»   » ಟಿವಿ9 ವಾಹಿನಿಯ ರೆಹಮಾನ್ ಬಗ್ಗೆ ಎಕ್ಸ್ ಕ್ಲೂಸಿವ್ ನ್ಯೂಸ್.!

ಟಿವಿ9 ವಾಹಿನಿಯ ರೆಹಮಾನ್ ಬಗ್ಗೆ ಎಕ್ಸ್ ಕ್ಲೂಸಿವ್ ನ್ಯೂಸ್.!

Posted By:
Subscribe to Filmibeat Kannada

ಕನ್ನಡದ ಜನಪ್ರಿಯ ಸುದ್ದಿ ವಾಹಿನಿ ಟಿವಿ9 ನಲ್ಲಿ 'ಸ್ಟಾರ್ ಆಂಕರ್' ಆಗಿ ಗುರುತಿಸಿಕೊಂಡಿದ್ದ ರೆಹಮಾನ್ 'ಬಿಗ್ ಬಾಸ್ ಕನ್ನಡ 3' ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದು ನಿಮಗೆಲ್ಲಾ ಗೊತ್ತಿರುವ ಸಂಗತಿ.

ಗ್ರ್ಯಾಂಡ್ ಫಿನಾಲೆವರೆಗೂ 'ಬಿಗ್' ಮನೆಯಲ್ಲೇ ಅದ್ಭುತವಾಗಿ ಆಟವಾಡಿದ್ದ ರೆಹಮಾನ್ ಈಗ ಎಲ್ಲಿದ್ದಾರೆ.? ಏನು ಮಾಡ್ತಿದ್ದಾರೆ ಅಂತ ನಿಮಗೆ ಗೊತ್ತಾ.? [ರೆಹಮಾನ್ ಗೆ ಸುದೀಪ್ ಕೊಟ್ಟ ಶಾಕ್ ಮತ್ತು ಸರ್ ಪ್ರೈಸ್!]

ಯಾವುದೇ ಸುದ್ದಿ ವಾಹಿನಿಗಳಲ್ಲಿ ನೋಡಿದ್ರೂ, ರೆಹಮಾನ್ ಕಾಣುತ್ತಿಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಒಂದೆರಡು ಶೋಗಳಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ರೆಹಮಾನ್ ಪತ್ತೆನೇ ಇಲ್ಲ. ಹೀಗಿರಬೇಕಾದರೆ, ನಿಮ್ಮ 'ಫಿಲ್ಮಿಬೀಟ್ ಕನ್ನಡ' ನಿಮಗಾಗಿ ಒಂದು ಖಾಸ್ ಖಬರ್ ಹೊತ್ತು ತಂದಿದೆ. ಮುಂದೆ ಓದಿ....

ಟಿವಿ9 ಗೆ ರಾಜೀನಾಮೆ ಕೊಟ್ಟಿದ್ದರು.!

'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಕಮಿಟ್ ಆದ ಕೂಡಲೆ ಟಿವಿ9 ಸುದ್ದಿ ವಾಹಿನಿಗೆ ರೆಹಮಾನ್ ರಾಜೀನಾಮೆ ನೀಡಿದ್ದರು. ಹೀಗಾಗಿ ಮರಳಿ ಅದೇ ಸುದ್ದಿ ವಾಹಿನಿ ಕಡೆ ರೆಹಮಾನ್ ತಲೆ ಹಾಕಿಲ್ಲ.

ಈಗೆಲ್ಲಿದ್ದಾರೆ ರೆಹಮಾನ್.?

ಕಲರ್ಸ್ ಕನ್ನಡ ಕಡೆಯಿಂದ ಶುರುವಾಗುತ್ತಿರುವ ಎರಡನೇ ಚಾನೆಲ್ 'ಕಲರ್ಸ್ ಸೂಪರ್' ವಾಹಿನಿ ಸೇರಿದ್ದಾರೆ ರೆಹಮಾನ್.

ರಿಯಾಲಿಟಿ ಶೋ ಹೋಸ್ಟ್.!

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಒಂದನ್ನ ನಿರೂಪಣೆ (ಹೋಸ್ಟ್) ಮಾಡಲು ರೆಹಮಾನ್ ಆಯ್ಕೆ ಆಗಿದ್ದಾರೆ.

ಯಾವುದು ಆ ರಿಯಾಲಿಟಿ ಶೋ.?

'ಚಾಂಪಿಯನ್' ಎಂಬ ಆಕ್ಷನ್ ರಿಯಾಲಿಟಿ ಶೋ ನ ರೆಹಮಾನ್ ನಡೆಸಿಕೊಡಲಿದ್ದಾರೆ.

'ಚಾಂಪಿಯನ್' ಕುರಿತು....

ರಾಜ್ಯದ ವಿವಿದೆಡೆಯಿಂದ ಆಯ್ಕೆ ಆಗಿರುವ ಹುಡುಗಿಯರು, ದೇಶದ ವಿವಿಧ ಜಾಗಗಳಲ್ಲಿ 'ತಾವು ಹುಟ್ಟು ಚಾಂಪಿಯನ್' ಅಂತ ಸಾಬೀತು ಪಡಿಸಬೇಕಾಗಿರುವ ಅಪ್ಪಟ ಸಾಹಸಮಯ ರಿಯಾಲಿಟಿ ಶೋ ಈ ಚಾಂಪಿಯನ್.!

ಭಾರತದ ಮೂಲೆ ಮೂಲೆಯಲ್ಲೂ ಚಿತ್ರೀಕರಣವಾಗಲಿದೆ.!

ಸಮುದ್ರ ದಂಡೆಯಲ್ಲಿ ಆರಂಭವಾಗುವ 'ಚಾಂಪಿಯನ್' ರಿಯಾಲಿಟಿ ಶೋ ಪಯಣ ಕಾಡು ಪ್ರದೇಶಗಳು, ಕೋಟೆ ಮತ್ತು ಅರೆಮನೆಗಳನ್ನು ದಾಟಿ ಮರುಭೂಮಿಯಲ್ಲೂ ಚಿತ್ರೀಕರಣವಾಗಲಿದೆ.

'ಕಲರ್ಸ್ ಸೂಪರ್' ಶುರು ಯಾವಾಗ.?

ಮುಂದಿನ ವಾರ (ಜುಲೈ 24) ಕಲರ್ಸ್ ಸೂಪರ್ ವಾಹಿನಿ ಲೋಕಾರ್ಪಣೆಯಾಗಲಿದೆ.

English summary
Rehman of 'Bigg Boss' fame is all set to host Action Reality Show called 'Champion' in Colors Super Channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada