»   » ವಿಷ್ಣು-ಭಾರತಿ ಮದುವೆ ದಿನ ದೊಡ್ಡ ಗಲಾಟೆ: ಆರತಕ್ಷತೆಯಲ್ಲಿ ವರನ ಉಂಗುರವೇ ಕಳುವು.!

ವಿಷ್ಣು-ಭಾರತಿ ಮದುವೆ ದಿನ ದೊಡ್ಡ ಗಲಾಟೆ: ಆರತಕ್ಷತೆಯಲ್ಲಿ ವರನ ಉಂಗುರವೇ ಕಳುವು.!

Posted By:
Subscribe to Filmibeat Kannada

ಫೆಬ್ರವರಿ 27, 1975... ಅದು ಕನ್ನಡ ಚಿತ್ರರಂಗದ ಇಬ್ಬರು ತಾರೆಯರು ಸಪ್ತಪದಿ ತುಳಿದ ಸುವರ್ಣ ದಿನ. ಚಂದನವನದಲ್ಲಿ ನಂಬರ್ ಒನ್ ನಟಿಯಾಗಿ ಮಿನುಗಿದ ಭಾರತಿ ಹಾಗೂ ಟಾಪ್ ಹೀರೋ ವಿಷ್ಣುವರ್ಧನ್ ಮದುವೆ ಆದ ಮರೆಯಲಾಗದ ದಿನ.

ಈ ದಿನ ಅಭಿಮಾನಿಗಳ ಪಾಲಿಗೂ ವಿಶೇಷವಾಗಿತ್ತು. ವಿಷ್ಣು-ಭಾರತಿ ರವರ ಅವಿಸ್ಮರಣೀಯ ದಿನಕ್ಕೆ ತಾವೂ ಸಾಕ್ಷಿಯಾಗಬೇಕು ಎಂದು ಬಯಸಿದ ಅದೆಷ್ಟೋ ಜನ ಮದುವೆ ಮಂಟಪದ ಕಡೆ ಮುಖ ಮಾಡಿದ್ರು. ಇದೇ ಕಾರಣಕ್ಕೆ, ಡಾ.ವಿಷ್ಣುವರ್ಧನ್-ಭಾರತಿ ರವರ ಮದುವೆ 'ಗಲಾಟೆ ಮದುವೆ'ಯಾಗಿ ಮಾರ್ಪಟ್ಟಿತು.[ಡಾ.ವಿಷ್ಣುವರ್ಧನ್-ಭಾರತಿ 'ಪ್ರೇಮದ ಕಾದಂಬರಿ' ಶುರು ಆಗಿದ್ದು ಹೇಗೆ.?]

'ಸಾಹಸ ಸಿಂಹ' ವಿಷ್ಣುವರ್ಧನ್-ಭಾರತಿ ರವರ ವಿವಾಹ ಮಹೋತ್ಸವ ನಡೆಯುತ್ತಿದ್ದ ಛತ್ರಕ್ಕೆ ಜನ ಸಾಗರವೇ ಹರಿದುಬಂದಿತ್ತು. ಜನರನ್ನ ನಿಭಾಯಿಸಲು ಯಾರ ಕೈಯಿಂದ್ಲೂ ಸಾಧ್ಯ ಆಗಿಲ್ಲ. ಮದುವೆ ಮನೆಗೆ ಹಾಕಲಾಗಿದ್ದ ಗೇಟ್ ನ ಒಡೆದು ಹಾಕಿದ ಜನ ಒಳಗೆ ನುಗ್ಗಿದರು. ಸಾಲದಕ್ಕೆ, ವರ ವಿಷ್ಣುವರ್ಧನ್ ರವರಿಗೆ ವಿಶ್ ಮಾಡುವ ನೆಪದಲ್ಲಿ ಉಂಗುರ ದೋಚಿದರು.! ಪಾಪ... ಮದುವೆ ದಿನ ವಧು-ವರ ಭಾರತಿ-ವಿಷ್ಣು ರವರಿಗೆ ಊಟ ಕೂಡ ಸಿಗಲಿಲ್ಲ ಅಂದ್ರೆ ನೀವು ನಂಬಲೇಬೇಕು.! ಡಾ.ವಿಷ್ಣುವರ್ಧನ್-ಭಾರತಿ ರವರ 'ಗಲಾಟೆ ಮದುವೆ'ಯ ಕಂಪ್ಲೀಟ್ ಸ್ಟೋರಿ ಇಲ್ಲಿದೆ ಓದಿರಿ....

ತಾಳಿ ಕಟ್ಟಿಸಿಕೊಂಡು ಓಡಿ ಹೋಗ್ಬಿಟ್ವಿ.!

''ನಮ್ಮದು ಗಲಾಟೆ ಮದುವೆ. ಕಾಸು ಕೊಟ್ಟು ತಾಳಿ ಕಟ್ಟಿಸಿಕೊಂಡು ಓಡಿ ಹೋಗ್ಬಿಟ್ವಿ ನಾವು'' - ಭಾರತಿ ವಿಷ್ಣುವರ್ಧನ್

ನಮಗೆ ಊಟ ಸಿಗಲಿಲ್ಲ

''ಜನ ಸಾಗರ ಅವತ್ತು. ಗೇಟ್ ಮುರಿದುಕೊಂಡು ಜನ ನುಗ್ಗುತ್ತಿದ್ದರು. ಜನರನ್ನ ಕಂಟ್ರೋಲ್ ಮಾಡೋಕೆ ಆಗುತ್ತಿರಲಿಲ್ಲ. ಹಿಂದಿನ ಬಾಗಿಲಿನಿಂದ ನಮ್ಮನ್ನ ಹೊರಗೆ ಕಳುಹಿಸಿದ್ರು. ಊಟ ಕೂಡ ಸಿಗಲಿಲ್ಲ ನಮಗೆ'' - ಭಾರತಿ ವಿಷ್ಣುವರ್ಧನ್

ವಿಷ್ಣು ಉಂಗುರ ಕಿತ್ತುಕೊಂಡು ಹೋದರು

''ಮದುವೆಯಲ್ಲಿ ದೊಡ್ಡ ಗಲಾಟೆ. ಅಂಬರೀಶ್ ಕೈಯಲ್ಲೂ ಜನರನ್ನ ತಡೆಯೋಕೆ ಆಗಲಿಲ್ಲ. ವಿಷ್ಣು ಕೈ ಕುಲುಕಲು ಬಂದವರು ಉಂಗುರವನ್ನೇ ಕಿತ್ತುಕೊಂಡು ಹೋದರು. ಎಲ್ಲಾ ತರಹದ ಜನ ಬಂದಿದ್ದರು ಅವತ್ತು. ಇಬ್ಬರನ್ನ ಅಶೋಕ ಹೋಟೆಲ್ ಗೆ ಕರ್ಕೊಂಡು ಹೋಗಲು ಅಂಬರೀಶ್ ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ'' - ಗೀತಾ, ವಿಷ್ಣುವರ್ಧನ್ ಸಹೋದರಿ

ಮೊದಲ ರಾತ್ರಿ...

''ನಾವೆಲ್ಲ ನಿಂತು ಭಾರತಿ-ವಿಷ್ಣುವರ್ಧನ್ ಮದುವೆ ಮಾಡಿದ್ವಿ. ಅವರ ಮೊದಲನೇ ರಾತ್ರಿಗಾಗಿ ಅಶೋಕ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿದ್ವಿ. ಅವತ್ತು ನಾವು ಅಲ್ಲೇ ಇರಬೇಕು ಅಂತ ವಿಷ್ಣು ಪಟ್ಟು ಹಿಡಿದ. ಅವನ ಪ್ರೀತಿಗೆ ನಾವು ಮರುಳಾಗಿ, ನಾನು ಮತ್ತು ಬಾಬು ಹೊರಗಡೆ ಸೋಫಾ ಮೇಲೆ ಮಲಗಿದ್ವಿ. ಭಾರತಿ-ವಿಷ್ಣುವರ್ಧನ್, ಸುಮಲತಾ-ಅಂಬರೀಶ್.. ಇಬ್ಬರು ಹೇಗೆ ಅಂದ್ರೆ ಒಂದೇ ನಾಣ್ಯದ ಎರಡು ಮುಖಗಳು'' - ಅಂಬರೀಶ್, ನಟ

English summary
Kannada Actor Late Dr.Vishnuvardhan and Actress Bharathi's marriage story was revealed in Zee Kannada's popular show 'Weekend With Ramesh-3'

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X