'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ರವಿಶಂಕರ್, ಪ್ರೇಮ್
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಈಗ ಕನ್ನಡದ ಮತ್ತಿಬ್ಬರು ನಟರು ಬಂದಿದ್ದಾರೆ. ನಟ ರವಿಶಂಕರ್ ಗೌಡ ಮತ್ತು ನೆನಪಿರಲಿ ಪ್ರೇಮ್ ಶಿವರಾಜ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ರವಿಶಂಕರ್ ಗೌಡ ಮತ್ತು ನೆನಪಿರಲಿ ಪ್ರೇಮ್ ಅವರ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ ಸಂಚಿಕೆಯ ಪ್ರೋಮೋ ಇದೀಗ ಹೊರ ಬಂದಿದೆ. ಶಿವಣ್ಣ ಜೊತೆ ಸೇರಿ ಈ ಇಬ್ಬರು ನಟರು ಸಿಕ್ಕಾಪಟ್ಟೆ ಮಜಾ ಮಾಡಿದ್ದಾರೆ. ಪ್ರತಿವಾರ ಕಾರ್ಯಕ್ರಮದಲ್ಲಿ ಇಬ್ಬರು ಸ್ನೇಹಿತರು ಬರುತ್ತಿದ್ದು, ಈ ವಾರ ಕುಚುಕು ಗೆಳೆಯರಾದ ರವಿಶಂಕರ್ ಗೌಡ ಮತ್ತು ನೆನಪಿರಲಿ ಪ್ರೇಮ್ ಯಾರಿ ಅಡ್ಡದಲ್ಲಿ ಜೊತೆಯಾಗಿದ್ದಾರೆ.

ಈಗಾಗಲೇ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ 9 ಸಂಚಿಕೆಗಳು ಪ್ರಸಾರ ಆಗಿದ್ದು, ಇದು 10ನೇ ಸಂಚಿಕೆ ಆಗಿದೆ. ಈ ಕಾರ್ಯಕ್ರಮ ಇದೇ ಭಾನುವಾರ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗಲಿದೆ.
More from Filmibeat
English summary
Kannada actor Ravishankar gowda and Nenapirali Prem in Star Suvarna's new show 'No1 yari with Shivanna' program.
no1 yari with shivanna ravishankar gowda nenapirali prem shivaraj kumar star suvarna tv ನಂ 1 ಯಾರಿ ವಿತ್ ಶಿವಣ್ಣ ನೆನಪಿರಲಿ ಪ್ರೇಮ್ ಶಿವರಾಜ್ ಕುಮಾರ್ ಸ್ಟಾರ್ ಸುವರ್ಣ ಟಿವಿ


Click it and Unblock the Notifications











