ಮತ್ತೆ ಕಿರುತೆರೆಗೆ ಮರಳಿದ 'ಗಿಣಿರಾಮ'; ದಿವ್ಯಾ ಉರುಡುಗ ಜೊತೆ 'ನಿನಗಾಗಿ' ಎಂದ ರಿತ್ವಿಕ್ ಮಠದ್

By ಅನಿತಾ ಬನಾರಿ

ನಟ ರಿತ್ವಿಕ್ ಮಠದ್ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಬಹಳ ವರ್ಷಗಳಿಂದಲೂ ಪರಿಚಯ. 'ಗಿಣಿರಾಮ' ಧಾರಾವಾಹಿಯಲ್ಲಿ ಹಳ್ಳಿ ಸೊಗಡಿನ ಪಾತ್ರವನ್ನು ಮಾಡಿದ ಇವರು ಕನ್ನಡ ಕಿರುತೆರೆ ಪ್ರೇಕ್ಷಕರ ಮನೆ - ಮನ ಗೆದ್ದಿದ್ದರು. 'ಗಿಣಿರಾಮ' ಧಾರಾವಾಹಿ ಬಹಳ ಖ್ಯಾತಿ ಪಡೆದಂತಹ ಬಹುದೊಡ್ಡ ಪ್ರೇಕ್ಷಕ ವರ್ಗವಿದ್ದಂತಹ ಧಾರಾವಾಹಿ ಎಂದರೆ ತಪ್ಪಾಗಲಾರದು. ಅದರಲ್ಲಿ ನಾಯಕ ನಟನಾಗಿ ನಟ ರಿತ್ವಿಕ್ ಮಠದ್ ಕಾಣಿಸಿಕೊಂಡಿದ್ದರು.

ಇದೀಗ ಇದೇ ನಟ ಹೊಸದೊಂದು ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, 'ನಿನಗಾಗಿ' ಧಾರಾವಾಹಿಯಲ್ಲಿ ನಾಯಕ ನಟನಾಗಿ ನಟ ರಿತ್ವಿಕ್ ಮಠದ್ ಕಾಣಿಸಿಕೊಳ್ಳುತ್ತಿದ್ದಾರೆ. 'ನಿನಗಾಗಿ' ಧಾರಾವಾಹಿ ಈಗಾಗಲೇ ಪ್ರೋಮೊ ಮೂಲಕ ಬಹಳಷ್ಟು ಸದ್ದು ಮಾಡಿದೆ. ಈ ಧಾರಾವಾಹಿಗೆ ನಾಯಕ ನಟಿಯಾಗಿ ನಟಿ ದಿವ್ಯಾ ಉರುಡುಗ ಕಾಣಿಸಿಕೊಳ್ಳುತ್ತಿದ್ದು, ಆ ಮೂಲಕ ಆಕೆ ಮತ್ತೆ ಕಿರುತೆರೆ ಪ್ರವೇಶ ಮಾಡಿದ್ದಾರೆ.

Ritvvikk Mathad returned to television with Ninagagi serial

ಹೀಗಿರುವಾಗಲೇ ಇದಕ್ಕೆ ನಾಯಕ ನಟ ಯಾರೆಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ನಟ ರಿತ್ವಿಕ್ ಮಠದ್ ಅವರು ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಅಂದ ಹಾಗೆ ನಟ ರಿತ್ವಿಕ್ ಮಠದ್ ಈ ಧಾರಾವಾಹಿಯಲ್ಲಿ ಬಹಳ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಹೌದು, ಒಂದು ಪುಟಾಣಿ ಹೆಣ್ಣು ಮಗುವಿನ ತಂದೆ ಆಗಿ ಕಾಣಿಸಿಕೊಳ್ಳುವ ನಟ ರಿತ್ವಿಕ್ ಈ ಧಾರಾವಾಹಿಯಲ್ಲಿ ಸಿಂಗಲ್ ಪೇರೆಂಟ್. ತನ್ನ ಮಗಳಿಗಾಗಿಯೇ ಇಡೀ ಜೀವನವನ್ನು ಮೀಸಲಿಟ್ಟಿರುವ ತಂದೆಯ ಪಾತ್ರ ಇದಾಗಿದೆ. ಮಗಳ ಖುಷಿಯೇ ತನ್ನ ಖುಷಿಯೆಂದು ಜೀವನ ಮಾಡುತ್ತಿರುವ ಈ ತಂದೆಯ ಕಥೆ ಏನು? ಅವರ ಕುಟುಂಬದ ಹಿನ್ನೆಲೆ ಏನು ಎಂಬಿತ್ಯಾದಿ ಕುತೂಹಲಗಳನ್ನು ಇಟ್ಟುಕೊಂಡು ಮುಂಬರುತ್ತಿದೆ ಈ ಪಾತ್ರ.

ಈ ಮೊದಲು 'ಗಿಣಿರಾಮ' ಧಾರಾವಾಹಿಯಲ್ಲಿ ಬಹಳ ಮುಗ್ಧವಾದ ಪಾತ್ರವನ್ನು ಇವರು ಮಾಡಿದ್ದರು. ಹಳ್ಳಿಯ ಭಾಷೆ, ಮುಗ್ಧ ಮನಸ್ಸು ಟೀಚರ್ ಹಿಂದೆ ಓಡಾಡಿಕೊಂಡಿದ್ದ ಪಾತ್ರ ಅದಾಗಿತ್ತು. ಆದರೆ, ಇದೀಗ 'ನಿನಗಾಗಿ' ಧಾರಾವಾಹಿಯಲ್ಲಿ ಇವರು ಮಾಡುತ್ತಿರುವ ಪಾತ್ರ ಬಹಳ ಪ್ರಬುದ್ಧವಾದ ತಂದೆಯ ಪಾತ್ರವಾಗಿದೆ. ಹಾಗಾದರೆ ಇವರ ಕಥೆ ಏನು? ಧಾರಾವಾಹಿ ಕಥೆಯ ನಾಯಕಿಗೂ ಈ ನಾಯಕನಿಗೂ ಯಾವ ರೀತಿ ಪರಿಚಯವಾಗುತ್ತೆ ಸಂಬಂಧ ಯಾವ ರೀತಿ ಮುಂದುವರೆಯುತ್ತದೆ ಎಂಬ ಕುತೂಹಲ ವೀಕ್ಷಕರಿಗೆ ಕಾಡುತ್ತಿದೆ. ಇವೆಲ್ಲದಕ್ಕೂ ಧಾರಾವಾಹಿಯನ್ನು ನೋಡಿ ಉತ್ತರ ಪಡೆಯಬೇಕಿದೆ.

Ritvvikk Mathad returned to television with Ninagagi serial

ಒಟ್ಟಿನಲ್ಲಿ ಹೇಳುವುದಾದರೆ ನಟ ರಿತ್ವಿಕ್ ಮಠದ್ ಅವರು 'ಗಿಣಿರಾಮ' ಧಾರಾವಾಹಿ ನಂತರ 'ನಿನಗಾಗಿ' ಧಾರಾವಾಹಿ ಮೂಲಕವೇ ಮತ್ತೆ ಕಿರುತೆರೆ ಪ್ರವೇಶ ಮಾಡಿರುವುದು ಅವರ ಅಭಿಮಾನಿಗಳಿಗೆ ಹಾಗೂ ಪ್ರೇಕ್ಷಕರಿಗೆ ಬಹಳ ಸಂತಸ ತಂದಿದೆ. ಹಿಂದೆಂದೂ ಮಾಡಿರದಂತಹ ಈ ಪಾತ್ರದಲ್ಲಿ ರಿತ್ವಿಕ್ ಮಠದ್ ಹೇಗೆ ರಂಜಿಸಬಹುದು ಅನ್ನೋ ಕುತೂಹಲ ವೀಕ್ಷಕರಲ್ಲಿದೆ.

More from Filmibeat

English summary
Ritvvikk Mathad, who was away from television after the serial Ginirama. Ritvvikk is came back to television through the serial Ninagagi:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X