ವಿಡಿಯೋ: ಕೊರೊನಾ ಬಂದಾಗ ಅನುಪಮ ಗೌಡ ಏನ್ ಮಾಡ್ತಿದ್ರು ಗೊತ್ತಾ?
ಕಿರುತೆರೆ ನಿರೂಪಕಿ ಅನುಪಮಾ ಗೌಡ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಇದೀಗ ಸೋಂಕಿನಿಂದ ಸುಧಾರಿಸಿಕೊಂಡಿದ್ದಾರೆ. ಅನುಪಮ ಸೋಂಕಿನ ಅನುಭವವನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಸದ್ಯ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ನಿರೂಪಣೆ ಮಾಡುತ್ತಿದ್ದಾರೆ ಅನುಪಮಾ ಗೌಡ. ಕೊರೊನಾ ಬಂದ ಕಾರಣ ಅವರು, ಏಳು ದಿನಗಳ ಕಾಲ ಹೋಮ್ ಕ್ವಾರೆಂಟೈನ್ ಆಗಿದ್ದರು. ಈಗ ಅನುಪಮಾ ಅವರು ಚೇತರಿಸಿಕೊಂಡಿದ್ದಾರೆ. ಈ ಅನುಭವದ ಬಗ್ಗೆ ಅನುಪಮಾ ಗೌಡ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ. ಅವರಿಗೆ ಆದ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.
ಕೊರೊನಾ ಅನುಭವ ಹೇಳಲು ಅನುಪಮ ತಮ್ಮ ಮಾತನ್ನು ಹೀಗೆ ಶುರು ಮಾಡಿದ್ದಾರೆ. "ನಮ್ಮಮ್ಮ ಸೂಪರ್ ಸ್ಟಾರ್ ಸ್ಪರ್ಧಿ ಸಮನ್ವಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು. ಆಗ ಅಂತಿಮ ದರ್ಶನ ಪಡೆಯಲು ನಾನು ಹೋಗಿದ್ದೆ. ಅಲ್ಲಿ ಸುಮಾರು ಜನರ ಜೊತೆಗೆ ಸಂಪರ್ಕಕ್ಕೆ ಬಂದಿದ್ದೆ. ಇದಾದ ಬಳಿಕ ಬೇರೆ ಯಾವುದೇ ಕಾರ್ಯಕ್ರಮಕ್ಕೂ ನಾನು ಹೋಗಿರಲಿಲ್ಲ. ನಾನು ಹೆಚ್ಚು ಸಮಯವನ್ನ ಮನೆ, ಜಿಮ್ ಬಿಟ್ಟರೆ ಶೂಟಿಂಗ್ ಅಷ್ಟೇ. ಇನ್ನೆಲ್ಲೂ ಹೋಗೋದಿಲ್ಲ.''

ಸ್ವಲ್ಪ ಹೊತ್ತಲ್ಲೇ ಚಳಿ ಜ್ವರ ಶುರು ಶುರುವಾಯ್ತು. ತಕ್ಷಣ ವೈದ್ಯರಿಗೆ ಕರೆ ಮಾಡಿದೆ. ಅವರು ಆರ್‌ಟಿಪಿಸಿಆರ್ ಮಾಡಿಸಲು ಹೇಳಿದರು. ಕೋವಿಡ್ ಟೆಸ್ಟ್ ಮಾಡಿದಾಗ ನನಗೆ ಪಾಸಿಟೀವ್ ಬಂತು. ನಂತರ ಒಂದು ಡೋಲೋ ಮಾತ್ರೆ ತೆಗೆದುಕೊಂಡೆ.
ನನ್ನನ್ನು ಭೇಟಿ ಮಾಡಿದ್ದ ತಾಯಂದಿರು ಹಾಗೂ ನನ್ನ ಸ್ನೇಹಿತೆ ಗರ್ಭಿಣಿಯಾಗಿದ್ದರು. ಅವರಿಗೆಲ್ಲಾ ಕರೆ ಮಾಡಿ ನನಗೆ ಪಾಸಿಟಿವ್ ಬಂದಿದೆ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಹೇಳಿದೆ. ಬಳಿಕ ವೈದ್ಯರಿಗೆ ಕರೆ ಮಾಡಿದೆ. ವೈದ್ಯರು ಏಳು ದಿನ ಕ್ವಾರೆಂಟೈನ್ ಆಗಲು ಹೇಳಿದರು. ನಾನು ಮನೆಯಲ್ಲಿ ವಾಕಿಂಗ್, ಧ್ಯಾನ ಮಾಡುತ್ತಿದ್ದೆ. ಸಿನಿಮಾಗಳನ್ನು ನೋಡಿದೆ.
ನಿತ್ಯ ನಾಲ್ಕು ಗಂಟೆಗೆ ಏಳುತ್ತಿದ್ದ ನಾನು ಈ ಸಂದರ್ಭದಲ್ಲಿ ಮಲಗಿರುತ್ತಿದ್ದೆ. ಸದಾ ನನ್ನ ಜೊತೆ ನನ್ನ ನಾಯಿ ಇರುತ್ತಿತ್ತು. ಸಂಗೀತವನ್ನು ಕೇಳುತ್ತಿದ್ದೆ. ಈ ಸಮಯದಲ್ಲಿ ನನ್ನ ತ್ವಚೆ ಹಾಳಾಗಿತ್ತು, ಹಾಗಾಗಿ ಅದರ ಆರೈಕೆ ಮಾಡುತ್ತಿದ್ದೆ. ನನ್ನ ಆಪ್ತರು ನನಗಾಗಿ ತಿಂಡಿಗಳು ಕಳುಹಿಸಿಕೊಟ್ಟರು. ಅವರಿಗೆಲ್ಲಾ ನನ್ನ ಧನ್ಯವಾದಗಳು. ನನ್ನ ಬಗ್ಗೆ ಕಾಳಜಿ ವಹಿಸಿದ ಪ್ರತಿಯೊಬ್ಬರಿಗೂ ಧನ್ಯವಾಗಳು ಎಂದು ಅನುಪಮಾ ಹೇಳಿಕೊಂಡಿದ್ದಾರೆ.
ಅವರು ತಮ್ಮ ಕೋವಿಡ್ ದಿನಗಳ ಬಗ್ಗೆ ವಿವರಿಸಿದರು. ಇದಕ್ಕೆ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಕೊರೊನಾದಿಂದ ಚೇತರಿಸಿಕೊಂಡ ಅನುಪಮ ಅವರು ಮತ್ತೆ ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಮರಳಿದ್ದಾರೆ.
ಕನ್ನಡ ಕಿರುತೆರೆಯ ಹಲವು ಹೆಸರಾಂತ ನಿರೂಪಕಿಯರಲ್ಲಿ ಅನುಪಮಾ ಕೂಡ ಒಬ್ಬರು. ಅನುಪಮ ಅವರು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿಯೂ ಖ್ಯಾತಿ ಪಡೆದಿದ್ದಾರೆ. ಅನುಪಮಾ ಅವರ ನಿರೂಪಣೆ ವೈಖರಿಗೆ ಹಲವು ಅಭಿಮಾನಿಗಳು ಕೂಡ ಇದ್ದಾರೆ.


Click it and Unblock the Notifications