ಕೋಟ್ಯಧಿಪತಿ ಸೆಟ್ ನಲ್ಲಿ ಕಣ್ಣೀರು ಹಾಕಿದ ಯುವತಿ ರೇಣುಕಾ

ಕನ್ನಡದ ಕೋಟ್ಯಧಿಪತಿ ಆಟ ಆಡಲು ಅವಕಾಶ ಸಿಗೋದು ಕಷ್ಟ. ಅವಕಾಶ ಸಿಕ್ಕಿ, ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆ ಸುತ್ತಿನಲ್ಲಿ ಭಾಗವಹಿಸಿ ಇನ್ನೇನೂ ಹಾಟ್ ಸೀಟ್ ನಲ್ಲಿ ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ಆಟ ಮುಗಿದ್ರೆ ಹೇಗಾಗುತ್ತೆ ಅಲ್ವಾ?

ಈಗ ಇಂತಹದ್ದೇ ಘಟನೆ ಈ ವಾರದ ಕನ್ನಡದ ಕೋಟ್ಯಧಿಪತಿಯಲ್ಲಿ ನಡೆದಿದೆ. ಒಟ್ಟು ಆರು ಜನರು ಈ ವಾರ ಕೋಟ್ಯಧಿಪತಿಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ನಾಲ್ಕು ಜನರಿಗೆ ಅವಕಾಶ ಸಿಕ್ತು. ಇನ್ನಿಬ್ಬರಿಗೆ ಕೊನೆಯ ಘಳಿಗೆಯಲ್ಲಿ ಅದೃಷ್ಟ ಕೈಹಿಡಿಯಲಿಲ್ಲ.

ಕೂದಲೆಳೆಯ ಅಂತರದಲ್ಲಿ ಆಟವನ್ನ ಮಿಸ್ ಮಾಡಿಕೊಂಡ ಇಬ್ಬರು ಯುವತಿಯರು ಭಾವುಕರಾದರು. ಕೋಟ್ಯಧಿಪತಿ ಆಟದಿಂದ ಹಣವನ್ನ ಗೆದ್ದು ತಮ್ಮ ಅಗತ್ಯವನ್ನ ಪೂರೈಸಿಕೊಳ್ಳಬೇಕು ಎಂಬ ಕನಸು ಕಂಡಿದ್ದ ಇಬ್ಬರಿಗೂ ನಿರಾಸೆಯಾಯಿತು. ಅಷ್ಟಕ್ಕೂ, ಕೋಟ್ಯಧಿಪತಿಯಲ್ಲಿ ಆಗಿದ್ದೇನು? ಆ ಯುವತಿ ಕಣ್ಣಿರಿಟ್ಟಿದ್ದು ಯಾಕೆ?

ಅವಕಾಶಕ್ಕಾಗಿ ಕಾಯುತ್ತಿದ್ದ ರೇಣುಕಾ

ಅವಕಾಶಕ್ಕಾಗಿ ಕಾಯುತ್ತಿದ್ದ ರೇಣುಕಾ

ನರೇಂದ್ರನಾಥ್ ಅವರು ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆ ಸುತ್ತಿನಲ್ಲಿ ಅತಿ ವೇಗವಾಗಿ ಉತ್ತರ ನೀಡಿದ್ದರು. ಆಗ ಪುನೀತ್ ರಾಜ್ ಕುಮಾರ್ ನರೇಂದ್ರನಾಥ್ ಅವರನ್ನ ಆಹ್ವಾನಿಸಿದರು. ಈ ವೇಳೆ ರೇಣುಕಾ ತನ್ನ ಹೆಸರು ಹೇಳಿದ್ರು ಎಂದು ಖುಷಿಯಾಗಿ ಮುಂದೆ ಬರಲು ಎದ್ದು ನಿಂತರು. ಆದರೆ, ತನ್ನ ಹೆಸರಲ್ಲ ಎಂದು ಗೊತ್ತಾಗಿ ನಿರಾಸೆ ಆದರು.

ಮತ್ತೆ ಚಿಗುರಿತು ಆಸೆ

ಮತ್ತೆ ಚಿಗುರಿತು ಆಸೆ

ಬಹುಶಃ ನರೇಂದ್ರನಾಥ್ ಅವರೇ ಕೊನೆಯ ಸ್ಪರ್ಧಿ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದ್ರೆ, ಕೊನೆಯ ಎರಡು ನಿಮಿಷ ಬಾಕಿ ಇರುವಾಗ ತಪ್ಪು ಉತ್ತರ ನೀಡಿ ಆಟ ಮುಗಿಸಿದರು. ಅಲ್ಲಿಗೆ ರೇಣುಕಾ ಮತ್ತು ರತ್ನ ಅವರ ಆಸೆ ಮತ್ತೆ ಚಿಗುರಿತು.

ಮತ್ತೊಬ್ಬ ಸ್ಪರ್ಧಿ ಬರಬಹುದಾಗಿತ್ತು.!

ಮತ್ತೊಬ್ಬ ಸ್ಪರ್ಧಿ ಬರಬಹುದಾಗಿತ್ತು.!

ಇನ್ನು ಎರಡು ನಿಮಿಷ ಸಮಯವಕಾಶ ಇತ್ತು. ಇನ್ನೊಬ್ಬ ಸ್ಪರ್ಧಿಯನ್ನ ಆಯ್ಕೆ ಮಾಡಿಕೊಳ್ಳಬಹುದು ಎಂಬ ನಿರೀಕ್ಷೆ ಇತ್ತು. ಇನ್ನೇನು ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆ ಕೇಳಿದ್ರು ಎನ್ನುವಷ್ಟರಲ್ಲಿ ಬೆಲ್ ಬಾರಿಸಿದ ಸದ್ದು ಕೇಳಿತು. ಅಲ್ಲಿಗೆ ಆಟ ಮುಕ್ತಾಯ ಎಂದು ಪುನೀತ್ ಹೇಳಿದ್ರು.

ಕಣ್ಣೀರಿಟ್ಟ ರೇಣುಕಾ

ಕಣ್ಣೀರಿಟ್ಟ ರೇಣುಕಾ

ಕೋಟ್ಯಧಿಪತಿ ಆಟಕ್ಕೆ ಆಯ್ಕೆಯಾಗಿ, ನಾಲ್ಕು ಸಲ ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆ ಸುತ್ತಿನಲ್ಲಿ ಭಾಗವಹಿಸಿ ಅಂತಿಮವಾಗಿ ಇನ್ನೊಂದು ಅವಕಾಶ ಸಿಕ್ತು ಎನ್ನುವಷ್ಟರಲ್ಲಿ ಅವಕಾಶ ವಂಚಿತರಾದ ರೇಣುಕಾ, ಸ್ಟುಡಿಯೋದಲ್ಲೇ ಕಣ್ಣೀರಿಟ್ಟರು. ಇದನ್ನ ಗಮನಿಸಿದ ಪುನೀತ್ ರಾಜ್ ಕುಮಾರ್ ರೇಣುಕಾ ಅವರನ್ನ ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ರು.

More from Filmibeat

English summary
Kannadada kotyadhipathi contestant Renuka cried in kannadada kotyadhipathi 4 set. becuse, she did not get chance to play game.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X