For Quick Alerts
  ALLOW NOTIFICATIONS  
  For Daily Alerts

  ನಂ.1 ಕನ್ನಡ ಎಂಟರ್ ಟೇನ್ಮೆಂಟ್ ಚಾನೆಲ್ ಯಾವ್ದು ಗೊತ್ತಾ?

  By Harshitha
  |

  ನೀವು ಯಾವ ಚಾನೆಲ್ ನೋಡ್ತೀರಾ? ಮನೆಗೆ ಹೋದ ತಕ್ಷಣ ರಾಜ್ಯದ ಮೂಲೆ ಮೂಲೆಯಲ್ಲಿ ಏನೇನಾಯ್ತು ಅಂತ ತಿಳಿದುಕೊಳ್ಳುವುದಕ್ಕೆ ನ್ಯೂಸ್ ಚಾನೆಲ್ ಹಾಕ್ತೀರಾ? ಇಲ್ಲಾ, ಬರೀ ರಾಜಕೀಯ-ಕ್ರೈಂ ಸುದ್ದಿ ಯಾರ್ ನೋಡ್ತಾರೆ ಕೊಂಚ ಮನರಂಜನೆ ಬೇಕು ಅಂತ ಎಂಟರ್ ಟೇನ್ಮೆಂಟ್ ಚಾನೆಲ್ ಆನ್ ಮಾಡ್ತೀರಾ?

  ಗೊಂಬೆಗೆ ಚಿನ್ನು ಗಂಡ ಯಾರು ಅನ್ನೋದು ಗೊತ್ತಾಗ್ಬಿಡುತ್ತಾ? ಪುಟ್ಟಗೌರಿ ಇವತ್ತಾದ್ರೂ ಸತ್ಯ ಬಾಯ್ಬಿಡ್ತಾಳಾ? ಅಂತ ಹೆಂಗಸರಂತು ಬೇಗ ಬೇಗ ಅಡುಗೆ ಮುಗಿಸಿ ಸರಿಯಾದ ಸಮಯಕ್ಕೆ ಮೂರ್ಖರ ಪೆಟ್ಟಿಗೆ ಮುಂದೆ ಹಾಜರಾಗ್ತಾರೆ.

  ಈಗೇನು ವಾಹಿನಿಗಳ ಸಂಖ್ಯೆ ಒಂದಾ-ಎರಡಾ..? ಕನ್ನಡ ಮನರಂಜನಾ ವಾಹಿನಿಗಳ ಪೈಕಿ ಉದಯ ಟಿವಿ, ಕಲರ್ಸ್ ಕನ್ನಡ ವಾಹಿನಿ, ಜೀ ಕನ್ನಡ, ಕಸ್ತೂರಿ, ಸುವರ್ಣ ವಾಹಿನಿ ಸೇರಿದಂತೆ ಸಾಲು ಸಾಲು ಚಾನೆಲ್ ಗಳಿವೆ. ಎಲ್ಲಾ ವಾಹಿನಿಗಳಲ್ಲೂ ಹೆಂಗಸರಿಗೆ ಹೇಳಿಮಾಡಿಸಿದಂತಿರುವ ಮೆಗಾ ಧಾರಾವಾಹಿಗಳು, ವಿಭಿನ್ನ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. [ಹುಚ್ಚ ವೆಂಕಟ್ ಔಟ್ ಆದ್ಮೇಲೆ 'ಬಿಗ್ ಬಾಸ್' TRP ಏನಾಯ್ತು?]

  ದಶಕಗಳಿಂದ ಉದಯ ಟಿವಿ ಅತಿ ಹೆಚ್ಚು ವೀಕ್ಷಕರನ್ನು ಹೊಂದಿರುವ ನಂಬರ್ 1 ವಾಹಿನಿ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೀಗ ಕಾಲ ಬದಲಾಗಿದೆ. ಉದಯ ಟಿವಿ ನಂಬರ್ ಒನ್ ಚಾನೆಲ್ ಆಗಿ ಉಳಿದಿಲ್ಲ.! ಮುಂದೆ ಓದಿ.....

  ನಂಬರ್ 1 ಚಾನೆಲ್ ಯಾವುದು?

  ನಂಬರ್ 1 ಚಾನೆಲ್ ಯಾವುದು?

  BARC INDIA ನೀಡಿರುವ WEEK 46 (14TH NOV - 20TH NOV) TRP ರಿಪೋರ್ಟ್ ಪ್ರಕಾರ ನಂಬರ್ 1 ಚಾನೆಲ್ ಆಗಿ ಹೊರಹೊಮ್ಮಿರುವುದು ಯಾವ ವಾಹಿನಿ ಅಂತ ಹೇಳ್ತೀವಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

   ನಂಬರ್ 1 ಚಾನೆಲ್ ಆದ ಕಲರ್ಸ್ ಕನ್ನಡ

  ನಂಬರ್ 1 ಚಾನೆಲ್ ಆದ ಕಲರ್ಸ್ ಕನ್ನಡ

  BARC INDIA ನೀಡಿರುವ TRP ರಿಪೋರ್ಟ್ ಪ್ರಕಾರ ಕಲರ್ಸ್ ಕನ್ನಡ ವಾಹಿನಿಗೆ ಅತಿ ಹೆಚ್ಚು ಟಿ.ಆರ್.ಪಿ ರೇಟಿಂಗ್ ಸಿಕ್ಕಿದೆ.

  'ಕಲರ್ಸ್ ಕನ್ನಡ'ಗೆ ಸಿಕ್ಕಿರುವ ರೇಟಿಂಗ್ ಎಷ್ಟು?

  'ಕಲರ್ಸ್ ಕನ್ನಡ'ಗೆ ಸಿಕ್ಕಿರುವ ರೇಟಿಂಗ್ ಎಷ್ಟು?

  ಕಲರ್ಸ್ ಕನ್ನಡ ವಾಹಿನಿಗೆ ಒಟ್ಟು 300188 ಟಿ.ಆರ್.ಪಿ ರೇಟಿಂಗ್ ಸಿಕ್ಕಿದೆ.

  ಬಾಕಿ ಚಾನೆಲ್ ಗಳ ರೇಟಿಂಗ್ ಎಷ್ಟು?

  ಬಾಕಿ ಚಾನೆಲ್ ಗಳ ರೇಟಿಂಗ್ ಎಷ್ಟು?

  ಎರಡನೇ ಸ್ಥಾನ - ಉದಯ ಮೂವೀಸ್ - 156491

  ಮೂರನೇ ಸ್ಥಾನ - ಸುವರ್ಣ ವಾಹಿನಿ - 139570

  ನಾಲ್ಕನೇ ಸ್ಥಾನ - ಜೀ ಕನ್ನಡ - 134709

  ಐದನೇ ಸ್ಥಾನ - ಉದಯ ಟಿವಿ - 114916

  ಐದನೇ ಸ್ಥಾನದಲ್ಲಿ ಉದಯ ಟಿವಿ

  ಐದನೇ ಸ್ಥಾನದಲ್ಲಿ ಉದಯ ಟಿವಿ

  ದಶಕಗಳಿಂದ ಅತಿ ಹೆಚ್ಚು ವೀಕ್ಷಕರನ್ನ ಹೊಂದಿರುವ ಉದಯ ಟಿವಿಗೆ ಈ ಬಾರಿ ಐದನೇ ಸ್ಥಾನ ಸಿಕ್ಕಿದೆ. ಅಚ್ಚರಿ ಅಂದ್ರೆ, ಉದಯ ಟಿವಿಕ್ಕಿಂತ ಉದಯ ಮೂವೀಸ್ ವಾಹಿನಿಗೆ ಹೆಚ್ಚು ಟಿ.ಆರ್.ಪಿ ಸಿಕ್ಕಿರುವುದು.

  ನಂಬರ್ 1 ಕಾರ್ಯಕ್ರಮ ಯಾವುದು ಗೊತ್ತಾ?

  ನಂಬರ್ 1 ಕಾರ್ಯಕ್ರಮ ಯಾವುದು ಗೊತ್ತಾ?

  ನಂಬರ್ 1 ಕಾರ್ಯಕ್ರಮ 'ಬಿಗ್ ಬಾಸ್' ರಿಯಾಲಿಟಿ ಶೋ ಅಂತ ನೀವು ಭಾವಿಸುವಹಾಗೇ ಇಲ್ಲ. ಯಾಕಂದ್ರೆ, 'ಬಿಗ್ ಬಾಸ್' ಗಿಂತಲೂ ಅತಿ ಹೆಚ್ಚು ಟಿ.ಆರ್.ಪಿ ಪಡೆಯುತ್ತಿರುವ ನಾಲ್ಕು ಧಾರಾವಾಹಿಗಳಿವೆ.

  'ಪುಟ್ಟಗೌರಿ ಮದುವೆ'ಗೆ ಅತಿ ಹೆಚ್ಚು ಟಿ.ಆರ್.ಪಿ

  'ಪುಟ್ಟಗೌರಿ ಮದುವೆ'ಗೆ ಅತಿ ಹೆಚ್ಚು ಟಿ.ಆರ್.ಪಿ

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಗೌರಿ ಮದುವೆ'ಗೆ 'ಬಿಗ್ ಬಾಸ್' ಕಾರ್ಯಕ್ರಮಕ್ಕಿಂತಲೂ ಹೆಚ್ಚು ಟಿ.ಆರ್.ಪಿ ಇದೆ. BARC INDIA ನೀಡಿರುವ WEEK 46 (14TH NOV - 20TH NOV) TRP ರಿಪೋರ್ಟ್ ಪ್ರಕಾರ 'ಪುಟ್ಟಗೌರಿ ಮದುವೆ'ಗೆ 5403 ರೇಟಿಂಗ್ ಸಿಕ್ಕಿದೆ.

  ಐದನೇ ಸ್ಥಾನದಲ್ಲಿದೆ 'ಬಿಗ್ ಬಾಸ್'!

  ಐದನೇ ಸ್ಥಾನದಲ್ಲಿದೆ 'ಬಿಗ್ ಬಾಸ್'!

  ಎರಡನೇ ಸ್ಥಾನದಲ್ಲಿ 'ಲಕ್ಷ್ಮಿ ಬಾರಮ್ಮ' - 4588

  ಮೂರನೇ ಸ್ಥಾನದಲ್ಲಿ 'ಅಕ್ಕ' - 4320

  ನಾಲ್ಕನೇ ಸ್ಥಾನದಲ್ಲಿ 'ಕುಲವಧು' - 3559

  ಐದನೇ ಸ್ಥಾನದಲ್ಲಿ 'ಬಿಗ್ ಬಾಸ್' - 3356

  ಎಲ್ಲಾ ಧಾರಾವಾಹಿಗಳಿಂದ ಕಲರ್ಸ್ ಕನ್ನಡ ನಂಬರ್ 1

  ಎಲ್ಲಾ ಧಾರಾವಾಹಿಗಳಿಂದ ಕಲರ್ಸ್ ಕನ್ನಡ ನಂಬರ್ 1

  'ಲಕ್ಷ್ಮಿ ಬಾರಮ್ಮ', 'ಅಕ್ಕ', 'ಕುಲವಧು', 'ಪುಟ್ಟಗೌರಿ ಮದುವೆ' ಮತ್ತು 'ಬಿಗ್ ಬಾಸ್' ಕಾರ್ಯಕ್ರಮಗಳಿಗೆ ಸಿಕ್ಕಿರುವ ಜನಪ್ರಿಯತೆಯಿಂದ ಕಲರ್ಸ್ ಕನ್ನಡ ವಾಹಿನಿಗೆ ನಂಬರ್ 1 ಸ್ಥಾನ ಸಿಕ್ಕಿದೆ.

  English summary
  It is clear from the BARC India TRP Report that Colors Kannada Entertainment Channel has received highest TRP in Week 46 and emerged as No.1 Entertainment Channel in Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X