For Quick Alerts
  ALLOW NOTIFICATIONS  
  For Daily Alerts

  ದಿವ್ಯಾ ಉರುಡುಗ ಆರೋಗ್ಯದ ಮಾಹಿತಿ ನೀಡಿದ ಸಹೋದರ

  |

  ನಟಿ ದಿವ್ಯಾ ಉರುಡುಗ ಅವರು ಆರೋಗ್ಯ ಸಮಸ್ಯೆಯಿಂದಾಗಿ ರಿಯಾಲಿಟಿ ಶೋನಿಂದ ಹೊರಗೆ ಬಂದು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

  ಬಿಗ್‌ಬಾಸ್ ಶೋನಲ್ಲಿ ಸ್ಪರ್ಧಿಯಾಗಿದ್ದ ದಿವ್ಯಾ ಅವರಿಗೆ ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಕಳೆದ ವಾರಾಂತ್ಯದಲ್ಲಿ ಸುದೀಪ್ ಅವರು ಆಡಿಯೋ ಸಂದೇಶ ನೀಡಿದ್ದಾಗಲೂ ಸಹ ದಿವ್ಯಾ ಅವರಿಗೆ ಆರೋಗ್ಯವನ್ನು ಜಾಗೃತೆಯಾಗಿ ನೋಡಿಕೊಳ್ಳುವಂತೆ ಹೇಳಿದ್ದರು.

  ಇದೀಗ ದಿವ್ಯಾ ಅವರಿಗೆ ಆರೋಗ್ಯ ಸಮಸ್ಯೆ ಹೆಚ್ಚಾದ ಕಾರಣ ಅವರು ಶೋ ನಿಂದ ಹೊರಗೆ ಬಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ದಿವ್ಯಾ ಅವರಿಗೆ 'ಯೂರಿನರಿ ಟ್ರ್ಯಾಕ್ ಇನ್‌ಫೆಕ್ಷನ್ ಆಗಿದೆ' ಎಂದು ಬಿಗ್‌ಬಾಸ್ ಸ್ಪರ್ಧಿಗಳಿಗೆ ಮಾಹಿತಿ ನೀಡಲಾಗಿದೆ. ಅವರಿಗೆ ಸ್ಕ್ಯಾನ್ ಹಾಗೂ ಇತರೆ ಚಿಕಿತ್ಸೆಯ ಅಗತ್ಯವಿದೆ ಎಂದು ಸ್ಪರ್ಧಿಗಳಿಗೆ ಮಾಹಿತಿ ನೀಡಲಾಗಿತ್ತು.

  ಇದೀಗ ದಿವ್ಯಾ ಉರುಡುಗ ಅವರ ಸಹೋದರ ಮಾಧ್ಯಮವೊಂದಕ್ಕೆ ಹೇಳಿರುವಂತೆ ದಿವ್ಯಾ ಉರುಡುಗ ಆರೋಗ್ಯವಾಗಿದ್ದಾರೆ. ಅವರು ಚೇತರಿಸಿಕೊಂಡಿದ್ದಾರೆ. ಆದರೆ ಅವರು ಶೋಗೆ ಹಿಂದಿರುಗುತ್ತಾರೆಯೋ ಇಲ್ಲವೋ ಎಂಬುದು ಖಾತ್ರಿಯಾಗಿಲ್ಲ.

  ಶಕೀಲಾ ಬಾಳಲ್ಲಿ 15 ಜನ ಪುರುಷರು ಬಂದು ಹೋದರು,ಆದ್ರೆ... | Filmibeat Kannada

  ದಿವ್ಯಾ ಉರುಡುಗ ನಿರ್ಗಮನದಿಂದ ಮನೆಯ ಮಂದಿ ಬೇಸರಗೊಂಡಿದ್ದಾರೆ. ಅದರಲ್ಲಿಯೂ ದಿವ್ಯಾ ಜೊತೆಗೆ ತೀವ್ರ ಆಪ್ತತೆ ಹೊಂದಿದ ಅರವಿಂದ್ ಅಂತೂ ಬಿಕ್ಕಿ-ಬಿಕ್ಕಿ ಅಳುತ್ತಿದ್ದಾರೆ.

  English summary
  Reality show participant Divya Uruduga is hospitalized due to illness. Her brother said that she is fine now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X