ರಿಯಾಲಿಟಿ ಶೋ ಸ್ಪರ್ಧಿ ದಿವ್ಯಾ ಸುರೇಶ್‌ಗೆ ರಸ್ತೆ ಅಪಘಾತ!
ರಿಯಾಲಿಟಿ ಶೋ ಮೂಲಕ ಎಲ್ಲರಿಗೂ ಪರಿಚಿತ ಆಗಿರುವ ದಿವ್ಯಾ ಸುರೇಶ್ ರಸ್ತೆ ಅಪಘಾತಕ್ಕೀಡಾಗಿದ್ದಾರೆ. ಸದ್ಯ ದಿವ್ಯಾ ಚಿಕಿತ್ಸೆ ಬಳಿಕ ವಿಶ್ರಾಂತಿಯಲ್ಲಿ ಇದ್ದಾರೆ.
ರಸ್ತೆ ಅಪಘಾತಕ್ಕೆ ಒಳಗಾಗಿರುವ ದಿವ್ಯಾ ಅವರಿಗೆ ಯಾವುದೇ ದೊಡ್ಡ ಅಪಾಯ ಸಂಭವಿಸಿಲ್ಲ. ಸಣ್ಣಪುಟ್ಟ ಗಾಯಗಳಾಗಿವೆ. ಈ ಬಗ್ಗೆ ದಿವ್ಯಾ ಮಾಹಿತಿ ಹಂಚಿಕೊಂಡಿದ್ದಾರೆ. ಅಪಘಾತ ಸಂಭವಿಸಿ 3 ದಿನಗಳ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ. ಕಳೆದ ಸೋಮವಾರ ದಿವ್ಯಾ ಸುರೇಶ್ ಕೊರೊನಾ ವ್ಯಾಕ್ಸಿನ್ ಪಡೆದು ಬೈಕ್‌ನಲ್ಲಿ ಬರುತ್ತಿರುವಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ದಿವ್ಯಾ ಮುಖದ ಮೇಲೆ ಗಾಯಗಳಾಗಿವೆ!
ದಿವ್ಯಾ ಅವರಿಗೆ ಮುಖದ ಮೇಲೆ ಸಣ್ಣ ಪುಟ್ಟ ಗಾಯಗಳಾಗಿವೆ. ಬೈಕ್‌ನಿಂದ ಬಿದ್ದು ತೀವ್ರವಾಗಿ ಪೆಟ್ಟು ಬಿದ್ದು ರಕ್ತಸ್ರಾವ ಆಗಿದ್ದರಿಂದ ಸ್ಟಿಚ್‌ಗಳನ್ನು ಹಾಕಲಾಗಿದೆ. ಈ ವಿಚಾರವನ್ನು ದಿವ್ಯಾ ಸುರೇಶ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು, ಆಪ್ತರು ಕೋರುತ್ತಿದ್ದಾರೆ.

ನೈಟ್ ಕರ್ಫ್ಯೂ ವೇಳೆ ಕಿರಿಕ್ ಮಾಡಿದ್ದ ದಿವ್ಯಾ ಸುರೇಶ್!
ಇತ್ತೀಚೆಗೆ ದಿವ್ಯಾ ಸುರೇಶ್ ಅವರು ಕಿರಿಕ್ ಮಾಡಿಕೊಂಡಿದ್ದರು. ನೈಟ್ ಕರ್ಫ್ಯೂ ವೇಳೆ ಎಂಜಿ ರಸ್ತೆಯಲ್ಲಿ ಓಡಾಡುತ್ತಿದ್ದರು. ಈ ವೇಳೆ ದಿವ್ಯಾ ಸುರೇಶ್ ಹಾಗೂ ಅವರ ಸ್ನೇಹಿತರನ್ನು ಪೊಲೀಸರು ಮನೆಗೆ ಕಳುಹಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ದಿವ್ಯಾ ಹಾಗೂ ಅವರ ಸ್ನೇಹಿತರು ಹೈಡ್ರಾಮಾ ನಡೆಸಿದ್ದು, ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು.

ರಿಯಾಲಿಟಿ ಶೋವೊಂದರ ಸ್ಪರ್ಧಿ ದಿವ್ಯಾ ಸುರೇಶ್!
ನಟಿ ದಿವ್ಯಾ ಸುರೇಶ್ ಅವರು ಕನ್ನಡದ ರಿಯಾಲಿಟಿ ಶೋವೊಂದರ ಸ್ಪರ್ಧಿ. ಈ ಕಾರ್ಯಕ್ರಮದ ಮೂಲಕ ದಿವ್ಯ ಅವರು ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ. ಫಿನಾಲೆಯನ್ನು ಕೂಡ ದಿವ್ಯಾ ಪ್ರವೇಶ ಮಾಡಿದ್ದರು. ಇದಕ್ಕೂ ಮೊದಲು ದಿವ್ಯಾ ಸುರೇಶ್ ಅವರು ಮಾಡಲಿಂಗ್ ಮಾಡುತ್ತಿದ್ದರು. ರಿಯಾಲಿಟಿ ಶೋ ಪೂರ್ಣಗೊಂಡ ಬಳಿಕ ಅವರಿಗೆ ಸಾಕಷ್ಟು ಸಿನಿಮಾ ಆಫರ್ಗಳು ಬರುತ್ತಿವೆ.

ಸಿನಿಮಾಗಳಲ್ಲಿ ಅಭಿನಯಿಸುತ್ತಾರಾ ದಿವ್ಯಾ ಸುರೇಶ್!
ಇನ್ನು ನಟಿ ದಿವ್ಯಾ ಸುರೇಶ್ ಅವರು ಬಿಗ್ ಬಾಸ್ ಬಳಿಕ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ ದಿವ್ಯ ಅವರಿಗೆ ಒಂದಷ್ಟು ಸಿನಿಮಾ ಅವಕಾಶಗಳು ಬರುತ್ತಿವೆ ಅಂತೆ. ಸದ್ಯದಲ್ಲಿಯೇ ಸಿನಿಮಾಗಳನ್ನು ಅಧಿಕೃತವಾಗಿ ಪ್ರಕಟ ಮಾಡಲಿದ್ದಾರೆ ದಿವ್ಯಾ ಸುರೇಶ್. ಸದ್ಯ ಕಿರುತೆಯ ಹಲವು ಕಾರ್ಯಕ್ರಮಗಳಲ್ಲಿ ದಿವ್ಯ ಕಾಣಿಸಿಕೊಳ್ಳುತ್ತಾ ಇದ್ದಾರೆ.


Click it and Unblock the Notifications











