ಮೆಗಾ ಆಡಿಷನ್‌ಗೆ ಸಜ್ಜಾಯ್ತು ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19ರ ವೇದಿಕೆ
ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ.. ಯಾವ ಜನ್ಮದ ಮೈತ್ರಿಯೋ.. ಎಂದು ಒಂದಾದ ಮೇಲೆ ಒಂದು ಇಂಪಾದ ಹಾಡುಗಳನ್ನು ಇನ್ಮುಂದೆ ಎಲ್ಲರೂ ಕೇಳಬಹುದು. ವೀಕೆಂಡ್ ನಲ್ಲಿ ಕಾಮಿಡಿಗೇನು ಕಡಿಮೆ ಇರಲಿಲ್ಲ. ಮನರಂಜನೆಗೂ ಕೊರತೆ ಇರಲಿಲ್ಲ.
ಆದರೆ ಮುದ್ದು ಕಂಠದಿಂದ ಎಲ್ಲರ ನೆಚ್ಚಿನ ಹಾಡುಗಳನ್ನು ಕೇಳಲು ಆಗುತ್ತಿರಲಿಲ್ಲ. ಆದರೆ ಇದೀಗ ಎಲ್ಲರ ಮೆಚ್ಚಿನ ರಿಯಾಲಿಟಿ ಶೋ ಸರಿಗಮಪ ಲಿಟಲ್ ಚಾಂಪ್ಸ್ ಶುರುವಾಗಲಿದೆ. ಇದು ಜೀ ಕನ್ನಡ ವಾಹಿನಿಯ ಪ್ರೇಕ್ಷಕರಿಗೆ ರಸದೌತಣ ಬಡಿಸಲಿದೆ.
ಜೀ ಕನ್ನಡ ವಾಹಿನಿ ಮುದ್ದಾಗಿ ಹಾಡುವ ಮಕ್ಕಳ ಆಡಿಷನ್ ಗೆ ಸಿದ್ಧತೆಯನ್ನೂ ಮಾಡಿಕೊಂಡಿದೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಸುತ್ತು ಹಾಕಿ ಪ್ರತಿಭೆಗಳನ್ನು ಹೆಕ್ಕಿ ತಂದಿದೆ. ನಾಳೆಯಿಂದಲೇ ಮಕ್ಕಳ ಮೆಗಾ-ಆಡಿಷನ್ ಶುರುವಾಗಲಿದೆ.

ಮಕ್ಕಳ ಕಂಠದಿಂದ ಸುಮಧುರ ಹಾಡುಗಳು
ಸರಿಗಮಪ ಲಿಟಲ್ ಚಾಂಪ್ಸ್ ರಿಯಾಲಿಟಿ ಶೋಗಾಗಿ ಕಾಯುತ್ತಿದ್ದ ಪ್ರೇಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಸಿಕ್ಕಾಪಟ್ಟೆ ಹಿಟ್ ಆದ ಈ ಶೋನ ಸೀಸನ್ 19 ನಾಳೆಯಿಂದ ಶುರುವಾಗುತ್ತಿದೆ. ಈಗಾಗಲೇ ಬರೋಬ್ಬರಿ 18 ಸೀಸನ್ ಗಳು ಪ್ರಸಾರಗೊಂಡಿವೆ. ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಆಡಿಷನ್ ನಡೆಸಿ, ಪುಟಾಣಿಗಳ ಕಂಠದಿಂದ ಸುಮಧುರ ಹಾಡುಗಳನ್ನು ಹಾಡಿಸಿ ಪ್ರೇಕ್ಷಕರ ಕಿವಿ ತಂಪಾಗಿಸುವ ಈ ಶೋ ಎಲ್ಲರ ನೆಚ್ಚಿನ ಕಾರ್ಯಕ್ರಮ. ಉತ್ತಮ ಗಾಯಕ ಪ್ರತಿಭೆಗಳನ್ನು ವಾಹಿನಿ ಆಯ್ಕೆ ಮಾಡಿ, ಸರಿಗಮಪ ಲಿಟಲ್ ಚಾಂಪ್ಸ್ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ.

ಪುಟಾಣಿ ಪ್ರತಿಭೆಗಳಿಗೆ ವೇದಿಕೆ
ಎರಡು ತಿಂಗಳ ಹಿಂದೆಯೇ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ಆಡಿಷನ್ ಕರೆ ನೀಡಲಾಗಿತ್ತು. ಕರ್ನಾಟಕದ ಎಲ್ಲಾ ರಾಜ್ಯಗಳಲ್ಲೂ ಆಡಿಷನ್ ನಡೆಸಿದ ಜೀ ವಾಹಿನಿ, ಸಾವಿರಾರು ಮಕ್ಕಳಲ್ಲಿ 100 ಮಕ್ಕಳನ್ನು ಆಯ್ಕೆ ಮಾಡಿದೆ. ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ ಒಂದರಿಂದ ಶುರುವಾದ ಈ ಕಾರ್ಯಕ್ರಮ ಇಂದಿಗೂ ಮುಂದುವರೆದುಕೊಂಡು ಬಂದಿದೆ. ಕಳೆದ 18 ಸೀಸನ್ ಗಳಲ್ಲಿ ಸಾಕಷ್ಟು ಪ್ರತಿಭೆಗಳನ್ನು ವಾಹಿನಿ ಹೊರ ತಂದಿದೆ. ಮತ್ತೆ ಸರಗಮಪ ಲಿಟಲ್ ಚಾಂಪ್ಸ್ ನಾಳೆಯಿಂದ ಆರಂಭವಾಗಲಿದ್ದು, ಜೀ ಕನ್ನಡ ವಾಹಿನಿ ಪುಟಾಣಿಗಳಿಗೆ ಅದ್ಧೂರಿ ಸ್ವಾಗತ ಕೋರಿದೆ.

ಮೆಗಾ ಆಡಿಷನ್ ನಲ್ಲಿ 100 ಪುಟಾಣಿಗಳು
ನಾಳೆಯಿಂದ ಶುರುವಾಗುವ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19ರಲ್ಲಿ 4 ರಿಂದ 15 ವಯಸ್ಸಿನ ಮಕ್ಕಳು ಇರಲಿದ್ದಾರೆ. ಬೇರೆ ಬೇರೆ ಹಿನ್ನಲೆಯುಳ್ಳ ಪುಟಾಣಿಗಳು ಆಯ್ಕೆಯಾಗಿದ್ದಾರೆ. ಮೈಸೂರು, ಶಿವಮೊಗ್ಗ, ವಿಜಯಪುರ, ಬೆಂಗಳೂರು, ಉಡುಪಿ, ಹುಬ್ಬಳ್ಳಿಯಲ್ಲಿ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಆಡಿಷನ್ ಮಾಡಲಾಗಿದ್ದು, ಈ ಬಾರಿ ಮೆಗಾ ಆಡಿಷನ್ ವೇದಿಕೆಯಲ್ಲಿ 100 ಪುಟಾಣೀಗಳು ಹಾಡಲಿದ್ದಾರೆ. ಆಯ್ಕೆ ಆಗುವ ಮಕ್ಕಳು, ಸೀಸನ್ 19ರಲ್ಲಿ ಮಿಂಚಲಿದ್ದಾರೆ.

ಜಡ್ಜ್ ಆಗಿ ಮುಂದುವರಿದ ಜೋಡಿಗಳು
ಈ ಬಾರಿಯೂ ಸರಿಗಮಪ ಲಿಟಲ್ ಚಾಂಪ್ಸ್ ನ ಆಂಕರಿಂಗ್ ಅನ್ನು ಅನುಶ್ರೀ ಅವರೇ ಮಾಡಲಿದ್ದಾರೆ. ನಾಳೆ ನಡೆಯುವ ಮೆಗಾ ಆಡಿಷನ್ ನಲ್ಲಿ ಆಯ್ಕೆ ಆಗುವ ಮಕ್ಕಳು ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ರಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಕಾರ್ಯಕ್ರಮದ ಸಾರಥ್ಯವನ್ನು ಮಹಾಗುರುಗಳಾದ, ನಾದಬ್ರಹ್ಮ ಹಂಸಲೇಖ ಅವರು ಮುನ್ನೆಡಸಲಿದ್ದಾರೆ. ಇನ್ನು ತೀರ್ಪುಗಾರರ ಸ್ಥಾನವನ್ನು ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಇಬ್ಬರು ಅಲಂಕರಿಸಲಿದ್ದಾರೆ. ನಾಳಿನ ಕಾರ್ಯಕ್ರಮದಲ್ಲಿ ಅಪ್ಪುಗಾಗಿ ಮೂರು ಜನರೇಷನ್ ನವರೆಲ್ಲಾ ಸೇರಿ ವೇದಿಕೆ ಮೇಲೆ ಒಟ್ಟಿಗೆ ಹಾಡುಗಳನ್ನು ಹಾಡಲಿದ್ದಾರೆ.


Click it and Unblock the Notifications











