ಮಗಳಿಗಾಗಿ ಪ್ರೀತಿಯ ಉಡುಗೊರೆ ನೀಡಿದ ಕ್ರೇಜಿ ಸ್ಟಾರ್
ನಟ ರವಿಚಂದ್ರನ್ ತಮ್ಮ ಪ್ರೀತಿಯ ಮಗಳಿಗೆ ಉಡುಗೊರೆ ನೀಡಿದ್ದಾರೆ. ಹಾಡಿನ ಮೂಲಕ ಮುದ್ದು ಮಗಳು ಗೀತಾಂಜಲಿಗೆ ಸುಂದರ ಗಿಫ್ಟ್ ನೀಡಿದ್ದಾರೆ.
ಇತ್ತೀಚಿಗಷ್ಟೆ ಕ್ರೇಜಿ ಸ್ಟಾರ್ ಪುತ್ರಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸದ್ಯದಲ್ಲಿಯೇ ಗೀತಾಂಜಲಿ ಹಾಗೂ ಅಜಯ್ ಮದುವೆ ನಡೆಯಲಿದೆ. ಮದುವೆಯ ಮುನ್ನ ಮಗಳ ಮೇಲಿನ ಪ್ರೀತಿಯನ್ನು ಹಾಡಿನ ಮೂಲಕ ವರ್ಣಿಸಿದ್ದಾರೆ.
ಮಗಳಿಗಾಗಿ ವಿಶೇಷ ಹಾಡನ್ನು ರವಿಚಂದ್ರನ್ ಮಾಡಿದ್ದಾರೆ. ಆ ಹಾಡಿಗೆ ಸಾಹಿತ್ಯ ಬರೆದು, ತಾವೇ ಸಂಗೀತ ನೀಡಿದ್ದಾರೆ. ಈ ಹಾಡನ್ನು ತಕಧಿಮಿತಾ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.

''ಓ ನನ್ನ ಮಗುವಂತೆ ನೀನು... ಬೆಳೆದ ಮೇಲೆ ನಿನ್ನ ಮಗುವಾದೆ ನಾನು..'' ಎಂಬ ಈ ಹಾಡು ಕೇಳಲು ಇಂಪಾಗಿದೆ. ಜೊತೆಗೆ ಕಾರ್ಯಕ್ರಮದ ವೀಕ್ಷಕರಿಗೆ, ಸ್ಪರ್ಥಿಗಳಿಗೆ ಹಾಗೂ ತೀರ್ಪುಗಾರಿಗೆ ರಂಜಿಸಿದೆ.
ಕಲರ್ಸ್ ಕನ್ನಡ ವಾಹಿನಿಯ ತಕಧಿಮಿತಾ ಕಾರ್ಯಕ್ರಮದಲ್ಲಿ ರವಿಚಂದ್ರನ್ ಹಾಡು ನಿನ್ನೆ ಪ್ರಸಾರ ಆಗಿದೆ.
English summary
Kannada actor Ravichandran gifts a song for her daughter Geethanjali.


Click it and Unblock the Notifications