ ಹೋದಾಗ ನಾಗರಾಜ ಆ ಆಸೆಯನ್ನು ತೀರಿಸಿಕೊಳ್ಳುತ್ತಾನೆ.

More from Filmibeat

English summary
Ravichandran and Ambareesh Episode In Drama Junior Reality Show. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X