For Quick Alerts
  ALLOW NOTIFICATIONS  
  For Daily Alerts

  ಬಿಗ್‌ ಬಾಸ್‌ಗೆ ಬರ್ತಾರಂತೆ ಮಹಾಲಕ್ಷ್ಮೀ- ರವೀಂದರ್ ಜೋಡಿ

  |

  ಕಿರುತೆರೆ ಕಲಾವಿದರಾಗಲಿ, ಹಿರಿ ತೆರೆ ಕಲಾವಿದರಾಗಲಿ ಸಾಮಾನ್ಯವಾಗಿ ಜನರಿಗೆ ನಟ ನಟಿಯರ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚಿನ ಆಸಕ್ತಿ ಇರುತ್ತದೆ. ಹೀಗಾಗಿ ಅಭಿಮಾನಿಗಳು ತಮ್ಮ ಮೆಚ್ಚಿನ ನಾಯಕ ಹಾಗೂ ನಾಯಕಿಯನ್ನು ಇನ್ಸ್ಟಾಗ್ರಾಮ್‌, ಫೇಸ್‌ಬುಕ್‌ ಸೇರಿದಂತೆ ಇತರ ಸೋಶಿಯಲ್‌ ಮೀಡಿಯಾಗಳಲ್ಲಿ ಫಾಲೋ ಮಾಡುತ್ತಿರುತ್ತಾರೆ.

  ಇನ್ನು ನಟ ಅಥವಾ ನಟಿಯ ಲವ್‌, ಮದುವೆ, ಡೈವೋಸ್‌ ಹೀಗೆ ತೀರಾ ಖಾಸಗಿ ವಿಚಾರ ಬಂದರೆ ಇನ್ನಷ್ಟು ಆಸಕ್ತಿ ಹೆಚ್ಚಾಗುತ್ತದೆ. ನಟ ಅಥವಾ ನಟಿ ಮದುವೆಯಾದರೆ ಸಾಮಾನ್ಯವಾಗಿ ಸುದ್ದಿಯಾಗುತ್ತದೆ. ಆದರೆ ನಟಿ ಮಹಾಲಕ್ಷ್ಮೀ ಹಾಗೂ ನಿರ್ಮಾಪಕ ರವೀಂದರ್‌ ಜೋಡಿ ಮದುವೆಯ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ಬಹು ಚರ್ಚೆಯ ವಿಷಯವಾಗಿತ್ತು. ಅನೇಕರು ಇಂದೊಂದು ಜೋಡಿಯೇ ಅಲ್ಲ ಎಂದು ಕಮೆಂಟ್‌ ಮಾಡಿದ್ದರು.

  ಒಟ್ಟಾರೆ ಜನರಿಂದ ಮಿಸ್‌ ಮ್ಯಾಚ್‌ ಜೋಡಿ ಅಂತಾನೇ ಕರೆಸಿಕೊಂಡಿರುವ ಮಹಾಲಕ್ಷ್ಮೀ ಹಾಗೂ ನಿರ್ಮಾಪಕ ರವೀಂದರ್‌ ದಂಪತಿಯ ಬಗ್ಗೆ ಹೊಸದೊಂದು ವಿಚಾರ ಬೆಳಕಿಗೆ ಬಂದಿದೆ. ಮಹಾಲಕ್ಷ್ಮೀ ಹಾಗೂ ರವೀಂದರ್‌ ಜೋಡಿ ಶೀಘ್ರದಲ್ಲೇ ಕಿರುತೆರೆಯ ಮುಂದೆ ಬರುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ತಮಿಳು ಬಿಗ್‌ ಬಾಸ್‌ ಅಕ್ಟೋಬರ್‌ನಿಂದ ಆರಂಭವಾಗಲಿದ್ದು, ಈ ಬಾರಿಯ ಬಿಗ್ ಬಾಸ್‌ ಸ್ಫರ್ಧಿಗಳಾಗಿ ಮಹಾಲಕ್ಷ್ಮೀ ಹಾಗೂ ನಿರ್ಮಾಪಕ ರವೀಂದರ್‌ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಅಭಿಮಾನಿಗಳು ಬರಲಿ ನಾವು ಕೂಡ ಕಾಯುತ್ತಿದ್ದೇವೆ ಎಂದು ಕಮೆಂಟ್‌ ಮಾಡಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಮಹಾಲಕ್ಷ್ಮೀ ಹಾಗೂ ರವೀಂದರ್‌ ತಾವು ಬಿಗ್‌ ಬಾಸ್‌ಗೆ ತೆರಳುವ ಬಗ್ಗೆ ಸಣ್ಣ ಸುಳಿವು ಬಿಟ್ಟುಕೊಟ್ಟಿದ್ದಾರೆ ಎನ್ನಲಾಗಿದೆ.

  ಮಹಾಲಕ್ಷ್ಮಿ ತಮಿಳು ಧಾರಾವಾಹಿಯಲ್ಲಿ ಚಿರಪರಿಚಿತರು. ಇನ್ನು ರವೀಂದರ್‌ ಕೂಡ ತಮಿಳು ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದು, ಅನೇಕ ಚಿತ್ರಗಳಿಗೆ ಬಂಡವಾಳ ಹಾಕಿದ್ದಾರೆ. ಇನ್ನು ರವೀಂದರ್ ನಿರ್ಮಾಣ ಮಾಡಿರುವ 'ವಿಡಿಯುಂ ವಾರೈ ಕಾಥಿರು' ಚಿತ್ರದಲ್ಲಿ ಮಹಾಲಕ್ಷ್ಮಿ ನಟಿಸಿದ್ದರು. ಇಬ್ಬರು ಒಂದೇ ಕ್ಷೇತ್ರದಲ್ಲಿದ್ದ ಕಾರಣ ಪ್ರೀತಿಸಿ ಮದುವೆಯಾಗಿದ್ದಾರೆ. ಆದರೆ ಮಹಾಲಕ್ಷ್ಮೀ ಹಾಗೂ ರವೀಂದರ್‌ ಸೋಶಿಯಲ್‌ ಮೀಡಿಯಾದಲ್ಲಿ ಮದುವೆ ಭಾರಿ ಸಂಚಲನ ಮೂಡಿಸಿತ್ತು. ಈ ಮದುವೆ ನಿಜವೋ ಇಲ್ಲವೋ ಎನ್ನುವ ಗೊಂದಲ ಕೂಡ ಏರ್ಪಟ್ಟಿತ್ತು. ಬಳಿಕ ಸ್ವತಃ ಮಹಾಲಕ್ಷ್ಮೀ ಹಾಗೂ ರವೀಂದರ್‌ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ್ದರು.

  ಮದುವೆ ಬಳಿಕ ಮಹಾಲಕ್ಷ್ಮೀ ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿದ್ದು, ತಮ್ಮ ಪ್ರೀತಿಯ ಪತಿಯ ಜೊತೆ ಆಗಾಗಾ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ರವೀಂದರ್‌, ಮಹಾಲಕ್ಷ್ಮೀಗೆ ಒಂದು ಕೆ.ಜಿ ಚಿನ್ನ ನೀಡಿದ್ದು, ಈ ಜೋಡಿ ಸದ್ಯ ದೇಶ-ವಿದೇಶ ಎನ್ನುತ್ತಾ ಸುತ್ತಾಡುತ್ತಿದ್ದಾರೆ. ರವೀಂದರ್‌ ಹಾಗೂ ಮಹಾಲಕ್ಷ್ಮೀ ಬಿಗ್‌ ಬಾಸ್‌ಗೆ ಬರುತ್ತಾರೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್‌ ಆಗುತ್ತಿದ್ದು, ಇಬ್ಬರೂ ಬಿಗ್‌ ಬಾಸ್‌ಗೆ ಬರುತ್ತಾರಾ, ಅಥವಾ ಮಹಾಲಕ್ಷ್ಮೀ ಒಬ್ಬರೇ ದೊಡ್ಮನೆಯೊಳಗೆ ಎಂಟ್ರಿ ಕೊಡುತ್ತಾರಾ ಎನ್ನುವ ಕುತೂಹಲ ಎಲ್ಲರಲ್ಲಿದೆ. ಈ ಎಲ್ಲಾ ಊಹಾಪೋಹಗಳಿಗೆ ತಮಿಳಿನ ಅಕ್ಟೋಬರ್‌ನಲ್ಲಿ ಬಿಗ್‌ ಬಾಸ್‌ ಆರಂಭವಾದ ಬಳಿಕವಷ್ಟೇ ತೆರೆ ಬೀಳಬೇಕಿದೆ.

  Read more about: bigg boss tv actor ಟಿವಿ
  English summary
  Producer Ravinder and Actress Mahalakshmi may be contestant of tamil Bigg Boss.
  Saturday, October 1, 2022, 18:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X