ರಿಷಿಕಾ ಸಿಂಗ್ ಹೇಳಿದ 'ತುಂತುರು' ಸಿನಿಮಾ ಕಥೆ
Next »
« Previous
Rishika Singh
ಇನ್ನು ನನ್ನ ಫ್ರೆಂಡ್ಸ್ ಹಾಗೂ ಫ್ಯಾಮಿಲಿ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವರ ಅಭಿಪ್ರಾಯದ ಪ್ರಕಾರ, ಬೇಸಿಕಲಿ ನಾನೊಬ್ಬಳು ನಿರೂಪಕಿಯಲ್ಲದಿದ್ದರೂ ಕಾರ್ಯಕ್ರಮವನ್ನು ಉತ್ತಮವಾಗಿ ನಿರೂಪಿಸುತ್ತೀದ್ದೇನೆ. ದೊಡ್ಡವರ ಜೊತೆ ಹಾಗೂ ಚಿಕ್ಕವರ ಜೊತೆ ಪ್ರಶ್ನೆ ಹಾಗೂ ಪ್ರತಿಕ್ರಿಯೆ ಎರಡರಲ್ಲೂ ಭಿನ್ನತೆ ಹಾಗೂ ಸಾಮರಸ್ಯವನ್ನು ನಾನು ಕಾಪಾಡಿಕೊಳ್ಳುವ ರೀತಿ ಅವರೆಲ್ಲರಿಗೂ ಸಖತ್ ಇಷ್ಟವಾಗಿದೆಯಂತೆ.
*'ರಗಳೆ ವಿತ್ ರಿಷಿಕಾ ಶೋ' ಒಟ್ಟೂ ಎಷ್ಟು ಸಂಚಿಕೆಯಲ್ಲಿ ಮೂಡಿ ಬರಲಿದೆ?
ಇಂತಿಷ್ಟೇ ಸಂಚಿಕೆ ಎಂದು ನಿರ್ಧರಿಸಿಲ್ಲ. ಕಲಾವಿದರ ಲಭ್ಯತೆ, ಜೀ ವಾಹಿನಿಯಲ್ಲಿ ಇದಕ್ಕಿರುವ ಅವಕಾಶ, ಅನುಕೂಲ-ಅನಾನುಕೂಲ ಹಾಗೂ ನನ್ನ ಕಾಲ್ ಶೀಟ್ ಹೀಗೆ ಎಲ್ಲವನ್ನೂ ನೋಡಿಕೊಂಡು ಸದ್ಯಕ್ಕೆ ಕಾರ್ಯಕ್ರಮ ಮಾಡುತ್ತಿದ್ದೇನೆ. ಒಮ್ಮೆ ಸ್ಟಾಪ್ ಆದರೂ ನಂತರ ಮುಂದೆ ಇದನ್ನೇ ಭಾಗ 2, 3 ರ ಮೂಲಕ ಮಾಡುವ ಯೋಚನೆಯೂ ನನಗಿದೆ.
*ರಗಳೆ ನಿರೂಪಣೆಯಲ್ಲೇನಾದರೂ ಬದಲಾವಣೆ ಆಗಲಿದೆಯೇ?
ಇಲ್ಲ, ಈಗಿರುವ ನಿರೂಪಣೆ ಶೈಲಿಯೇ ಮುಂದುವರಿಯಲಿದೆ. ನಿರೂಪಣೆ ಚೆನ್ನಾಗಿದೆ ಎಂದು ಎಲ್ಲರೂ ಹೇಳುತ್ತಿರುವಾಗ ಸದ್ಯಕ್ಕೆ ನಾನೇಕೆ ಬದಲಾಯಿಸಲಿ! ಆದರೆ ಮುಂದೊಂದು ದಿನ ಏಕತಾನತೆ ಕಾಡುತ್ತಿದೆ ಎಂಬ ಅನಿಸಿಕೆ ಬಂದಾಗ ಖಂಡಿತ ಆ ಬಗ್ಗೆ ಯೋಚಿಸಿ ಕ್ರಮ ಕೈಗೊಳ್ಳುತ್ತೇನೆ.
*ಅಂದಹಾಗೆ, ನಿಮ್ಮ 'ತುಂತುರು' ಸಿನಿಮಾ ಬಿಡುಗಡೆ ಯಾವಾಗ?
ಬಿಡುಗಡೆ ಬಗ್ಗೆ ಸದ್ಯಕ್ಕೆ ಏನೂ ಮಾಹಿತಿ ಹೇಳಲಾರೆ. ಆದರೆ ಚಿತ್ರದ ಬಗ್ಗೆ ಹೇಳಬಲ್ಲೆ... ಟ್ರೈಲರ್ ಬಿಡುಗಡೆಯಾಗಿದೆ. ವಿಭಿನ್ನವಾಗಿದೆ, ಸಖತ್ ಚೆನ್ನಾಗಿದೆ ಎಂಬ ಅಭಿಪ್ರಾಯ ವೀಕ್ಷಕರಿಂದ ವ್ಯಕ್ತವಾಗುತ್ತಿದೆ.
* ಓಕೆ, 'ತುಂತುರು' ಚಿತ್ರ ಹಾಗೂ ನಿಮ್ಮ ಪಾತ್ರದ ಬಗ್ಗೆ ಹೇಳಿ...
'ತುಂತುರು' ಚಿತ್ರದಲ್ಲಿ ನಟ, ನಿರ್ಮಾಪಕ ಹಾಗೂ ನಿರ್ದೇಶಕ ರಮೇಶ್ ಅರವಿಂದ್, ಅನು ಪ್ರಭಾಕರ್ ಬಿಟ್ಟರೆ ಮಿಕ್ಕವರೆಲ್ಲರೂ ಹೊಸಬರೇ. ಮುಂದಿನ ಪುಟ ನೋಡಿ...
Next »
« Previous
More from Filmibeat
English summary
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X