twitter
    For Quick Alerts
    ALLOW NOTIFICATIONS  
    For Daily Alerts

    ಕಾಮಿಡಿ ಕಿಲಾಡಿಗಳು ಸೀಸನ್ 4: ಸೀರಿಯಸ್ ಆಗಿದ್ದ ರಾಯಚೂರಿನ ರಾಘವೇಂದ್ರ ಸೆಲೆಕ್ಟ್ ಆಗಿದ್ದೇಕೆ?

    By ಎಸ್ ಸುಮಂತ್
    |

    'ಕಾಮಿಡಿ ಕಿಲಾಡಿಗಳು ಸೀಸನ್ 4' ಈಗ ಅದ್ಧೂರಿಯಾಗಿ ಪ್ರಾರಂಭವಾಗಿದೆ. ಹಲವು ಜಿಲ್ಲೆಗಳಲ್ಲೆಲ್ಲಾ ಆಡಿಷನ್ ಮುಗಿಸಿ, ಕಡೆಗೆ ಪ್ರತಿಭಾವಂತ 16 ಸ್ಪರ್ಧಿಗಳ ಆಯ್ಕೆ ಮಾಡಲಾಗಿದೆ. ಈ ವಾರದಿಂದ ಕಾಮಿಡಿ ಕಿಲಾಡಿಗಳು ಶೋ ಶುರುವಾಗಿದೆ. ಮೊದಲಿನಂತೆ ಯೋಗರಾಜ್ ಭಟ್, ರಕ್ಷಿತಾ, ಜಗ್ಗೇಶ್ ತೀರ್ಪುಗಾರರಾಗಿ ಮನರಂಜನೆ ನೀಡುತ್ತಿದ್ದಾರೆ. ಆದರೆಬೀ ಬಾರಿ ಆಯ್ಕೆಯಾಗಿರುವ ಕಲಾವಿದರು ಎಲ್ಲರ ಗಮನ ಸೆಳೆಯುತ್ತಿದ್ದಾರೆ.

    ಜೀ ಕನ್ನಡ ಕೆಲವು ರಿಯಾಲಿಟಿ ಶೋಗಳಿಗೆ ಬ್ರಾಂಡ್ ಆಗಿದೆ. ಕಾಮಿಡಿ ಕಿಲಾಡಿಗಳು, ಡಿಕೆಡಿ, ಸರಿಗಮಪದಂತಹ ಶೋಗಳನ್ನು ಮನರಂಜನೆ ನೀಡುವುದರ ಜೊತೆಗೆ ಪ್ರತಿಭೆಗಳಿಗೂ ಅವಕಾಶ ನೀಡುತ್ತದೆ. ಅದೆಷ್ಟೋ ಪ್ರತಿಭೆಗಳು ಈ ವೇದಿಕೆಯಿಂದಾನೇ ಅವಕಾಶ ಪಡೆದಿದ್ದಾರೆ. ಇದೀಗ ಸೀಸನ್ 4 ರಲ್ಲೂ ಹೊಸ ಹೊಸ ರೀತಿಯ ಪ್ರತಿಭೆಗಳ ಅನಾವರಣವಾಗಿದೆ. ನಗಿಸುವಾಗ ಎಷ್ಟು ಸೀರಿಯಸ್ ಆಗಿದ್ರೆ ನಗು ಹೆಚ್ಚಾಗುತ್ತೆ ಎಂಬುದನ್ನು ಇವತ್ತು ಪ್ರೂವ್ ಮಾಡಿದ್ದು, ರಾಘವೇಂದ್ರ.

    ಕಾಮಿಡಿ ಕಿಲಾಡಿಗಳ ಕಂಟೆಸ್ಟೆಂಟ್ ಲಿಸ್ಟ್

    ಕಾಮಿಡಿ ಕಿಲಾಡಿಗಳ ಕಂಟೆಸ್ಟೆಂಟ್ ಲಿಸ್ಟ್

    ಕಾಮಿಡಿ ಕಿಲಾಡಿಗಳು ಸೀಸನ್ 4 ಆರಂಭವಾಗಿದೆ. ಹಲವು ಕ್ಷೇತ್ರದಲ್ಲಿ, ಹಲವು ಹಳ್ಳಿಗಳಲ್ಲಿ ಎಲೆ ಮರೆ ಕಾಯಿಯಂತೆ ಇದ್ದವರು ಆಯ್ಕೆಯಾಗಿದ್ದಾರೆ. ನಿಜವಾದ ಪ್ರತಿಭೆಗಳ ಪರಿಚಯವಾಗಿದೆ. ಅದರಲ್ಲಿ ರಾಯಚೂರಿನಿಂದ ರಾಘವೇಂದ್ರ, ಮಳವಳ್ಳಿಯಿಂದ ಗಿಲ್ಲಿ ನಟರಾಜ, ಹಿರಿಯೂರಿನ ಹರೀಶ್, ಉಡುಪಿಯ ರಾಧೆಶ್ ಶೆಣೈ ಸೇರಿದಂತೆ ನಕ್ಕು ನಗಿಸಲು ಹಲವಾರು ಅಭ್ಯರ್ಥಿಗಳು ಬಂದಿದ್ದಾರೆ. ನಗುವಿನಲ್ಲೇ ಅರಮನೆ ಕಟ್ಟುತ್ತಿದ್ದಾರೆ.

    ಜೈಲಿಗೆ ಹೋಗುತ್ತಾಳಾ ಅನು ಸಿರಿಮನೆ? ವರ್ಕೌಟ್ ಆಗುತ್ತಾ ಝೇಂಡೇ ಪ್ಲ್ಯಾನ್?ಜೈಲಿಗೆ ಹೋಗುತ್ತಾಳಾ ಅನು ಸಿರಿಮನೆ? ವರ್ಕೌಟ್ ಆಗುತ್ತಾ ಝೇಂಡೇ ಪ್ಲ್ಯಾನ್?

    ಮಕ್ಕಳ ಜೀವನದ ಬಗ್ಗೆ ಪರಿಚಯ

    ಮಕ್ಕಳ ಜೀವನದ ಬಗ್ಗೆ ಪರಿಚಯ

    ಮನುಷ್ಯವೆಲ್ಲಿ ಎಡವುತ್ತಿದ್ದೇವೆ ಎಂಬುದನ್ನು ಕಾಮಿಡಿ ಮೂಲಕ ಸಾಬೀತು ಪಡಿಸಬಹುದು. ಮನುಷ್ಯನ ಜೀವನ ಎಷ್ಟು ಕೆಟ್ಟ ಸ್ಥಿತಿಗೆ ತಲುಪಿದೆ ಎಂಬುದನ್ನು ಕಾಮಿಡಿ ಮೂಲಕ ಅರಿವು ಮೂಡಿಸಬಹುದು. ಇದೀಗ ರಾಯಚೂರಿನ ಪ್ರತಿಭೆ ಅದನ್ನೇ ಮಾಡಿದ್ದಾರೆ. ರಾಘವೇಂದ್ರ ಜಡ್ಜ್‌ಗಳ ಮುಂದೆ ಒಂದು ಪ್ರದರ್ಶನ ನೀಡಿದ್ದಾರೆ. ಅದರಲ್ಲಿ ಮಕ್ಕಳನ್ನು ನಾವೂ ಹೇಗೆ ಬೆಳೆಸುತ್ತಿದ್ದೀವಿ ಎಂಬುದನ್ನು ಹೇಳಿದ್ದಾರೆ. ಅದು ಪ್ರತಿಯೊಬ್ಬ ಪೋಷಕರಿಗೂ ತುಂಬಾ ಮುಖ್ಯವಾದದ್ದಾಗಿದೆ. ದಿನವಿಡಿ ಮಕ್ಕಳನ್ನು ಯಾವೆಲ್ಲಾ ರೀತಿ ಬೆಳೆಸುತ್ತಿದ್ದೀವಿ ಎಂಬುದನ್ನು ಹೇಳಿದ್ದಾರೆ.

    ರಾಘವೇಂದ್ರ ಸೀರಿಯಸ್ ಕಾಮಿಡಿಗೆ ಚಪ್ಪಾಳೆ

    ರಾಘವೇಂದ್ರ ಸೀರಿಯಸ್ ಕಾಮಿಡಿಗೆ ಚಪ್ಪಾಳೆ

    ಈ ಹಿಂದೆಲ್ಲಾ ಮಕ್ಕಳ ಬಾಲ್ಯದ ದಿನಗಳು ತುಂಬಾ ಅದ್ಭುತವಾಗಿ ಇರುತ್ತಿತ್ತು. ಸ್ಕೂಲ್ ಮುಗಿದ ಕೂಡಲೇ ಆಟ, ತುಂಟಾಟ ಇರುತ್ತಿತ್ತು. ಹೋಂ ವರ್ಕ್, ಸ್ಟೇಟಸ್ ಎಂಬುದು ಮಕ್ಕಳ ಬಾಲ್ಯವನ್ನು ಕಿತ್ತುಕೊಂಡಿರಲಿಲ್ಲ. ಆದರೆ ಈಗ ಹೇಗಾಗಿದೆ ಎಂದರೆ ಮಕ್ಕಳಿಗೆ ಬಾಲ್ಯದಲ್ಲಿ ತಲೆ ತುಂಬೆಲ್ಲಾ ಕೆಲಸ ಜಾಸ್ತಿಯಾಗಿದೆ. ಮಕ್ಕಳನ್ನು ಜೀನಿಯಸ್ ಮಾಡಲೇಬೇಕೆಂಬುದು ಪೋಷಕರ ಹಠವಾಗಿರುತ್ತದೆ. ಅದಕ್ಕಾಗಿಯೇ ಸೋಮವಾರದಿಂದ ಶುರುವಾದ ಕೆಲಸಗಳು ಭಾನುವಾರವು ನಿಂತಿರುವುದಿಲ್ಲ. ಸೋಮವಾರ ಕ್ಲಾಸ್, ಮಂಗಳವಾರ ಸಂಗೀತ, ಬುಧವಾರ ಕ್ರಿಕೆಟ್, ಗುರುವಾರ ಭರತನಾಟ್ಯ. ಹೀಗೆ ವಾರಪೂರ್ತಿ ಬ್ಯುಸಿ ಮಾಡಿ ಬಿಡುತ್ತಾರೆ ಎಂಬುದನ್ನು ರಾಘವೆಂದ್ರ ಕಾಮಿಡಿ ಮೂಲಕ ಸಾರಿದ್ದಾರೆ.

    ತೀರ್ಪುಗಾರರಿಂದ ಮೆಚ್ಚುಗೆ

    ತೀರ್ಪುಗಾರರಿಂದ ಮೆಚ್ಚುಗೆ

    ಸದ್ಯದ ಸ್ಥಿತಿಯೂ ಇರುವುದೇ ಹೀಗೆ. ಎಲ್ಲಾ ಪೋಷಕರಿಗೂ ಮಕ್ಕಳಿಗಿಂತ ಹೆಚ್ವು ಸ್ಪರ್ಧೆ ಆರಂಭವಾಗಿದೆ. ಮಕ್ಕಳು ಹೋಂ ವರ್ಕ್ ಮಾಡದೆ ಇದ್ದರು ಅದು ಪೋಷಕರ ಟೆನ್ಶನ್ ಆಗಿರುತ್ತೆ. ಫ್ರೆಂಡ್ಸ್ ಮಗನಿಗಿಂತಲೂ ನನ್ನ ಮಕ್ಕಳು ಚೆನ್ನಾಗಿ ಓದಬೇಕು ಅಂತಾರೆ. ಬೇರೆ ಮಕ್ಕಳಿಗಿಂತ ನನ್ನ ಮಕ್ಕಳು ಎಲ್ಲದರಲ್ಲೂ ಚೆನ್ನಾಗಿರಬೇಕು ಅಂತ, ಮಕ್ಕಳ ಬಾಲ್ಯವನ್ನು ಓದು, ಡ್ಯಾನ್ಸ್, ಸಂಗೀತ ಅಂತ ಬ್ಯುಸಿ ಮಾಡಿಬಿಡುತ್ತಾರೆ. ಇದನ್ನು ತೋರಿಸಿಕೊಟ್ಟ ರಾಘವೇಂದ್ರಗೆ ತೀರ್ಪುಗಾರರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

    English summary
    Reality Show Comedy Kiladigalu Season 4 Contestant Raghavendra From Raichur. Here is the details.
    Sunday, September 18, 2022, 18:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X