ಗಾಯಕಿ ರೆಮೋ ಪುತ್ರಿ ಎಸ್‌ಎಸ್‌ಎಲ್‌ಸಿಯಲ್ಲಿ ಪಡೆದ ಅಂಕ ಎಷ್ಟು? ಪುತ್ರಿ ಸಾಧನೆ ಖುಷಿ ಪಟ್ಟ ಅಮ್ಮ!
ಎಸ್ಎಸ್ಎಲ್ಸಿ ಪರೀಕ್ಷೆ ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರಮುಖ ಘಟ್ಟ. ತಮ್ಮ ಮಕ್ಕಳು ಎಸ್‌ಎಸ್‌ಎಲ್‌ಸಿಯಲ್ಲಿ ಎಷ್ಟು ಅಂಕ ಗಳಿಸುತ್ತಾರೆ? ಅವರ ಮುಂದಿನ ಭವಿಷ್ಯ ಹೇಗಿರುತ್ತೋ ಎಂದು ಪೋಷಕರು ಆತಂಕದಲ್ಲಿರುತ್ತಾರೆ. ಅಂತಯೇ ಬಣ್ಣ ಲೋಕದಲ್ಲೂ ಮಕ್ಕಳಿಗಾಗಿ ದುಡಿಯುತ್ತಿರುವವರಿಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ತುಂಬಾನೇ ಮುಖ್ಯ ಆಗಿದೆ. ಕಿರುತೆರೆಯಲ್ಲಿ ಫೇಮಸ್ ಪರ್ಸನಾಲಿಟಿ ಹಾಗೂ ಗಾಯಕಿ ರೆಮೋ ಪುತ್ರಿ ಕೂಡ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಪಡೆದುಕೊಂಡಿದ್ದಾರೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಇತ್ತೀಚೆಗಷ್ಟೇ ಪ್ರಕಟಗೊಂಡಿದೆ. ಈ ಬಾರಿ ರಾಜ್ಯದಲ್ಲಿ ಉತ್ತಮ ಫಲಿತಾಂಶ ಬಂದಿದ್ದು, ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ಕಳೆದೊಂದು ವಾರದಿಂದ ಉತ್ತಮ ಅಂಕ ಪಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಹಾಗೂ ಅವರ ಮಕ್ಕಳ ಸಂಭ್ರಮ ಮುಗಿಲು ಮುಟ್ಟಿದೆ. ಅಂತೆಯೇ ಗಾಯಕಿ ರೆಮೋ ಹಾಗೂ ಅವರ ಪುತ್ರಿ ಮೇಧಿನಿ ಕೂಡ ಫುಲ್ ಖುಷಿಯಾಗಿದ್ದಾರೆ.

ರೆಮೋ ಪುತ್ರಿ ಪಡೆದ ಅಂಕವೆಷ್ಟು?
ರೆಮೋ ಇಷ್ಟು ದಿನ ಕಾಮಿಡಿ ಹಾಗೂ ರಿಯಾಲಿಟಿ ಶೋಗಳಲ್ಲಿ ಜನರನ್ನು ರಂಜಿಸಿದ್ದಾರೆ. ಕಿರುತೆರೆ ವೀಕ್ಷಕರನ್ನು ಗಾಯನದಿಂದ ಹಾಗೂ ಹಾಸ್ಯದಿಂದ ರಂಜಿಸಿದ್ದವರು ಕಳೆದೊಂದು ವಾರದಿಂದ ಫುಲ್ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಪುತ್ರಿ ಎಸ್‌ಎಸ್‌ಎಲ್‌ಸಿಯಲ್ಲಿ ಪಡೆದ ಅಂಕಗಳು. ಹೌದು, ರೆಮೋ ಪುತ್ರಿ ಮೇಧಿನಿ ಈ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದು, ಶೇ. 87ರಷ್ಟು ಅಂಕ ಗಳಿಸಿದ್ದಾರೆ. ಮಗಳು ಈ ಸಾಧನೆಗೆ ರೆಮೋ (ರೇಖಾ ಮೋಹನ್) ಫುಲ್ ಖುಷಿಯಾಗಿದ್ದಾರೆ.

ಮಗಳಿಗೆ ರೆಮೋ ಹೇಳಿದ್ದೇನು?
ಮೇಧಿನಿ ಸಾಧನೆಗೆ ರೆಮೋ ಆರು ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. " ನನ್ನ ವಜ್ರ ನೀನು. ಇಂದು ನಾನು ಹೆಮ್ಮೆ ಪಡುವಂತೆ ಮಾಡಿದ್ದೀಯಾ. ನೀನು 10ನೇ ತರಗತಿಯಲ್ಲಿ ಶೇ.87ರಷ್ಟು ಅಂಕಗಳಿಸಿದ್ದು ನನಗೆ ಜಗತ್ತನ್ನೇ ಗೆದ್ದಂತಾಗಿದೆ. ಯಾರ ಜೀವನವೂ ಸುಲಭವಾಗಿರಲ್ಲ. ಅಂತೆಯೇ ನಮ್ಮ ಬದುಕು ಕೂಡ ಸುಲಭ ಆಗಿರಲಿಲ್ಲ. ಡಾರ್ಲಿಂಗ್ ನಿನ್ನ ಕಠಿಣ ಪರಿಶ್ರಮದಿಂದ ನಿನಗೆ ಫಲ ಸಿಕ್ಕಿದೆ. ನಿನ್ನ ಮೊದಲ ಗೆಲುವು ನಿನ್ನ ಕನಸುಗಳನ್ನು ನನಸಾಗಿಸಲು ಸ್ವಾಗತ ಕೋರುತ್ತಿದೆ." ಮಗಳಿಗೆ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದರು.

ಮಧೀನಿಗೆ ಶುಭಾಶಯಗಳ ಮಹಾಪೂರ
ರೆಮೋ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಕಿರುತೆರೆ ಸೆಲೆಬ್ರೆಟಿಗಳು ಶುಭಕೋರಿದ್ದಾರೆ. ಕಿರುತೆರೆ ನಟಿ ಶಾಲಿನಿ, ಗಾಯಕಿ ವಾಣಿ ಹರಿಕೃಷ್ಣ, ನಟಿ ಶ್ವೇತಾ ಸೇರಿದಂತೆ ಹಲವು ಮಂದಿ ಶುಭಕೋರಿದ್ದಾರೆ. ಅಮ್ಮನ ಪ್ರೋತ್ಸಾಹಕ್ಕೆ, ಮಗಳ ಸಾಧನೆಯನ್ನು ಹೊಗಳಿ ಕೊಂಡಾಡಿದ್ದಾರೆ.

ಮಹತಿ ಸಾಧನೆ ಮೆಚ್ಚಿದ ಫ್ಯಾನ್ಸ್
ಮಹತಿ ವೈಷ್ಣವಿ ಭಟ್ ಓದುತ್ತಲೇ ಧಾರಾವಾಹಿಯಲ್ಲೂ ನಟಸಿದ್ದರು. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಮಹತಿ ಕೊನೆಯ ತಂಗಿಯ ಪಾತ್ರವನ್ನು ನಿಭಾಯಿಸುತ್ತಿದ್ದರು. ಆದರೆ ಕೆಲವು ದಿನಗಳಿಂದ ಮಹತಿ ಪಾತ್ರಧಾರಿ ಕಾಣಿಸುತ್ತಿರಲಿಲ್ಲ. ಅದಕ್ಕೆ ಕಾರಣ ಮಹತಿಯ ಪರೀಕ್ಷೆಯಾಗಿತ್ತು. ಸದ್ಯ ಪರೀಕ್ಷೆಯೂ ಮುಗಿದು, ಫಲಿತಾಂಶವೂ ಬಂದಿದೆ. ಮಹತಿ ಕೂಡ ಶೇ.99ರಷ್ಟು ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.


Click it and Unblock the Notifications











