ಎರಡನೇ ಬಾರಿಗೆ 'ಜನ ಮೆಚ್ಚಿದ ನಾಯಕ'ನಾದ 'ರಾಮಾಚಾರಿ': ರಿತ್ವಿಕ್ ಕೃಪಾಕರ್ ಫುಲ್ ಖುಷ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ರಾಮಾಚಾರಿ' ಕೂಡಾ ಒಂದು. ವಿಭಿನ್ನ ಕಥಾಹಂದರದ ಜೊತೆಗೆ ಪಾತ್ರವರ್ಗದ ಮೂಲಕವೂ ರಾಮಾಚಾರಿ ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆದಿದೆ ಎಂದರೆ ಅದಕ್ಕೆ ಈ ಬಾರಿಯ 'ಅನುಬಂಧ ಅವಾರ್ಡ್ಸ್'ನಲ್ಲಿ ಪಡೆದ 'ಜನ ಮೆಚ್ಚಿದ ಸಂಸಾರ' ಪ್ರಶಸ್ತಿಯೇ ಕಾರಣ.
ಇನ್ನು 'ರಾಮಾಚಾರಿ' ಧಾರಾವಾಹಿಯಲ್ಲಿ ನಾಯಕ ರಾಮಾಚಾರಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಹ್ಯಾಂಡ್ ಸಮ್ ಹುಡುಗನ ಹೆಸರು ರಿತ್ವಿಕ್ ಕೃಪಾಕರ್. ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ಕಮಾಲ್ ಮಾಡಿರುವ ರಿತ್ವಿಕ್ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿದ್ದಾರೆ ಎಂದರೆ ಅದಕ್ಕೆ ಅವರು ಪಡೆದ ಪ್ರಶಸ್ತಿಯೇ ಕಾರಣ.

ಕಳೆದ ಅನುಬಂಧ ಅವಾರ್ಡ್ಸ್ ಸೇರಿದಂತೆ ಬಾರಿಯ ಅನುಬಂಧ ಅವಾರ್ಡ್ಸ್ ನಲ್ಲಿ 'ಜನ ಮೆಚ್ಚಿದ ನಾಯಕ' ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ರಿತ್ವಿಕ್ ಕೃಪಾಕರ್. ಇನ್‌ಸ್ಟಾಗ್ರಾಂನಲ್ಲಿ ಅವಾರ್ಡ್‌ನ ಜೊತೆಗೆ ತೆಗೆಸಿಕೊಂಡಿರುವ ಫೋಟೋವನ್ನು ಹಂಚಿಕೊಂಡಿರುವ ರಿತ್ವಿಕ್ ಕೃಪಾಕರ್ "ನಿಮ್ಮ ರಾಮಾಚಾರಿ, ಅನುಬಂಧ 2024 ರಲ್ಲಿ ರಾಮಾಚಾರಿ ಅವರು ಈ ಪ್ರಶಸ್ತಿಗಳನ್ನು ಗೆಲ್ಲಬೇಕೆಂದು ಮತ ಹಾಕಿದ ಎಲ್ಲರಿಗೂ ಧನ್ಯವಾದಗಳು. ನೀವು ನೀಡಿದ ಆಶೀರ್ವಾದ ಮತ್ತು ಪ್ರೀತಿ, ಬೆಂಬಲ ಮತ್ತು ಆಶೀರ್ವಾದಕ್ಕಾಗಿ ಎಂದೆಂದಿಗೂ ಕೃತಜ್ಞರಾಗಿರುತ್ತೇನೆ. ಈಗಿನಂತೆ ಯಾವಾಗಲೂ ನಾನು ನಿಮ್ಮನ್ನು ರಂಜಿಸುತ್ತೇನೆ ಮತ್ತು ಜನರು ನನಗೆ ನೀಡಿದ ಪ್ರೀತಿಗೆ ಕೃತಜ್ಞರಾಗಿರುತ್ತೇನೆ - ಆರ್.ಕೆ" ಎಂದು ಬರೆದುಕೊಂಡಿದ್ದಾರೆ.
ಪ್ರಾಣಿಶಾಸ್ತ್ರದ ಬಗ್ಗೆ ವಿಶೇಷ ಒಲವು ಹೊಂದಿದ್ದ ರಿತ್ವಿಕ್ ಕೃಪಾಕರ್ ಬಿ.ಎಸ್.ಸಿ ಪದವಿಯನ್ನು ಪಡೆದಿರುವ ಹುಡುಗ. ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದಾಗಲೇ ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂಬ ನಿರ್ಧಾರ ಮಾಡಿದ ರಿತ್ವಿಕ್ ನಟನಾಗಲು ಅವರ ತಂದೆಯೇ ಕಾರಣ.

ಹೌದು, ಫಿಲ್ಮ್ ಡೈರೆಕ್ಷನ್‌ನಲ್ಲಿ ಡಿಪ್ಲೋಮಾ ಪದವಿ ಪಡೆದಿರುವ ರಿತ್ವಿಕ್ ಅವರಿಗೆ ಅಸಲಿಗೆ ನಟನೆ ಎಂದರೆ ಅಷ್ಟೊಂದು ಇಷ್ಟವಿರಲಿಲ್ಲ. ಅಪ್ಪನ ಒತ್ತಾಯಕ್ಕೆ ಮಣಿದು ಮೈಸೂರಿನಲ್ಲಿರುವ ಮಂಡ್ಯ ರಮೇಶ್ ಅವರ ನಟನಾ ಸಂಸ್ಥೆಯ ಕಾರ್ಯಗಾರದಲ್ಲಿ ಭಾಗವಹಿಸಿದರು. ಅದರ ಅವರ ಬದುಕಿನ ಟರ್ನಿಂಗ್ ಪಾಯಿಂಟ್ ಎಂದರೆ ತಪ್ಪಾಗಲಾರದು. ಯಾಕೆಂದರೆ ನಟನಾದಲ್ಲಿ ಆದಂತಹ ಅನುಭವ ರಿತ್ವಿಕ್ ಅವರಲ್ಲಿ ನಟನೆಯ ಬಗ್ಗೆ ಒಲವು ಮೂಡಿಸಿತು. ಮುಂದೆ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ರಿತ್ವಿಕ್ ನಟನಾಗಬೇಕು ಎಂಬ ದೃಢ ನಿರ್ಧಾರ ಮಾಡಿದರು.
ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ರಿತ್ವಿಕ್ ಅವರಿಗೆ ಅದ್ಭುತ ನಟನಾಗಬೇಕು ಎಂದು ಬಯಸಿದ್ದರು. ಅದಕ್ಕೆ ಬೇಕಾಗಿರುವಂತಹ ತಯಾರಿಗಳನ್ನು ಮಾಡಿಕೊಂಡಿರುವ ರಿತ್ವಿಕ್ ಅವರು ಇಂದು ಪರಿಪೂರ್ಣ ನಟನಾಗಿ ಮೋಡಿ ಮಾಡುತ್ತಿದ್ದಾರೆ.


Click it and Unblock the Notifications











