BBK12: ಗಿಲ್ಲಿ ಮೇಲೆ ಕೈ ಮಾಡಿದ ರಿಷಾ ಗೌಡಗೆ ಶಿಕ್ಷೆ; ಮನೆ ದಾರಿ ತೋರಿಸಿದ ಕಿಚ್ಚ

ಬಿಗ್‌ಬಾಸ್ ಮನೆಯಲ್ಲಿ ಒಂದಷ್ಟು ನಿಯಮಗಳಿವೆ. ಅದನ್ನು ಸ್ಪರ್ಧಿಗಳು ಪಾಲಿಸಲೇ ಬೇಕು. ತಪ್ಪಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಸಹ ಸ್ಪರ್ಧಿಗಳ ಮೇಲೆ ಕೈ ಮಾಡುವುದು, ಅವಾಚ್ಯ ಶಬ್ಧಗಳಿಂದ ನಿಂದಿಸಬಾರದು. ಈ ತಪ್ಪು ಮಾಡಿ ಈಗಾಗಲೇ ಕೆಲವರು ಶಿಕ್ಷೆ ಅನುಭವಿಸಿದ್ದಾರೆ. ಇದೀಗ ರಿಷಾಗೂ ಅದೇ ಸ್ಥಿತಿ ಬಂದೊದಗಿದೆ.

ಕಳೆದ ವೀಕೆಂಡ್ ಕಿಚ್ಚ ಎಲ್ಲರಿಗೂ ಪಾಠ ಮಾಡಿ ಹೋದ ಬೆನ್ನಲ್ಲೇ ಸೋಮವಾರ(ನವೆಂಬರ್ 3) ಗಿಲ್ಲಿ ಹಾಗೂ ರಿಷಾ ನಡುವೆ ಕಿರಿಕ್ ಆಗಿತ್ತು. ಆತನ ಬೆನ್ನಿಗೆ ಬಲವಾಗಿ ಹೊಡೆದಿದ್ದರು. ಇದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಯಾವುದೇ ಸ್ಪರ್ಧಿ ಮೇಲೆ ಕೈ ಮಾಡುವಂತಿಲ್ಲ. ಆದರೆ ರಿಷಾ ಮಾಡಿದ್ದು ಎಷ್ಟು ಸರಿ, ಆಕೆಗೆ ಶಿಕ್ಷೆ ಆಗಲೇಬೇಕು ಮನೆಯಿಂದ ಹೊರಗೆ ಹಾಕಬೇಕು ಎಂದು ವೀಕ್ಷಕರು ಆಗ್ರಹಿಸಿದ್ದರು. ಕೊನೆಗೂ ಆ ಸಮಯ ಬಂದಂತೆ ಕಾಣುತ್ತಿದೆ.

Risha Gowda Faces Possible Eviction After Hitting gilli in Bigg Boss 12 House

ಸ್ಪರ್ಧಿಗಳ ಕೈಗೆ ರೆಡ್ ಕಾರ್ಡ್ ಕೊಟ್ಟು ರಿಷಾ ಮನೆಯಲ್ಲಿ ಇರಬೇಕಾ? ಬೇಡವಾ? ಎಂದು ನಿರ್ಧರಿಸುವಂತೆ ಸುದೀಪ್ ಸೂಚಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ಬಂದು ಸದ್ದು ಮಾಡ್ತಿದೆ. ಒಬ್ಬರ ಮೇಲೆ ಕೈ ಎತ್ತಿದ್ರೆ ಅದು ಬಿಗ್‌ಬಾಸ್ ಮನೆಯಲ್ಲಿ ಓಕೆ ಅಲ್ಲ, ಭಗವಂತ ಕೊಟ್ಟಿರುವ 2 ಕೈಗಳನ್ನು ಒಳ್ಳೆಯದ್ದಕ್ಕೆ ಅಥವಾ ಗೆಲ್ಲುವುದಕ್ಕೆ ಬಳಸಬೇಕು, ಒಬ್ಬ ಹುಡುಗ ಇದೇ ರೀತಿ ಒಬ್ಬ ಹುಡುಗಿಗೆ ಹೊಡೆದಿದ್ದರೆ ಏನೇನು ಆಗ್ತಿತ್ತು ಎಂದು ಸುದೀಪ್ ಹೇಳಿರುವುದು ವೈರಲ್ ಆಗ್ತಿದೆ.

ಸ್ಪರ್ಧಿಗಳ ಕೈಗೆ ಯೆಲ್ಲೋ ಕಾರ್ಡ್ ಹಾಗೂ ರೆಡ್ ಕಾರ್ಡ್ ಕೊಟ್ಟು ರಿಷಾಗೆ ವಾರ್ನಿಂಗ್ ಕೊಟ್ಟು ಮನೆಯಲ್ಲಿ ಉಳಿಸಿಕೊಳ್ಳಬೇಕಾ? ಅಥವಾ ತಪ್ಪಿಗೆ ಶಿಕ್ಷೆ ಎನ್ನುವಂತೆ ಮನೆಯಿಂದ ಹೊರಗೆ ಹಾಕಬೇಕಾ? ಎಂದು ನಿರ್ಧರಿಸಲು ಹೇಳಿದ್ದಾರೆ. ಇಂತಹ ತಪ್ಪುಗಳಿಗೆ ಶಿಕ್ಷೆ ಏನು ಎನ್ನುವ ಶಂಕುಸ್ಥಾಪನೆ ಆಗಲಿ ಎಂದು ಸುದೀಪ್ ಹೇಳಿದ್ದಾರೆ. ಎಷ್ಟು ಜನ ರೆಡ್ ಕಾರ್ಡ್ ಕೊಡ್ತಾರಾ? ಎಷ್ಟು ಜನ ಯೆಲ್ಲೋ ಕಾರ್ಡ್ ಕೊಟ್ಟು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಕಾದು ನೋಡಬೇಕಿದೆ.

ವೀಕೆಂಡ್ ಒಬ್ಬರು ಎಲಿಮಿನೇಟ್ ಆಗಬೇಕಿದೆ. ಆ ಶಿಕ್ಷೆ ರಿಷಾ ಗೌಡಗೆ ಸಿಗುತ್ತಾ ಕಾದು ನೋಡಬೇಕಿದೆ. ಬಕೆಟ್ ವಿಚಾರಕ್ಕೆ ಗಿಲ್ಲಿ ಹಾಗೂ ರಿಷಾ ನಡುವೆ ಕಿರಿಕ್ ಆಗಿತ್ತು. ಇದೇ ಕಾರಣಕ್ಕೆ ಆತನ ಮೇಲೆ ಹಲ್ಲೆ ಸಹ ಮಾಡಿದ್ದರು. ಸ್ನಾನಕ್ಕೆ ಹೋಗಲು ರಿಷಾ, ಗಿಲ್ಲಿ ಹಾಗೂ ಸೂರಜ್ ಸಾಲಲ್ಲಿ ಇದ್ದರು. ಆಗ ಬಕೆಟ್‌ನಲ್ಲಿ ನೀರು ಕೊಡುವಂತೆ ರಿಷಾ ಬಳಿ ಗಿಲ್ಲಿ ಕೇಳಿದ್ದರು. ಆಕೆ ನೀರು ಕೊಡದೇ ಇದ್ದಿದ್ದೆ ಜಗಳಕ್ಕೆ ಕಾರಣವಾಗಿತ್ತು.

ರಿಷಾ ತಮ್ಮ ಮಾತು ಕೇಳದೇ ಇದ್ದಾಗ ಗಿಲ್ಲಿ ಹೋಗಿ ಆಕೆಯ ಬಟ್ಟೆಗಳನ್ನು ತಂದು ಬಾತ್‌ರೂಮ್‌ ಏರಿಯಾದಲ್ಲಿ ಬಿಸಾಕಿದ್ದರು. ಸ್ನಾನ ಮಾಡಿ ಹೊರ ಬಂದ ರಿಷಾ ಇದನ್ನು ನೋಡಿ ಕೆಂಡಾಮಂಡಲವಾಗಿದ್ದರು. 10 ನಿಮಿಷ ಸ್ನಾನ ಮಾಡಿ ಬರವಷ್ಟರಲ್ಲಿ ಏನು ಮಾಡಿದ್ದೀಯಾ ಅಂತ ಕೂಗಾಡಿದ್ದರು. ಕೋಪದಲ್ಲಿ ಗಿಲ್ಲಿ ಬೆನ್ನಿಗೆ ಬಲವಾಗಿ ಹೊಡೆದಿದ್ದರು.

ಒಗೆದ ಬಟ್ಟೆಯನ್ನು ಹೀಗೆ ಮಾಡಿದ್ದು ಸರೀನಾ? ಗೊತ್ತಾಗಲ್ವಾ ನಿಂಗೆ ಅಂತ ರಿಷಾ ಮತ್ತೆ ಜೋರು ಮಾಡಿದ್ದರು. ನಿಂಗೆ ಮಾನ ಮರ್ಯಾದೆ ಇಲ್ವಾ? ಬಕೆಟ್ ನೀರು ಕೇಳಿದ್ರೆ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದೀಯಾ ಎಂದು ಗಿಲ್ಲಿ ಗಲಾಟೆ ಮಾಡಿದ್ದರು. ಬಳಿಕ ಬೆಡ್ ರೂಲ್ ಏರಿಯಾದಲ್ಲಿ ಗಿಲ್ಲಿಯನ್ನು ರಿಷಾ ತಳ್ಳಿದ್ದರು.

ರಕ್ಷಿತಾ ಬಂದು ಜಗಳ ಬಿಡಿಸುವ ಪ್ರಯತ್ನ ಮಾಡಿದ್ದರು. ಗಿಲ್ಲಿ ಪರ ಸೂರಜ್ ಹಾಗೂ ಕಾವ್ಯ ಮಾತನಾಡಿದ್ದರು. ಗಿಲ್ಲಿ ಕೇಳಿದಾಗ ನೀರು ಕೊಟ್ಟಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ ಎಂದಿದ್ದರು. ಇನ್ನು ಗಿಲ್ಲಿ ಮಾಡಿದ್ದು ಸರೀನಾ? ಎಂದು ಕೆಲ ವೀಕ್ಷಕರು ಪ್ರಶ್ನಿಸುತ್ತಿದ್ದಾರೆ.

More from Filmibeat

Read more about: bigg boss 12 sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X