ಕಾಳಿಕಾ ಶ್ರೀ ಎಂಟ್ರಿ, ಬಿಗ್ ಬಾಸ್ ಮನೆಯಲ್ಲಿ ತಳಮಳ!
ಬಳಿಕ ಬಂದರು ನೋಡಿ ಕಾಳಿಕಾ ಮಠದ ಋಷಿಕುಮಾರ ಸ್ವಾಮೀಜಿ. ಅವರನ್ನು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಬಂದು ಬಿಗ್ ಬಾಸ್ ಮನೆಯಲ್ಲಿ ಬಿಡಲಾಯಿತು. ಜೊತೆಗೆ ಬ್ಯಾಕ್ ಗ್ರೌಂಡ್ ಮ್ಯೂಸಿಕ್ "ಚೆಲ್ಲಿದರು ಮಲ್ಲಿಗೆಯಾ ಬಾಣಾಸುರ್ ಏರಿಮ್ಯಾಲೆ..ಅಂದದ ಚೆಂದದ ಮಾಯಕಾರ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ..."
ಬಿಗ್ ಬಾಸ್ ಮನೆಗೆ ಬಂದವರು ಕಾಳಿಕಾ ಮಠದ ಸ್ವಾಮೀಜಿ ಎಂದು ಗೊತ್ತಾಗುತ್ತಿದ್ದಂತೆ ಸ್ವಲ್ಪ ಡಲ್ ಆದಂತೆ ಕಂಡವರು ಬ್ರಹ್ಮಾಂಡ ಖ್ಯಾತಿಯ ನರೇಂದ್ರ ಬಾಬು ಶರ್ಮಾ. ಕಾಳಿಕಾ ಮಠ ಶ್ರೀಗಳನ್ನು ನೋಡಿ ಉಳಿದವರು ಕೊಂಚ ತಡಬಡಾಯಿಸಿದರು.
ಬಳಿಕ ಅವರಿಗೆ ಮನೆಯ ಪರಿಚಯ ಮಾಡಿಕೊಡಲಾಯಿತು. ಎಲ್ಲರೂ ಅವರ ಬಗ್ಗೆ ಗುಸುಗುಸು ಎಂದು ಮಾತನಾಡಿಕೊಂಡರು. ಮನೆಯಲ್ಲಿ ಇನ್ನೇನು ಅವಾಂತರ ಕಾದಿದೆಯೋ ಏನೋ ಎಂದು ಒಬ್ಬರ ಮುಖ ಒಬ್ಬರು ನೋಡಿಕೊಂಡರು.

ಅಯ್ಯೋ ಈ ಸ್ವಾಮೀಜಿ ಯಾಕಪ್ಪಾ ಇಲ್ಲಿಗೆ ಬಂದ. ಬಹುಶಃ ಇವರಿಗೆ ಸ್ವೀಟ್ ಹುಡುಗಿಯರು ಬೇಕಾಗಿತ್ತು ಎನ್ನಿಸುತ್ತದೆ. ಅದಕ್ಕೆ ಬಿಗ್ ಬಾಸ್ ಮನೆಗೆ ಬಂದಿದ್ದಾನೆ ಎಂದು ಕಾಮೆಂಟ್ ಮಾಡಿದವರು ತಾರೆ ನಿಖಿತಾ.
ಆದರೆ ಕಾಳಿಕಾ ಮಠದ ಸ್ವಾಮೀಜಿ ಬಗ್ಗೆ ಅದೂ ಇದೂ ಹೇಳಿ ಉಳಿದ ಸ್ಪರ್ಧಿಗಳನ್ನು ಬೆಚ್ಚಿ ಬೀಳಿಸಿದ್ದು ಮಾತ್ರ ನರೇಂದ್ರ ಬಾಬು ಶರ್ಮಾ. ಅಯ್ಯೋ ಅವನು ಕೊಡುವ ವಿಭೂತಿ, ಪ್ರಸಾದ ಯಾರೂ ತಗೋಬೇಡಿ. ಅವನು ಸರಿ ಇಲ್ಲ. ವಾಮಾಚಾರ ಅದೂ ಇದೂ ಮಾಡ್ತಾನೆ ಎಂದು ಮೊದಲೇ ಭಯದಿಂದ ತತ್ತರಿಸುತ್ತಿದ್ದವರ ಮೇಲೆ ಹಗ್ಗ ಎಸೆದಂತಾಯಿತು.


Click it and Unblock the Notifications











