'ಬಿಗ್ ಬಾಸ್'ನಲ್ಲಿ ಪ್ರೇಮ, 'ಮಜಾ ಟಾಕೀಸ್'ನಲ್ಲಿ ಮದುವೆ!

By Bharath Kumar

'ಬಿಗ್ ಬಾಸ್ ಕನ್ನಡ 4' ಮೂಲಕ ಬಾರಿ ಸುದ್ದಿಯಾಗಿರುವ ಭುವನ್ ಮತ್ತು ಸಂಜನಾ ಈಗ ಎಲ್ಲೇ ನೋಡಿದರೂ, ಜೊತೆ ಜೊತೆಯಲ್ಲೇ ಇರುತ್ತಾರೆ. ಇದರಿಂದ 'ಬಿಗ್ ಬಾಸ್' ಪ್ರಿಯರಿಗೆ ಕುತೂಹಲ ಹೆಚ್ಚಾಗಿದೆ.

'ಬಿಗ್ ಬಾಸ್' ಮನೆಯ ಜೋಡಿ ಹಕ್ಕಿಗಳು ಎಂದೇ ಗುರುತಿಸಿಕೊಂಡಿರುವ ಇವರಿಬ್ಬರು, ಯಾವ ಕಾರ್ಯಕ್ರಮದಲ್ಲಿ ನೋಡಿದರು ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ.[ಕಿಚ್ಚನ ಎದುರು ಸಂಜನಾ-ಭುವನ್ ಲವ್ ಸ್ಟೋರಿ !]

ಬಿಗ್ ಬಾಸ್ ಮನೆಯಲ್ಲಿದ್ದಷ್ಟು ದಿನ ಜೋಡಿಯಾಗಿದ್ದ ಭುವನ್-ಸಂಜನಾ, ಫಿನಾಲೆಯಲ್ಲಿ ಒಟ್ಟಾಗಿ ಫರ್ಫಾಮೆನ್ಸ್ ನೀಡಿದ್ದರು. ಅಮೇಲೆ ಒಟ್ಟಾಗಿ 'ಐಸ್ ಪಾರ್ಲರ್'ನಲ್ಲಿ ಪ್ರತ್ಯಕ್ಷವಾಗಿದ್ದರು. ಇದೀಗ 'ಮಜಾ ಟಾಕೀಸ್'ನಲ್ಲಿ ಮದುವೆಯಾಗಿದ್ದಾರಂತೆ. ಮುಂದೆ ಓದಿ...

'ಮಜಾ ಟಾಕೀಸ್'ನಲ್ಲಿ ಸಂಜನಾ-ಭುವನ್!

'ಮಜಾ ಟಾಕೀಸ್'ನಲ್ಲಿ ಸಂಜನಾ-ಭುವನ್!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಭುವನ್ ಮತ್ತು ಸಂಜನಾ ಒಟ್ಟಾಗಿ ಪ್ರತ್ಯಕ್ಷವಾಗಿದ್ದಾರೆ. 'ಮಜಾ ಟಾಕೀಸ್'ಗೆ ಅತಿಥಿಯಾಗಿದ್ದ ಸಂಜನಾ ಮತ್ತು ಭುವನ್ ಅವರಿಗೆ, ನಿರೂಪಕ ಸೃಜನ್ ಲೋಕೇಶ್ ಮದುವೆ ಕೂಡ ಮಾಡಿಸಿದ್ದಾರೆ.['ಮಜಾ ಟಾಕೀಸ್'ನಲ್ಲಿ 'ಭುವನ್-ಸಂಜನಾ ಮದುವೆ': ಫಸ್ಟ್ ಲುಕ್ ರಿಲೀಸ್!]

'ಬಿಗ್ ಬಾಸ್' ಜೋಡಿ ಹಕ್ಕಿಗಳು

'ಬಿಗ್ ಬಾಸ್' ಜೋಡಿ ಹಕ್ಕಿಗಳು

'ಬಿಗ್ ಬಾಸ್' ಮನೆಯ ಜೋಡಿ ಹಕ್ಕಿಗಳೇ ಎಂದು ಗುರುತಿಸಿಕೊಂಡಿರುವ ಭುವನ್ ಮತ್ತು ಸಂಜನಾ ಅವರಿಗೆ, ಈಗಲೂ ಅದೇ ಇಮೇಜ್ ಮುಂದುವರೆಯುತ್ತಿದೆ.

'ಐಸ್ ಪಾರ್ಲರ್'ನಲ್ಲಿ ಭೇಟಿ

'ಐಸ್ ಪಾರ್ಲರ್'ನಲ್ಲಿ ಭೇಟಿ

'ಬಿಗ್ ಬಾಸ್' ಮನೆಯಿಂದ ಹೊರಬಂದ ಮೇಲೆ ಸಂಜನಾ ಮತ್ತು ಭುವನ್ 'ಐಸ್ ಪಾರ್ಲರ್'ವೊಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದ್ದರು.['ಬಿಗ್ ಬಾಸ್'ನಿಂದ ಹೊರಬಂದ ಮೇಲೆ ಸಂಜನಾ-ಭುವನ್ ಮೊದಲ ಭೇಟಿ!]

'ಬಿಗ್ ಬಾಸ್' ಫಿನಾಲೆಯಲ್ಲಿ ಡ್ಯುಯೇಟ್

'ಬಿಗ್ ಬಾಸ್' ಫಿನಾಲೆಯಲ್ಲಿ ಡ್ಯುಯೇಟ್

ಇನ್ನೂ 'ಬಿಗ್ ಬಾಸ್ ಕನ್ನಡ 4' ಗ್ರ್ಯಾಂಡ್ ಫಿನಾಲೆಯಲ್ಲೂ ಪ್ರತಿಯೊಬ್ಬರು ಒಬ್ಬೊಬ್ಬರೇ ಫರ್ಫಾಮೆನ್ಸ್ ನೀಡಿದರು. ಆದ್ರೆ, ಸಂಜನಾ ಮತ್ತು ಭುವನ್ ಇಬ್ಬರು ಒಟ್ಟಾಗಿ ಫರ್ಫಾಮೆನ್ಸ್ ನೀಡಿದ್ದು, ಮತ್ತಷ್ಟು ಕುತೂಹಲ ಹೆಚ್ಚಿಸಿತು.

ಸ್ನೇಹನಾ-ಪ್ರೀತಿನಾ?

ಸ್ನೇಹನಾ-ಪ್ರೀತಿನಾ?

ಹೀಗೆ, 'ಬಿಗ್ ಬಾಸ್' ಶುರುವಾದಾಗನಿಂದಲೂ ಇವರಿಬ್ಬರು ಆತ್ಮೀಯವಾಗಿದ್ದು, ಇದು ಎಲ್ಲರಿಗೂ ಒಂದು ಪ್ರಶ್ನೆಯನ್ನ ಹುಟ್ಟುಹಾಕಿದೆ. ಅದೇನಪ್ಪಾ ಅಂದ್ರೆ, ಇವರಿಬ್ಬರ ಮಧ್ಯೆ ಇರುವ ಸಂಬಂಧ ಸ್ನೇಹನಾ ಅಥವಾ ಪ್ರೀತಿನಾ ಎಂಬುದು?['ಐಟಂ ಹುಡುಗಿ'ಯಾದ 'ಬಿಗ್ ಬಾಸ್' ಸಂಜನಾ]

'ಮಜಾ ಟಾಕೀಸ್' ಈ ವಾರ ಪ್ರಸಾರ

'ಮಜಾ ಟಾಕೀಸ್' ಈ ವಾರ ಪ್ರಸಾರ

ಅಂದ್ಹಾಗೆ, ಈ ವಾರದ 'ಮಜಾ ಟಾಕೀಸ್'ನಲ್ಲಿ ಬಿಗ್ ಬಾಸ್ ಸ್ವರ್ಧಿಗಳು ಭಾಗಿಯಾಗಿದ್ದು, ಬಿಗ್ ಬಾಸ್ ವಿನ್ನರ್ ಪ್ರಥಮ್, ರನ್ನರ್ ಕೀರ್ತಿ, ಸೇರಿದಂತೆ ರೇಖಾ, ಕಾವ್ಯ, ನಿರ್ದೇಶಕ ಓಂ ಪ್ರಕಾಶ್ ರಾವ್, ಸಂಜನಾ, ಭುವನ್ ಮತ್ತು ಇತರರು ಪಾಲ್ಗೊಂಡಿದ್ದಾರೆ. ಈಗಾಗಲೇ ರೆಕಾರ್ಡಿಂಗ್ ಮುಗಿಸಿರುವ ಈ ಎಪಿಸೋಡ್ ಈ ವಾರಂತ್ಯಕ್ಕೆ ಪ್ರಸಾರವಾಲಿದೆ.

More from Filmibeat

English summary
After Finishing Bigg Boss Kannada 4, Actor Bhuvan Ponnanna And Actress Sanjana Participate to Maja Talkies together.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X