ಈ ನಟಿ ಮದುವೆಯಾದಾಗ ರವಿಚಂದ್ರನ್ ಹಾರ್ಟ್ ಬ್ರೇಕ್ ಆಗಿತ್ತಂತೆ!
ಕ್ರೇಜಿ ಸ್ಟಾರ್ ರವಿಚಂದ್ರನ್ ಹುಡುಗಿಯರ ಹಾಟ್ ಫೇವರೇಟ್ ನಟ. ಅಂದು, ಇಂದು ಎಂದೆಂದೂ ಹುಡುಗಿಯರ 'ಪ್ರೇಮಲೋಕ'ದಲ್ಲಿ ರವಿಚಂದ್ರನ್ 'ರಣಧೀರ'.! ಇಂತಹ ದೊಡ್ಡ ನಟನ ಜೊತೆ ಒಂದು ಬಾರಿಯಾದರೂ ನಟಿಸಬೇಕು ಅಂತ ಕನಸು ಕಾಣುವವರು ಅನೇಕರು.
ಹೀಗಿರುವಾಗ ರವಿಚಂದ್ರನ್ ಗೆ ಒಬ್ಬ ನಟಿ ಮೇಲೆ ಸಿಕ್ಕಾಪಟ್ಟೆ ಲವ್ ಆಗಿತ್ತಂತೆ. ಒಂದು ಕಾಲದಲ್ಲಿ ರವಿಚಂದ್ರನ್ ನಿದ್ದೆ ಕದಿದ್ದು ಸಹ ಈ ನಟಿಯೇ ಅಂತೆ. ಅಲ್ಲದೆ ಆ ನಟಿಗೆ ಮದುವೆ ಆದಾಗ ರವಿಚಂದ್ರನ್ ಹಾರ್ಟ್ ಬ್ರೇಕ್ ಆಗಿತ್ತಂತೆ.! ಹಾಗಾದ್ರೆ, ಯಾರು ಆ ನಟಿ ಎಂಬ ಕುತೂಹಲದೊಂದಿಗೆ ಮುಂದೆ ಓದಿ...

ಶ್ರೀದೇವಿ ಅಂದರೆ ಇಷ್ಟ
ಬಾಲಿವುಡ್ ನಟಿ, ಕನಸಿನ ರಾಣಿ ಶ್ರೀ ದೇವಿ ಅವರು ರವಿಚಂದ್ರನ್ ಗೆ ತುಂಬ ಇಷ್ಟ ಆಗುವ ನಟಿ ಅಂತೆ.

ಅವರೇ ಹೇಳಿದ್ರು
'ಸೂಪರ್ ಟಾಕ್ ಟೈಂ' ಕಾರ್ಯಕ್ರಮದಲ್ಲಿ ಸ್ವತಃ ರವಿಚಂದ್ರನ್ ಅವರೇ ತಮಗೆ ಇಷ್ಟವಾದ ನಟಿ ಶ್ರೀದೇವಿ ಅಂತ ಹೇಳಿಕೊಂಡಿದ್ದಾರೆ.

ಹಾರ್ಟ್ ಬ್ರೇಕ್ ಆಗಿತ್ತು
ಅದೇ ಕಾರ್ಯಕ್ರಮದಲ್ಲಿ 'ನಿಮಗೆ ಯಾವ ನಟಿ ಮದುವೆ ಆದಾಗ ಹಾರ್ಟ್ ಬ್ರೇಕ್ ಆಗಿತ್ತು' ಅಂತ ಪ್ರಶ್ನೆ ಕೇಳಿದರೆ, ರವಿಚಂದ್ರನ್, 'ಶ್ರೀದೇವಿ' ಅಂತ ಉತ್ತರಿಸಿದ್ದರು.

ಶ್ರೀದೇವಿ ಮೋಡಿ
ಅದೆಷ್ಟೋ ಹುಡುಗರ ನಿದ್ದೆ ಕೆಡಿಸಿದ್ದ ಶ್ರೀದೇವಿ ಮೋಡಿ ರವಿಚಂದ್ರನ್ ಅವರಿಗೂ ತಟ್ಟದೆ ಬಿಟ್ಟಿಲ್ಲ ನೋಡಿ.


Click it and Unblock the Notifications











