'ಅನುಪಲ್ಲವಿ' ಧಾರಾವಾಹಿಯ ಮಾಧವಿಯಾಗಿ ಮತ್ತೆ ಕಿರುತೆರೆಗೆ ಕಾಲಿಟ್ಟ ರಿಶಾ ನಿಜಗುಣ ಹಿನ್ನೆಲೆಯೇನು?

By ಅನಿತಾ ಬನಾರಿ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಅನುಪಲ್ಲವಿ'. ಅಮ್ಮ ಮಗಳ ನಡುವಿನ ಕಥಾಹಂದರವನ್ನೊಳಗೊಂಡಿರುವ ಈ ಧಾರಾವಾಹಿಯಲ್ಲಿ ನಾಯಕಿಯಾಗಿ ಅನುಷಾ ಹೆಗ್ಡೆ ಅಭಿನಯಿಸಿದರೆ, ನಾಯಕನಾಗಿ ದರ್ಶಕ್ ಗೌಡ ಬಣ್ಣ ಹಚ್ಚುತ್ತಿದ್ದಾರೆ. ಇನ್ನು ಖಳನಾಯಕಿಯಾಗಿ ಸ್ಯಾಂಡಲ್‌ವುಡ್, ಕಿರುತೆರೆಯ ಜನಪ್ರಿಯ ನಟಿ ವನಿತಾವಾಸು ಅವರು ಕಾಣಿಸಿಕೊಂಡಿದ್ದಾರೆ.

'ಅನುಪಲ್ಲವಿ' ಧಾರಾವಾಹಿಯಲ್ಲಿ ಮಾಧವಿಯಾಗಿ ಅಭಿನಯಿಸುತ್ತಿದ್ದಾರೆ ರಿಶಾ ನಿಜಗುಣ. ಅಂದ ಹಾಗೇ ರಿಶಾ ನಿಜಗುಣ ಅವರು ಈ ಹಿಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಸ್ತೂರಿನಿವಾಸ' ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಇದೀಗ ಮಾಧವಿಯಾಗಿ ಉದಯ ವಾಹಿನಿಗೆ ಮರಳಿರುವ ಈಕೆ ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದ್ದಾರೆ.

Risha Nijaguna returns to television as Madhavi in the serial Anupallavi

ಅಂದ ಹಾಗೇ 'ಅನುಪಲ್ಲವಿ' ಧಾರಾವಾಹಿಗಿಂತ ಮೊದಲು ರಿಶಾ ನಿಜಗುಣ ಆಶಿಕಾ ಆಗಿ ಕಿರುತೆರೆಯಲ್ಲಿ ಮಿಂಚಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಚುಕ್ಕಿತಾರೆ' ಧಾರಾವಾಹಿಯಲ್ಲಿ ನಾಯಕಿ ಇಬ್ಬನಿಯ ಅಮ್ಮ ಆಶಿಕಾ ಆಗಿ ಈಕೆ ನಟಿಸಿದ್ದರು. ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸುತ್ತಿರುವ ಈಕೆ ನಟನೆಯ ನಂಟು ಬೆಳೆಸಿಕೊಳ್ಳಲು, ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳಲು ಕಾರಣ ಆಕೆಯ ಪಾಲಕರು. ಆಶ್ಚರ್ಯವಾದರೂ ಅದು ಸತ್ಯ.

ರಿಶಾ ನಿಜಗುಣ ಅವರ ತಂದೆ ತಾಯಿಗೆ ಮಗಳನ್ನು ನಟನಾ ಲೋಕದಲ್ಲಿ ನೋಡುವ ಬಯಕೆ. ಮಗಳು ನಟಿಯಾಗಬೇಕು ಎಂಬುದು ಅವರ ಕನಸಾಗಿತ್ತು. ಪೋಷಕರ ಕನಸನ್ನು ನನಸು ಮಾಡುವುದಕ್ಕಾಗಿ ನಟಿಯಾಗುವ ನಿರ್ಧಾರ ಮಾಡಿದರು ರಿಶಾ ನಿಜಗುಣ. ನಟನೆಯನ್ನು ಕಲಿಯುವುದಕ್ಕಾಗಿ ತನ್ನೂರು ಚಿತ್ರದುರ್ಗ ತೊರೆದು ಮಹಾನಗರಿ ಬೆಂಗಳೂರಿಗೆ ಈಕೆ ಕಾಲಿಟ್ಟರು.

Risha Nijaguna returns to television as Madhavi in the serial Anupallavi

ಕಲಾತ್ಮಕ ಎನ್ನುವ ಹವ್ಯಾಸಿ ತಂಡರಂಗವನ್ನು ಸೇರಿದ ರಿಶಾ ನಿಜಗುಣ ನಟನೆಯ ರೀತಿ ನೀತಿಗಳನ್ನು ಹಂತಹಂತವಾಗಿ ಅರಿತುಕೊಂಡರು. ಮುಂದೆ 'ಪ್ರಾರಬ್ಧ ಕರ್ಮ' ಹಾಗೂ 'ಗಡಿಯಂಕ ಕುಡಿಯುದ್ಧ' ಎಂಬ ನಾಟಕದಲ್ಲಿ ನಟಿಸಿ ಸೇರಿ ಒಂದಷ್ಟು ನಾಟಕಗಳಲ್ಲಿ ಈಕೆ ಅಭಿನಯಿಸಿದ್ದರು. ತಮ್ಮ ನಟನೆಯ ಮೂಲಕ ರಂಗಭೂಮಿಯಲ್ಲಿ ಗುರುತಿಸಿಕೊಂಡ ಈಕೆ ನಂತರ ಹಾರಿದ್ದು ಸ್ಯಾಂಡಲ್‌ವುಡ್‌ಗೆ.

ಜೋಗಿ ಪ್ರೇಮ್ ನಿರ್ದೇಶನದ 'ಡಿಕೆ ಬೋಸ್' ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಚಂದನವನಕ್ಕೆ ಕಾಲಿಟ್ಟ ಈಕೆ ನಂತರ ಕಾಣಿಸಿದ್ದು ಕಿರುತೆರೆಯಲ್ಲಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ವರಲಕ್ಷ್ಮಿ ಸ್ಟೋರ್ಸ್' ಧಾರಾವಾಹಿಯಲ್ಲಿ ರಕ್ಷಿತಾ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು ರಿಶಾ ನಿಜಗುಣ. ಮೊದಲ ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ಈಕೆ ಅಭಿನಯಿಸಿದ್ದರೂ, ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದರು.

ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮತ್ತೆ ವಸಂತ' ಧಾರಾವಾಹಿಯಲ್ಲಿ ನಾಯಕ ವಸಂತನ ತಂಗಿಯಾಗಿ ರಿಶಾ ನಿಜಗುಣ ಕಾಣಿಸಿಕೊಂಡಿದ್ದರು. ನಂತರ 'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ನಟಿಸಿದ ಈಕೆ ಎರಡನೇ ನಾಯಕಿಯಾಗಿ ಆ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು ಎಂದು ಹೇಳಿದರೆ ತಪ್ಪಾಗಲಾರದು. 'ಚುಕ್ಕಿತಾರೆ'ಯ ನಂತರ ಇದೀಗ 'ಅನುಪಲ್ಲವಿ' ಧಾರಾವಾಹಿಯಲ್ಲಿ ಬಣ್ಣ ಹಚ್ಚುತ್ತಿರುವ ರಿಶಾ ನಿಜಗುಣ ಒಂದಾದ ಮೇಲೆ ಒಂದರಂತೆ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ. ಆ ಮೂಲಕ ನಟಿಯಾಗಬೇಕು ಎಂಬ ತಮ್ಮ ಪಾಲಕರ ಕನಸನ್ನು ನನಸು ಮಾಡಿಕೊಂಡಿದ್ದಾರೆ.

More from Filmibeat

English summary
Risha Nijaguna returns to television as Madhavi in the serial Anupallavi
Read more about: actress tv show serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X