ಸೀರಿಯಲ್‌ನಲ್ಲಿ ಅಕ್ಕ-ತಮ್ಮ, ನಿಜ ಜೀವನದಲ್ಲಿ ಲವ್‌ ಬರ್ಡ್ಸ್‌ ; ಶೀಘ್ರದಲ್ಲೇ ಮದುವೆ

ಪ್ರೀತಿ ಅಂದರೆ ಹಾಗೇ. ಅದಕ್ಕೆ ಕಣ್ಣಿಲ್ಲದಿದ್ದರೂ ಕಣ್ಣಿನ ತುಂಬಾ ಆಸೆ ಹುಟ್ಟಿಸುವ ಸಾಮರ್ಥ್ಯ ಇದೆ. ಪ್ರೀತಿ ಎನ್ನುವುದು ಕೇವಲ ಎರಡು ದೇಹಕ್ಕೆ ಸಂಬಂಧಿಸಿದ್ದಲ್ಲ. ಎರಡು ಮನಸ್ಸುಗಳು ಮುಕ್ತವಾಗಿ ಒಂದನ್ನೊಂದು ಅರಿತುಕೊಳ್ಳುವುದು. ಇನ್ನೂ ಈ ಪ್ರೀತಿ ಯಾರ ಮೇಲಾದರೂ ಯಾವಾಗ ಬೇಕಾದರೂ ಆಗಬಹುದು. ಅದರಲ್ಲಿಯೂ ಬೆಳ್ಳಿ ತೆರೆ ಇರಲಿ.. ಕಿರುತೆರೆ ಇರಲಿ.. ಚಿತ್ರದಲ್ಲಿ ಅಥವಾ ಧಾರಾವಾಹಿಯಲ್ಲಿ..

ಅಣ್ಣ-ತಂಗಿ ಪಾತ್ರವನ್ನು ಮಾಡಿದವರು ನಿಜ ಜೀವನದಲ್ಲಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ಅತ್ತಿಗೆ ಮತ್ತು ಮೈದುನನ ಪಾತ್ರವನ್ನು ಮಾಡಿದವರು ಕೂಡ ಜೊತೆಯಲ್ಲಿ ಅಭಿನಯಿಸುತ್ತಾ.. ಅಭಿನಯಿಸುತ್ತಾ.. ಪರಸ್ಪರ ಮನ ಸೋತಿದ್ದಾರೆ. ಮದುವೆಯ ಬಂಧನಕ್ಕೊಳಗಾಗಿದ್ದಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ಇಲ್ಲಿವೆ. ಸದ್ಯ ಈ ಸಾಲಿಗೆ ಶಗುನ್ ಶರ್ಮಾ ಮತ್ತು ಅಮಾನ್ ಗಾಂಧಿ ಕೂಡ ಸೇರಿಕೊಳ್ಳಲು ಅಣಿಯಾಗಿದ್ದಾರೆ.

reel-siblings-real-love-kyunki-2s-shagun-sharma-confirms-dating-on-screen-brother-aman-gandhi

ಹೌದು, ಶಗುನ್ ಶರ್ಮಾ ಮತ್ತು ಅಮಾನ್ ಗಾಂಧಿ. ರೀಲ್‌ ಲೈಫ್‌ನ ಅಣ್ಣ-ತಂಗಿ. ''ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ - 2'' ಧಾರಾವಾಹಿಯಲ್ಲಿ ಅಣ್ಣ -ತಂಗಿ ಪಾತ್ರವನ್ನು ನಿರ್ವಹಿಸುತ್ತಿರುವ ಇಬ್ಬರು ಸದ್ಯ ಪ್ರೀತಿಯ ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಮದುವೆಯಾಗುವ ನಿರ್ಧಾರವನ್ನು ಕೂಡ ಮಾಡಿದ್ದಾರೆ. ಖುದ್ದು ಶಗುನ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ತಮ್ಮ ಈ ಪ್ರೇಮ ಸಂಬಂಧದ ಬಗ್ಗೆ ''ಹೌಟರ್ ಫ್ಲೈ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶಗುನ್ ಶರ್ಮಾ, ಬಹುತೇಕರು ನಮ್ಮ ನಡುವೆ ಪ್ರೇಮ ಅರಳಿದ್ದು ''ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ - 2'' ಸಮಯದಲ್ಲಿ ಎಂದುಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಇದು ಸುಳ್ಳು ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಶಗುನ್ ''ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ - 2'' ಧಾರಾವಾಹಿಯಲ್ಲಿ ನಾವು ಅಭಿನಯಿಸುವುದಕ್ಕಿಂತ ಮೊದಲಿಂದ ನಮ್ಮ ಇಬ್ಬರಿಗೆ ಪರಿಚಯ ಇತ್ತು. ನಾವು ಸ್ನೇಹಿತರಾಗಿದ್ದೇವು , ಆಗಲೇ ಸ್ನೇಹಕ್ಕೂ ಮೀರಿದ ಸಂಬಂಧ ನಮ್ಮ ನಡುವೆ ಇತ್ತು ಎಂದು ಹೇಳಿದ್ದಾರೆ. ಇನ್ನೂ ''ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ - 2'' ಧಾರಾವಾಹಿಗೆ ನನಗಿಂತ ಮೊದಲೇ ಅಮಾನ್ ಆಯ್ಕೆ ಆಗಿದ್ದರು ಎಂದು ಹೇಳಿರುವ ಶಗುನ್, ನಾನು ಆಡಿಷನ್ ನೀಡಿ ಆಯ್ಕೆಯಾದ ನಂತರ ನಮ್ಮ ಇಬ್ಬರದ್ದು ಅಣ್ಣ -ತಂಗಿಯ ಪಾತ್ರ ಎನ್ನುವುದು ನನಗೆ ಗೊತ್ತಾಯ್ತು ಎಂದು ಹೇಳಿದ್ದಾರೆ.

reel-siblings-real-love-kyunki-2s-shagun-sharma-confirms-dating-on-screen-brother-aman-gandhi

ಅಣ್ಣ-ತಂಗಿಯ ಪಾತ್ರ ಅಂದಾಗ ಇಬ್ಬರಲ್ಲಿಯೂ ಅಳುಕಿತ್ತು ಎಂದು ಹೇಳಿರುವ ಶಗುನ್ ಆ ನಂತರ ಇಬ್ಬರು ಕುಳಿತು ಚರ್ಚೆ ಮಾಡಿ ಮುಂದುವರೆಯುವ ತೀರ್ಮಾನ ಮಾಡಿದೆವು ಎಂದು ಹೇಳಿದ್ದಾರೆ. ಇನ್ನೂ ನಾವು ಇಬ್ಬರು ಪ್ರೀತಿಸುತ್ತಿರುವ ವಿಚಾರವನ್ನು ಆರಂಭದಲ್ಲಿ ನಾವು ನಮ್ಮ ''ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ 2'' ತಂಡಕ್ಕೆ ಹೇಳಿರಲಿಲ್ಲ. ಅವರಿಗೆ ಅನುಮಾನ ಬಾರದಂತೆ ನಡೆದುಕೊಂಡಿದ್ದೇವು ಎಂದು ಹೇಳಿರುವ ಶಗುನ್ ಎರಡು ಮೂರು ತಿಂಗಳ ನಂತರ ಎಲ್ಲರ ಜೊತೆ ಆತ್ಮೀಯತೆ ಬೆಳೆದ ನಂತರ ನಾವು ನಮ್ಮ ಪ್ರೀತಿಯ ವಿಚಾರವನ್ನು ಅವರೆಲ್ಲರಿಗೆ ಹೇಳಿದೆವು ಎಂದು ಹೇಳಿದ್ದಾರೆ.

ಅಂದ್ಹಾಗೇ ಶಗುನ್ ಮತ್ತು ಅಮಾನ್ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಅನುಮಾನ ಇವರ ಅಭಿಮಾನಿಗಳಿಗೆ ಈ ವರ್ಷದ ಪ್ರೇಮಿಗಳ ದಿನದಂದು ಬಂದಿತ್ತು. ಇಬ್ಬರು ಪ್ರೇಮಿಗಳ ದಿನದಂದು ರೊಮ್ಯಾಂಟಿಕ್ ಆಗಿ ಇಬ್ಬರು ಕಲರ್ ಫುಲ್ ಫೋಟೊಶೂಟ್ ಮಾಡಿಸಿಕೊಂಡಿದ್ದರು. ಕ್ಷಣಾರ್ಧದಲ್ಲಿ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈಗ ತಮ್ಮ ಪ್ರೀತಿಯ ವಿಚಾರವನ್ನು ಶಗುನ್ ಶರ್ಮಾ ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಶೀಘ್ರದಲ್ಲಿ ಮದುವೆಯಾಗುವುದಾಗಿ ಹೇಳಿದ್ದಾರೆ.

More from Filmibeat

English summary
Kyunki 2 stars Shagun Sharma and Aman Gandhi are dating! The actress opens up about their relationship and the challenge of playing siblings on the show.
Read more about: ಟಿವಿ love actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X