ತ್ರಿಭುವನ್ ಚಿತ್ರಮಂದಿರದ ಮುಂದೆ ನಟ ರಕ್ಷಿತ್ ಶೆಟ್ಟಿ ಕಣ್ಣೀರಿಟ್ಟಿದ್ಯಾಕೆ.?

'ಮೊದಲು ಅವಮಾನ, ಆಮೇಲೆ ಅನುಮಾನ, ಕೊನೆಗೆ ಸನ್ಮಾನ' - ಇದು ಏನಾದರೂ ಸಾಧಸ ಬೇಕು ಅಂತ ಹೊರಟವರಿಗೆ ಸಿಗುವ ಮೂರು ಪ್ರಮುಖ ಹಂತಗಳು. ಈ ಮಾತು ನೂರಕ್ಕೆ ನೂರರಷ್ಟು ನಿಜ ಆಗಿರುವುದು ರಕ್ಷಿತ್ ಶೆಟ್ಟಿ ಸಿನಿ ಜೀವನದಲ್ಲಿ.!

ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈ ವಾರದ 'ವೀಕೆಂಡ್ ವಿತ್ ರಮೇಶ್' ಅಥಿತಿಯಾಗಿದ್ದರು. ಬರೀ ಸಿನಿಮಾಗಳಲ್ಲಿ ಅವರನ್ನ ನೋಡಿದ್ದ ಜನರಿಗೆ ರಕ್ಷಿತ್ ಜೀವನದ ಅನೇಕ ವಿಷಯಗಳನ್ನ ತಿಳಿಸುವ ಟೈಂ ಆದಾಗಿತ್ತು.[ಈ ವಾರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ 'ಯುವ' ಸಾಧಕರು.!]

ಸದ್ಯ 'ಕಿರಿಕ್ ಪಾರ್ಟಿ' ಸಿನಿಮಾ ಮಾಡಿ ಯಶಸ್ವಿ ನಟರಾಗಿರುವ ರಕ್ಷಿತ್ ಹಿಂದೆ ಪಡಬಾರದ ಕಷ್ಟ ಪಟ್ಟಿದ್ದಾರೆ. ರಕ್ಷಿತ್ ಶೆಟ್ಟಿ ಸಿನಿಮಾಗಳು ಇಂದು 100 ದಿನ ಓಡುತ್ತಿವೆ. ಆದರೆ ಕೆಲವೇ ವರ್ಷಗಳ ಹಿಂದೆ ರಕ್ಷಿತ್ ಶೆಟ್ಟಿ ಪರಿಸ್ಥಿತಿ ಹೀಗಿರಲಿಲ್ಲ.

ಇಂಜಿನಿಯರಿಂಗ್ ಓದಿದ ಒಬ್ಬ ಸಾಮಾನ್ಯ ಹುಡುಗ, ಹೀರೋ ಆಗಬೇಕು ಎಂದು ಹೊರಟಾಗ ಏನಾಯಿತು..? ರಕ್ಷಿತ್ ಸಿನಿಪಯಣದ ಮೊದಲ ಹೆಜ್ಜೆಗಳು ಹೇಗಿತ್ತು..? ಇಲ್ಲಿ ಓದಿ....

ಓದಿದ್ದು ಇಂಜಿನಿಯರಿಂಗ್, ಆಗಿದ್ದು ಹೀರೋ.!

ಓದಿದ್ದು ಇಂಜಿನಿಯರಿಂಗ್, ಆಗಿದ್ದು ಹೀರೋ.!

ರಕ್ಷಿತ್ ಶೆಟ್ಟಿ ಇಂಜಿನಿಯರಿಂಗ್ ವಿದ್ಯಾರ್ಥಿ. ಅದಕ್ಕೆ ಸರಿಯಾಗಿ ವಿದೇಶದಲ್ಲಿ ಒಳ್ಳೆಯ ಕೆಲಸ ಸಿಕ್ಕಿತ್ತು. ಅದನ್ನೆಲ್ಲ ಬಿಟ್ಟು ಬಣ್ಣದ ಲೋಕಕ್ಕೆ ಬಂದರು ರಕ್ಷಿತ್ ಶೆಟ್ಟಿ. ಪ್ರಾರಂಭದಲ್ಲಿ ಅನೇಕ ಶಾರ್ಟ್ ಫಿಲ್ಮ್ಸ್ ಮೂಲಕ ಸಿನಿಮಾ ಮಾಡುವುದನ್ನ ಚೆನ್ನಾಗಿ ಕಲಿತರು.[ಪ್ರೋಮೋ ನೋಡಿ: ಸಾಧಕರ ಸೀಟ್ ಮೇಲೆ ಕೂತು ಕಣ್ಣೀರಿಟ್ಟ ರಕ್ಷಿತ್ ಶೆಟ್ಟಿ]

ಅವಕಾಶಕ್ಕಾಗಿ ಅಲೆದಾಟ

ಅವಕಾಶಕ್ಕಾಗಿ ಅಲೆದಾಟ

ತಮ್ಮ ಪ್ರತಿಭೆಯನ್ನ ನಿರೂಪಿಸುವುದಕ್ಕೆ ಯಾವುದಾದ್ರೂ ಒಂದು ಅವಕಾಶ ಸಿಗಲಿ ಅಂತ ರಕ್ಷಿತ್ ಕಾಯುತ್ತಿದ್ರು. ಆಗ ನಟನಾಗಿ 'ಪ್ರೇಮ ಪಯಣ' ಎನ್ನುವ ಸಿನಿಮಾ ಶುರು ಮಾಡಿದ್ದರು. ಆದರೆ ಪ್ರೊಡ್ಯೂಸರ್ ಇಲ್ಲದೆ ಸಿನಿಮಾ ಅರ್ಧದಲ್ಲಿ ನಿಂತು ಹೋಯ್ತು.['ವೀಕೆಂಡ್ ವಿತ್ ರಮೇಶ್'ನಲ್ಲಿ ರಕ್ಷಿತ್ ಶೆಟ್ಟಿ: ಸಿಡಿಮಿಡಿಗೊಂಡ ವೀಕ್ಷಕರು.!]

ಮೊದಲ ಸಿನಿಮಾ

ಮೊದಲ ಸಿನಿಮಾ

'ನಮ್ ಏರಿಯಾಲ್ ಒಂದಿನ' ರಕ್ಷಿತ್ ಶೆಟ್ಟಿ ಅಭಿನಯದ ಮೊದಲ ಸಿನಿಮಾ. ಈ ಸಿನಿಮಾದ ಆಡಿಷನ್ ಗೆ ರಕ್ಷಿತ್ ಹೋದಾಗ ನಿರ್ದೇಶಕ ಅರವಿಂದ್ ಈ ಹುಡುಗನಿಗೆ ಆಡಿಷನ್ ಮಾಡಬೇಕಾ ಬೇಡ್ವಾ ಎಂದು ಅಂದುಕೊಂಡು ಕೊನೆಗೆ ಹೋಗ್ಲಿ ಅಂತ ಮಾಡಿದ್ರಂತೆ. ಆದ್ರೇ ಫೈನಲ್ ಆಗಿ ಈ ಚಿತ್ರದಲ್ಲಿ ರಕ್ಷಿತ್ ಸೆಲೆಕ್ಟ್ ಆಗಿ ಬಿಟ್ಟರು.[ಯಾರು ಎಷ್ಟೇ ಹೇಳಿದ್ರೂ, 'ವೀಕೆಂಡ್ ವಿತ್ ರಮೇಶ್' ಬಗ್ಗೆ ವೀಕ್ಷಕರ ಕೋಪ ಕಮ್ಮಿ ಆಗ್ತಿಲ್ಲ.!]

ಸೋಲು, ನೋವು, ಅವಮಾನ

ಸೋಲು, ನೋವು, ಅವಮಾನ

ಮೊದಮೊದಲು ರಕ್ಷಿತ್ ಮಾಡಿದ ಯಾವ ಸಿನಿಮಾಗಳೂ ಕ್ಲಿಕ್ ಆಗುತ್ತಿರಲಿಲ್ಲ. ಪ್ರಾರಂಭದಲ್ಲಿ 'ನಮ್ ಏರಿಯಾಲ್ ಒಂದಿನ' ಮತ್ತು 'ತುಘಲಕ್'... ಎರಡು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಆ ಎರಡು ಸಿನಿಮಾಗಳಲ್ಲಿ ಸಿಕ್ಕಿದ್ದು ಸೋಲು, ನೋವು, ಅವಮಾನ ಮಾತ್ರ.

ಕಣ್ಣೀರಿಟ್ಟಿದ್ದ ರಕ್ಷಿತ್

ಕಣ್ಣೀರಿಟ್ಟಿದ್ದ ರಕ್ಷಿತ್

'ತುಘಲಕ್' ಸಿನಿಮಾ ರಿಲೀಸ್ ಆದಾಗ ಸಿನಿಮಾ ನೋಡುವುದಕ್ಕೆ ಯಾರು ಬರಲೇ ಇಲ್ಲ. ಆಗ ಕಷ್ಟ ಪಟ್ಟು ಮಾಡಿದ ಸಿನಿಮಾ ಹೀಗಾಯ್ತು, ನಮ್ಮ ಕಥೆ ಮುಗಿಯಿತು ಅಂತ ತ್ರಿಭುವನ್ ಚಿತ್ರಮಂದಿರದ ಮುಂದೆ ಕುಳಿತು ಸ್ನೇಹಿತರೊಂದಿಗೆ ಕಣ್ಣೀರಿಟ್ಟಿದ್ದರು ರಕ್ಷಿತ್.

ಕಷ್ಟ ಅಂತ ಅನ್ಸಿಲ್ಲ

ಕಷ್ಟ ಅಂತ ಅನ್ಸಿಲ್ಲ

''ಆಗ ಕಳೆದ ದಿನಗಳನ್ನ ಈಗ ನೆನೆಸಿಕೊಂಡರೆ ಕಷ್ಟದ ದಿನಗಳು ಅಂತ ಹೇಳಬಹುದು. ಆದರೆ ಆಗ ಅದು ಕಷ್ಟ ಅಂತ ಅನಿಸಿರಲಿಲ್ಲ. ಉಟ ಇಲ್ಲದೆ, ದುಡ್ಡು ಇಲ್ಲದೆ ಇರುವ ದಿನಗಳು ಆಗ ಕಾಮನ್ ಆಗಿಬಿಟ್ಟಿತ್ತು'' - ರಕ್ಷಿತ್ ಶೆಟ್ಟಿ

ಸೋಲು ಗೆಲುವು

ಸೋಲು ಗೆಲುವು

ಸಿನಿಮಾರಂಗದಲ್ಲಿ ಮೊದಲು ಸೋಲು ಕಂಡಾಗ ಅದೆಷ್ಟೋ ಜನರು ಇದು ನಮಗಲ್ಲ ಅಂತ ತಿಳಿದು ಬಿಡುತ್ತಾರೆ. ಆದ್ರೇ ಸೋಲು ಇರುವುದೇ ಮುಂದೆ ಗೆಲ್ಲುವುದಕ್ಕೆ ಅಂತ ತಿಳಿದು ಪ್ರಯತ್ನ ಪಟ್ಟರೆ ರಕ್ಷಿತ್ ತರಹ ಒಬ್ಬ ಸಾಧಕ ಆಗಬಹುದು.

More from Filmibeat

English summary
Kannada Actor 'Rakshit shetty' reveals his struggling days in Zee Kannada Channel's popular show Weekend with Ramesh-3
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X