ಅಂದು ಬಿಕಿನಿ ಹಾಕಿ ಟ್ರೋಲ್ ಆಗಿದ್ದ ದೋಸ್ತಿಗಳು; ಐಶು - ನಮ್ರತಾ ಫ್ರೆಂಡ್ಶಿಪ್ ಕಟ್ ಆಗಿದ್ದೇಕೆ?
ನಮ್ರತಾ ಗೌಡ ಅವರನ್ನ ನೋಡಿದ್ದ ರೀತಿಯೇ ಬೇರೆ ಆಗಿತ್ತು. 'ಪುಟ್ಟಗೌರಿ' ಸೀರಿಯಲ್‌ನಲ್ಲಿ ತನ್ನ ಹುಡುಗನನ್ನು ಪ್ರೀತಿಸುವ ಮುಗ್ಧ ಹುಡುಗಿಯಾಗಿ, ಸದಾ ಸೀರೆಯುಟ್ಟು ಟ್ರೆಡಿಷನಲ್ ಆಗಿ ಕಂಗೊಳಿಸಿದ್ದರು. ಸಾಕಷ್ಟು ಪಡ್ಡೆ ಹುಡುಗರ ಕನಸಿನ ರಾಣಿಯಂತೆ ಕಾಡಿದ್ದರು.
ಬಿಗ್ ಬಾಸ್ ಮನೆಗೆ ಹೋದ ಮೇಲೆ ಅವರ ಮೇಲಿನ ಭಾವನೆ ಹಲವರಿಗೆ ಬದಲಾಯ್ತು ಬಿಡಿ. ಅದು ಬೇರೆ. ಆದರೆ ಕೆಲವೊಂದು ವಿಚಾರದಲ್ಲಿ ನಮ್ರತಾ ಗೌಡರನ್ನ ಫಾಲೋ ಮಾಡುವ ಮಂದಿ ಕೂಡ ಇದ್ದಾರೆ.

ನಮ್ರತಾ ಗೌಡ ಬಗ್ಗೆ ಹಲವರಿಗೆ ಒಂದು ಪ್ರಶ್ನೆ ತುಂಬಾನೇ ಕಾಡುತ್ತಿತ್ತು. ಆದರೆ ಅದಕ್ಕೆ ಇಲ್ಲಿವರೆಗೂ ಅದಕ್ಕೆ ಉತ್ತರ ಸಿಕ್ಕಿರಲಿಲ್ಲ. ಅದುವೇ ಅಷ್ಟು ಕ್ಲೋಸ್ ಆಗಿದ್ದ ಐಶ್ವರ್ಯಾ ಅಂಡ್ ನಮ್ರತಾ ಗೌಡ ಫ್ರೆಂಡ್ಶಿಪ್ ಕಟ್ ಆಗೋದಕ್ಕೆ ಕಾರಣವೇನು ಎಂಬುದು. ಇದೀಗ ನ್ಯೂಸ್ ಫಸ್ಟ್ ಸಂದರ್ಶನದಲ್ಲಿ ಐಶ್ವರ್ಯಾ ಆ ಬಗ್ಗೆ ತಿಳಿಸಿದ್ದಾರೆ.
ಕ್ಲೋಸ್ ಆಗಿದ್ದ ನಮ್ರತಾ-ಐಶ್ವರ್ಯಾ
ನಮ್ರತಾ ಹಾಗೂ ಐಶ್ಚರ್ಯಾ ಸಿಂಧೋಗಿ ಒಂದೇ ಸೀರಿಯಲ್‌ನಲ್ಲಿ ನಟಿಸಿದ್ದರು. 'ನಾಗಿಣಿ' ಧಾರಾವಾಹಿಯಲ್ಲಿ ನಮ್ರತಾಗೆ ಐಶು ವಿಲನ್. ಅಲ್ಲಿಂದ ಇಬ್ಬರ ಬಾಂಡಿಂಗ್ ಸ್ಟ್ರಾಂಗ್ ಆಗಿತ್ತು. ಇಬ್ಬರು ಒಟ್ಟೊಟ್ಟಿಗೆ ಭೇಟಿ ಮಾಡೋದು, ಎಂಜಾಯ್ ಮಾಡೋದನ್ನ ಮಾಡ್ತಾ ಇದ್ರು. ಸೀರಿಯಲ್ ಮುಗಿದರೂ ಇಬ್ಬರ ನಡುವಿನ ಸ್ನೇಹ ಮಾತ್ರ ಗಟ್ಟಿಯಾಗಿತ್ತು.
ಟ್ರಿಪ್ ಹೋಗಿದ್ದ ದೋಸ್ತಿಗಳು
ಎಲ್ಲಿಯೇ ಹೋಗಬೇಕು ಅಂದ್ರು ಇಬ್ಬರು ಜೊತೆಯಾಗಿಯೇ ಹೋಗ್ತಾ ಇದ್ದರು. ಇಬ್ಬರ ಜೋಡಿ ಹೇಗಿತ್ತು ಅಂದ್ರೆ ಇಬ್ಬರು ಸ್ಟೈಲ್ ಐಕಾನ್ ಇಬ್ಬರು ಸ್ಟ್ರಾಂಗ್ ವುಮೆನ್. ಹಬ್ಬ ಹರಿದಿನಗಳು ಇದ್ದರು ಕಿಶನ್, ನಮ್ರತಾ, ಐಶು ಮೂವರು ಒಟ್ಟಿಗೆ ಸೇರ್ತಾ ಇದ್ದರು. ಹಬ್ಬ ಆಚರಣೆ ಮಾಡಿ, ಒಂದಷ್ಟು ರೀಲ್ಸ್ ಮಾಡಿ, ಎಂಜಾಯ್ ಮಾಡ್ತಾ ಇದ್ರು. ಅಷ್ಟು ಕ್ಲೋಸ್ ಆಗಿದ್ದವರು, ಇದ್ದಕ್ಕಿದ್ದ ಹಾಗೆ ದೂರವಾಗಿ ಬಿಟ್ಟರು.
ಬಿಕಿನಿ ಹಾಕಿ ಸುದ್ದಿಯಾಗಿದ್ದವರು
ನಮ್ರತಾ ಗೌಡ ಹಾಗೂ ಐಶ್ವರ್ಯಾ ಸಿಂಧೋಗಿ ಇಬ್ಬರು ಒಮ್ಮೆ ಇಂಡೋನೇಷ್ಯಾ ಟ್ರಿಪ್ ಹೋಗಿದ್ದರು. ಅಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಾ ಇದ್ರು. ಅಲ್ಲಿ ಫಾಲ್ಸ್ ಒಂದರಲ್ಲಿ ಬಿಕಿನಿ ಹಾಕಿ ಫೋಟೋಗೆ ಪೋಸ್ ನೀಡಿದ್ದರು. ಈ ಫೋಟೋಗಳನ್ನು ನಮ್ರತಾ ಗೌಡ ಹಾಗೂ ಐಶು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ. ಆ ಸಮಯದಲ್ಲಿ ಸಿಕ್ಕಾಪಟ್ಟೆ ಕಮೆಂಟ್ಸ್ ಬಂದಿದ್ದವು. ನಮ್ರತಾ ಗೌಡರನ್ನ ನೋಡಿದ ರೀತಿಯೇ ಬೇರೆ ಆಗಿತ್ತು. ಅಷ್ಟು ಬೋಲ್ಡ್ ಆಗಿ ಕಂಡದ್ದು ಕಂಡು ದಂಗಾಗಿದ್ದರು. ಆದರೆ ನಮ್ರತಾ ಗೌಡ ಡೋಂಟ್ ಕೇರ್ ಎಂಬಂತೆ ಸ್ಟ್ರಾಂಗ್ ಆಗಿದ್ರು.
ಸಣ್ಣ ವಿಚಾರ ಫ್ರೆಂಡ್ಶಿಪ್ ಕಟ್
ಈ ಟ್ರಿಪ್ ಮುಗಿದ ಬಳಿಕ ಅದ್ಯಾಕೋ ಐಶು ಹಾಗೂ ನಮ್ಮು ಜೊತೆಗೆ ಕಾಣಿಸಲಿಲ್ಲ. ಈ ಬಗ್ಗೆ ಐಶ್ವರ್ಯ ಸಿಂಧೋಗಿ ಮಾತನಾಡಿದ್ದಾರೆ. "ನಾನು ನಮ್ರತಾ ಮಾತನಾಡದೆ ಒಂದು ವರ್ಷ ಆಗಿದೆ. ಒಂದು ಟ್ರಿಪ್ ಮುಗಿಸಿ ಬರುವಾಗ ಒಂದು ಸಿಲ್ಲಿ ವಿಚಾರಕ್ಕೆ ಮನಸ್ತಾಪ ಆಯ್ತು. ಏರ್ಪೋರ್ಟ್‌ನಿಂದ ಬೇರೆ ಬೇರೆ ಕ್ಯಾಬ್‌ನಲ್ಲಿ ಹೋದೆವು. ಅದಾದ ಮೇಲೆ ಇಬ್ಬರು ಮಾತನಾಡಿಲ್ಲ. ಗೃಹ ಪ್ರವೇಶಕ್ಕೂ ನನ್ನ ಕರೆದಿಲ್ಲ ಎಂಬುದು ನನಗೆ ತುಂಬಾ ಕೋಪ ಇತ್ತು. ಬಿಗ್ ಬಾಸ್ ಮನೆಗೆ ಮತ್ತೆ ನಮ್ರತಾ ಬಂದದ್ದು ಖುಷಿ ಆಯ್ತು" ಎಂದಿದ್ದಾರೆ.


Click it and Unblock the Notifications











