Shravani-Subramanya; ಮದುವೆ ಎಪಿಸೋಡ್‌ಗಳಿಗೆ ಬಂತು ಭರ್ಜರಿ ಟಿಆರ್ಪಿ

By ಎಸ್ ಸುಮಂತ್

ಜೀ ಕನ್ನಡದಲ್ಲಿ ಎಲ್ಲಾ ಧಾರಾವಾಹಿಗಳು ವೀಕ್ಷಕರ ಮನಸ್ಸನ್ನು ಗೆದ್ದಿವೆ. ಹೀಗಾಗಿಯೇ TRP ಯಲ್ಲೂ ಒಳ್ಳೆ ರೇಟಿಂಗ್ ಬಂದಿದೆ. ಜನಮನ ಸೂರೆಗೊಳಿಸಿದ ಇತ್ತೀಚಿನ ಧಾರಾವಾಹಿಗಳಲ್ಲಿ 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿ ಕೂಡ ಒಂದು.

ಈ ಧಾರಾವಾಹಿಯಲ್ಲಿ ಸುಬ್ಬು ಇನೊಸೆಂಟ್ ಎಲ್ಲರಿಗೂ ಇಷ್ಟವಾಗುತ್ತದೆ. ಆ ಮುಗ್ಧತೆಯ ನಟನೆ ಮಾಡುವುದು ಸಾಮಾನ್ಯವಾಗಿ ಎಲ್ಲರಿಗೂ ಬರುವುದಿಲ್ಲ. ಕೆಲವರಿಗೆ ಮಾತ್ರ ಒಲಿದಿರುತ್ತದೆ. ಅದು ಸುಬ್ಬು ಪಾತ್ರಧಾರಿ ಅಮೋಘ್ ಅವರಿಗೆ ಒಲಿದಿದೆ.

Record TRP for Zee Kannada shravani subramanya serial marriage episodes

ಸುಬ್ಬು ಮುಗ್ಧತೆ, ಶ್ರಾವಣಿಯ ಡೆಡಿಕೇಷನ್ ಗೆ ಹಿರಿಯ ನಟ ಮೋಹನ್ ಅವರೇ ಮನಸೋತಿದ್ದಾರೆ. ಸುಮಾರು ಸಂದರ್ಶನಗಳಲ್ಲಿ ಈ ಮಾತನ್ನ ಹೇಳಿದ್ದಾರೆ. ಇದೀಗ ವೀಕ್ಷಕರು ಕೂಡ ಶ್ರಾವಣಿ - ಸುಬ್ರಮಣ್ಯರನ್ನ ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ಮದುವೆ ಸಮಯದಲ್ಲಿ ಮನಸಾರೆ ಹಾರೈಸಿದ್ದಾರೆ. TRPಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ.

ಸುಬ್ಬುನೇ ಲಾಕ್ ಮಾಡಿಸಿದ ಶ್ರಾವಣಿ

ಶ್ರಾವಣಿ ಮನಸ್ಸಾರೆ ಇಷ್ಟಪಟ್ಟಿದ್ದು ಸುಬ್ಬುನಾ. ಅಪ್ಪನ ಪ್ರೀತಿ ಇಲ್ಲ, ಅಮ್ಮನನ್ನ ನೋಡಿಯೇ ಇಲ್ಲದ ಹುಡುಗಿಗೆ, ಒಂಟಿತನ ಕಾಡದಂತೆ, ನಗು ತರಿಸುವ, ಕಂಫರ್ಟ್ ಝೋನ್ ಕ್ರಿಯೇಟ್ ಮಾಡಿಕೊಡುವ ಹುಡುಗ ಮೇಲೆ ಲವ್ವಾಗದೇ ಇರುತ್ತಾ..? ಶ್ರಾವಣಿಗೂ ಅದೇ ಆಗಿದ್ದು. ಸುಬ್ಬು ಒಬ್ಬ ಇದ್ದರೆ ಸಾಕು ಎಂಬಷ್ಟು ಪ್ರೀತಿ ಮಾಡುವುದಕ್ಕೆ ಶುರು ಮಾಡಿದಳು. ಆದರೆ ಮದುವೆ ಹುಡುಗ ಮದನ್ ಎಂದು ಗೊತ್ತಾದ ಮೇಲೆ ಕಡೆ ಗಳಿಗೆಗಲ್ಲಿ ಸ್ಟ್ರಾಂಗ್ ಡಿಸಿಷನ್ ತೆಗೆದುಕೊಂಡಳು. ಅಮಾಯಕ ಸುಬ್ಬುನನ್ನೇ ಲಾಕ್ ಮಾಡಿಬಿಟ್ಟಳು.

ಸುಬ್ಬುನ ಕ್ಷಮಿಸ್ತಿಲ್ಲ ವೀರೇಂದ್ರ

ಶ್ರಾವಣಿಗೆ ಅದೇನೆ ಸಮಸ್ಯೆ ಬಂದರು ಸದಾ ಜೊತೆಗೆ ನಿಲ್ತೀನಿ ಅಂತ ಸುಬ್ರಮಣ್ಯ ಮಾತು ಕೊಟ್ಟಿದ್ದನು. ಹೀಗಾಗಿಯೇ ಶ್ರಾವಣಿ ಮೇಡಂ ಸುಳ್ಳು ಹೇಳಿದ್ರು ಕೂಡ ತುಟಿಕ್, ಪಿಟಿಕ್ ಎನ್ನದೇ ನಿಂತು ಬಿಟ್ಟ. ಈಗ ಯಜಮಾನರನ್ನ ಭೇಟಿಯಾಗಿ, ಮತ್ತೆ ಕೆಲಸಕ್ಕೆ ಹೋಗಬೇಕೆಂದು ಪ್ರಯತ್ನ ಮಾಡ್ತಾ ಇದಾನೆ. ಆದರೆ ವೀರೂ ಮಾತ್ರ ಕ್ಷಮಿಸುತ್ತಿಲ್ಲ. ಸತ್ಯ ಗೊತ್ತಿಲ್ಲದೆ ನಂಬಿಕೆ ದ್ರೋಹಿ ಎಂದೇ ಒತ್ತಿ ಒತ್ತಿ ಹೇಳುತ್ತಿದ್ದಾನೆ.

ಟಿಆರ್ಪಿಯಲ್ಲಿ ಫಸ್ಟ್ ಪ್ಲೇಸ್

ಯಾವ ಧಾರಾವಾಹಿ ಜನರನ್ನ ಗೆದ್ದಿದೆ ಎಂಬುದನ್ನ ತಿಳಿದುಕೊಳ್ಳುವುದಕ್ಕೆ TRP ಅನುಕೂಲ ಮಾಡಿಕೊಡುತ್ತದೆ. ಟಿಆರ್ಪಿ ಜಾಸ್ತೊ ಬಂದರೆ ಕಥೆಗಾರರಿಗೂ ಅರ್ಥವಾಗುತ್ತದೆ. ಜನ ನಿರೀಕ್ಷೆ ಮಾಡ್ತಾ ಇರೋದೇನು..? ಕಥೆಯನ್ನು ಯಾವ ರೀತಿ ತೆಗೆದುಕೊಂಡು ಹೋಗಬೇಕು ಎಂಬ ಐಡಿಯಾ ಸಿಗುತ್ತದೆ. ಇದೀಗ ಶ್ರಾವಣಿ ಸುಬ್ರಮಣ್ಯದಲ್ಲಿ ಮದುವೆಯ ಎಪಿಸೋಡ್ ಗೆ ಒಳ್ಳೆಯ TRP ಬಂದಿದೆ. ಅದು ಮೊದಲ ಸ್ಥಾನದಲ್ಲಿ ಕೂರಿಸಿದೆ. 9.5 TVR ಬಂದಿದ್ದು, ಸೀರಿಯಲ್ ಟೀಂ ಸಿಕ್ಕಾಪಟ್ಟೆ ಖುಷಿಯಾಗಿದೆ.

ಈ ದೃಶ್ಯಕ್ಕಾಗಿ ಕಾಯ್ತಿದ್ರು ವೀಕ್ಷಕರು

'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿ ಆರಂಭದಿಂದಾನೂ ಅದ್ಭುತ ರೆಸ್ಪಾನ್ಸ್ ಅನ್ನೇ ಪಡೆದುಕೊಳ್ಳುತ್ತಿದೆ. ಅದರಲ್ಲೂ ಶ್ರಾವಣಿ ಸುಬ್ರಮಣ್ಯ ಇಬ್ಬರ ಎಪಿಸೋಡ್ ಅನ್ನ ಜನ ತುಂಬಾ ಒಷ್ಟ ಪಟ್ಟು ನೋಡುತ್ತಿದ್ದರು. ಅದರಲ್ಲೂ ಶ್ರಾವಣಿ ಹಾಗೂ ಮದನ್ ಮದುವೆ ಗೊತ್ತು ಮಾಡಿದ ಮೇಲಂತು ವೀಕ್ಷಕರು ಮನಸ್ಸಿಗೆ ಬೇಸರ ಮಾಡಿಕೊಂಡಿದ್ದರು. ಶ್ರಾವಣಿ- ಸುಬ್ರಮಣ್ಯ ಒಂದಾಗುತ್ತಾರೆ ಅನ್ನೋದನ್ನು ಊಹಿಸಲಾಗಿತ್ತು. ಆದರೂ ಶ್ರಾವಣಿ ಯಾವ ಸ್ಟ್ಯಾಂಡ್ ತೆಗೆದುಕೊಳ್ಳುತ್ತಾಳೆ, ಟ್ವಿಸ್ಟ್ ಹೇಗೆ ಎಂಬೆಲ್ಲಾ ಕುತೂಹಲವಿತ್ತು. ಹೀಗಾಗಿಯೇ ಮದುವೆ ಎಪಿಸೋಡ್ ಅನ್ನು ಜನ ಬಿಡದೆ ನೋಡಿದ್ದಾರೆ. ಅದಕ್ಕೆ ತಕ್ಕ ಹಾಗೆಯೇ ಟಿಆರ್ಪಿ ಕೂಡ ನಂಬರ್ ಒನ್ ಸ್ಥಾನಕ್ಕೆ ಬಂದಿದೆ.

More from Filmibeat

English summary
Here is the details about Shravani subramanya marriage episode TRP rating;
Read more about: tv serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X