For Quick Alerts
  ALLOW NOTIFICATIONS  
  For Daily Alerts

  'ಹೆಮ್ಮೆಯ ಕನ್ನಡಿಗ' ಪ್ರಶಸ್ತಿಯನ್ನು ಶಾಲಾ ಮಕ್ಕಳಿಗೆ ಅರ್ಪಿಸಿದ ರಿಷಭ್

  |

  ನಿರ್ದೇಶಕ, ನಟ ರಿಷಭ್ ಶೆಟ್ಟಿ ಜೀ ಕನ್ನಡ ವಾಹಿನಿ ಕಡೆಯಿಂದ ಈ ವರ್ಷದ 'ಹೆಮ್ಮೆಯ ಕನ್ನಡಿಗ' ಪ್ರಶಸ್ತಿ ಪಡೆದಿದ್ದಾರೆ. 'ಹೆಮ್ಮೆಯ ಪ್ರತಿಭೆ' ಎಂದು ಜೀ ಕನ್ನಡ ವಾಹಿನಿ ಅವರನ್ನು ಗುರುತಿಸಿದೆ.

  'ಕಿರಿಕ್ ಪಾರ್ಟಿ' ಸಿನಿಮಾದ ದೊಡ್ಡ ಯಶಸ್ಸಿ ನಂತರ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾ ಮಾಡಿದ ರಿಷಭ್ ಅಲ್ಲಿಯೂ ಗೆದ್ದರು. ಅವರ ಈ ಪ್ರಯೋಗಕ್ಕೆ ಒಳ್ಳೆಯ ಹೆಸರು, ಪ್ರಶಸ್ತಿಗಳು ಸಿಕ್ಕವು.

  'ಹೆಮ್ಮೆಯ ಕನ್ನಡಿಗ' ವೇದಿಕೆಯಲ್ಲಿ ಜೈಜಗದೀಶ್ ಪುತ್ರಿಯರ ಡ್ಯಾನ್ಸ್

  ನಿರ್ದೇಶನ ಮಾತ್ರವಲ್ಲದೆ ರಿಷಭ್ ಹೊಸ ಹೊಸ ರೀತಿಯ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶನ, ನಿರ್ಮಾಣದ ಬಳಿಕ 'ಬೆಲ್ ಬಾಟಂ' ಮೂಲಕ ನಟನೆಯಲ್ಲಿಯೂ ಫುಲ್ ಮಾರ್ಕ್ ಪಡೆದಿದ್ದಾರೆ.

  ಈ ರೀತಿ ಮೂರು ವಿಭಾಗದಲ್ಲಿ ಗುರುತಿಸಿಕೊಂಡು ಯಶಸ್ಸು ಗಳಿಸಿದ ರಿಷಬ್ ಶೆಟ್ಟಿ ಇದೀಗ ಜೀ ಕನ್ನಡ ವಾಹಿನಿಯ 'ಹೆಮ್ಮೆಯ ಪ್ರತಿಭೆ' ಪ್ರಶಸ್ತಿಗೆ ಭಾಜನರಾಗಿದ್ದಾರೆ.

  ಖುಷಿ ವಿಷಯ ಏನೆಂದರೆ, ಈ ಪ್ರಶಸ್ತಿಯನ್ನು ಅವರು ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಿಗೆ ಅರ್ಪಣೆ ಮಾಡಿದ್ದಾರೆ. ಈ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಅವರು ಹಂಚಿಕೊಂಡಿದ್ದಾರೆ.

  English summary
  Kannada director Rishab Shetty dedicated Zee Kannada channels 'Hemmeya Kannadiga' award to school children.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X