Suvarna superstar: ವೇದಿಕೆ ಮೇಲೆ ಹೊರಬಿತ್ತು ರಿಯಾ ಟ್ಯಾಲೆಂಟ್.. ನೆಗೆಟಿವ್ ಪಾತ್ರಕ್ಕೆ ಏನಂತಾರೆ ಫ್ರೆಂಡ್ಸ್?
'ನಮ್ಮ ಲಚ್ಚಿ' ಧಾರಾವಾಹಿ ನೋಡಿದವರಿಗೆ ರಿಯಾ ಪರಿಚಯ ಇದ್ದೆ ಇರುತ್ತದೆ. ಅದರಲ್ಲಿ ಕಂಪ್ಲೀಟ್ ನೆಗೆಟಿವ್ ಪಾತ್ರವನ್ನು ರಿಯಾ ಮಾಡುತ್ತಿದ್ದಾಳೆ. ಇಬ್ಬರು ಮಕ್ಕಳ ಧಾರಾವಾಹಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಲಚ್ಚಿ ಮತ್ತು ರಿಯಾಳ ಜಿದ್ದಾಜಿದ್ದಿಯನ್ನು ಕಣ್ತುಂಬಿಕೊಳ್ಳುವುದಕ್ಕೆ ಖುಷಿಯಾಗುತ್ತೆ.
ಒಮ್ಮೊಮ್ಮೆ ರಿಯಾ ಮಾಡುವ ಕಿತಾಪತಿಗೆ ನೋಡುಗರಿಗೆ ಒಮ್ಮೊಮ್ಮೆ ಕೋಪ ಬರುತ್ತೆ. ಆದರೆ, ರಿಯಾಳ ರಿಯಲ್ ಟ್ಯಾಲೆಂಟ್ ನೋಡಿದ್ರೆ ಒಮ್ಮೆ ಎಲ್ಲರೂ ಶಾಕ್ ಆಗೋದು ಗ್ಯಾರಂಟಿ.

ನೆಗೆಟಿವ್ ಪಾತ್ರ ಮಾಡುವುದು ಸುಲಭವಲ್ಲ. ಆದರೆ, ದಿಶಾ ಇನ್ನೂ ಚಿಕ್ಕವಳಾದರೂ ನೆಗೆಟಿವ್ ಪಾತ್ರವನ್ನು ಬಹಳ ಅದ್ಭುತವಾಗಿ ನಿಭಾಯಿಸುತ್ತಿದ್ದಾಳೆ. ಕೋಪಿಸಿಕೊಳ್ಳುವ ರೀತಿ, ದ್ವೇಷ ಕಾರುವ ರೀತಿ, ಬಾಡಿ ಲಾಂಗ್ವೇಜ್ ಅಬ್ಬಬ್ಬಾ.. ಎಲ್ಲವೂ ಪರ್ಫೆಕ್ಟ್.
ಶೂಟಿಂಗ್ ಅಂದ್ರೆ ಎಷ್ಟು ಸೀರಿಯಸ್ ?
ರಿಯಾ ಈಗಿನ್ನು ಓದುತ್ತಿರುವ ಪುಟಾಣಿ. ಜೊತೆಗೆ ಸೀರಿಯಲ್‌ನಲ್ಲೂ ಫುಲ್ ಬ್ಯುಸಿ. ರಿಯಾ ಅಲಿಯಾಸ್ ದಿಶಾಳನ್ನು ಧಾರಾವಾಹಿಯಲ್ಲಿ ನೋಡುವಾಗ ಅವರ ಫ್ರೆಂಡ್ಸ್ ಎಲ್ಲಾ ಖುಷಿ ಪಡ್ತಾರಂತೆ. ಇನ್ನು ಚೆನ್ನಾಗಿ ಮಾಡು ಅಂತ ಉರಿದುಂಬಿಸುತ್ತಾರಂತೆ. ಧಾರಾವಾಹಿ ಅಂದ್ರೆ, ದಿಶಾಗೆ ಅಷ್ಟು ಪ್ರೀತಿ. ಅದಕ್ಕೆ ಧಾರಾವಾಹಿಗೆ ಹೋಗುವಾಗ ಬೆಳಗ್ಗೆ 4 ಗಂಟೆಗೆ ಎದ್ದು, ರೆಡಿಯಾಗಿ ಹೋಗ್ತಾಳಂತೆ. ನಿದ್ರೆಯಲ್ಲಿಯೇ ಒದ್ದಾಡಿಕೊಂಡು ಹೋಗ್ತಾಳಂತೆ.
ರಿಯಾಗೆ ಚಾಕ್ಲೇಟ್ ಕೊಡ್ಸಲ್ವಂತೆ ಅಮ್ಮ
ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ಇಂದು ದಿಶಾ ತನ್ನ ಅಮ್ಮನ ಜೊತೆಗೆ ಬಂದಿದ್ದಾಳೆ. ಶಾಲಿನಿ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಒಂದಷ್ಟು ವಿಚಾರಗಳನ್ನು ಬಿಚ್ಚಿಟ್ಟಿದ್ದಾಳೆ. ಶಾಲಿನಿ ಚಾಕ್ಲೇಟ್ ಹಾಗೂ ಬಟ್ಟೆ ಬಗ್ಗೆ ಕೇಳಿದ್ದಾರೆ. ಆಗ ದಿಶಾ, ಅಮ್ಮ ನನಗೆ ಚಾಕ್ಲೇಟ್ ಕೊಡಿಸುವುದೇ ಇಲ್ಲ. ಮಾತು ಕೇಳದೆ ಇದ್ದಾಗ ಹೊಡೆಯುತ್ತಾರೆ ಎಂದಿದ್ದಾಳೆ. ಇನ್ನು ಧಾರಾವಾಹಿಯಲ್ಲಿ ಹಾಕುವ ಎಲ್ಲಾ ಡ್ರೆಸ್‌ಗಳು ನನ್ನದೇ ಅನ್ನೋ ಸತ್ಯವನ್ನು ಹೇಳಿದ್ದಾಳೆ.

ರಿಯಾಳಿಗೆ ಏನೆಲ್ಲಾ ಗೊತ್ತು ಗೊತ್ತಾ..?
ಇನ್ನು ರಿಯಾ ಅಲಿಯಾಸ್ ದಿಶಾ ತೆರೆ ಮೇಲೆ ಮಾತ್ರ ವಿಲನ್. ಆದರೆ ಎಷ್ಟು ಟ್ಯಾಲೆಂಟ್ ಅನ್ನೋದನ್ನು ತೋರಿಸಿದ್ದಾಳೆ. ಭರತನಾಟ್ಯದ ಎಲ್ಲಾ ಮುದ್ರೆಗಳನ್ನು ಕೈಯಲ್ಲಿ ತೋರಿಸುವುದಲ್ಲದೆ ಬಾಯಲ್ಲಿ ಪಟ ಪಟ ಅಂತ ಹೇಳಿದ್ದಾಳೆ. ಭರತನಾಟ್ಯದ ಮುದ್ರೆಗಳನ್ನು ತೋರಿಸುವಾಗ ದಿಶಾಳಲ್ಲಿಯೇ ಮಗುವಿನ ಮುಗ್ಧತೆ ಎದ್ದು ಕಾಣಿಸುತ್ತಾ ಇತ್ತು.
ರಿಯಾಳ ಟ್ಯಾಲೆಂಟ್‌ಗೆ ಅಭಿಮಾನಿಗಳು ಫಿದಾ
ನಮ್ಮ ಲಚ್ಚಿ ಧಾರಾವಾಹಿಯಲ್ಲಿ ರಿಯಾಳ ಆ ಕೋಪದ ಮುಖ ನೋಡಿದವರಿಗೆ ಇಂದು ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಒಂದು ಇನೊಸೆಂಟ್ ಫೇಸ್ ಕಂಡಿದೆ. ಮಗುವಿನಂತ ಮುಗ್ಧತೆ. ರಿಯಾಳ ಆ ಇನೊಸೆಂಟ್ ಫೇಸ್‌ಗೆ ಸಾಕಷ್ಟು ಜನ ಫಿದಾ ಆಗಿದ್ದಾರೆ ಬರೀ ನೆಗೆಟಿವ್ ಮುಖವನ್ನೇ ತೋರಿಸಿದ್ದ ರಿಯಾ, ರಿಯಲ್ ದಿಶಾ ಆಗಿ ಕಾಣಿಸಿಕೊಂಡಿದ್ದಾಳೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿಯೇ ಅಭಿಮಾನಿಗಳು ಕಮೆಂಟ್ ಹಾಕಿದ್ದಾರಡ. ರಿಯಾಳನ್ನು ನೆಗೆಟಿವ್ ಶೇಡ್‌ನಲ್ಲಿ ತೋರಿಸಬೇಡಿ, ರಿಯಾಳಿಗೆ ಎಷ್ಟೆಲ್ಲಾ ಟ್ಯಾಲೆಂಟ್ ಇದೆ, ಮಕ್ಕಳನ್ನು ಈ ರೀತಿಯೆಲ್ಲಾ ತೋರಿಸಬೇಡಿ ಎಂದು ಕಮೆಂಟ್ ಹಾಕುತ್ತಿದ್ದಾರೆ. ಸದ್ಯ ರಿಯಾಳ ಪಾತ್ರವನ್ನು ದಿಶಾ ಅದ್ಭುತವಾಗಿ ನಿಭಾಯಿಸುತ್ತಿದ್ದಾಳೆ. ನೆಗೆಟಿವ್ ಪಾತ್ರಕ್ಕೆ ಹೇಳಿ ಮಾಡಿಸಿದ ಲುಕ್ ದಿಶಾಳದ್ದು. ಆದರೆ ಅದು ದಿಶಾಳ ವೈಯಕ್ತಿಕ ಜೀವನದ ಮೇಲೆ ಪ್ರಭಾವ ಬೀರದೆ ಇದ್ದರೆ ಒಳೀತು ಎನ್ನುತ್ತಿದ್ದಾರೆ ಅಭಿಮಾನಿಗಳು.


Click it and Unblock the Notifications











