»   » 'ಟಿವಿ9'ನಲ್ಲಿದ್ದ ರೆಹಮಾನ್ ಈಗ ಹೊಸ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.! ಏನದು.?

'ಟಿವಿ9'ನಲ್ಲಿದ್ದ ರೆಹಮಾನ್ ಈಗ ಹೊಸ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.! ಏನದು.?

Posted By:
Subscribe to Filmibeat Kannada

ಕನ್ನಡದ ಖ್ಯಾತ ಸುದ್ದಿ ವಾಹಿನಿ ಟಿವಿ9ನಲ್ಲಿ ನಿರೂಪಕರಾಗಿದ್ದ ರೆಹಮಾನ್ ಈಗೆಲ್ಲಿದ್ದಾರೆ.? ಏನ್ ಮಾಡ್ತಿದ್ದಾರೆ.? ಎಲ್ಲೂ ಕಾಣ್ತಲೇ ಇಲ್ವಲ್ಲಾ.? ಎಂದು ಯೋಚನೆ ಮಾಡುತ್ತಿರುವವರಿಗೆ ಇಲ್ಲೊಂದು ಬ್ರೇಕಿಂಗ್ ನ್ಯೂಸ್ ಇದೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಪತ್ತೆದಾರಿ ಪ್ರತಿಭಾ' ಧಾರಾವಾಹಿಯಲ್ಲಿ ರೆಹಮಾನ್ ಅಭಿನಯಿಸಿದ್ದಾರೆ. ರೆಹಮಾನ್ ಜೊತೆಗೆ ನಟಿ ರೂಪಶ್ರೀ ಕೂಡ ಕಾಣಿಸಿಕೊಂಡಿದ್ದಾರೆ.

Rehman of Bigg Boss fame in Zee Kannada's 'Pattedhari Prathiba'

ರೆಹಮಾನ್, ರೂಪಶ್ರೀ ಸುತ್ತ ಹೆಣೆಯಲಾಗಿರುವ 'ಪತ್ತೆದಾರಿ ಪ್ರತಿಭಾ' ಧಾರಾವಾಹಿಯ ತನಿಖಾ ಸಂಚಿಕೆಗಳು ಇಂದಿನಿಂದ ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ.

ಟಿವಿ9 ವಾಹಿನಿಗೆ ಗುಡ್ ಬೈ ಹೇಳಿದ್ಮೇಲೆ 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟಿದ್ದ ರೆಹಮಾನ್ ರಿಯಾಲಿಟಿ ಶೋನಲ್ಲೂ ಕಮಾಲ್ ಮಾಡಿದ್ದರು. ಅದಾದ್ಮೇಲೆ, ಕಲರ್ಸ್ ಸೂಪರ್ ವಾಹಿನಿಯ ರಿಯಾಲಿಟಿ ಶೋಗೆ ನಿರೂಪಣೆ ಮಾಡುತ್ತಿದ್ದ ರೆಹಮಾನ್ ಇದೀಗ ಧಾರಾವಾಹಿಗಾಗಿ ಬಣ್ಣ ಹಚ್ಚಿದ್ದಾರೆ.

'ಪತ್ತೆದಾರಿ ಪ್ರತಿಭಾ' ಧಾರಾವಾಹಿಯಲ್ಲಿ ರೆಹಮಾನ್ ಕಾಣಿಸಿಕೊಂಡಿರುವ ಸಂಚಿಕೆಯ ಪ್ರೋಮೋ ಇಲ್ಲಿದೆ, ನೋಡಿ...

English summary
Rehman of TV9 and Bigg Boss fame to act in Zee Kannada's popular serial 'Pattedhari Prathiba'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada