ಬಿಗ್ ಬಾಸ್ ಮನೆಯ ಟಿವಿಗೆ ಕೈಹಾಕಿದ ಋಷಿಕುಮಾರ
ವಿಜಯ್ ರಾಘವೇಂದ್ರ ಗೆಲ್ಲಬೇಕೆಂದು ಬಯಸುತ್ತೇನೆ ಎಂದರು ಜೋಷಿ. ಹಾಗೆಯೇ ನಿಕಿತಾ ಈ ಸ್ಪರ್ಧೆಯಲ್ಲಿ ಗೆಲ್ಲಬಾರದು. ಅವರಿಗೆ ಯಾರೂ ಓಟು ಮಾಡಬೇಡಿ ಎಂದು ನೇರವಾಗಿಯೇ ಹೇಳಿದರು. ನಿಕಿತಾ ಅವರ ವರ್ತನೆ ಅವರಿಗೆ ಇಷ್ಟವಾಗದೆ ಇರುವುದು ಇಲ್ಲಿ ವ್ಯಕ್ತವಾಯಿತು.
ಇನ್ನು ಸಂಜನಾ ಅವರು ಮಾತನಾಡುತ್ತಾ ಹಂಡ್ರಡ್ ಪರ್ಸೆಂಟ್ ಗೆಲ್ಲುವ ಹಕ್ಕು ಇರುವುದು ಅರುಣ್ ಅವರಿಗೆ. ಇದರಲ್ಲಿ ನನ್ನ ವೈಯಕ್ತಿಕ ಸ್ವಾರ್ಥ ಏನೂ ಇಲ್ಲ. ಆದರೆ ಬ್ರಹ್ಮಾಂಡ ಗುರುಗಳು ಈಗಾಗಲೆ ಜೀವನದಲ್ಲಿ ಗೆದ್ದಿದ್ದಾರೆ. ಈ ಆಟದಲ್ಲಿ ಅವರು ಗೆಲ್ಲುವಂತಹದ್ದು ಏನೂ ಇಲ್ಲ ಎಂದರು.

ಕೊನೆಯದಾಗಿ ಋಷಿಕುಮಾರ ಮಾತನಾಡುತ್ತಾ, ನಮ್ಮ ಬ್ರಹ್ಮಾಂಡ ಗುರುಗಳನ್ನು ಗೆಲ್ಲಿಸಿ. ಇಷ್ಟು ದೊಡ್ಡ ದೇಹವನ್ನು ಅವರು ಇಲ್ಲಿಯವರೆಗೂ ಹೊತ್ತುಕೊಂಡು ಬಂದದ್ದೇ ದೊಡ್ಡದು ಎಂದರು. ಹಾಗೆಯೇ ನಿಕಿತಾ ಅವರು ಸೋಲಬೇಕೆಂದು ಬಯಸುವುದಾಗಿ ತಿಳಿಸಿದರು.
ಸಂಜನಾ, ಋಷಿಕುಮಾರ, ವಿನಾಯಕ ಜೋಷಿ ಹಾಗೂ ರೋಹನ್ ಗೌಡ ಅವರಿಗೆ ಬಿಗ್ ಬಾಸ್ ಒಂದು ಸದಾವಕಾಶವನ್ನು ನೀಡಿದರು. ಅದೇನೆಂದರೆ ಮನೆಯಲ್ಲಿ ಇಷ್ಟವಾದ ಒಂದು ವಸ್ತುವನ್ನು ತೆಗೆದುಕೊಂಡು ಹೋಗಬಹುದು ಎಂದು.
ಋಷಿಕುಮಾರ ಈ ಅವಕಾಶ ಸಿಕ್ಕಿದ್ದೇ ತಡ ಎಲ್ ಸಿಡಿ ಟಿಗೆ ಕೈಹಾಕುವುದೇ? ಈ ಟಿವಿಯಲ್ಲಿ ಸುದೀಪ್ ಬರುತ್ತಿದ್ದ. ನನಗೆ ಈ ಟಿವಿ ಇಷ್ಟ. ದಯವಿಟ್ಟು ಕಳುಹಿಸಿಕೊಡಿ ಎಂದರು. ಸ್ವಾಮೀಜಿಗಳಾಗಿ ಅವರ ಆಸೆಗೂ ಒಂದು ಮಿತಿ ಬೇಡವೇ?


Click it and Unblock the Notifications











