ರಿಯಾಲಿಟಿ ಶೋಗಳ ಗುಟ್ಟು ರಟ್ಟು ಮಾಡಿದ ಗಾಯಕಿ ಸುನಿಧಿ ಚೌಹಾಣ್
ಈ ಮುಂಚೆ ಪ್ರತಿಭೆಗೆ ವೇದಿಕೆ ಆಗಿದ್ದ ರಿಯಾಲಿಟಿ ಶೋಗಳು ಈಗಂತೂ ಡ್ರಾಮಾ, ಅನವಶ್ಯಕ ಕಣ್ಣೀರು, ಡಬಲ್ ಮೀನಿಂಗ್ ಜೋಕ್ಸ್ ಇಂಥಹುಗಳಿಂದಲೇ ಹೆಚ್ಚು ಸುದ್ದಿ ಮಾಡುತ್ತಿವೆ ಮತ್ತು ಟಿಆರ್‌ಪಿಯನ್ನೂ ಗಳಿಸುತ್ತಿವೆ.
ಇತ್ತೀಚೆಗೆ ಬಾಲಿವುಡ್‌ನ ಕೆಲವು ಸೆಲೆಬ್ರಿಟಿಗಳು ರಿಯಾಲಿಟಿ ಶೋಗಳ ಬಗ್ಗೆ ಋಣಾತ್ಮಕವಾಗಿ ಮಾತನಾಡಿದ್ದಾರೆ. ರಿಯಾಲಿಟಿ ಶೋಗಳಲ್ಲಿ ತೋರಿಸುವುದೆಲ್ಲವೂ ನಿಜವಲ್ಲ. ಟಿಆರ್‌ಪಿಗಾಗಿಯೇ ಸಾಕಷ್ಟು ಸುಳ್ಳುಗಳನ್ನು ಆಡುತ್ತಾರೆ. ಬಂದ ಅತಿಥಿಗಳ ಕೈಲೂ ಆಡಿಸುತ್ತಾರೆ ಎಂದಿದ್ದಾರೆ.
ಮಾಜಿ ರಿಯಾಲಿಟಿ ಶೋ ವಿನ್ನರ್ ಅಭಿಜಿತ್ ಸಾವಂತ್, ಖ್ಯಾತ ಗಾಯಕ ಕಿಶೋರ್ ಕುಮಾರ್ ಪುತ್ರ ಈಗಾಗಲೇ ರಿಯಾಲಿಟಿ ಶೋನಲ್ಲಿ ರಿಯಾಲಿಟಿ ಎನ್ನುವುದಿಲ್ಲ ಎಂದು ನೇರ ಆರೋಪ ಮಾಡಿದ್ದಾರೆ. ಇದೀಗ ಖ್ಯಾತ ಗಾಯಕಿ ಸುನಿಧಿ ಚೌಹಾಣ್ ಸಹ ರಿಯಾಲಿಟಿ ಶೋಗಳ ಡ್ಯೂಪ್ಲಿಕೇಟ್ ತನದ ಬಗ್ಗೆ ಮಾತನಾಡಿದ್ದಾರೆ.
ಸುನಿಧಿ ಚೌಹಾಣ್ 'ಇಂಡಿಯನ್ ಐಡಲ್' ಗಾಯನ ರಿಯಾಲಿಟಿ ಶೋನ ಐದನೇ ಹಾಗೂ ಆರನೇ ಸೀಸನ್‌ನಲ್ಲಿ ಜಡ್ಜ್ ಆಗಿದ್ದರು. ಆದರೆ ಶೋನ ಆಯೋಜಕರೊಂದಿಗೆ ಭಿನ್ನಾಭಿಪ್ರಾಯ ಬಂದ ಕಾರಣ ರಿಯಾಲಿಟಿ ಶೋನಿಂದ ಹೊರಗೆ ಬಂದರೆ ಆ ನಂತರ ಯಾವ ರಿಯಾಲಿಟಿ ಶೋಗೂ ಸಹ ಜಡ್ಜ್ ಆಗಲಿಲ್ಲ.

ಸ್ಪರ್ಧಿಗಳನ್ನು ಹೊಗಳುವಂತೆ ಷರತ್ತು ವಿಧಿಸಲಾಗುತ್ತದೆ: ಸುನಿಧಿ
'ಎಲ್ಲ ಸ್ಪರ್ಧಿಗಳನ್ನು ಹೊಗಳುವಂತೆ ಆಯೋಜಕರು ಷರತ್ತು ವಿಧಿಸುತ್ತಾರೆ. ಹಲವು ಬಾರಿ ಅತಿಯಾಗಿ ವರ್ತಿಸಬೇಕಾಗುತ್ತದೆ. ಅವರು ಹೇಳಿಕೊಟ್ಟಂತೆ ಹೇಳಬೇಕಾಗುತ್ತದೆ. ಇತ್ತೀಚೆಗೆ ಸ್ಪರ್ಧಿಗಳ ಹಾಡಿರುವ ಹಾಡನ್ನು ಎಡಿಟ್ ಮಾಡಿ, ಫೈನ್ ಟ್ಯೂನ್ ಮಾಡಿ ಲೋಪಗಳನ್ನು ತಂತ್ರಜ್ಞಾನ ಸಹಾಯದಿಂದ ಸರಿಪಡಿಸಿ ಪ್ರಸಾರ ಮಾಡಲಾಗುತ್ತಿದೆ' ಎಂದಿದ್ದಾರೆ.

ಕಣ್ಣೀರು ಹಾಕುವುದರಲ್ಲಿ ನಿಸ್ಸೀಮರು ನೇಹಾ ಕಕ್ಕರ್
'ಇಂಡಿಯನ್ ಐಡಲ್' ಈಗಿನ ಸೀಸನ್ ಅನ್ನು ನೇಹಾ ಕಕ್ಕರ್, ಹಿಮೇಶ್ ರೆಶಮಿಯಾ, ವಿಶಾಲ್ ದದ್ಲಾನಿ ಜಡ್ಜ್ ಮಾಡುತ್ತಿದ್ದಾರೆ. ಈ ಮೂವರೂ ಸಹ ಸ್ಪರ್ಧಿಗಳನ್ನು ಅತಿಯಾಗಿ ಹೊಗಳಲು ಖ್ಯಾತರು. ಅದರಲ್ಲೂ ನೇಹಾ ಕಕ್ಕರ್ ಅಂತೂ ಮಾತು-ಮಾತಿಗೆ ಕಣ್ಣೀರು ಹಾಕುತ್ತಾರೆ.

ಅಭಿಜಿತ್ ಸಾವಂತ್ ಸಹ ಆಕ್ರೋಶ ವ್ಯಕ್ತಪಡಿಸಿದ್ದರು
ಕೆಲವು ದಿನಗಳ ಹಿಂದೆ ಮಾತನಾಡಿದ್ದ ಮೊದಲ 'ಇಂಡಿಯನ್ ಐಡಲ್' ಶೋ ವಿನ್ನರ್, ಗಾಯಕ ಅಭಿಜಿತ್ ಸಾವಂತ್, 'ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋಗಳಿಗೆ ಪ್ರತಿಭೆಗಿಂತಲೂ ಹೆಚ್ಚಾಗಿ ಕರುಳು ಹಿಂಡುವ ಕತೆ ಬೇಕಾಗಿದೆ ಅಷ್ಟೆ. ಬಡವರು, ಅನಾಥರು, ಕಷ್ಟದಲ್ಲಿರುವವರು ಇಂಥಹವರನ್ನು ಹುಡುಕಿ ಕರೆತರುತ್ತಿದ್ದಾರೆ ಅವರಿಗೆ ಪ್ರತಿಭೆ ಬೇಕಿಲ್ಲ' ಎಂದಿದ್ದರು.

ಅಮಿತ್ ಸಹ ಆಕ್ರೋಶ ವ್ಯಕ್ತಪಡಿಸಿದ್ದರು
ಶೋ ಒಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಕಿಶೋರ್ ಕುಮಾರ್ ಮಗ ಅಮಿತ್, 'ನನಗೆ ಆ ಶೋ ಸ್ವಲ್ಪವೂ ಇಷ್ಟವಾಗಲಿಲ್ಲ. ಅಲ್ಲಿಗೆ ಹೋದಮೇಲೆ ಅವರು ಹೇಳಿದಂತೆ ನಾನು ಮಾಡಿದೆ ಅಷ್ಟೆ. ಸ್ಪರ್ಧಿಗಳು ಹೇಗೇ ಹಾಡಲಿ ಅವರನ್ನು ಹೊಗಳಬೇಕು ಎಂದು ಆಯೋಜಕರು ಮೊದಲೇ ಹೇಳಿಬಿಟ್ಟಿದ್ದರು ನಾನು ಹಾಗೆಯೇ ಮಾಡಿದೆ' ಎಂದಿದ್ದರು.


Click it and Unblock the Notifications











