'ಕಾಮಿಡಿ ಕಿಲಾಡಿಗಳು' ವೇದಿಕೆಗೆ ಬಂದ ಕ್ರೇಜಿಸ್ಟಾರ್ ರವಿಚಂದ್ರನ್

By Naveen

ಜೀ ಕನ್ನಡ ವಾಹಿನಿಯ ಜನಪ್ರಿಯ ಹಾಸ್ಯ ಕಾರ್ಯಕ್ರಮ 'ಕಾಮಿಡಿ ಕಿಲಾಡಿಗಳು' ಸೀಸನ್ 2 ಈಗಾಗಲೇ ಪ್ರಸಾರ ಆಗುತ್ತಿದೆ. ಕೆಲವರು ಕಾರ್ಯಕ್ರಮವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಕಳೆದ ಬಾರಿಯ 'ಕಾಮಿಡಿ ಕಿಲಾಡಿಗಳು'ಗೆ ಹೋಲಿಸಿದರೆ ಇದು ಅಷ್ಟು ಮಜಾ ನೀಡುತ್ತಿಲ್ಲ ಎನ್ನುತ್ತಿದ್ದಾರೆ.

ಇದರ ಜೊತೆಗೆ ಈಗ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಆಗಮಿಸಿದ್ದಾರೆ. ಇದೇ ಮೊದಲ ಬಾರಿಗೆ ರವಿಚಂದ್ರನ್ 'ಕಾಮಿಡಿ ಕಿಲಾಡಿಗಳು' ವೇದಿಕೆ ಏರಿದ್ದಾರೆ. ರವಿಚಂದ್ರನ್ ಅವರ ಸಂಚಿಕೆಯ ಚಿತ್ರೀಕರಣ ಈಗಾಗಲೇ ನಡೆದಿದೆ.

Ravichandran came as a guest Comedy Kiladigalu 2 program

ಚಿತ್ರೀಕರಣದ ವೇಳೆ ರವಿಚಂದ್ರನ್ ಜೊತೆಗೆ ಜಗ್ಗೇಶ್, ಯೋಗರಾಜ್ ಭಟ್, ರಕ್ಷಿತಾ ಮತ್ತು ಮಾಸ್ಟರ್ ಆನಂದ್ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. 'ಜೀ ಕನ್ನಡ' ವಾಹಿನಿ ಇನ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋವನ್ನು ಹಾಕಲಾಗಿದೆ. ಇನ್ನೂ ಫೋಟೋ ನೋಡಿರುವ ಅಭಿಮಾನಿಗಳು ಖುಷಿ ಆಗಿದ್ದಾರೆ. ರವಿಚಂದ್ರನ್ 'ಸರಿಗಮಪ' ಕಾರ್ಯಕ್ರಮಕ್ಕೆ ಸಹ ಬರಬೇಕು ಎನ್ನುವುದು ಅನೇಕರ ಕೋರಿಕೆ ಆಗಿದೆ. ಹಂಸಲೇಖ ಮತ್ತು ರವಿಚಂದ್ರನ್ ಅವರನ್ನು ಒಂದೇ ಕಾರ್ಯಕ್ರಮದಲ್ಲಿ ನೋಡಲು ಅವರ ಅಭಿಮಾನಿಗಳು ಬಯಸಿದ್ದಾರೆ.

ಅಂದಹಾಗೆ, 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟಗೆ ಪ್ರಸಾರ ಆಗಲಿದೆ.

More from Filmibeat

English summary
Kannada actor Ravichandran came as a guest for Zee Kannada channel's popular show 'Comedy Kiladigalu 2'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X