ಕೋಟ್ಯಾಧಿಪತಿಯಲ್ಲಿ ರವಿಚಂದ್ರನ್ ಅಂತರಂಗ ಬಹಿರಂಗ

By Rajendra

Crazy Star Ravichandran
ಸ್ಪರ್ಧೆಯ ನಡುವೆ ರವಿಚಂದ್ರನ್ ತಮ್ಮ ಹಲವಾರು ಘಟನೆಗಳನ್ನು ಮೆಲುಕು ಹಾಕಿದರು. ತೆಲುಗು ಮೆಗಾ ಸ್ಟಾರ್ ಚಿರಂಜೀವಿಯನ್ನು 'ಸಿಪಾಯಿ' ಚಿತ್ರಕ್ಕೆ ಕರೆದುಕೊಂಡು ಬಂದದ್ದು. ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಂಗೀತ ಸಂಯೋಜನೆಯನ್ನು ಬಿಟ್ಟುಬಿಡು ಎಂದು ಸಲಹೆ ನೀಡಿದ್ದು ಎಲ್ಲವನ್ನೂ ನೆನಪಿಸಿಕೊಂಡರು.

ಚಿರಂಜೀವಿ ಅವರಿಗೆ ಫೋನ್ ಮಾಡಿ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುವಂತೆ ಕೇಳಿದರಂತೆ. ಅದಕ್ಕೆ ಕೂಡಲೆ ಒಪ್ಪಿದ ಚಿರು ಎಷ್ಟು ದಿನ ಬೇಕು ಎಂದರಂತೆ. ಹದಿನೈದು ದಿನ ಕಾಲ್‌ಶೀಟ್ ಬೇಕು ಎಂದ ರವಿಗೆ ಅತಿಥಿ ಪಾತ್ರ ಎಂದರೆ ಮೂರು ದಿನ ಅಷ್ಟೇ ಅಲ್ವಾ. ಇಷ್ಟೊಂದು ಟೈಮ್ ಯಾಕೆ ಎಂದರಂತೆ. ಅಷ್ಟು ದಿನ ಬೇಕೆ ಬೇಕು ಸಾರ್ ನನಗೆ ಎಂದರಂತೆ.

ಸರಿ ಆಯ್ತು ಬರ್ತೀನಿ ಎಂದ ಚಿರಂಜೀವಿ ಅವರ ಸಂಭಾವನೆ ಕೇಳಿದರಂತೆ. ಅದಕ್ಕೆ ಚಿರು, ನೀನು ಎಷ್ಟು ಕೊಟ್ಟರೂ ತೆಗೆದುಕೊಳ್ಳುತ್ತೇನೆ ಎಂದರಂತೆ. ಬಳಿಕ ಒಮ್ಮೆ ರಜನಿಕಾಂತ್ ಅವರು ರವಿಚಂದ್ರನ್ ಅವರ ಮನೆಗೆ ಬಂದು ನೀನು ಸಂಗೀತ ನಿರ್ದೇಶನ ಮಾಡುವುದು ಸರಿಯಿಲ್ಲ. ಬಿಟ್ ಬಿಡೋ ನಿನಗೆ ಇದೆಲ್ಲಾ ಬೇಡ ಎಂದರಂತೆ.

ಇಲ್ಲಾ ಸಾರ್ ನಾನು ಯಾವುದೇ ಕಾರಣಕ್ಕೂ ಬಿಡಲ್ಲ. ಈ ದಾರಿಯಲ್ಲಿ ತುಂಬಾ ದೂರ ಬಂದಿದ್ದೇನೆ. ಈಗೀಗ ಇದು ಏನು ಎಂದು ಅರ್ಥವಾಗ ತೊಡಗಿದೆ. ಈಗ ಬಿಟ್ಟುಬಿಡು ಎಂದರೆ ಸಾಧ್ಯವಿಲ್ಲ ಎಂದರಂತೆ. ನಿನ್ನ ಸಂಗೀತವನ್ನು ಜನ ಇಷ್ಟಪಡ್ತಾ ಇಲ್ವೋ ಅದಕ್ಕೆ ಹೇಳ್ತಾ ಇದ್ದೀನಿ ಎಂದು ರಜನಿ ವಿನಂತಿಸಿಕೊಂಡರಂತೆ.

ಸರಿ ಈಗ ಒಂದು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದೇನೆ ಕೇಳು. ನಿನಗೆ ಇಷ್ಟವಿಲ್ಲ ಎಂದರೆ ಈಗಲೇ ಬಿಟ್ಟು ಬಿಡ್ತೇನೆ ಎಂದರಂತೆ ರವಿ. ಸರಿ ನಡಿ ಎಂದು ಹಾಡು ಕೇಳಿ ರಜನಿ ಎದ್ದು ಹೊರಟು ಬಿಟ್ಟರಂತೆ. ಬಳಿಕ ಯಾರದೋ ಕೈಯಲ್ಲಿ ಹೇಳಿಕಳಿಸಿದರಂತೆ. ಅವನ ಹಾಡು, ಸಂಗೀತ ತುಂಬಾ ಚೆನ್ನಾಗಿತ್ತು. ಚೆನ್ನಾಗಿಲ್ಲ ಎಂದು ಹೇಗೆ ಹೇಳಲಿ ಎಂದರಂತೆ.

ಬಳಿಕ ರವಿಚಂದ್ರನ್ ಮಾತನಾಡುತ್ತಾ ಇದುವರೆಗೂ ನಾನು ಕಣ್ಣೀರಿಟ್ಟಿದ್ದು ಎರಡೇ ವಿಷಯಕ್ಕೆ. ಒಂದು 'ಏಕಾಂಗಿ' ಚಿತ್ರದ ಸೋಲು. ಆ ಚಿತ್ರ ಯಾಕೆ ಸೋತಿತು ಎಂದು ಅರ್ಥ ಮಾಡಿಕೊಳ್ಳಲು ನಾನು ಆರು ತಿಂಗಳು ಮನೆ ಬಿಟ್ಟು ಕದಲಲಿಲ್ಲ. ಯಾಕೆ ಎಂದು ಅರ್ಥವಾಗಲಿಲ್ಲ.

ಈಗಲೂ ಅಷ್ಟೇ ನಮ್ಮ ಮನೆಯಲ್ಲಿ ಏಕಾಂಗಿ ಚಿತ್ರದ ಸಿಡಿ, ಹಾಡಾಗಲಿ ಏನೂ ಹಾಕುವುದಿಲ್ಲ. ಅಷ್ಟೊಂದು ಕೆಟ್ಟ ಪ್ರಭಾವ ಬೀರಿದೆ ಆ ಸಿನಿಮಾ ನನ್ನ ಜೀವನದಲ್ಲಿ ಎಂದರು. ಬಳಿಕ ಕಣ್ಣೀರಿಟ್ಟದ್ದು ಆಗಿನ ಕಾಲದಲ್ಲೇ ನಾಲ್ಕುವರೆ ಕೋಟಿ ಖರ್ಚು ಮಾಡಿದ್ದ 'ಶಾಂತಿ ಕ್ರಾಂತಿ' ಚಿತ್ರದ ಸೋಲು ಎಂದರು.

ಇದೇ ಸಂದರ್ಭದಲ್ಲಿ 'ಮಂಜಿನ ಹನಿ' ಚಿತ್ರದ ಬಗ್ಗೆಯೂ ಮಾತನಾಡಿದರು. 'ಮಂಜಿನ ಹನಿ' ಚಿತ್ರದ ಟ್ರೇಲರ್‌ನ್ನೂ ಶೋನಲ್ಲಿ ತೋರಿಸಲಾಯಿತು. ಇದೊಂದು ಪಕ್ಕಾ ಮಾಸ್ ಸಿನಿಮಾ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಇಲ್ಲೂ ರವಿಚಂದ್ರನ್ ಉದ್ದಕ್ಕೆ ಕೂದಲು ಬಿಟ್ಟುಕೊಂಡಿರುವುದು ಅವರ ಅಭಿಮಾನಿಗಳಿಗೆ ಮತ್ತೆ ನಿರಾಶೆ ಮೂಡಿಸಿತು.

ಈ ಬಗ್ಗೆ ಮಾತನಾಡಿದ ರವಿಚಂದ್ರನ್, ಚಿತ್ರದ ಟೈಟಲ್ 'ಮಂಜಿನ ಹನಿ' ಎಂದರೆ ಎಲ್ಲರೂ ಇದೊಂದು ಪಕ್ಕಾ ಪ್ರೇಮ ಕತೆ ಎಂದು ತಿಳಿದುಕೊಳ್ಳುತ್ತಾರೆ. ಆದರೆ ಮಂಜಿನಹನಿ ಎಂದರೆ ಮರಗಟ್ಟಿದ ಹೃದಯಗಳು ಮಂಜಿನಂತೆ ಕರಗಿ ನೀರಾಗಲಿ ಎಂಬುದು ಎಂದು ವಿವರಣೆ ನೀಡಿದರು. ಅಂದಹಾಗೆ ಈ ಶೋನಲ್ಲಿ ಗೆದ್ದ ಅಷ್ಟೂ ಹಣವನ್ನು ರವಿಚಂದ್ರನ್ ದಾನವಾಗಿ ನೀಡಲಿದ್ದಾರೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Kannada actor Crazy Star Ravichandran wins Rs. 12,50,000 on Asianet Suvarna channels game show Kannadada Kotyadhipati. He is the third celebrity guest on Puneet Rajkumar’s quiz show aired on 5th June at 8:00 PM IST
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X