ಕೋಡಿ ಮಠ ಶ್ರೀಗಳ ಚಡ್ಡಿ ಒಗೆದುಕೊಂಡು ಇದ್ದವನು
ಏತನ್ಮಧ್ಯೆ ವಿನಾಯಕ ಜೋಶಿ ಹಾಗೂ ಶ್ವೇತಾ ಅವರು ಶೌಚಾಲಯದ ಬಳಿ ಒಬ್ಬರನ್ನೊಬ್ಬರು ಅಪ್ಪಿಕೊಂಡು ಭಾವನಾತ್ಮಕವಾಗಿ ಒಂದಾದರು. ಅವರಿಬ್ಬರ ಹೃದಯ ಸಂಗಮ ಬೇರೆಯವರ ಕಣ್ಣಿಗೆ ಬೀಳಲಿಲ್ಲ. ಆದರೂ ವೀಕ್ಷಕರ ತಲೆಯಲ್ಲಿ ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿತು.
ಹೌದು ಸ್ವಾಮಿಗಳೆ ತಾವು ಕಾಳಿ ಮಾತೆಯನ್ನೇ ಏಕೆ ಆರಾಧಿಸುತ್ತೀರಿ ಎಂದು ನಿಖಿತಾ ಪ್ರಶ್ನೆ ಎಸೆದರು. ಇದಕ್ಕೆ ಋಷಿಕುಮಾರ ಕೊಟ್ಟ ಉತ್ತರ...336 ಕೋಟಿ ದೇವತೆಗಳಿಗೆ ಹೂ ಇಡಲು ಸಾಧ್ಯವಿಲ್ಲ. ಅವರೆಲ್ಲರಿಗಿಂತ ದೊಡ್ಡವರು ಕಾಳಿಮಾತೆ. ಹಾಗಾಗಿ ಅವರಿಗೆ ಪೂಜೆ ಸಲ್ಲಿಸುತ್ತಿದ್ದೇನೆ ಎಂದರು.

ಇನ್ನೊಂದು ಕಡೆ ಶರ್ಮಾ ಅವರಂತೂ ಋಷಿಕುಮಾರ ಸ್ವಾಮೀಜಿ ಬಗ್ಗೆ ಒಳಗೊಳಗೆ ಪಿತೂರಿ ಶುರು ಮಾಡಿಕೊಂಡಿದ್ದರು. ಹೋಗಿ ಹೋಗಿ ಈ ಕಾಂಟ್ರೋವರ್ಸಿ ಮುಂಡೆ ಮಗನನ್ನು ನಮ್ಮ ಜೊತೆ ಕೂರಲು ಬಿಟ್ಟಿದ್ದಾರೆ. ಏನಾದರೂ ಹೆಚ್ಚುಕಡಿಮೆ ಆದರೆ ಎಲ್ಲರೂ ಮುಂಡಾಮೋಚಿಕೊಂಡು ಹೋಗ್ತೀರಾ.
ಈ ಕಾಳಿ ಮಠ ಸ್ವಾಮೀಜಿ ಕೋಡಿ ಮಠ ಶ್ರೀಗಳ ಚಡ್ಡಿ ಒಗೆದುಕೊಂಡು ಇದ್ದವನು. ತಿಪಟೂರಿನಲ್ಲಿ ಯಾವುದೋ ಸಣ್ಣ ಹೋಟೆಲ್ ನಡೆಸಿಕೊಂಡಿದ್ದ. ಇವನನ್ನು ಕರೆಸಿದ್ದೀರಲ್ಲಾ. ಇವನು ವಾಮಾಚಾರ ಎಲ್ಲಾ ಮಾಡ್ತಾನೆ. ನನ್ ಮಕ್ಳಾ ಎಲ್ಲಾ ಎಕ್ಕುಟ್ಟಿ ಹೋಗ್ತೀರಾ ಎಂದು ಬಿಗ್ ಬಾಸ್ ಗೆ ಭಯ ಹುಟ್ಟಿಸುವಂತೆ ಶರ್ಮಾ ಹೇಳಿದರು. ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿರುವವರು ಚಂದ್ರಿಕಾ, ವಿನಾಯಕ ಜೋಶಿ, ಶ್ವೇತಾ ಪಂಡಿತ್.


Click it and Unblock the Notifications











