ಇಂದಿನ ಸ್ಟಾರ್ ಗಳು ಗುರಾಯಿಸಿಕೊಂಡೇ ಓಡಾಡ್ತಾರೆ

By Rajendra

Next »

« Previous

ಇಂದಿಗೂ ಮದುವೆಯ ಬ್ಯಾಂಡ್ ಬಾಜಾದಲ್ಲಿ ರಣಧೀರ ಚಿತ್ರದ ಹಾಡು ಬಳಸಿಕೊಳ್ಳುತ್ತಿದ್ದಾರೆ. ಈಗ ಮತ್ತೆ ಅಂತಹದ್ದೇ ಸಾಹಸಕ್ಕೆ ಕೈ ಹಾಕಿದ್ದೀರಾ. ರಣಧೀರ ಚಿತ್ರ ಅದಕ್ಕೆ ಪ್ರೇಮಲೋಕದಲ್ಲಿ ಎಂಬ ಟ್ಯಾಗ್ ಲೈನ್ ಸಹ ಇದೆ. ಇಷ್ಟು ದಿನ ಯಾರಾದರೂ ಪ್ರೇಮಲೋಕ ಎಂದರೆ ಉಗಿದು ಕಳುಹಿಸುತ್ತಿದ್ದೆ. ರಣಧೀರ ಎಂದರೆ ಬೈದು ಕಳುಹಿಸುತ್ತಿದ್ದೆ. ಈ ಎರಡೂ ಚಿತ್ರಗಳು ಇಂಡಸ್ಟ್ರಿಗೆ ಎರಡು ಕಂಬಗಳಿದ್ದಂತೆ. ನನಗೇ ಮಾಡುವುದು ಕಷ್ಟ.

ನನಗೆ ಯಾವಾಗ ಮಾಡ್ತೀನಿ ಎಂದು ನಂಬಿಕೆ ಬಂತೋ, ಆಗಲೇ ರಣಧೀರ ಎಂದು ಟೈಟಲ್ ಇಟ್ಟಿದ್ದು, ಪ್ರೇಮಲೋಕದಲ್ಲಿ ಎಂದು ಕ್ಯಾಪ್ಷನ್ ಕೊಟ್ಟಿದ್ದು. ನಲವತ್ತು ಸಾಂಗ್ ಅದಕ್ಕೆ ಪ್ಲಾನ್ ಮಾಡಿರುವುದು. ನಾನೇ ಕಾಂಪೋಸ್ ಮಾಡುತ್ತಿರುವುದು, ನಾನೇ ಬರೆಯುತ್ತಿರುವುದು. ಇದು ಕಂಪ್ಲೀಟ್ ಆಗಿ ಒನ್ ಮ್ಯಾನ್ ಶೋ. ಈ ಸಿನಿಮಾ ನೋಡಿದರೆ ಎರಡೂ ಸಿನಿಮಾಗಳನ್ನು ನೋಡಿದ ತಾಕತ್ತು, ಅನುಭವ ನಿಮಗೆ ಕೊಟ್ಟೇ ಕೊಡ್ತೀನಿ.

ಪ್ರೇಮಲೋಕದಲ್ಲಿ ಅಂಬರೀಶ್, ವಿಷ್ಣು, ಪ್ರಭಾಕರ್, ಪ್ರಣಯರಾಜ, ಲೋಕೇಶ್ ಎಲ್ಲರನ್ನೂ ಒಂದೇ ಸಿನಿಮಾದಲ್ಲಿ ಮಾಡಿದ್ದಾರೆ ಇದು ಹೇಗೆ ಸಾಧ್ಯವಾಯಿತು? ಎಂದು ಸುದೀಪ್ ಕೇಳಿದ್ದಕ್ಕೆ, ಅಲ್ಲಿದ್ದ ಅಷ್ಟೂ ಜನ ಈಶ್ವರಿ ಪ್ರೊಡಕ್ಷನ್ಸ್ ನಿಂದ ಬಂದವರು. ನಮ್ಮ ತಂದೆಯ ಮೇಲಿನ ಗೌರವ, ಪ್ರೀತಿಗಾಗಿ ಬಂದವರು. ಇವರೆಲ್ಲರ ತೊಡೆ ಮೇಲೆ ಕೂತು ಆಡಿ ಬೆಳೆದವನು ನಾನು. 'ನಾಗರಹಾವು' ಚಿತ್ರದಲ್ಲಿ ನಾನು ಚಿಕ್ಕಹುಡುಗ, ಅಂಬಿ, ವಿಷ್ಣು ಅವರ ಕೈಹಿಡಿದು ಓಡಾಡಿದ್ದೇನೆ.

Ravichandran opinion on todays cinema Bigg Boss Kannada 2

ಇನ್ನು ಲೋಕೇಶ್, ಅಂಬರೀಶ್ ಅವರು ಆಫೀಸಿಗೆ ಬಂದಾಗ ಅವರ ಪಕ್ಕದಲ್ಲಿ ಮುದುರಿ ಕುಳಿತುಕೊಳ್ಳುತ್ತಿದ್ದೆ. ನನ್ನ ಮೇಲೆ ಪ್ರೀತಿ ಇತ್ತು ಎನ್ನುವುದಕ್ಕಿಂತಲೂ ನಮ್ಮ ತಂದೆಯವರ ಮೇಲಿನ ಅಭಿಮಾನಕ್ಕೆ ಬಂದವರು. ಆಗ ಸ್ಪರ್ಧೆಗಿಂತಲೂ ಹೆಚ್ಚಾಗಿ ಒಬ್ಬರ ನಡುವೆ ಒಬ್ಬರಿಗೆ ಅನ್ಯೋನ್ಯತೆ ಇತ್ತು.

ಈ ಹೊತ್ತಿನವರೆಲ್ಲಾ ಮೊದಲು ಗುರಾಯಿಸಿಕೊಂಡೇ ಓಡಾಡುತ್ತಾರೆ. ನೀನಾ ನಾನಾ ಎನ್ನುವವರಿದ್ದಾರೆ. ಸುದೀಪ್ ಇದ್ದರೆ ನಾನ್ ಮಾಡಲ್ಲ ಅಂತಾರೆ, ದರ್ಶನ್ ಇದ್ರೆ ನಾನು ಮಾಡಲ್ಲ ಎನ್ನುವವರು ತುಂಬಾ ಜನ ಇದ್ದಾರೆ. ಈ ರೀತಿಯ ವಾತಾವರಣ ಇಂದು ಸೃಷ್ಟಿಯಾಗಿದೆ.

ಆ ಹೊತ್ತಿಗೂ ಈ ಹೊತ್ತಿಗೂ ಇರುವ ವ್ಯತ್ಯಾಸ ಎಂದರೆ ಆ ಹೊತ್ತು ಸಿನಿಮಾ ಎಂದರೆ ಪ್ರಾಣ ಎಂಬಂತಿತ್ತು. ಈಗ ಇವರನ್ನು ಹಾಕಿಕೊಂಡು ಎಷ್ಟು ದುಡ್ಡು ಮಾಡಬಹುದು ಎಂಬ ಲೆಕ್ಕಾಚಾರ ಇದೆ. ಸ್ಯಾಟಲೈಟ್ ಮಾರಿಬಿಡೋಣ ಎಂದು ಯೋಚಿಸುತ್ತಾರೆ.

Ravichandran opinion on todays cinema Bigg Boss Kannada 2

ಈಗಿನ ಹೀರೋಗಳಿಗೆಲ್ಲಾ ಸ್ಯಾಟಲೈಟ್ ರೈಟ್ಸ್ ಎಂಬುದು ಗ್ಯಾರಂಟಿಯಾಗಿ ಹೋಗಿದೆ. ಆಗ ನಮಗೇನು ಗ್ಯಾರಂಟಿ ಇತ್ತು. ಒಂದೇ ಒಂದು ಪೈಸೆ ಗ್ಯಾರಂಟಿ ಇರಲಿಲ್ಲ. ಪ್ರತಿಯೊಂದು ಪೈಸೆಯನ್ನೂ ಜನ ಕೊಡಬೇಕಾಗಿತ್ತು. ಅವರು ಕೊಟ್ಟರೇನೆ ನಾವು ಮುಂದಕ್ಕೆ ಹೋಗಲು ಸಾಧ್ಯ. ಮನಿ ಮೇಕ್ಸ್ ಬಿಗ್ ಡಿಫರೆನ್ಸ್ ಟುಡೆ.

ಈ ಹೊತ್ತು ಈಶ್ವರಿ ಕಂಪನಿಯಂತಹವು ಕಾಣಿಸುವುದಿಲ್ಲ. ಇದು ಈಶ್ವರಿ ಕಂಪನಿ ಕಣಯ್ಯ, ಇವರು ಸಿನಿಮಾಗಂತಲೇ ಹುಟ್ಟಿದ್ದಾರೆ ಎಂಬಂತಹ ವಾತಾವರಣ ಇಲ್ಲ. ಆದರೆ ಇಂದು ಎಲ್ಲಾ ಸ್ಟಾರ್ಸ್ ಸೇರಿಕೊಂಡು ಸಿನಿಮಾ ಮಾಡುವುದು ಕಷ್ಟ.

ಆಗಿನ ಕಾಲಕ್ಕೆ ಪ್ರೇಮಲೋಕ ಮಾಡಬೇಕಾದರೆ ತುಂಬಾ ಕಷ್ಟ ಇತ್ತು. ನೂರಾರು ಮಂದಿ ಡಾನ್ಸರ್ಸ್, ಪ್ರತಿ ಹಾಡಿಗೂ ಹತ್ತತ್ತು ದಿನ ಬೇಕಾಗಿತ್ತು. ಆದರೆ ನನ್ನ ಬೆನ್ನಹಿಂದೆ ಇದ್ದ ನಮ್ಮಪ್ಪ ಯಾವತ್ತೂ, "ಖರ್ಚು ಮಾಡ್ತಾ ಇದ್ದೀಯ ಕಣೋ, ಹುಷಾರು" ಎಂದು ಹೆದರಿಸಲಿಲ್ಲ. ಅವರು ಕೊಟ್ಟಿದ್ದ ನಂಬಿಕೇನೋ, ಪ್ರೀತಿನೋ ಗೊತ್ತಿಲ್ಲ. ಅದು ಇಲ್ಲಿಯವರೆಗೂ ನನ್ನನ್ನು ಎಳೆದುಕೊಂಡು ಬಂದಿದೆ.

Next »

« Previous

More from Filmibeat

English summary
Crazy Star, Dream Merchant of Sandalwood Ravichandran shares his golden moments with Kichcha Sudeep on Bigg Boss Kannada 2 stage. Ravichandran shares his painful moments, Shanti Kranti debacle, today's film industry many more. Here is the zero in on of 'Sakkat Sunday with Kichcha Sudeep'.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X