'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಜಗ್ಗಪ್ಪ-ಸುಶ್ಮಿತಾ ವಿಚ್ಛೇದನಕ್ಕೆ ಮುಂದಾದ್ರಾ? ಅನುಶ್ರೀ ಮುಂದೆ ಜಗ್ಗಪ್ಪ ಹೇಳಿದ್ದೇನು?
ಸೆಲೆಬ್ರಿಟಿಗಳ ವಿಚ್ಛೇದನದ ಸುದ್ದಿ ಕೇಳಿ ಕೇಳಿ ಜನರು ಬೇಸತ್ತು ಹೋಗಿದ್ದಾರೆ. ಒಂದಲ್ಲ ಒಂದು ಇಂಡಸ್ಟ್ರಿಯಲ್ಲಿ ಇಂತಹದ್ದೊಂದು ಸುದ್ದಿ ಹಬ್ಬುತ್ತಲೇ ಇರುತ್ತೆ. ಅದರಲ್ಲೂ ಸಿನಿಮಾ ಕ್ಷೇತ್ರದಲ್ಲಿ ಡಿವೋರ್ಸ್ ಮ್ಯಾಟರ್‌ಗಳೇ ಹೆಚ್ಚು. ಆದ್ರೀಗ ಇದು ಕಿರುತೆರೆಗೂ ವ್ಯಾಪಿಸಿಬಿಟ್ಟಿತೇ ಅನ್ನೋ ಬೇಸರ ವೀಕ್ಷಕರನ್ನು ಕಾಡುತ್ತಲೇ ಇತ್ತು.
ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ಮೂಲಕ ಜನರ ಮನಸ್ಸು ಗೆದ್ದಿದ್ದ ಜೋಡಿ ಜಗ್ಗಪ್ಪ ಹಾಗೂ ಸುಶ್ಮಿತಾ. ಈ ಜೋಡಿ ಕಳೆದ ಎಂಟು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಇಬ್ಬರೂ ರಿಯಾಲಿಟಿ ಶೋಗಳಲ್ಲಿ ಹೆಸರು ಮಾಡುತ್ತಿದ್ದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಯಾರೋ ಕಿಡಿಗೇಡಿಗಳು ವಿಚ್ಚೇದನ ಸುದ್ದಿಯನ್ನು ಹಬ್ಬಿಸಿದ್ದರು.

ಈ ಸುದ್ದಿ ಹಬ್ಬುತ್ತಿದ್ದಂತೆ ಜಗ್ಗಪ್ಪ ಹಾಗೂ ಸುಶ್ಮಿತಾ ಜೋಡಿ ಬಗ್ಗೆ ಮರುಕ ಪಟ್ಟಿದ್ದರು. ಇಬ್ಬರ ವಿಚ್ಛೇದನದ ಸುದ್ದಿ ನಿಜ ಎಂದುಕೊಂಡಿದ್ದರು. ಈಗಾಗಲೇ ಹಬ್ಬಿರುವ ಸುದ್ದಿಯ ಬಗ್ಗೆ ಜಗ್ಗಪ್ಪ ಕ್ಯಾರಿಟಿ ಕೊಟ್ಟಿದ್ದರು. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆ್ಯಂಕರ್ ಅನುಶ್ರೀ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಪತ್ನಿ ಬಗ್ಗೆ ಮಾತಾಡಿದ ತುಣುಕುಗಳು ಹರಿದಾಡುತ್ತಿದೆ. ಅಷ್ಟಕ್ಕೂ ಆ ಸಂದರ್ಶನದಲ್ಲಿ ಏನು ಹೇಳಿದ್ದಾರೆ? ತಿಳಿಯಲು ಮುಂದೆ ಓದಿ.
"ಗಾಸಿಪ್ ಹಬ್ಬಿಸಿಬಿಟ್ಟಿದ್ದರು"
"ಇತ್ತೀಚಿನ ದಿನಗಳಲ್ಲಿ ಜಗ್ಗಪ್ಪ-ಸುಶ್ಮಿತಾ ಡಿವೋರ್ಸ್ ಆಗುತ್ತಿದ್ದಾರೆ ಅನ್ನೋ ಸುದ್ದಿಯಿತ್ತು. ಸೋಶಿಯಲ್ ಮೀಡಿಯಾದಲ್ಲಿ ಫುಲ್ ಗಾಸಿಪ್ ಮಾಡಿಬಿಟ್ಟಿದ್ದರು ಅಕ್ಕ. ಬಂದಾಗ ಎಲ್ಲರೂ ಕೇಳುತ್ತಿದ್ದರು. ಏನೋ ಜಗ್ಗ ಸ್ಮಾರ್ಟ್ ಆಗು ಖುಷಿಯಾಗಿ ಇದ್ದೀಯಾ ಅನ್ನಿಸುತ್ತೆ. ಸ್ಮಾರ್ಟ್ ಆಗಿಬಿಟ್ಟಿದ್ದೀಯ ಅಂತ ಕೇಳಿದ್ದರು. ನಾವು ತುಂಬಾ ಚೆನ್ನಾಗಿ ಇದ್ದೀವಿ ಅಕ್ಕ. ನಾವೆಲ್ಲ ಬ್ಯಾಚುಲರ್ ಆಗಿದ್ದಾಗ ಎಷ್ಟೊತ್ತಿಗೆ ತಿಂದ್ವಿ. ಹುಷಾರಿಲ್ಲ ಅಂದರೂ ನಾವೇ ಎದ್ದು ಬಿಸಿ ನೀರು ಕಾಯಿಸಿಕೊಳ್ಳಬೇಕು. ಅವಳು ಅವಳ ಮನೆಯಲ್ಲೇ ಕೆಲಸ ಮಾಡಿಲ್ಲ. ಆದರೆ, ನನ್ನನ್ನು ಚೆನ್ನಾಗಿ ನೋಡಿ ಕೊಳ್ಳುತ್ತಾಳೆ." ಎಂದು ಜಗ್ಗಪ್ಪ ಹೇಳಿಕೊಂಡಿದ್ದರು.
"ನಾವಿಬ್ಬರೂ ಅನ್ಯೋನ್ಯವಾಗಿದ್ದೇವೆ"
ಜಗ್ಗಪ್ಪ ಹಾಗೂ ಸುಶ್ಮಿತಾ ಇಬ್ಬರೂ ಖುಷಿಯಾಗಿದ್ದಾರೆ. ಅವರ ನಡುವೆ ಯಾವುದೇ ರೀತಿಯ ಭಿನ್ನಾಬಿಪ್ರಾಯವಿಲ್ಲ. ನಟಿ ಸುಶ್ಮಿತಾ ತನ್ನನ್ನು ಹೇಗೆ ನೋಡಿಕೊಳ್ಳುತ್ತಾರೆ ಅನ್ನೋದನ್ನೂ ರಿವೀಲ್ ಮಾಡಿದ್ದಾರೆ. "ಆರು ಗಂಟೆಗೆ ಅವಳಿಗೆ ಪಿಕ್‌ಅಪ್ ಇದ್ದರೆ, ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ತಿಂಡಿ ಎಲ್ಲಾ ರೆಡಿ ಮಾಡಿಟ್ಟು ಹೋಗುತ್ತಾಳೆ. ಮತ್ತೆ ವಾಪಸ್ ಬಂದು ಎಲ್ಲಾ ಕೆಲಸ ಮಾಡುತ್ತಾಳೆ. ನಾನು ಏನು ಹೇಳುತ್ತಿದ್ದೇನೆ ಅಂದರೆ, ನಾವಿಬ್ಬರೂ ತುಂಬಾನೇ ಚೆನ್ನಾಗಿ ಇದ್ದೇವೆ. ತುಂಬಾನೇ ಅನ್ಯೋನ್ಯವಾಗಿದ್ದೇವೆ" ಎಂದಿದ್ದಾರೆ.

"ನೀನು ನನ್ನ ಎರಡನೇ ತಾಯಿ"
"ನಮ್ಮ ಮೇಲೆ ಯಾರ ಕಣ್ಣು ಬೀಳುವುದು ಬೇಡ. ನಮ್ಮನ್ನು ಯಾರೂ ದೂರ ಮಾಡುವುದಕ್ಕೆ ಹೋಗಬೇಡಿ. ಐ ಲವ್ ಯು.. ನೀನು ನನ್ನ ಎರಡನೇ ತಾಯಿ. ನಾನು ಯಾವತ್ತೂ ನಿನ್ನನ್ನು ನೋವು ಮಾಡುವುದಿಲ್ಲ. ಅವಳು ಅಂದರೆ ನನಗೆ ತುಂಬಾನೇ ಇಷ್ಟ." ಎಂದು ಆಂಕರ್ ಅನುಶ್ರೀ ಯೂಟ್ಯೂಬ್ ಚಾನೆಲ್‌ನಲ್ಲಿ ಜಗ್ಗಪ್ಪ ಸ್ಪಷ್ಟನೆ ಕೊಟ್ಟಿದ್ದಾರೆ.
ಸೆಲೆಬ್ರಿಟಿಗಳು ಆದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಇಂತಹ ಸುದ್ದಿಗಳನ್ನು ಎದುರಿಸಬೇಕು. ಆದರೆ, ಕೆಲವೊಮ್ಮೆ ವಿಚ್ಚೇದನದಂತಹ ವಿಷಯಗಳು ಮನಸ್ಸಿಗೆ ನೋವುಂಟು ಮಾಡುತ್ತವೆ. ಅವರ ಕುಟುಂಬದವರನ್ನು, ಅಭಿಮಾನಿಗಳನ್ನು ಆತಂಕಕ್ಕೆ ತಳ್ಳಿ ಬಿಡುತ್ತವೆ. ಎಂಟು ವರ್ಷ ಪ್ರೀತಿಸಿದ ಈ ಜೋಡಿ ಖುಷಿಯಾಗಿ ಸಂಸಾರ ಮಾಡಿಕೊಂಡಿದೆ.


Click it and Unblock the Notifications











