'ಜಬರ್ದಸ್ತ್ 'ಕಾಮಿಡಿ ಶೋಗೆ ವಿದಾಯ ಹೇಳಿದ 'ಸುಡಿಗಾಲಿ' ಸುಧೀರ್

ರಿಯಾಲಿಟಿ ಶೋಗಳು, ಕಾಮಿಡಿ ಶೋಗಳು, ಡ್ಯಾನ್ಸ್ ಶೋಗಳು ಮ್ಯೂಸಿಕ್ ಶೋಗಳು ಇದೆಲ್ಲವೂ ಇತ್ತೀಚೆಗೆ ಕಿರುತೆರೆಯ ಮೂಲಕ ಎಲೆಮರೆಕಾಯಿಗಳಂತೆ ಇದ್ದ ಪ್ರತಿಭೆಗಳು, ಅವಕಾಶವಂಚಿತ ಹಳ್ಳಿಗಾಡಿನ ಸಮುದಾಯಗಳನ್ನು ಕೂಡ ಸಮಾಜಮುಖಿ ಮಾಡಿ, ಅವರ ಪ್ರತಿಭೆಗೊಂದು ವೇದಿಕೆಯನ್ನು ಕೊಡುತ್ತಿವೆ. ಇದರಿಂದಾಗಿ ಇಂದು ಕನ್ನಡ ಸೇರಿದಂತೆ ಎಲ್ಲಾ ಭಾಷೆಯ ಕಿರುತೆರೆಯ ಮೂಲಕ ಅನೇಕ ಪ್ರತಿಭಾವಂತರ ಪ್ರತಿಭೆಗೆ ಅಗಾಧವಾದ ಮನ್ನಣೆ ಸಿಗುತ್ತಿದೆ. ಹೀಗಾಗಿಯೇ ಯಾವುದೇ ಗಾಡ್ ಫಾದರ್‌ಗಳ ಸಹಾಯ ಕೂಡ ಇಲ್ಲದೆ ಹಳ್ಳಿಗಾಡಿನಿಂದ ಬಂದವರು ಕೂಡ ಇಂದು ಸಿನಿಮಾ ಸೇರಿದಂತೆ ಇತರ ಕಡೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಕಿರುತೆರೆಯ ರಿಯಾಲಿಟಿ ಶೋಗಳು ಅನೇಕರ ಪಾಲಿಗೆ ಬದುಕು ಕಟ್ಟಿಕೊಳ್ಳಲು ಮಾರ್ಗವನ್ನು ನೀಡಿದೆ. ಇಂತಹ ರಿಯಾಲಿಟಿ ಶೋಗಳಲ್ಲಿ ಒಂದು ತೆಲುಗಿನ 'ಜಬರ್ದಸ್ತ್' ಕಾರ್ಯಕ್ರಮ.

ಕಾಮಿಡಿ ಶೋಗಳ ಮಾಸ್ಟರ್ ಪೀಸ್ 'ಜಬರ್ದಸ್ತ್'

ಕಾಮಿಡಿ ಶೋಗಳಲ್ಲೇ ಒಂದು ವಿಶಿಷ್ಟವಾದ ಸ್ಥಾನವನ್ನು ಈಟಿವಿ ತೆಲುಗಿನಲ್ಲಿ ಪ್ರಸಾರವಾಗುವ 'ಜಬರ್ದಸ್ತ್' ಹೊಂದಿದೆ. ಪ್ರತಿ ಗುರುವಾರ ಮತ್ತು ಶುಕ್ರವಾರ ರಾತ್ರಿ 9.30 ಕ್ಕೆ ಈಟಿವಿ ತೆಲುಗು ಚಾನೆಲ್ ನಲ್ಲಿ 'ಜಬರ್ದಸ್ತ್' ಪ್ರಸಾರವಾಗುತ್ತದೆ. ಗುರುವಾರದ ಕಾರ್ಯಕ್ರಮಕ್ಕೆ 'ಜಬರ್ದಸ್ತ್' ಶುಕ್ರವಾರದ ಕಾರ್ಯಕ್ರಮಕ್ಕೆ "ಎಕ್ಸ್ಟ್ರಾ ಜಬರ್ದಸ್ತ್'' ಅಂತ ಕರೆಯಲಾಗುತ್ತದೆ. ಇನ್ನು ಈ ಕಾರ್ಯಕ್ರಮದ ನಿರೂಪಕಿಯರ ಬಗ್ಗೆ ಹೇಳುವುದಾದರೆ ಅನುಸೂಯ ಮತ್ತು ರಶ್ಮಿಗೌತಮ್ ಈಗಾಗಲೇ ಇದರ ನಿರೂಪಣೆಯಿಂದಲೇ ಸಾಕಷ್ಟು ಜನಪ್ರಿಯತೆಯನ್ನು ಸಹ ಪಡೆದುಕೊಂಡಿದ್ದಾರೆ. ಹಿಂದೆ ರೋಜಾ ಮತ್ತು ನಾಗಬಾಬು ಈ ಕಾರ್ಯಕ್ರಮದ ತೀರ್ಪುಗಾರರಾಗಿ ಇರುತ್ತಿದ್ದರು. ಈಗ ಅವರ ಸ್ಥಾನಗಳಲ್ಲಿ, ಖ್ಯಾತ ಹಿನ್ನೆಲೆ ಗಾಯಕ ಮನು ಮತ್ತು ನಟಿ ಇಂದ್ರಜಾ ಬಂದಿದ್ದಾರೆ.

 ಕಾಮಿಡಿ ಶೋಗಳಲ್ಲಿ ಹೆಚ್ಚಿನ TRP ಪಡೆದಿರುವ ಜಬರ್ದಸ್ತ್

ಕಾಮಿಡಿ ಶೋಗಳಲ್ಲಿ ಹೆಚ್ಚಿನ TRP ಪಡೆದಿರುವ ಜಬರ್ದಸ್ತ್

2013ರಲ್ಲಿ ಶುರುವಾದ ಈ ಕಾಮಿಡಿ ಶೋ ಇಂದಿಗೂ ಕೂಡ ಯಶಸ್ವಿಯಾಗಿ ನಡೆಯುತ್ತಿದೆ. ಇದನ್ನು ಆಧರಿಸಿಯೇ ಕನ್ನಡದಲ್ಲಿ ಕಾಮಿಡಿ ಕಿಲಾಡಿಗಳು ಸಹ ಆರಂಭವಾಗಿದ್ದು. 'ಜಬರ್ದಸ್ತ್' TRP ಕೂಡ ಜಬರ್ದಸ್ತ್ ಆಗಿದೆ. ಒಂದು ಹಂತದಲ್ಲಿ 'ಜಬರ್ದಸ್ತ್' TRP 10.10 ಟಚ್ ಮಾಡಿತ್ತು. ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯ ಕಾಮಿಡಿ ಶೋ ಎಂಬ ಹೆಗ್ಗಳಿಕೆ ಕೂಡ ಜಬರ್ದಸ್ತ್ ಹೊಂದಿದೆ.

 ಮನೆ ಮಾತಾದ ಕಲಾವಿದರು

ಮನೆ ಮಾತಾದ ಕಲಾವಿದರು

ಗುರುವಾರದ ಕಾರ್ಯಕ್ರಮವನ್ನು ಅನುಸೂಯ ನಿರೂಪಣೆ ಮಾಡಿದರೆ, ಶುಕ್ರವಾರದ 'ಎಕ್ಸ್ಟ್ರಾ ಜಬರ್ದಸ್ತ್' ಗೌತಮಿ ರಶ್ಮಿಗೌತಮ್ ನಿರೂಪಿಸುತ್ತಾರೆ. ಇನ್ನು ಇದರಲ್ಲಿ 'ಚಮ್ಮಕ್ ಚಂದ್ರ', 'ಅಧೇರೆ ಅಭಿ' 'ಸುಡಿಗಾಲಿ ಸುಧೀರ್', 'ರಾಕೆಟ್ ರಾಘವ', 'ಹೈಪರ್ ಆದಿ' ಮುಂತಾದ ಜನಪ್ರಿಯ ಕಾಮಿಡಿ ತಂಡಗಳೇ ಇವೆ. ಇದರಲ್ಲಿ ವಿಶೇಷವಾಗಿ ಚಮ್ಮಕ್ ಚಂದ್ರ, ಹೈಪರ್ ಆದಿ, ಸುಡಿಗಾಲಿ ಸುದೀಪ್' ತಂಡಗಳು ಜನರನ್ನು ಅತಿಹೆಚ್ಚಾಗಿ ಸೆಳೆಯುತ್ತಿದ್ದವು. ಚಮ್ಮಕ್ ಚಂದ್ರ ಸ್ಕಿಟ್ ಗಳಂತೂ ಮಹಿಳೆಯರ ಅಚ್ಚುಮೆಚ್ಚಿನದು. ಆದರೆ ಎರಡು ವರ್ಷದ ಹಿಂದೆ 'ಚಮಕ್ ಚಂದ್ರ ಈ ಶೋ ಇಂದ ಹೊರಗೆ ನಡೆದಿದ್ದಾರೆ.

ಹಳ್ಳಿಗಾಡಿನ ಲಂಬಾಣಿ ಸಮುದಾಯದಿಂದ ಬಂದ ಚಮ್ಮಕ್ ಚಂದ್ರ ಒಂದು ಕಾಲದಲ್ಲಿ ಹೊಟ್ಟೆಗಿಲ್ಲದ ಸ್ಥಿತಿಯಲ್ಲಿ ಇದ್ದವರು. ಆದರೆ ಅದೇ ಚಮ್ಮಕ್ ಚಂದ್ರ ಜಬರ್ದಸ್ತ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನಾದನು. ಕಾಮಿಡಿ ಶೋ ಇಂದ ಹೊರಬಂದಿದ್ದರೂ ಚಲನಚಿತ್ರಗಳಲ್ಲಿ ಅತ್ಯಂತ ಸಕ್ರಿಯನಾಗಿದ್ದಾನೆ ಇಂದು ಚಮ್ಮಕ್ ಚಂದ್ರ.

ಹೈಪರ್ ಆದಿ ಪಂಚ್‌ಗಳಿಗಾಗಿ ಜನ ಇಂದಿಗೂ ಕೂಡ ಜಬರ್ದಸ್ತ್ ಶೋಗಾಗಿ ಎದುರು ನೋಡುತ್ತಾರೆ. 'ಸುಡಿಗಾಲಿ' ಸುಧೀರ್ ಅವನ ತಂಡದ ಆಟೋ ರಾಮ್ ಪ್ರಸಾದ್, ಗೆಟಪ್ ಸೀನು ಜೊತೆಗೆ ಇತರ ತಂಡದ ಸದಸ್ಯರುಗಳಾದ ಶಕಲಕ ಶಂಕರ್, ಕಿರಾಕ್ RP, ಇತರರು ಕೂಡ ಇಂದು ಆಂಧ್ರ ಮತ್ತು ತೆಲಂಗಾಣದಲ್ಲಿ ಮನೆ ಮಾತಾಗಿದ್ದಾರೆ. ಇವರಿಗೆ ಅಂತಲೇ ಒಂದು ಫ್ಯಾನ್ಸ್ ಬೇಸ್ ಕೂಡ ಏರ್ಪಟ್ಟಿದೆ.

ರಶ್ಮಿ-ಸುಧೀರ್ ಜೋಡಿ

ರಶ್ಮಿ-ಸುಧೀರ್ ಜೋಡಿ

'ಜಬರ್ದಸ್ತ್ 'ನ ಯಾವುದೋ ಒಂದು ಎಪಿಸೋಡಿನಲ್ಲಿ ಸುಧೀರ್, ರಶ್ಮಿ ಗೆ ಪ್ರಪೋಸ್ ಮಾಡುತ್ತಾನೆ. ಅದು ಸ್ಕಿಟ್ ನ ಒಂದು ಭಾಗವಾಗಿ ಮಾತ್ರ. ಆದರೆ ಆ ಪ್ರಪೋಸಲ್ ಸೀನ್ ಸಿಕ್ಕಾಪಟ್ಟೆ ವೈರಲ್ ಆಗಿಬಿಡುತ್ತದೆ. ಅವರಿಬ್ಬರನ್ನು ರಿಯಲ್ ಲೈಫ್ ಪ್ರೇಮಿಗಳಂತೆ ಮಾಡಿಬಿಡುತ್ತದೆ. ಇಲ್ಲಿಂದ ಮುಂದೆ ಜಬರ್ದಸ್ತ್ ನಲ್ಲಿ ಅನೇಕ ಸ್ಕಿಟ್ ಗಳು ಇವರಿಬ್ಬರ ಪ್ರೇಮದ ಕುರಿತಂತೆ ನಡೆಯುತ್ತದೆ. ಸೋಶಿಯಲ್ ಮೀಡಿಯಾಗಳಲ್ಲಂತೂ ಇವರದೇ ಅಬ್ಬರ ಕೂಡ. ಇದನ್ನೇ ಎನ್ ಕ್ಯಾಶ್ ಮಾಡಿಕೊಂಡ ಇತರ ಶೋಗಳು ಇವರಿಬ್ಬರನ್ನು ಆಂಕರ್‌ಗಳನ್ನಾಗಿ ಮಾಡುತ್ತದೆ. ಇವರಿಬ್ಬರ ಬಗ್ಗೆ ಅದೆಷ್ಟೋ ಗಾಸಿಪ್ ಗಳು ಆ ಸಮಯದಲ್ಲಿ ಸದ್ದು ಮಾಡುತ್ತದೆ. ಸ್ಟಾರ್ ನಟ ನಟಿಯರ ಜೀವನದಂತೆ ಇವರ ಜೀವನ ಕೂಡ ದೊಡ್ಡ ಹೈಪ್ರೊಫೈಲ್ ಸುದ್ದಿಯಾಗುತ್ತದೆ.

 ಸುಡಿಗಾಲಿ ಸುಧೀರ್ ಮದುವೆ!

ಸುಡಿಗಾಲಿ ಸುಧೀರ್ ಮದುವೆ!

ರಶ್ಮಿ-ಸುಧೀರ್ ಈಗಾಗಲೇ ಮದುವೆಯಾಗಿದ್ದಾರಂತೆ, ಇಲ್ಲ ಮದುವೆ ಆಗುತ್ತಾರಂತೆ ಇಂಥ ಗಾಸಿಪ್ಗಳು ಸೋಶಿಯಲ್ ಮೀಡಿಯಾದಲ್ಲಿ ಕಳೆದ ಕೆಲವು ವರ್ಷಗಳಿಂದ ಸುದ್ದಿ ಮಾಡುತ್ತಲೇ ಇದೆ. ಆದರೆ ಇದಕ್ಕೆಲ್ಲ ಈಗ ಕೊನೆಗೂ ಫುಲ್ ಸ್ಟಾಪ್ ಹಾಕುವ ಹಂತ ಬಂದಿದೆ. ಏಕೆಂದರೆ ಸುಧೀರ್ ಶೀಘ್ರದಲ್ಲೇ ಹಸೆಮಣೆ ಏರುತ್ತಿರುವುದಾಗಿ ಪ್ರಕಟಿಸಿದ್ದಾರೆ. ಆದರೆ ಅದು ರಶ್ಮಿ ಜೊತೆಗೆ ಅಲ್ಲ, ಬದಲಾಗಿ ಅವರ ತಂದೆ-ತಾಯಿ ನೋಡಿರುವ ಹುಡುಗಿ ಜೊತೆಗೆ ಅಂತ ಕೂಡ ಸ್ಪಷ್ಟಪಡಿಸಿದ್ದಾರೆ.

 ಸುಧೀರ್ ಜಬರ್ದಸ್ತ್ ಇಂದ ಹೊರಗೆ?

ಸುಧೀರ್ ಜಬರ್ದಸ್ತ್ ಇಂದ ಹೊರಗೆ?

ಇತ್ತ ತಮ್ಮ ವಿವಾಹದ ಬಗ್ಗೆ ಕ್ಲಾರಿಟಿ ಕೊಟ್ಟಿರುವ ಸುಧೀರ್, ಇದೇ ಸಮಯದಲ್ಲಿ, ಸದ್ಯದಲ್ಲೇ 'ಜಬರ್ದಸ್ತ್ ' ಇಂದ ಹೊರ ಬರಲಿದ್ದಾರೆ ಅಂತ ಹೇಳಲಾಗುತ್ತಿದೆ. ಇದ್ದಕ್ಕಿದ್ದಂತೆ ಇಂತಹ ನಿರ್ಧಾರ ಯಾಕೆ ಸುಧೀರ್ ತೆಗೆದುಕೊಂಡಿದ್ದಾರೆ ಅಂತ ಅರ್ಥವಾಗುತ್ತಿಲ್ಲ. ಸುಧೀರ್ ಅವರಿಗೆ ಶೋನಲ್ಲಿ ಮುಂದುವರಿಯಲು ಹೆಚ್ಚಿನ ಆಸಕ್ತಿ ಉಳಿದಿಲ್ಲವಂತೆ. ಪ್ರಸ್ತುತ ಮೂರು ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದು ಮತ್ತೆ ಕೆಲವು ಚಿತ್ರಗಳಲ್ಲಿ ಹಾಸ್ಯ ನಟನಾಗಿ ಕೂಡ ನಟಿಸುತ್ತಿದ್ದಾರೆ. ಒಂದು ಕಡೆ ಚಿತ್ರಗಳು ಇನ್ನೊಂದು ಕಡೆ ಕಾಮಿಡಿ ಶೋ. ಎರಡನ್ನೂ ಬ್ಯಾಲೆನ್ಸ್ ಮಾಡಲು ಆಗುತ್ತಿಲ್ಲವಂತೆ. ಹೀಗಾಗಿಯೇ ಅಗ್ರಿಮೆಂಟ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ. ಸುಧೀರ್ ಜೊತೆಗೆ ಆಟೋ ರಾಮ್ ಪ್ರಸಾದ್ ಮತ್ತು ಗೆಟಪ್ ಸೀನು ಕೂಡ ಶೋ ಇಂದ ಹೊರಬರುತ್ತಾರೆ ಅಂತ ಹೇಳಲಾಗಿದೆ. ಸುಧೀರ್ ಅವರ ಈ ನಿರ್ಧಾರಕ್ಕೆ ಮಲ್ಲೇಮಲ ಪ್ರೊಡಕ್ಷನ್ ಹೌಸ್ ಹೇಗೆ ಪ್ರತಿಕ್ರಿಯಿಸುತ್ತದೆ ಅಂತ ನೋಡಬೇಕಿದೆ. ಏನೇ ಆಗಲಿ ಒಬ್ಬ ಸಾಧಾರಣ ಮಧ್ಯಮ ವರ್ಗದ ಹುಡುಗ ಯಾವುದೇ ಗಾಡ್ ಫಾದರ್‌ಗಳ ಸಹಾಯವಿಲ್ಲದೆ ಹಂತಹಂತವಾಗಿ ಬೆಳೆದು ಈಗ ನಾಯಕನಟನಾಗಿ, ಅಷ್ಟು ಮಟ್ಟಿಗೆ ಜನಪ್ರಿಯತೆಯನ್ನು 'ಜಬರ್ದಸ್ತ್' ಮೂಲಕ ಪಡೆದಿರುವುದು ಸಾಧಾರಣವಾದ ಸಾಧನೆಯೇನಲ್ಲ.

 ಶೋ ಮಸ್ಟ್ ಗೋ ಆನ್

ಶೋ ಮಸ್ಟ್ ಗೋ ಆನ್

ಪ್ರಸ್ತುತ ಮೂರು ಚಿತ್ರಗಳಿಗೆ ನಾಯಕ ನಟನಾಗಿ ಸಹಿ ಹಾಕಿರುವ ಅವರು ಇನ್ನು ಮೇಲೆ ಸಂಪೂರ್ಣವಾಗಿ ತಮ್ಮ ಚಿತ್ರಗಳ ಮೇಲೆ ಗಮನ ಹರಿಸಲು ನಿರ್ಧರಿಸಿದ್ದಾರೆ ಅಂತ ಹೇಳಲಾಗುತ್ತಿದೆ. ಸಿನಿಮಾರಂಗದಲ್ಲಿ ಸಿಗುತ್ತಿರುವ ಹೆಚ್ಚಿನ ಅವಕಾಶಗಳಿಂದಾಗಿ ಜಬರ್ದಸ್ತ್ ಶೋನಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ ಅಂತ ಅವರ ಆಪ್ತ ವಲಯ ಹೇಳುತ್ತಿದೆ. ಒಂದೆಡೆ ವಿವಾಹದ ಶುಭಯೋಗ, ಇನ್ನೊಂದು ಕಡೆ ನಾಯಕನಟನಾಗುವ ಅದೃಷ್ಟ. ಇದೆಲ್ಲದಕ್ಕೂ ಕಾರಣವಾದ 'ಜಬರ್ದಸ್ತ್' ಇಂದ ಸುಧೀರ್ ದೂರವಾಗುತ್ತಿರುವ ವಿಚಾರ ಅವರ ಅಭಿಮಾನಿಗಳಲ್ಲಿ ಒಂದಷ್ಟು ನಿರಾಸೆಯನ್ನು ಮೂಡಿಸಿದೆ. 'ಜಬರ್ದಸ್ತ್' ನಲ್ಲಿ ಹಳೆಯ ಕಲಾವಿದರು ಒಬ್ಬಬ್ಬರಾಗಿ ತೆರೆಯಿಂದ ಹಿಂದೆ ಸರಿಯುತ್ತಿದ್ದ ಹಾಗೆ ಮತ್ತೆ ಹೊಸಬರು ಬರುತ್ತಿದ್ದಾರೆ ಹೀಗಾಗಿ 'ಶೋ ಮಸ್ಟ್ ಗೋ ಆನ್' ಅನ್ನೋದು ಜಬರ್ದಸ್ತ್ ಅಭಿಮಾನಿಗಳ ಮಾತು.

More from Filmibeat

English summary
Tollywood actor Sudigali Sudheer walks out of Jabardasth Comedy Show, Here is why.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X