ಹುಚ್ಚ ವೆಂಕಟ್ ಔಟ್ ಆದ್ಮೇಲೆ 'ಬಿಗ್ ಬಾಸ್' TRP ಏನಾಯ್ತು?

By ಹರಾ

'ಟಿ.ಆರ್.ಪಿ ಕಿಂಗ್' ಅಂತಲೇ ವೀಕ್ಷಕರಿಂದ ಕರೆಯಿಸಿಕೊಳ್ಳುತ್ತಿದ್ದ ನಟ ಕಮ್ ನಿರ್ದೇಶಕ ಹುಚ್ಚ ವೆಂಕಟ್.! ಯಾಕಂದ್ರೆ, ಹುಚ್ಚ ವೆಂಕಟ್ ನೀಡುತ್ತಿದ್ದ ಮನರಂಜನೆ ಅಂತದ್ದು.!

ಬೇಕಾಬಿಟ್ಟಿ ಮಾತನಾಡಿ, 'ನನ್ ಮಗಂದ್'...'ನನ್ ಎಕ್ಕಡ' ದಂತಹ ಬೈಗುಳಗಳಿಂದ ಯೂಟ್ಯೂಬ್ ನಲ್ಲಿ ಸಖತ್ ಫೇಮಸ್ ಆಗಿದ್ದ ಹುಚ್ಚ ವೆಂಕಟ್ 'ಬಿಗ್ ಬಾಸ್-3' ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟಿದ್ದು ವೀಕ್ಷಕರ ಒತ್ತಾಯದ ಮೇರೆಗೆ ಅನ್ನೋದು ನಿಮಗೂ ಗೊತ್ತಿರುವ ಸಂಗತಿ.

ಗಾಯಕ ರವಿ ಮುರೂರು ಮೇಲೆ ಹಲ್ಲೆ ಮಾಡಿ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಹುಚ್ಚ ವೆಂಕಟ್ ಹೊರಬಿದ್ದ ಮೇಲೆ, ''ನಾವು 'ಬಿಗ್ ಬಾಸ್' ನೋಡಲ್ಲ ಅಂತ ಹೇಳಿದವರು ಸಾವಿರಾರು ಮಂದಿ. [ವೆಂಕಟಣ್ಣ ಇಲ್ಲದ ಬಿಗ್ ಬಾಸ್ ನಾನ್ ನೋಡಲ್ಲ, ಅಷ್ಟೇ!]

''ಹುಚ್ಚ ವೆಂಕಟ್ ಇದ್ದಾಗ 'ಬಿಗ್ ಬಾಸ್' ಶೋ ಚೆನ್ನಾಗಿತ್ತು. ಹುಚ್ಚ ವೆಂಕಟ್ ಹೋದ್ಮೇಲೆ ಕಾರ್ಯಕ್ರಮ ಸಪ್ಪೆ ಆಗುತ್ತಿದೆ'' ಅಂತ ಈಗಲೂ ಗೊಣಗುವವರು ಇದ್ದಾರೆ. [ಹುಚ್ಚ ವೆಂಕಟ್ ಇಲ್ಲದ 'ಬಿಗ್ ಬಾಸ್' ನೀವು ನೋಡ್ತೀರಾ.?]

ಹಾಗಾದ್ರೆ, ಹುಚ್ಚ ವೆಂಕಟ್ ಕಿಕ್ ಔಟ್ ಆದ್ಮೇಲೆ 'ಬಿಗ್ ಬಾಸ್' ಕಾರ್ಯಕ್ರಮದ ಟಿ.ಆರ್.ಪಿ ಬಿದ್ದು ಹೋಗಿದ್ಯಾ? ಇದಕ್ಕೆ ಉತ್ತರ ಇಲ್ಲಿದೆ. BARC INDIA ನೀಡಿರುವ 'ಬಿಗ್ ಬಾಸ್' ಕಾರ್ಯಕ್ರಮದ ಒಟ್ಟು ನಾಲ್ಕು ವಾರಗಳ ಟಿ.ಆರ್.ಪಿ ರೇಟಿಂಗ್ ನ ನಿಮ್ಮ ಮುಂದೆ ಇಡ್ತಿದ್ದೀವಿ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

ನಿಮ್ಮ ಊಹೆಗೂ ನಿಲುಕದ ಸತ್ಯ ಸಂಗತಿ.!

ನಿಮ್ಮ ಊಹೆಗೂ ನಿಲುಕದ ಸತ್ಯ ಸಂಗತಿ.!

ಹುಚ್ಚ ವೆಂಕಟ್ ಇಲ್ಲದ 'ಬಿಗ್ ಬಾಸ್' ಶೋನ ಯಾರು ನೋಡ್ತಾರೆ ಅಂತ ನೀವೂ ಹೇಳ್ಬಹುದು. ಆದ್ರೆ, ಸತ್ಯ ಸಂಗತಿ ಏನ್ಗೊತ್ತಾ, ಹುಚ್ಚ ವೆಂಕಟ್ ಔಟ್ ಆದ್ಮೇಲೆ 'ಬಿಗ್ ಬಾಸ್' ಟಿ.ಆರ್.ಪಿ ಹೆಚ್ಚಾಗಿದೆ.! ಅಂಕಿ-ಅಂಶದ ಸಮೇತ ಟಿ.ಆರ್.ಪಿ ರೇಟಿಂಗ್ ಹೇಳ್ತೀವಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

 ಮೊದಲ ವಾರ 'ಬಿಗ್ ಬಾಸ್' ಗಳಿಸಿದ ಟಿ.ಆರ್.ಪಿ

ಮೊದಲ ವಾರ 'ಬಿಗ್ ಬಾಸ್' ಗಳಿಸಿದ ಟಿ.ಆರ್.ಪಿ

TV Audience Measurement - BARC (Broadcast Audience Research Council India) ನೀಡಿರುವ ಅಂಕಿ ಅಂಶದ ಪ್ರಕಾರ 'ಬಿಗ್ ಬಾಸ್' ಪ್ರಸಾರವಾದ ಮೊದಲ ವಾರ ಅಂದ್ರೆ (ಆಕ್ಟೋಬರ್ 24 ರಿಂದ 30 ರವರೆಗೆ) ರಾತ್ರಿ 9 ರಿಂದ 10 ಗಂಟೆವರೆಗೆ ಕಲರ್ಸ್ ಕನ್ನಡ ವಾಹಿನಿ ಗಳಿಸಿದ ಟಿ.ಆರ್.ಪಿ ರೇಟಿಂಗ್ 2999. [ಹುಚ್ಚ ವೆಂಕಟ್ ರನ್ನ ಗೇಲಿ ಮಾಡಿದ 'ಬಿಗ್ ಬಾಸ್'?]

ಎರಡನೇ ವಾರ ಏನಾಯ್ತು?

ಎರಡನೇ ವಾರ ಏನಾಯ್ತು?

ಮೊದಲ ವಾರ ಹುಚ್ಚ ವೆಂಕಟ್ ನೀಡಿದ ಮನರಂಜನೆಗೆ ಅಷ್ಟು ಟಿ.ಆರ್.ಪಿ ಸಿಕ್ಕಿರಬಹುದು ಅಂತ ನೀವು ಲೆಕ್ಕ ಹಾಕ್ಬಹುದು. ಆದ್ರೆ, ಎರಡನೇ ವಾರ ಹುಚ್ಚ ವೆಂಕಟ್ ಇದ್ದರೂ, 'ಬಿಗ್ ಬಾಸ್' ಗೆ ಸಿಕ್ಕ ಟಿ.ಆರ್.ಪಿ ರೇಟಿಂಗ್ ಎಷ್ಟು ಗೊತ್ತಾ? ಕೇವಲ 2821 (ಮೊದಲ ವಾರಕ್ಕಿಂತಲೂ ಕಡಿಮೆ) [ಹುಚ್ಚ ವೆಂಕಟ್ ನ ಬೈಯ್ಯೋರು ಇದ್ದಾರೆ ಸ್ವಾಮಿ..!]

ಮೂರನೇ ವಾರ ಯುದ್ಧ.!

ಮೂರನೇ ವಾರ ಯುದ್ಧ.!

ಮೂರನೇ ವಾರ 'ಆಳು-ಅರಸ' ಟಾಸ್ಕ್ ನಿಂದ 'ಬಿಗ್ ಬಾಸ್' ಮನೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಡಿಯಾದರೂ, ಟಿ.ಆರ್.ಪಿ ಮಾತ್ರ ಏರಿಲ್ಲ ಅನ್ನೋದು BARC ರಿಪೋರ್ಟ್ ನಲ್ಲಿ ಸ್ಪಷ್ಟವಾಗಿದೆ. ಗಾಯಕ ರವಿ ಮುರೂರು ಮೇಲೆ ಹಲ್ಲೆ ಮಾಡಿ ಹುಚ್ಚ ವೆಂಕಟ್ ಔಟ್ ಆಗುವ ವಾರ ಸಿಕ್ಕಿರುವ ಟಿ.ಆರ್.ಪಿ ರೇಟಿಂಗ್ 2844.! ಇದು ಮೊದಲ ವಾರದ ಟಿ.ಆರ್.ಪಿಕ್ಕಿಂತಲೂ ಕಡಿಮೆ ಅನ್ನೋದನ್ನ ನೀವು ಗಮನಿಸಬೇಕು. [ಹುಚ್ಚ ವೆಂಕಟ್ ಔಟ್ ; ನಮ್ಮ ಓದುಗರು ಏನಂತಾರೆ?]

ಅಚ್ಚರಿ ಇಲ್ಲಿದೆ ನೋಡಿ.....

ಅಚ್ಚರಿ ಇಲ್ಲಿದೆ ನೋಡಿ.....

'ಹುಚ್ಚ ವೆಂಕಟ್' ಔಟ್ ಆದ್ಮೇಲೆ 'ಬಿಗ್ ಬಾಸ್' ನೋಡಲ್ಲ ಅಂತ ಅನೇಕರು ಹೇಳಿರ್ಬಹುದು. ಆದ್ರೆ, ನಾಲ್ಕನೇ ವಾರ ಅಂದ್ರೆ ಹುಚ್ಚ ವೆಂಕಟ್ ಮನೆಯಿಂದ ಆಚೆ ಕಾಲಿಟ್ಟ ಮೇಲೆ 'ಬಿಗ್ ಬಾಸ್' ಟಿ.ಆರ್.ಪಿ ಏಕ್ದಂ ಆಕಾಶಕ್ಕೆ ಏರಿದೆ. ನಾಲ್ಕನೇ ವಾರ 'ಬಿಗ್ ಬಾಸ್' ಗಳಿಸಿದ್ದು 3294.! ಕಳೆದ ಮೂರು ವಾರಗಳಿಗಿಂತಲೂ ಹೆಚ್ಚು.! [ಹುಚ್ಚ ವೆಂಕಟ್ ಅಭಿಮಾನಿಯಿಂದ ಸುದೀಪ್ ಗೆ ಖಡಕ್ ಪ್ರಶ್ನೆ]

ಸದಭಿರುಚಿ ಬಯಸುತ್ತಿದ್ದಾರಾ ವೀಕ್ಷಕರು?

ಸದಭಿರುಚಿ ಬಯಸುತ್ತಿದ್ದಾರಾ ವೀಕ್ಷಕರು?

ಹುಚ್ಚ ವೆಂಕಟ್ ಹುಚ್ಚಾಟಕ್ಕಿಂತ ಹೆಚ್ಚಾಗಿ ವೀಕ್ಷಕರು ಸದಭಿರುಚಿಯ ಕಾರ್ಯಕ್ರಮ ಬಯಸುತ್ತಿದ್ದಾರೆ ಅನ್ನೋದಕ್ಕೆ ಈ BARC ರಿಪೋರ್ಟ್ ಸಾಕ್ಷಿ ಅಲ್ಲವೇ? [ಟಿ.ಆರ್.ಪಿ ಕಿಂಗ್ ಹುಚ್ಚ ವೆಂಕಟ್ ವಿರುದ್ಧ ಗುಡುಗಿದ ಕಿಚ್ಚ ಸುದೀಪ್.!]

ಟಿ.ಆರ್.ಪಿ ನೀಡಿದ ಶಾಕ್!

ಟಿ.ಆರ್.ಪಿ ನೀಡಿದ ಶಾಕ್!

ಹುಚ್ಚ ವೆಂಕಟ್ 'ಟಿ.ಆರ್.ಪಿ ಕಿಂಗ್' ಅನ್ನುತ್ತಿದ್ದ ಜನರು BARC INDIA ನೀಡಿರುವ ಈ ಟಿ.ಆರ್.ಪಿ ರಿಪೋರ್ಟ್ ನೋಡಿ ಶಾಕ್ ಆಗಿದ್ದಾರೆ. ಇದು ಸಾಧ್ಯನಾ? ಅಂತ ಹಲವರು ತಲೆ ಕರೆದುಕೊಳ್ಳುತ್ತಿದ್ದಾರೆ. ['ಬಿಗ್ ಬಾಸ್' ಮನೆಯಲ್ಲಿ 'ಇವರೆಲ್ಲಾ' ಮಾಡ್ತಿರೋದು ಏನು?]

ಇನ್ನೊಂದು ಅಚ್ಚರಿ ಇಲ್ಲಿದೆ ನೋಡಿ.....

ಇನ್ನೊಂದು ಅಚ್ಚರಿ ಇಲ್ಲಿದೆ ನೋಡಿ.....

ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಬಿಗ್ ಬಾಸ್'ಗೆ ಅತಿ ಹೆಚ್ಚು ಟಿ.ಆರ್.ಪಿ ಸಿಗುತ್ತಿದೆ ಅಂತ ನೀವು ಭಾವಿಸಿದ್ದರೆ, ನಿಮ್ಮ ಊಹೆ ತಪ್ಪು ಅನ್ನುವುದಕ್ಕೆ ಮತ್ತೊಮ್ಮೆ BARC INDIA ನೀಡಿರುವ ಟಿ.ಆರ್.ಪಿ ರಿಪೋರ್ಟ್ ಸಾಕ್ಷಿ. 'ಬಿಗ್ ಬಾಸ್' ಕಾರ್ಯಕ್ರಮಕ್ಕೂ ಹೆಚ್ಚಾಗಿ ಜನ ಯಾವ ಕಾರ್ಯಕ್ರಮ ನೋಡ್ತಿದ್ದಾರೆ ಅಂತ ನಾವ್ ಹೇಳ್ತೀವಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

'ಪುಟ್ಟಗೌರಿ ಮದುವೆ'ಗೆ ಅತಿ ಹೆಚ್ಚು ಟಿ.ಆರ್.ಪಿ

'ಪುಟ್ಟಗೌರಿ ಮದುವೆ'ಗೆ ಅತಿ ಹೆಚ್ಚು ಟಿ.ಆರ್.ಪಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಗೌರಿ ಮದುವೆ'ಗೆ 'ಬಿಗ್ ಬಾಸ್' ಕಾರ್ಯಕ್ರಮಕ್ಕಿಂತಲೂ ಹೆಚ್ಚು ಟಿ.ಆರ್.ಪಿ ಇದೆ. BARC INDIA ನೀಡಿರುವ WEEK 46 (14TH NOV - 20TH NOV) TRP ರಿಪೋರ್ಟ್ ಪ್ರಕಾರ 'ಪುಟ್ಟಗೌರಿ ಮದುವೆ'ಗೆ 5403 ರೇಟಿಂಗ್ ಸಿಕ್ಕಿದೆ.

ಐದನೇ ಸ್ಥಾನದಲ್ಲಿದೆ 'ಬಿಗ್ ಬಾಸ್'!

ಐದನೇ ಸ್ಥಾನದಲ್ಲಿದೆ 'ಬಿಗ್ ಬಾಸ್'!

ಎರಡನೇ ಸ್ಥಾನದಲ್ಲಿ 'ಲಕ್ಷ್ಮಿ ಬಾರಮ್ಮ' - 4588

ಮೂರನೇ ಸ್ಥಾನದಲ್ಲಿ 'ಅಕ್ಕ' - 4320

ನಾಲ್ಕನೇ ಸ್ಥಾನದಲ್ಲಿ 'ಕುಲವಧು' - 3559

ಐದನೇ ಸ್ಥಾನದಲ್ಲಿ 'ಬಿಗ್ ಬಾಸ್' - 3356

ನಿರೀಕ್ಷೆ ಹುಸಿಗೊಳಿಸಿದ 'ಬಿಗ್ ಬಾಸ್'

ನಿರೀಕ್ಷೆ ಹುಸಿಗೊಳಿಸಿದ 'ಬಿಗ್ ಬಾಸ್'

ಕಳೆದ ಎರಡು ಸೀಸನ್ ಗಳಿಗಿಂತಲೂ ಹೆಚ್ಚು ಕುತೂಹಲ ಸೃಷ್ಟಿಸಿ, ಸದ್ದು-ಸುದ್ದಿ ಮಾಡಿದ್ದ 'ಬಿಗ್ ಬಾಸ್' ಮೆಗಾ ಧಾರಾವಾಹಿಗಳನ್ನು ಹಿಂದಕ್ಕಿ ಟಿ.ಆರ್.ಪಿ ಗಳಿಸುವಲ್ಲಿ ವಿಫಲವಾಗಿದೆ. ಹುಚ್ಚ ವೆಂಕಟ್ ರಿಂದ ಸೆನ್ಸೇಷನ್ ಕ್ರಿಯೇಟ್ ಆಯ್ತೇ ಹೊರತು, ಅದು ಟಿ.ಆರ್.ಪಿ ಆಗಿ ಕನ್ವರ್ಟ್ ಆಗಿಲ್ಲ ಅನ್ನೋದು BARC INDIA ನೀಡಿರುವ ರಿಪೋರ್ಟ್ ನಿಂದ ಸ್ಪಷ್ಟ.

More from Filmibeat

English summary
Shocking for Huccha Venkat fans. It is clear from the BARC India TRP Report that Bigg Boss Kannada has received highest TRP after the eviction of YouTube Star Huccha Venkat. Read the article to know the detailed report of TRP Ratings of BBK3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X