ಯುಜ್ವೇಂದ್ರ ಚಹಾಲ್ ಮಾಜಿ ಪತ್ನಿ ಧನಶ್ರೀಯನ್ನು ಕಾಡಲು ಶುರುಮಾಡಿದ ಪವರ್ ಸ್ಟಾರ್
''ಬಿಗ್ ಬಾಸ್'' ಎಂಬ ಕಾರ್ಯಕ್ರಮವನ್ನೇ ಸಹಿಸಿಕೊಳ್ಳಲು ಅನೇಕರಿಗೆ ಸಾಧ್ಯವಾಗುತ್ತಿಲ್ಲ. ಯಾಕೆಂದರೆ.. ಈ ಮನೆಯ ವಾತಾವರಣವೇ ಅಂತಹದ್ದು. ಕೇವಲ ಈ ಬಾರಿ ಮಾತ್ರವಲ್ಲ ಕಳೆದ ಒಂದೂವರೆ ದಶಕಗಳಿಂದ ಕೂಡ ಈ ಕಾರ್ಯಕ್ರಮವನ್ನು ಜನ ನೋಡುತ್ತಲೇ ಬೈಯ್ಯುತ್ತಾರೆ. ಬೈಯ್ಯುತ್ತಲೇ ನೋಡುತ್ತಾರೆ. ಆ ಭಾಷೆ ಈ ಭಾಷೆ ಅಂತಲ್ಲ. ಬಹುತೇಕ ಎಲ್ಲಾ ಭಾಷೆಯಲ್ಲಿ ಈ ಕಾರ್ಯಕ್ರಮದ ಕಥೆ ಇಷ್ಟೇ.
ಹೀಗಿರುವಾಗ ಇದೀಗ ಇದೇ ಕಾರ್ಯಕ್ರಮದ ಯಥಾವತ್ತು ನಕಲು ಮಾಡಲಾಗಿದೆ. ಅದಕ್ಕೆ ''ರೈಸ್ & ಫಾಲ್'' ಎಂದು ಹೆಸರಿಡಲಾಗಿದೆ. ''ಬಿಗ್ ಬಾಸ್'' ಮನೆಯಂತೆಯೇ ಈ ಮನೆಯಲ್ಲಿ ಕೂಡ ತಾರೆಯರ ದಂಡು ಇದೆ.
ಭಾರತ ತಂಡದ ಕ್ರಿಕೆಟರ್ ಯುಜುವೇಂದ್ರ ಚಹಾಲ್ ಅವರ ಮಾಜಿ ಪತ್ನಿ ಧನಶ್ರೀ ವರ್ಮಾ.. ಭೋಜ್‌ಪುರಿಯ ಪವರ್ ಸ್ಟಾರ್ ಪವನ್ ಸಿಂಗ್.. ದ್ಯಾನೀಶ್ ಸೇಠ್ ಅವರ ಸಹೋದರಿ ಕುಬ್ರಾ ಸೇಠ್.. ಉದಿತ್ ನಾರಾಯಣ್ ಮಗ ಆದಿತ್ಯ ನಾರಾಯಣ್... ಹೀಗೆ ಹದಿನೈದು ಜನರನ್ನು ಈ ಮನೆಯಲ್ಲಿ ಕೂಡಿ ಹಾಕಲಾಗಿದೆ.
ಸದ್ಯ ಇದೇ ಮನೆಯಲ್ಲಿ ಭೋಜ್‌ಪುರಿಯ ಪವರ್ ಸ್ಟಾರ್ ಪವನ್ ಸಿಂಗ್ ಹಾವಳಿ ಶುರುವಾಗಿದೆ. ಮೊನ್ನೆ ಮೊನ್ನೆಯಷ್ಟೇ ಕಾರ್ಯಕ್ರಮವೊಂದರಲ್ಲಿ ನಾಯಕಿ ಅಂಜಲಿ ರಾಘವ್ ಅವರ ಸೊಂಟವನ್ನು ಮುಟ್ಟಿ ಆಕ್ರೋಶಕ್ಕೆ ಗುರಿಯಾಗಿದ್ದ ಪವನ್ ಸಿಂಗ್ ಕಣ್ಣೀಗ ಧನಶ್ರೀ ವರ್ಮಾ ಅವರ ಮೇಲೆ ಬಿದ್ದಿದೆ. ಈ ವಿಚಾರ ಧನಶ್ರೀಗೆ ಕೂಡ ಗೊತ್ತಾಗಿದ್ದು ಮತ್ತೊಬ್ಬ ಸ್ಫರ್ಧಿ ಅರ್ಬಾಜ್ ಪಟೇಲ್ ಅವರ ಎದುರು ಕಿಡಿ ಕಾರಿದ್ದಾರೆ.
ಹೌದು, ಇತ್ತೀಚೆಗೆ ಕಾರ್ಯಕ್ರಮದಲ್ಲಿ ಅರ್ಬಾಜ್ ಪಟೇಲ್ ಜೊತೆ ಧನಶ್ರೀ ವರ್ಮಾ ಮಾತನಾಡುವಾಗ ಪವನ್ ಸಿಂಗ್ ಅವರ ಹೆಸರು ಪ್ರಸ್ತಾವನೆಯಾಗಿದೆ. ಆಗ ಪವನ್ ಸಿಂಗ್ ಅವರಿಂದ ದೂರ ಇರುವಂತೆ ಧನಶ್ರೀ ವರ್ಮಾಗೆ ಅರ್ಬಾಜ್ ಪಟೇಲ್ ಸಲಹೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಧನಶ್ರೀ ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ. ನಾನು ಅವರಿಂದ ಅಂತರ ಕಾಪಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲ ಪವನ್ ಸಿಂಗ್ ಯಾವಾಗಲೂ ನನ್ನ ಜೊತೆ ಫ್ಲರ್ಟ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ನನಗೆ ಈ ವಿಚಾರ ಗೊತ್ತು ಹಾಗಾಗಿ ನಾನು ಅವರಿಂದ ದೂರ ಇದ್ದೇನೆ ಎಂದು ಹೇಳಿದ್ದಾರೆ.
ಸದ್ಯ ಧನಶ್ರೀ ವರ್ಮಾ ಅವರ ಈ ಮಾತು ಭೋಜ್‌ಪುರಿಯ ಪವರ್ ಸ್ಟಾರ್ ಪವನ್ ಸಿಂಗ್ ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಯಾಕೆಂದರೆ..ಪವನ್ ಸಿಂಗ್ ಬಗ್ಗೆ ಭೋಜ್‌ಪುರಿ ಚಿತ್ರರಂಗದಲ್ಲಿ ಒಳ್ಳೆಯ ಅಭಿಪ್ರಾಯಗಳಿಲ್ಲ. ಪವನ್ ಸಿಂಗ್ ಸ್ತ್ರೀಲೋಲ ಎಂದು ಅವರದ್ದೇ ಚಿತ್ರರಂಗ ಮಾತನಾಡಿಕೊಳ್ಳುತ್ತೆ. ಇದಕ್ಕೆ ಪೂರಕವಾಗಿ ಹಲವು ಬಾರಿ ಪವನ್ ಸಿಂಗ್ ಹೆಣ್ಣಿನ ವಿಚಾರದಿಂದಲೇ ಸದ್ದು ಮಾಡಿದ್ಧಾರೆ. ವಿವಾದಕ್ಕೀಡಾಗಿದ್ದಾರೆ.

ಇನ್ನೂ ತಮ್ಮ ಪತ್ನಿಯ ಜೊತೆ ಇವರ ಸಂಬಂಧ ಸರಿ ಇಲ್ಲ. ಅತ್ತು ಕರೆದರೂ ಕೂಡ ಪವನ್ ಸಿಂಗ್ ತಮ್ಮ ಪತ್ನಿಯ ಜೊತೆ ಮಾತನಾಡದೇ ಅವರಿಂದ ದೂರ ಇದ್ದಾರೆ. ಆದರೂ ಕೂಡ ಪವನ್ ಸಿಂಗ್ ಅವರ ಮೇಲೆ ಭೋಜ್‌ಪುರಿಯ ಚಿತ್ರರಸಿಕರಿಗೆ ತುಂಬಾ ಹೆಮ್ಮೆ ಇದೆ.
ಹೀಗಾಗಿಯೇ ಈ ಕಾರ್ಯಕ್ರಮದಲ್ಲಿ ಪವನ್ ಸಿಂಗ್ ಭಾಗವಹಿಸುತ್ತಿದ್ದಾರೆ ಎನ್ನುವ ವಿಷಯ ಕೇಳಿ ಥ್ರಿಲ್ ಆಗಿದ್ದ ಇವರ ಅಭಿಮಾನಿಗಳು ಕಾರ್ಯಕ್ರಮವನ್ನು ತಪ್ಪದೇ ನೋಡುತ್ತಿದ್ದಾರೆ. ಸ್ಫರ್ಧಿಗಳ ಜೊತೆ ಪವನ್ ಸಿಂಗ್ ಅವರು ಕುದುರಿಸಿಕೊಂಡ ಸಂಬಂಧದ ಪರಿಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಹೀಗಿರುವಾಗ ಪವನ್ ಸಿಂಗ್ ತುಂಬಾ ಫ್ಲರ್ಟ್ ಮಾಡುತ್ತಾರೆ ಎಂದು ಧನಶ್ರೀ ವರ್ಮಾ ಹೇಳಿದ್ಧಾರೆ.
ಸದ್ಯ ಧನಶ್ರೀ ವರ್ಮಾ ಮಾತನಾಡಿರುವ ಈ ಮಾತು ಇನ್ನೂ ಪವನ್ ಸಿಂಗ್ ಅವರ ಕಿವಿಗೆ ಬಿದ್ದಿಲ್ಲ. ಧನಶ್ರೀ ತಮ್ಮ ಬಗ್ಗೆ ಮಾತನಾಡಿರುವ ಈ ಮಾತುಗಳನ್ನು ಕೇಳಿದ ನಂತರ ಪವನ್ ಸಿಂಗ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











