For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್ ಮನೆಗೆ ರಿಯಾ ಚಕ್ರವರ್ತಿ: ಸಂಭಾವನೆ ಇಷ್ಟೋಂದಾ?

  |

  ದಿವಂಗತ ನಟ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಈಗ ಮತ್ತೆ ಸುದ್ದಿಗೆ ಬಂದಿದ್ದಾರೆ. ಸುಶಾಂತ್ ಸಿಂಗ್ ನಿಧನವಾದ ಸಂದರ್ಭದಲ್ಲಿ ರಿಯಾ ಚಕ್ರವರ್ತಿಯನ್ನು ದೋಷಿ ಮಾಡಲಾಗಿತ್ತು. ಸುಶಾಂತ್ ಸಿಂಗ್ ನಿಧನದಿಂದ ಹೊರಬಿದ್ದ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸಹ ಅನುಭವಿಸಿದರು ರಿಯಾ. ಇದೀಗ ಬಿಗ್‌ಬಾಸ್‌ ಕಾರಣಕ್ಕೆ ಸುದ್ದಿಗೆ ಬಂದಿದ್ದಾರೆ ಈ ನಟಿ.

  ರಿಯಾ ಚಕ್ರವರ್ತಿ ಹಿಂದಿ ಬಿಗ್‌ಬಾಸ್ ಸೀಸನ್ 15ರಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಬಗ್ಗೆ ಈಗಾಗಲೇ ಸುದ್ದಿಗಳು ಜೋರಾಗಿ ಹರಿದಾಡುತ್ತಿವೆ. ರಿಯಾ ಚಕ್ರವರ್ತಿ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯಾಗುವುದು ಖಾತ್ರಿ ಎಂದೇ ಹೇಳಲಾಗುತ್ತಿದ್ದು, ರಿಯಾ ಪಡೆಯುತ್ತಿರುವ ಸಂಭಾವನೆ ಎಷ್ಟೆಂಬುದನ್ನೂ ಸಹ ಕೆಲವು ಬಾಲಿವುಡ್ ಕೇಂದ್ರಿತ ಮಾಧ್ಯಮಗಳು, ಪತ್ರಿಕೆಗಳು ವರದಿ ಮಾಡಿವೆ.

  ರಿಯಾ ಚಕ್ರವರ್ತಿ ಕೆಲವು ದಿನಗಳ ಹಿಂದೆ ಹಿಂದಿ ಬಿಗ್‌ಬಾಸ್ ಚಿತ್ರೀಕರಣ ನಡೆಯುವ ಸೆಟ್‌ನ ಬಳಿ ಕಾಣಿಸಿಕೊಂಡಿದ್ದಾರೆ. ಹಾಗಾಗಿಯೇ ರಿಯಾ ಚಕ್ರವರ್ತಿ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿಗಳು ಜೋರಾಗಿ ಕೇಳಿ ಬರುತ್ತಿವೆ. ರಿಯಾ ಚಕ್ರವರ್ತಿ ಮುಂಬೈನ ಹೋಟೆಲ್ ಒಂದರಲ್ಲಿ ಕ್ವಾರಂಟೈನ್‌ನಲ್ಲಿದ್ದು ಬಿಗ್‌ಬಾಸ್ ಮನೆ ಪ್ರವೇಶಿಸಲು ತಯಾರಾಗುತ್ತಿದ್ದಾರೆ ಎನ್ನಲಾಗಿದೆ.

  ಭಾರಿ ಮೊತ್ತದ ಸಂಭಾವನೆ ಪಡೆಯಲಿದ್ದಾರೆ

  ಭಾರಿ ಮೊತ್ತದ ಸಂಭಾವನೆ ಪಡೆಯಲಿದ್ದಾರೆ

  ಬಿಗ್‌ಬಾಸ್ ಮನೆ ಪ್ರವೇಶಿಸಲು ರಿಯಾ ಚಕ್ರವರ್ತಿ ಭಾರಿ ದೊಡ್ಡ ಮೊತ್ತದ ಹಣವನ್ನು ಪಡೆಯುತ್ತಿದ್ದಾರೆ. ರಿಯಾ ಚಕ್ರವರ್ತಿ ಬರೋಬ್ಬರಿ 35 ಲಕ್ಷ ರು ಹಣ ಪಡೆಯಲಿದ್ದಾರೆ ಅದೂ ಕೇವಲ ಒಂದು ವಾರಕ್ಕೆ. ಬಿಗ್‌ಬಾಸ್ ಶೋ 14 ವಾರಗಳ ನಡೆಯಲಿದ್ದು, 35 ಲಕ್ಷದಂತೆ ಲೆಕ್ಕಹಾಕಿದರೆ ಬಿಗ್‌ಬಾಸ್ ಮುಗಿಯುವ ವರೆಗೆ 4.90 ಕೋಟಿ ಹಣವನ್ನು ಸಂಪಾದನೆ ಮಾಡಲಿದ್ದಾರೆ. ಬಿಗ್‌ಬಾಸ್ ಸ್ಪರ್ಧೆ ಗೆದ್ದರೆ 50 ಲಕ್ಷ ಹಣ ಹೆಚ್ಚುವರಿಯಾಗಿ ದೊರಕಲಿದೆ. ಈವರೆಗೆ ಇಷ್ಟು ದೊಡ್ಡ ಮೊತ್ತವನ್ನು ಇನ್ಯಾವ ಸ್ಪರ್ಧಿಗೂ ಕೊಟ್ಟಿಲ್ಲ ಬಿಗ್‌ಬಾಸ್.

  ಬಿಗ್‌ಬಾಸ್ ಶೋನಲ್ಲಿ ಸುಶಾಂತ್ ಸಿಂಗ್ ವಿಷಯ?

  ಬಿಗ್‌ಬಾಸ್ ಶೋನಲ್ಲಿ ಸುಶಾಂತ್ ಸಿಂಗ್ ವಿಷಯ?

  ರಿಯಾ ಚಕ್ರವರ್ತಿ ಬಿಗ್‌ಬಾಸ್ ಮನೆ ಪ್ರವೇಶಿಸಿದರೆ ಸಹಜವಾಗಿಯೇ ಶೋಗೆ ದೊಡ್ಡ ಮಟ್ಟದ ವೀವರ್‌ಶಿಪ್ ದೊರಕುತ್ತದೆ. ರಿಯಾ ಚಕ್ರವರ್ತಿ ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಕ್ಲಿಷ್ಟಕರ ಸನ್ನಿವೇಶಗಳನ್ನು ಎದುರಿಸಿದ್ದಾರೆ. ಸುಶಾಂತ್ ಸಿಂಗ್‌ ಜೊತೆಗಿನ ಅವರ ಆಪ್ತ ಕ್ಷಣಗಳು, ಸುಶಾಂತ್ ಸಿಂಗ್ ಸಾವಿನ ಬಳಿಕ ರಿಯಾ ಎದುರಿಸಿದ ಸಮಸ್ಯೆಗಳು, ಜೈಲು ವಾಸ ಇನ್ನೂ ಹಲವು ವಿಷಯಗಳ ಬಗ್ಗೆ ರಿಯಾ ಚಕ್ರವರ್ತಿ ಬಿಗ್‌ಬಾಸ್ ಶೋನಲ್ಲಿ ಮಾತನಾಡುವ ಸಾಧ್ಯತೆ ಇದೆ.

  ಭಾರಿ ಸಂಭಾವನೆ ಪಡೆಯುತ್ತಿರುವ ಸಲ್ಮಾನ್ ಖಾನ್

  ಭಾರಿ ಸಂಭಾವನೆ ಪಡೆಯುತ್ತಿರುವ ಸಲ್ಮಾನ್ ಖಾನ್

  ಬಿಗ್‌ಬಾಸ್ 15 ಸ್ಪರ್ಧಿಗಳಿಗಿಂತಲೂ ಸಂಭಾವನೆ ಕಾರಣಕ್ಕೆ ಹೆಚ್ಚು ಸುದ್ದಿಯಾಗುತ್ತಿದೆ. ಬಿಗ್‌ಬಾಸ್ ಸೀಸನ್ 15 ನಿರೂಪಣೆ ಮಾಡಲು ಸಲ್ಮಾನ್ ಖಾನ್ ಸಹ ದಾಖಲೆ ಮೊತ್ತದ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಭಾರತೀಯ ಕಿರುತೆರೆ ಇತಿಹಾಸದಲ್ಲಿ ಹಿಂದೆ ಯಾರೂ ಪಡೆಯದಷ್ಟು ಸಂಭಾವನೆಯನ್ನು ಸಲ್ಮಾನ್ ಖಾನ್‌ಗೆ ನೀಡಲಾಗುತ್ತಿದೆ. ಸಲ್ಮಾನ್ ಖಾನ್ ಬರೋಬ್ಬರಿ 350 ಕೋಟಿ ರುಪಾಯಿಯನ್ನು ಸಂಭಾವನೆಯಾಗಿ ಪಡೆಯುತ್ತಿದ್ದಾರೆ. ವಾರಾಂತ್ಯದ ಎರಡು ಎಪಿಸೋಡ್‌ ನಿರೂಪಣೆ ಜೊತೆಗೆ ಮೊದಲ ಎಪಿಸೋಡ್‌ನಲ್ಲಿ ಡ್ಯಾನ್ಸ್ ಹಾಗೂ ಕೊನೆಯ ಎಪಿಸೋಡ್‌ ಡ್ಯಾನ್ಸ್, ಬಿಗ್‌ಬಾಸ್ ಜಾಹೀರಾತು ಎಲ್ಲಕ್ಕೂ ಸೇರಿ ಇಷ್ಟು ದೊಡ್ಡ ಸಂಭಾವನೆಯನ್ನು ಸಲ್ಮಾನ್ ಖಾನ್ ಪಡೆಯುತ್ತಿದ್ದಾರೆ.

  ಅಕ್ಟೋಬರ್ 2 ರಿಂದ ಪ್ರಸಾರ, ಸ್ಪರ್ಧಿಗಳು ಯಾರ್ಯಾರು?

  ಅಕ್ಟೋಬರ್ 2 ರಿಂದ ಪ್ರಸಾರ, ಸ್ಪರ್ಧಿಗಳು ಯಾರ್ಯಾರು?

  ಬಿಗ್‌ಬಾಸ್ ಸೀಸನ್ 15 ಅನ್ನು ಅರಣ್ಯದ ಥೀಮ್‌ ಇಟ್ಟುಕೊಂಡು ರೂಪಿಸಲಾಗಿದ್ದು, ಈಗಾಗಲೇ ಪ್ರೋಮೊಗಳು ಬಿಡುಗಡೆ ಆಗಿದೆ. ಅಲ್ಲದೆ ಕೆಲವು ಸ್ಪರ್ಧಿಗಳ ಹೆಸರುಗಳು ಖಚಿತ ಸಹ ಆಗಿವೆ. ತೇಜಸ್ವಿ ಪ್ರಕಾಶ್, ಕರಣ್ ಕುಂದ್ರಾ, ಸಿಂಭಾ ನಾಗ್‌ಪಾಲ್, ಅಫ್ಸಾನಾ ಖಾನ್ ಅವರುಗಳು ಈಗ ಬಿಡುಗಡೆ ಮಾಡಿರುವ ಪ್ರೋಮೋನಲ್ಲಿ ಕಾಣಿಸಿಕೊಂಡಿದ್ದಾರೆ. ಇವರನ್ನು ಹೊರತುಪಡಿಸಿ, ರಿಯಾ ಚಕ್ರವರ್ತಿ, ಉಮರ್ ರಿಯಾಜ್, ದೋನಲ್ ಬಿಷ್ಟ್, ಬಿಗ್‌ಬಾಸ್ ಒಟಿಟಿಯಿಂದ ಅವಕಾಶ ಗಿಟ್ಟಿಸಿಕೊಂಡ ಪ್ರತೀಕ್ ಸೆಹೆಜ್‌ಪಾಲ್, ನಿಶಾಂತ್ ಭಟ್, ರಾಖಿ ಸಾವಂತ್ ಪತಿ ರಿತೇಶ್, ವಿಶಾಲ್ ಕೋಟಿಯಾನ್, ಆಕಾಶಾ ಸಿಂಗ್ ಇನ್ನೂ ಕೆಲವರು ಶೋನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಬಿಗ್‌ಬಾಸ್ ಸೀಸನ್ 15 ಅಕ್ಟೋಬರ್ 15 ರಿಂದ ಪ್ರಸಾರವಾಗಲಿದೆ.

  English summary
  Actress Rhea Chakraborty charging 35 lakh rs per week to enter bigg boss house. She is the highest paid contestant in Bigg Boss history.
  Thursday, September 30, 2021, 9:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X