ತಮಿಳು 'ಬಿಗ್ ಬಾಸ್' ಮನೆಗೆ ನುಗ್ಗಿದ ರಿಯಲ್ ಪೊಲೀಸರು: ಇಬ್ಬರು ಸ್ಪರ್ಧಿಗಳ ವಿಚಾರಣೆ

ಸೂಪರ್ ಸ್ಟಾರ್ ಕಮಲ್ ಹಾಸನ್ ನಿರೂಪಣೆ ಮಾಡುತ್ತಿರುವ ತಮಿಳು ಬಿಗ್ ಬಾಸ್ ಶೋ ಮನರಂಜನೆಗಿಂತ ವಿವಾದಕ್ಕೆ ಹೆಚ್ಚು ಸುದ್ದಿ ಮಾಡುತ್ತೆ. ಕಳೆದ ಎರಡು ಆವೃತ್ತಿಗಳಲ್ಲೂ ಇದು ಆಗಿದೆ. ಈಗ ಮೂರನೇ ಆವೃತ್ತಿಯ ಬಿಗ್ ಬಾಸ್ ತಮಿಳಿನಲ್ಲಿ ಆರಂಭವಾಗಿದೆ. ಕಾರ್ಯಕ್ರಮ ಪ್ರಾರಂಭವಾಗಿ ಎರಡು ವಾರಗಳಲ್ಲಿ ನಡೆಯಬಾರದೊಂದು ಘಟನೆ ನಡೆದು ಹೋಗಿದೆ.

ಹೌದು, ಬಿಗ್ ಬಾಸ್ ಮನೆಗೆ ರಿಯಲ್ ಪೊಲೀಸರು ಪ್ರವೇಶ ಮಾಡಿದ್ದು, ಇಬ್ಬರು ಸ್ಪರ್ಧಿಗಳನ್ನ ವಿಚಾರಣೆ ಮಾಡಿದ್ದಾರಂತೆ. ಈ ಆವೃತ್ತಿಯಲ್ಲಿ ಭಾಗವಹಿಸಿರುವ ಇಬ್ಬರು ಸ್ಪರ್ಧಿಗಳಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

ಈ ಉದ್ದೇಶದಿಂದ ಟಿವಿ ರಿಯಾಲಿಟಿ ಶೋ ನಡೆಯುತ್ತಿರುವ ಬಿಗ್ ಬಾಸ್ ಮನೆಗೆ ಪೊಲೀಸರು ನುಗ್ಗಿ ವಿಚಾರಣೆ ನಡೆಸಿದ್ದಾರಂತೆ. ಅಷ್ಟಕ್ಕೂ, ಆ ಇಬ್ಬರು ಸ್ಪರ್ಧಿಗಳು ಯಾರು? ಅವರನ್ನ ಪೊಲೀಸರು ಯಾಕೆ ವಿಚಾರಣೆ ಮಾಡಿದ್ರು? ಯಾವ ಪ್ರಕರಣದಲ್ಲಿ ಇವರ ಹೆಸರುಗಳಿವೆ ಎಂಬುದನ್ನ ತಿಳಿಯಲು ಮುಂದೆ ಓದಿ....

ಕಿಡ್ನಾಪ್ ಪ್ರಕರಣದಲ್ಲಿ ವಿಚಾರಣೆ

ಕಿಡ್ನಾಪ್ ಪ್ರಕರಣದಲ್ಲಿ ವಿಚಾರಣೆ

ದಕ್ಷಿಣ ಭಾರತ ಸಿನಿರಂಗದಲ್ಲಿ ಗುರುತಿಸಿಕೊಂಡಿರುವ ನಟಿ ವನಿತಾ ವಿಜಯ್ ಕುಮಾರ್ ಅವರನ್ನ ಕಿಡ್ನಾಪ್ ಪ್ರಕರಣದಲ್ಲಿ ಪೊಲೀಸರು ಸಾಮಾನ್ಯ ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ತಮ್ಮ ಮಗುವನ್ನ ಕಿಡ್ನಾಪ್ ಮಾಡಿದ್ದರು ಎಂದು ವನಿತಾ ವಿಜಯ್ ಕುಮಾರ್ ಅವರು ತಮ್ಮ ಮಾಜಿ ಪತಿ ಆನಂದ್ ರಾಜ್ ವಿರುದ್ಧ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮಾಡಲಾಗಿದೆ.

ಮಾಜಿ ಪತಿ ವಿರುದ್ಧ ದೂರು

ಮಾಜಿ ಪತಿ ವಿರುದ್ಧ ದೂರು

ಆನಂದ್ ರಾಜನ್ ಅವರ ಜೊತೆಗೆ ವಿವಾಹವಾಗಿದ್ದ ವನಿತಾ ವಿಜಯ್ ಕುಮಾರ್ 2012ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಬಳಿಕ ತಮ್ಮ ಮಗುವನ್ನ ಆನಂದ್ ರಾಜನ್ ಕಿಡ್ನಾಪ್ ಮಾಡಿದ್ದರು ಎಂದು ಆರೋಪಿಸಿ ಮಾಜಿ ಪತಿ ವಿರುದ್ಧ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಲು ಬಿಗ್ ಬಾಸ್ ಸ್ಪರ್ಧಿಯಾಗಿ ಮನೆಗೆ ಹೋಗಿದ್ದ ವನಿತಾ ಅವರನ್ನ ಅಲ್ಲೇ ಹೋಗಿ ವಿಚಾರಣೆ ಮಾಡಿದ್ದಾರಂತೆ ಪೊಲೀಸರು.

ಇನ್ನೊಬ್ಬರು ಮೀರಾ ಮಿಥುನ್

ಇನ್ನೊಬ್ಬರು ಮೀರಾ ಮಿಥುನ್

ವನಿತಾ ವಿಜಯ್ ಕುಮಾರ್ ಜೊತೆಗೆ ಇನ್ನೊಬ್ಬ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿರುವ ಮೀರಾ ಮಿಥುನ್ ಅವರ ವಿರುದ್ಧವೂ ಆರೋಪವಿದೆ. ಈ ಬಗ್ಗೆ ವಿಚಾರಣೆ ಮಾಡಲು ಪೊಲೀಸರು ಬಿಗ್ ಬಾಸ್ ಗೆ ಹೋಗಿದ್ದರು ಎಂದು ತಿಳಿದುಬಂದಿದೆ.

ಮಿಸ್ ಸೌತ್ ಇಂಡಿಯಾ ಲೋಗೋ ದುರ್ಬಳಕೆ

ಮಿಸ್ ಸೌತ್ ಇಂಡಿಯಾ ಲೋಗೋ ದುರ್ಬಳಕೆ

ಡಿಸೈನರ್ ಒಬ್ಬರಿಗೆ 50 ಸಾವಿರ ರೂಪಾಯಿ ವಂಚಿಸಿರುವ ಆರೋಪದಲ್ಲಿ ಮೀರಾ ಮಿಥುನ್ ಸಿಲುಕಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಮಿಸ್ ತಮಿಳುನಾಡು ಎಂಬ ಖಾಸಗಿ ಕಾರ್ಯಕ್ರಮದಲ್ಲಿ ಮಿಸ್ ಸೌತ್ ಇಂಡಿಯಾ ಲೋಗೋ ದುರ್ಬಳಕೆ ಮಾಡಿದ್ದಾರೆ ಎಂದು ಆ ಡಿಸೈನರ್ ಆರೋಪಿಸಿದ್ದಾರೆ.

ಔಟ್ ಅಥವಾ ಇನ್ ನಿರ್ಧಾರವಾಗಬೇಕಿದೆ

ಔಟ್ ಅಥವಾ ಇನ್ ನಿರ್ಧಾರವಾಗಬೇಕಿದೆ

ಈ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಸ್ಪರ್ಧಿಗಳನ್ನ ಪೊಲೀಸರು ವಿಚಾರಣೆ ಮಾಡಿದ್ದಾರೆ. ಹೀಗೆ, ಆರೋಪ ಹೊಂದಿರುವವರನ್ನ ರಿಯಾಲಿಟಿ ಶೋನಲ್ಲಿ ಭಾಗವಹಿಸಿಲು ಅವಕಾಶ ಮಾಡಿಕೊಟ್ಟಿರುವ ವಾಹಿನಿ ವಿರುದ್ಧ ಜನರು ಕಿಡಿಕಾರುತ್ತಿದ್ದಾರೆ. ಹೀಗಾಗಿ, ಇವರಿಬ್ಬರನ್ನ ಬಿಗ್ ಬಾಸ್ ಮನೆಯಲ್ಲಿ ಉಳಿಸಿಕೊಳ್ಳಬೇಕಾ ಅಥವಾ ಮನೆಯಿಂದ ಹೊರ ಕಳುಹಿಸಬೇಕಾ ಎಂಬ ಚರ್ಚೆ ಈಗ ನಡೆಯುತ್ತಿದೆ.

More from Filmibeat

English summary
Bigg boss 3 tamil: Tamilnadu police enter to bigg boss house and they questioned to vanitha vijayakumar and meera mithun for different cases.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X