ಬಡವರಿಗೆ ನೆರವಾದ ಬಿಗ್ ಬಾಸ್ ಸ್ಫರ್ಧಿ ; ಜಾಹ್ನವಿ ಒಳ್ಳೆಯ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

ಬೆಳ್ಳಿತೆರೆ ಇರಲಿ.. ಕಿರುತೆರೆ ಇರಲಿ.. ಸಾಮಾನ್ಯವಾಗಿ ಜನ ಸಾಮಾನ್ಯರ ಕಷ್ಟಕ್ಕೆ ಈ ಬಣ್ಣದ ಪ್ರಪಂಚದವರು ಸ್ಪಂದಿಸುವುದಿಲ್ಲ ಎನ್ನುವ ಅಭಿಪ್ರಾಯ ಅನೇಕರಲ್ಲಿದೆ. ಸದಾ ಕಾಲ ಬಾಡಿಗಾರ್ಡ್‌ಗಳಿಂದ ಸುತ್ತುವರೆಯುವ ಇವರಿಗೆ ಬಡವರ ಕಷ್ಟ-ನಷ್ಟ ಕಣ್ಣಿಗೆ ಕಾಣಿಸುವುದೇ ಇಲ್ಲ. ಈ ಕಾರಣದಿಂದ ಬಣ್ಣದ ಪ್ರಪಂಚದಲ್ಲಿ ಮಾನವೀಯತೆ ಸತ್ತು ಹೋಗಿದೆ ಎಂದೇ ಹಲವರು ಅಂದುಕೊಂಡಿದ್ದಾರೆ. ತೆರೆಯ ಮೇಲಷ್ಟೇ ಅವರು ಹೀರೋ ತೆರೆಯ ಹಿಂದೆ ಅಲ್ಲ ಎಂಬ ಮಾತುಗಳನ್ನು ಆಡುತ್ತಾರೆ.

ಆದರೆ ಇದಕ್ಕೆ ಅಪವಾದ ಎನ್ನುವಂತೆ ಈ ಗ್ಲ್ಯಾಮರ್ ವರ್ಲ್ಡ್‌ನಲ್ಲಿ ಕೆಲವರಲ್ಲಿ ಮಾನವೀಯತೆ ಇನ್ನೂ ಜೀವಂತವಾಗಿದೆ. ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ಸಹಾಯದ ಹಸ್ತವನ್ನು ಕೆಲವರು ಇಲ್ಲಿ ಇನ್ನೂ ಚಾಚುತ್ತಾರೆ. ಬಡವರ ಕಣ್ಣೀರು ಒರೆಸುತ್ತಾರೆ. ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾರೆ. ಉದಾಹರಣೆಗೆ ಜಾಹ್ನವಿ.

Reality Queen to Real-Life Hero Jhanvi s Soul-Stirring Act Beyond the Bigg Boss Stage

ಹೌದು, ಜಾಹ್ನವಿ.. ಮೊನ್ನೆ..ಮೊನ್ನೆಯಷ್ಟೇ ''ಬಿಗ್ ಬಾಸ್'' ಮನೆಯಿಂದ ಹೊರ ಬಂದ ಸ್ಫರ್ಧಿ. ಈ ಬಾರಿ ''ಬಿಗ್ ಬಾಸ್'' ಫಿನಾಲೆ ತಲುಪುವರ ಸಾಲಿನಲ್ಲಿ ಹಲವರ ಪ್ರಕಾರ ಜಾಹ್ನವಿ ಮುಂಚೂಣಿಯಲ್ಲಿದ್ದರು.

ಆದರೆ..ಜಾಹ್ನವಿ ಅದೆಲ್ಲಿ ಎಡವಿದರು ಎನ್ನುವುದು ''ಬಿಗ್ ಬಾಸ್‌''ಗೆ ಗೊತ್ತಾದರೂ ''ಬಿಗ್ ಬಾಸ್'' ಸ್ಫರ್ಧಿ ಎಂಬ ಲೆಬಲ್‌ನ ಹೊರತಾಗಿ ಕನ್ನಡ ಸುದ್ದಿ ಲೋಕದಲ್ಲಿ ನಿರೂಪಕಿಯಾಗಿ ಕೂಡ ಹೆಸರು ಮಾಡಿದವರು ಜಾಹ್ನವಿ. ತಮ್ಮ ಮಾತು ಮತ್ತು ತಮ್ಮ ಜ್ಞಾನದಿಂದಲೇ, ಅತ್ಯಲ್ಪ ಅವಧಿಯಲ್ಲಿಯೇ ಮಾಧ್ಯಮದಲ್ಲಿ ಹೆಸರು ಸಂಪಾದಿಸಿದ ಜಾಹ್ನವಿ ''ಬಿಗ್ ಬಾಸ್'' ಮನೆಯಿಂದ ಹೊರ ಬಂದ ನಂತರ ಸದ್ಯ ಚಿತ್ರರಂಗದತ್ತ ಗಮನ ವಹಿಸಿದ್ದಾರೆ. ಕಿರುತೆರೆಯ ಮೇಲೆ ಕೂಡ ಕಣ್ಣಿಟ್ಟಿದ್ದಾರೆ.

ಇಂಥಾ ಜಾಹ್ನವಿ ಅವರನ್ನು ಹಲವರು ಈ ಹಿಂದೆ ಟ್ರೋಲ್ ಮಾಡಿದ್ದರು. ಕಾಲೆಳೆದಿದ್ದರು. ಆದರೂ ಕೂಡ ತಲೆ ಕೆಡಿಸಿಕೊಳ್ಳದ ಜಾಹ್ನವಿ ಸದ್ಯ ಬಡ ಕುಟುಂಬಕ್ಕೆ ಸಹಾಯದ ಹಸ್ತವನ್ನು ಚಾಚಿದ್ದಾರೆ. ಬೀದಿಬದಿಯಲ್ಲಿ ವಾಸ ಮಾಡುವ ಬಡ ಕುಟುಂಬಗಳ ಗುಡಿಸಲಿಗೆ ಭೇಟಿ ನೀಡಿರುವ ಜಾಹ್ನವಿ, ಅಲ್ಲಿ ಕೆಲ ಹೊತ್ತು ಕಾಲ ಕಳೆದಿದ್ದಾರೆ. ಬಡ ಮಕ್ಕಳನ್ನು ಎತ್ತಿ ಮುದ್ದಾಡಿದ್ದಾರೆ. ಅವರ ಸ್ಥಿತಿಗತಿಗಳನ್ನ ನೋಡಿ ತಮ್ಮ ಕಾರಿನಲ್ಲಿಯೇ ಅವರನ್ನು ಕರೆದುಕೊಂಡು ಹೋಗಿದ್ದಾರೆ.

ಆ ನಂತರ ಅವರಿಗೆ ಬೇಕಾದ ಮತ್ತು ಅಗತ್ಯ ಇರುವ ದಿನಸಿ ಸಾಮಗ್ರಿಗಳನ್ನು ಅವರಿಗೆ ಕೊಡಿಸಿರುವ ಜಾಹ್ನವಿ, ಮರಳಿ ಮತ್ತೆ ಅವರನ್ನು ಅವರ ಗೂಡಿಗೆ ಸೇರಿಸಿದ್ಧಾರೆ. ತಮ್ಮ ಈ ಕೆಲಸದ ಮೂಲಕ ಬಡ ಕುಟುಂಬಗಳ ಮೊಗದಲ್ಲಿ ನಗು ಮೂಡಿಸಿದ್ದಾರೆ.

Reality Queen to Real-Life Hero Jhanvi s Soul-Stirring Act Beyond the Bigg Boss Stage

ತಮ್ಮ ಈ ಕೆಲಸದ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಜಾಹ್ನವಿ, ಇತಿಹಾಸ ಹೇಳುತ್ತದೆ , ಕಳೆದು ಹೋದ ದಿನ ಸುಖವಾಗಿತ್ತು. ವಿಜ್ಞಾನ ಹೇಳುತ್ತದೆ,ನಾಳೆ ಬರುವ ದಿನ ಸುಖವಾಗಿರುತ್ತದೆ . ಆದರೆ ಧರ್ಮ ಹೇಳುತ್ತದೆ,ಸತ್ಯವಾದ ಮನಸ್ಸು ಹಾಗೂ ಸ್ವಚ್ಚವಾದ ಹೃದಯವಿದ್ದರೆ ಪ್ರತಿಕ್ಷಣವೂ ಸುಖಕರವಾಗಿರುತ್ತದೆ.. ಎಂದು ಬರೆದುಕೊಂಡಿದ್ದಾರೆ.

ಸದ್ಯ ಜಾಹ್ನವಿ ಅವರ ಈ ನಡೆ ಹಲವರ ಹೃದಯ ಗೆದ್ದಿದೆ. ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ನಿನ್ನ ಒಳ್ಳೆ ಮನ್ಸು ಈಗ್ಲಾದ್ರೂ ಅರ್ಥ ಆಗ್ಲಿ.. ಆ ದೇವರು ಒಳ್ಳೇದು ಮಾಡ್ಲಿ ನಿಮಗೆ ಹೀಗೆ ಇನ್ನೂ ಹೆಚ್ಚು ಒಳ್ಳೆ ಕೆಲಸ ಮಾಡುವಂತ ಶಕ್ತಿ ಆ ಭಗವಂತ ನಿಮಗೆ ಕೊಡ್ಲಿ ಒಳ್ಳೇದ ಆಗ್ಲಿ ಮೇಡಂ.. ತುಂಬಾ ಖುಷಿ ಆಯ್ತು ಜಾಹ್ನವಿ ಮೇಡಮ್..ನಿಮ್ಮ ಮನಸ್ಸು ತುಂಬಾ ಒಳ್ಳೆಯದು ಇದೇ ತರ ತುಂಬಾ ಒಳ್ಳೆ ಕೆಲಸವನ್ನು ಮಾಡಿ ಆ ದೇವರು ನಿಮಗೆ ಆರೋಗ್ಯ ಆಯಸ್ಸು ಹೆಚ್ಚಾಗಿ ಕೊಡಲಿ..ಒಳ್ಳೆಯ ಕೆಲಸ ಮಾಡ್ತಿದ್ದಿರಾ ಒಳ್ಳೆದಾಗುತ್ತೆ ನಿಮಗೆ ಇದನ್ನೆ ಮುಂದುವರಿಸಿ ಜಾನ್ವಿ.. ಆ ದೇವರು ಒಳ್ಳೇದು ಮಾಡ್ಲಿ ನಿಮಗೆ ಹೀಗೆ ಇನ್ನೂ ಹೆಚ್ಚು ಒಳ್ಳೆ ಕೆಲಸ ಮಾಡುವಂತ ಶಕ್ತಿ ಆ ಭಗವಂತ ನಿಮಗೆ ಕೊಡ್ಲಿ ಒಳ್ಳೇದ ಆಗ್ಲಿ ಮೇಡಂ..ನಮ್ಮ ದೊಡ್ಡವ್ವಗೆ ಉತ್ತರ ಕರ್ನಾಟಕ ಚಪ್ಪಾಳೆ ಗಾಡ್ ಬ್ಲೆಸ್ ಯು ದೊಡ್ಡವ್ವ.. ಎಂದೆಲ್ಲಾ ಹಲವರು ಕಾಮೆಂಟ್‌ಗಳನ್ನು ಮಾಡಿದ್ದಾರೆ.ಕೆಲವರು ಸಹಾಯ ಮಾಡಿ ಆದರೆ ವಿಡಿಯೋ ಮಾಡಬೇಡಿ ಎಂದು ಸಲಹೆಯನ್ನು ಕೂಡ ನೀಡಿದ್ದಾರೆ.

More from Filmibeat

English summary
"Bigg Boss Kannada 12 star Jhanvi makes headlines for a powerful humanitarian act. See how the reality TV sensation is using her platform for good and why fans are applauding her latest noble move. Get the exclusive details on her viral act of kindness."
Read more about: bigg boss jhanvi ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X