ಯಕ್ಷಗಾನದ ಬಗ್ಗೆ ಕಿಂಡಲ್ ಮಾಡಿದ ರಿಷಿಕಾ ಸಿಂಗ್
ಅರುಣ್ ಸಾಗರ್ ಜೊತೆ ಜಗಳವಾಡುತ್ತಾ ಮಾತಿಗೆ ಮಾತು ಬೆಳೆದು, ಯಾರು ಕೇಳ್ತಾರೆ ಆ ಡಬ್ಬಾ ಯಕ್ಷಗಾನ ಪದ್ಯಗಳು ಎಂದಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ಹೋಗಿದ್ದಾಗ ರಿಷಿಕಾ ಬಾಯಿಂದ ಈ ನುಡಿಮುತ್ತುಗಳು ಹೊರಬಿದ್ದವು.
ಇಲ್ಲಿ ಸಿಗರೇಟು ಸೇದಬಾರದು ಎಂಬ ಕನಿಷ್ಠ ಪರಿಜ್ಞಾನವೂ ತಮಗಿಲ್ಲ ಎಂದು ಅರುಣ್ ಸಾಗರ್ ಹೇಳಿದ್ದಕ್ಕೆ ರಿಷಿಕಾ ಪ್ರತಿಕ್ರಿಯಿಸುತ್ತಾ, ನೀವು ಮನೆಯಲ್ಲಿ ಯಕ್ಷಗಾನ ಹಾಡುಗಳನ್ನು ಹೇಳುವುದಿಲ್ಲವೆ. ಯಾರು ಕೇಳ್ತಾರೆ ಆ ಡಬ್ಬಾ ಯಕ್ಷಗಾನ ಪದ್ಯಗಳನ್ನು ಎಂದು ಎಂಬರ್ಥದಲ್ಲಿ ಹೇಳಿದ್ದಾರೆ.
ಕಲಾವಿದರ ಕುಟುಂಬದಿಂದ ಬಂದಂತಹ ರಿಷಿಕಾ ಅವರು ಈ ರೀತಿ ಬೇಜವಾಬ್ದಾರಿಯುತವಾಗಿ ಮಾತನಾಡಬಹುದೆ? ಯಕ್ಷಗಾನದಂತಹ ಕಲಾ ಪ್ರಕಾರದ ಬಗ್ಗೆ ಕೇವಲವಾಗಿ ಮಾತನಾಡುವ ಅವರಿಗೆ ಯಾವ ಅರ್ಹತೆ ಇದೆ. ಈ ರೀತಿ ಅವರು ಬೇಕಾಬಿಟ್ಟಿ ಮಾತನಾಡುವುದು ಎಷ್ಟು ಸರಿ.
ಕನ್ನಡತನವಿಲ್ಲದ, ನಮ್ಮ ಸಂಸ್ಕೃತಿ ಸಂಪ್ರದಾಯಕ್ಕೆ ದೂರವಾಗಿರುವ 'ಬಿಗ್ ಬಾಸ್' ಕಾರ್ಯಕ್ರಮದ ಅವಶ್ಯಕತೆಯಾದರೂ ಏನು. ಈ ರೀತಿಯ ಕಾರ್ಯಕ್ರಮಗಳಿಂದ ನಾವು ಇನ್ನೇನನ್ನು ನಿರೀಕ್ಷಿಸಲು ಸಾಧ್ಯ. ಬಿಗ್ ಬಾಸ್ ಕಾರ್ಯಕ್ರಮದ ಮೇಲೆ ಮೊದಲಿಂದಲೂ ಒಳ್ಳೆಯ ಅಭಿಪ್ರಾಯವಿರಲಿಲ್ಲ.
ಈಗ ರಿಷಿಕಾ ಅವರು ಈ ರೀತಿ ಮಾತನಾಡಿರುವುದು ನಮಗೆಲ್ಲಾ ತೀರಾ ಬೇಸರವಾಗಿದೆ. ಮೊದಲು ಅವರು ಸರಿಯಾಗಿ ಬಟ್ಟೆ ತೊಡುವುದನ್ನು ಕಲಿಯಲಿ. ಒಂದು ಕಲಾಪ್ರಕಾರದ ಬಗ್ಗೆ ತಿಳಿವಳಿಕೆ ಇಲ್ಲದೆ ಕೇವಲವಾಗಿ ಮಾತನಾಡುವುದು ಸರಿಯಲ್ಲ.


Click it and Unblock the Notifications












